Amit Mishra : “ಪ್ರೇಯಸಿ ಜೊತೆ ಡೇಟಿಂಗ್‌ಗೆ ಹೋಗ್ಬೇಕು, ₹300 ಕೊಡಿ” ಅಂದ ಫ್ಯಾನ್’ಗೆ ₹500 ಕೊಟ್ಟ ಕ್ರಿಕೆಟಿಗ ಅಮಿತ್ ಮಿಶ್ರಾ

ಬೆಂಗಳೂರು: ಈ ಜಗತ್ತಿನಲ್ಲಿ ಕ್ರಿಕೆಟ್ ಆಟಗಾರರಿಗೆ ಎಂತೆಂಥಾ ಅಭಿಮಾನಿಗಳು ಇರುತ್ತಾರೆ ನೋಡಿ. “ಗೆಳತಿ ಜೊತೆ ಡೇಟಿಂಗ್’ಗೆ ಹೋಗ್ಬೇಕು, 300 ರೂಪಾಯಿ ಕೊಡಿ” ಅಂತ ಟೀಮ್ ಇಂಡಿಯಾದ ಮಾಜಿ ಲೆಗ್ ಸ್ಪಿನ್ನರ್(Amit Mishra)ಅಮಿತ್ ಮಿಶ್ರಾಗೆ ಅಭಿಮಾನಿಯೊಬ್ಬ ಮನವಿ ಮಾಡಿದ್ದಾನೆ. ಅಭಿಮಾನಿಯ ಮನವಿಗೆ ಸ್ಪಂದಿಸಿದ ಅಮಿತ್ ಮಿಶ್ರಾ 500 ರೂಪಾಯಿ ನೀಡಿದ್ದಾರೆ. ಕೆಲ ದಿನಗಳ ಹಿಂದೆ ನಡೆದಿರುವ ಈ ಘಟನೆ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಸದ್ದು ಮಾಡುತ್ತಿದೆ.

ಆದಿತ್ಯ ಕುಮಾರ್ ಸಿಂಗ್ ಅಭಿಮಾನಿ ಇತ್ತೀಚೆಗೆ ಅಮಿತ್ ಮಿಶ್ರಾ(Amit Mishra)ಅವರಿಗೊಂದು ಟ್ವೀಟ್ ಮಾಡಿದ್ದ. “ನಾನು ನನ್ನ ಗೆಳತಿಯನನ್ನು ಬೈಕ್’ನಲ್ಲಿ ಡೇಟಿಂಗ್’ಗೆ ಕರೆದೊಯ್ಯಬೇಕಿದೆ, ನನ್ನ ಬಳಿ ಹಣವಿಲ್ಲ, ದಯವಿಟ್ಟು 300 ರೂಪಾಯಿ ಕೊಡ್ತೀರಾ” ಎಂದು ಟ್ವೀಟ್ ಮಾಡಿ ಅದನ್ನು ಅಮಿತ್ ಮಿಶ್ರಾ ಮತ್ತು ಟೀಮ್ ಇಂಡಿಯಾದ ಮತ್ತೊಬ್ಬ ಮಾಜಿ ಕ್ರಿಕೆಟಿಗ ಸುರೇಶ್ ರೈನಾ ಅವರಿಗೆ ಟ್ಯಾಗ್ ಮಾಡಿದ್ದ.

ಸಾಮಾನ್ಯವಾಗಿ ಇಂತಹ ಟ್ವೀಟ್’ಗಳಿಗೆ ಕ್ರಿಕೆಟಿಗರು ಸ್ಪಂದಿಸುವುದು ತೀರಾ ಕಡಿಮೆ. ಆದರೆ ಅಮಿತ್ ಮಿಶ್ರಾ ತಮ್ಮ ಅಭಿಮಾನಿಯ ಮನವಿಗೆ ಸ್ಪಂದಿಸಿದ್ದಾರೆ.
ಗೆಳತಿಯ ಜೊತೆ ಡೇಟಿಂಗ್ ನಡೆಸಲು 300 ರೂಪಾಯಿ ಕೇಳಿದ ಅಭಿಮಾನಿಗೆ ಗೂಗಲ್ ಪೇನಲ್ಲಿ 500 ರೂಪಾಯಿ ಕಳುಹಿಸಿದ್ದಾರೆ. ಅಷ್ಟೇ ಅಲ್ಲ, ಹಣ ಕಳುಹಿಸಿದ ಸ್ಕ್ರೀನ್ ಶಾಟ್ ಅನ್ನು ಟ್ವಿಟರ್’ನಲ್ಲಿ ಪ್ರಕಟಿಸಿರುವ ಅಮಿತ್ ಮಿಶ್ರಾ, “ಹಣ ಕಳುಹಿಸಿದ್ದೇನೆ, ನಿನ್ನ ಡೇಟಿಂಗ್’ಗೆ ಆಲ್ ದಿ ಬೆಸ್ಟ್” ಎಂದು ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ : ಟಿ20 ವಿಶ್ವಕಪ್ ಕ್ಯಾಶ್ ಪ್ರೈಜ್ ₹45 ಕೋಟಿ, ಚಾಂಪಿಯನ್ಸ್‌ಗೆ ಸಿಗಲಿದೆ ₹13 ಕೋಟಿ

ಇದನ್ನೂ ಓದಿ : “ಐಪಿಎಲ್’ಗೆ ಸದಾ ರೆಡಿ.. ವಿಶ್ವಕಪ್ ಬಂದ್ರೆ ಹೊರ ನಡಿ ; ಬುಮ್ರಾ ವಿರುದ್ಧ ಕ್ರಿಕೆಟ್ ಪ್ರಿಯರು ಫುಲ್ ಗರಂ

ಇದನ್ನೂ ಓದಿ : ಧೋನಿ “ಓರಿಯೊ” ಅಂದ್ರೆ, ನಮ್ಮನೆ ನಾಯಿ ಓರಿಯೊ ಅಂದ್ರಲ್ಲಾ ಗಂಭೀರ್.. ಹೊಟ್ಟೆಕಿಚ್ಚಿನ ಮೊಟ್ಟೆಕೋಳಿಗೆ ಧೋನಿ ಮೇಲೇಕೆ ಇಷ್ಟೊಂದು ಕಿಚ್ಚು?

ಅಮಿತ್ ಮಿಶ್ರಾ ಅವರ ಈ ಟ್ವೀಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಟ್ವೀಟನ್ನು 6,500ಕ್ಕೂ ಹೆಚ್ಚು ಮಂದಿ ಲೈಕ್ ಮಾಡಿದ್ದಾರೆ. ಕೆಲವರು “ಬಾಯ್ ಫ್ರೆಂಡ್ ಬೇಕಾದವರಿಗೆ ಅದನ್ನೂ ಅರೇಂಜ್ ಮಾಡಿ ಕೊಡ್ತೀರಾ” ಅಂತ ಅಮಿತ್ ಮಿಶ್ರಾ ಅವರ ಕಾಲೆಳೆದಿದ್ದಾರೆ.

40 ವರ್ಷದ ಲೆಗ್ ಸ್ಪಿನ್ನರ್ ಅಮಿತ್ ಮಿಶ್ರಾ ಟೀಮ್ ಇಂಡಿಯಾ ಪರ 22 ಟೆಸ್ಟ್, 36 ಏಕದಿನ ಹಾಗೂ 10 ಟಿ20 ಪಂದ್ಯಗಳನ್ನಾಡಿದ್ದು, ಒಟ್ಟು 156 ವಿಕೆಟ್’ಗಳನ್ನು ಪಡೆದಿದ್ದಾರೆ.

“I want to go on a date with my girlfriend, give me ₹300” said cricketer Amit Mishra who gave ₹500 to a fan.

Comments are closed.