T20 World Cup 2022: ಟಿ20 ವಿಶ್ವಕಪ್ ಕ್ಯಾಶ್ ಪ್ರೈಜ್ ₹45 ಕೋಟಿ, ಚಾಂಪಿಯನ್ಸ್‌ಗೆ ಸಿಗಲಿದೆ ₹13 ಕೋಟಿ

ಬೆಂಗಳೂರು: (T20 World Cup 2022) ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಐಸಿಸಿ ಟಿ20 ವಿಶ್ವಕಪ್ ಟೂರ್ನಿ ಆರಂಭಕ್ಕಿನ್ನು 14 ದಿನಗಳಷ್ಟೇ ಬಾಕಿ. ಅಕ್ಟೋಬರ್ 16ರಂದು ಟೂರ್ನಿಯ ಅರ್ಹತಾ ಸುತ್ತಿನ ಪಂದ್ಯಗಳು ಆರಂಭವಾಗಲಿದ್ದು, ಪ್ರಧಾನ ಸುತ್ತಿನ ಪಂದ್ಯಗಳು ಅಕ್ಟೋಬರ್ 22ರಿಂದ ಆರಂಭವಾಗಲಿವೆ. ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಆತಿಥೇಯ ಆಸ್ಟ್ರೇಲಿಯಾ, ಕಳೆದ ಬಾರಿಯ ಫೈನಲಿಸ್ಟ್ ನ್ಯೂಜಿಲೆಂಡ್ ತಂಡವನ್ನು ಎದುರಿಸಲಿದೆ.

(T20 World Cup 2022)ಟೂರ್ನಿಯಲ್ಲಿ ಭಾರತ ತಂಡದ ಅಭಿಯಾನ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧದ ಪಂದ್ಯದ ಮೂಲಕ ಆರಂಭವಾಗಲಿದೆ. ಈ ಹೈವೋಲ್ಟೇಜ್ ಪಂದ್ಯ ಅಕ್ಟೋಬರ್ 23ರಂದು ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ನಡೆಯಲಿದೆ. ಭಾರತ ತಂಡ ಪಾಕಿಸ್ತಾನ, ದಕ್ಷಿಣ ಆಫ್ರಿಕಾ ಹಾಗೂ ಬಾಂಗ್ಲಾದೇಶ ತಂಡಗಳ ಜೊತೆ ಗ್ರೂಪ್-2ನಲ್ಲಿ ಸ್ಥಾನ ಪಡೆದಿದೆ.

ಈ ಬಾರಿ ಟಿ20 ವಿಶ್ವಕಪ್ ಗೆಲ್ಲುವ ತಂಡ ಒಟ್ಟು ₹13,05,35,440 ಕೋಟಿ ರೂಪಾಯಿಗಳನ್ನು ಪಡೆಯಲಿದೆ. ರನ್ನರ್ಸ್ ಅಪ್ ತಂಡಕ್ಕೆ ₹6,52,64,280 ರೂಪಾಯಿ ಸಿಗಲಿದೆ. ಸೆಮಿಫೈನಲಿಸ್ಟ್’ಗಳು ₹3,26,20,220 ಕೋಟಿ ರೂಪಾಯಿಗಳನ್ನು ಪಡೆಯಲಿದ್ದಾರೆ. ಟೂರ್ನಿಯಲ್ಲಿ ಒಟ್ಟು ₹45,71,75,040 ಕೋಟಿ ರೂಪಾಯಿ ನಗದು ಬಹುಮಾನವನ್ನು ನಿಗದಿ ಪಡಿಸಲಾಗಿದೆ.

ಇದನ್ನೂ ಓದಿ : “ಐಪಿಎಲ್’ಗೆ ಸದಾ ರೆಡಿ.. ವಿಶ್ವಕಪ್ ಬಂದ್ರೆ ಹೊರ ನಡಿ ; ಬುಮ್ರಾ ವಿರುದ್ಧ ಕ್ರಿಕೆಟ್ ಪ್ರಿಯರು ಫುಲ್ ಗರಂ

ಇದನ್ನೂ ಓದಿ : ಧೋನಿ “ಓರಿಯೊ” ಅಂದ್ರೆ, ನಮ್ಮನೆ ನಾಯಿ ಓರಿಯೊ ಅಂದ್ರಲ್ಲಾ ಗಂಭೀರ್.. ಹೊಟ್ಟೆಕಿಚ್ಚಿನ ಮೊಟ್ಟೆಕೋಳಿಗೆ ಧೋನಿ ಮೇಲೇಕೆ ಇಷ್ಟೊಂದು ಕಿಚ್ಚು?

ಇದನ್ನೂ ಓದಿ : ಗಾಯಾಳು ಜಸ್ಪ್ರೀತ್ ಬುಮ್ರಾ ಬದಲು ಟೀಮ್ ಇಂಡಿಯಾ ಸೇರಿದ ಆರ್‌ಸಿಬಿ ವೇಗಿ ಸಿರಾಜ್

ಐಸಿಸಿ ಟಿ20 ವಿಶ್ವಕಪ್: ಬಹುಮಾನ ಮೊತ್ತ (Prize money announced for T20 World Cup 2022):

  • ಚಾಂಪಿಯನ್ಸ್: ₹13,05,35,440
  • ರನ್ನರ್ಸ್ ಅಪ್: ₹6,52,64,280
  • ಸೆಮಿಫೈನಲ್’ನಲ್ಲಿ ಸೋತವರು: ₹3,26,20,220
  • ಸೂಪರ್ 12 ಗೆಲುವು: ₹32,65,536 X 30
  • ಸೂಪರ್ 12 ಸೋತವರು: ₹57,14,688 X 8
  • ಮೊದಲ ಸುತ್ತಿನ ಗೆಲುವು: ₹32,65,536 X 12
  • ಮೊದಲ ಸುತ್ತಿನಲ್ಲಿ ಸೋತವರು: ₹32,65,536 X 4

ಐಸಿಸಿ ಟಿ20 ವಿಶ್ವಕಪ್: ಭಾರತದ ವೇಳಾಪಟ್ಟಿ (ಗ್ರೂಪ್-2):

  • Vs ಪಾಕಿಸ್ತಾನ: ಅಕ್ಟೋಬರ್ 23
  • ಸ್ಥಳ: ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್, ಮೆಲ್ಬೋರ್ನ್
  • ಪಂದ್ಯ ಆರಂಭ: ಮಧ್ಯಾಹ್ನ 1.30ಕ್ಕೆ (ಭಾರತೀಯ ಕಾಲಮಾನ)
  • Vs ಅರ್ಹತಾ ಸುತ್ತಿನ ತಂಡ: ಅಕ್ಟೋಬರ್ 27
  • ಸ್ಥಳ: ಸಿಡ್ನಿ ಕ್ರಿಕೆಟ್ ಗ್ರೌಂಡ್, ಸಿಡ್ನಿ
  • ಪಂದ್ಯ ಆರಂಭ: ಮಧ್ಯಾಹ್ನ 12.30ಕ್ಕೆ (ಭಾರತೀಯ ಕಾಲಮಾನ)
  • Vs ದಕ್ಷಿಣ ಆಫ್ರಿಕಾ: ಅಕ್ಟೋಬರ್ 30
  • ಸ್ಥಳ: ಪರ್ತ್
  • ಪಂದ್ಯ ಆರಂಭ: ಮಧ್ಯಾಹ್ನ 4.30ಕ್ಕೆ (ಭಾರತೀಯ ಕಾಲಮಾನ)
  • Vs ಬಾಂಗ್ಲಾದೇಶ: ನವೆಂಬರ್ 02
  • ಸ್ಥಳ: ಅಡಿಲೇಡ್
  • ಪಂದ್ಯ ಆರಂಭ: ಮಧ್ಯಾಹ್ನ 1.30ಕ್ಕೆ (ಭಾರತೀಯ ಕಾಲಮಾನ)
  • Vs ಅರ್ಹತಾ ಸುತ್ತಿನ ತಂಡ: ನವೆಂಬರ್ 06
  • ಸ್ಥಳ: ಮೆಲ್ಬೋರ್ನ್ ಕ್ರಿಕೆಟ್ ಮೈದಾನ, ಮೆಲ್ಬೋರ್ನ್
  • ಪಂದ್ಯ ಆರಂಭ: ಮಧ್ಯಾಹ್ನ 1.30ಕ್ಕೆ (ಭಾರತೀಯ ಕಾಲಮಾನ)

ನೇರಪ್ರಸಾರ (Live Telecast): Stat Sports Network
ಲೈವ್ ಸ್ಟ್ರೀಮಿಂಗ್ (Live Streaming): Disney + Hotstar

Prize money announced for T20 World Cup 2022 cash prize is ₹45 crore,champions will get ₹13 crore

Comments are closed.