T20 World Cup 2022 ವೇಳಾಪಟ್ಟಿ ಪ್ರಕಟ : ಭಾರತಕ್ಕೆ ಪಾಕಿಸ್ತಾನ ಮೊದಲ ಎದುರಾಳಿ

ಅಂತರಾಷ್ಟ್ರೀಯ ಕ್ರಿಕೆಟ್‌ ಕೌನ್ಸಿಲ್‌ (ICC ) T20 ವಿಶ್ವಕಪ್ 2022 (T20 World Cup 2022) ವೇಳಾಪಟ್ಟಿಯನ್ನು ಪ್ರಕಟಿಸಿದೆ. ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಮಿನಿ ವಿಶ್ವಕಪ್‌ ಅಕ್ಟೋಬರ್ 16 ರಂದು ಆರಂಭಗೊಳ್ಳಲಿದ್ದು, ಉದ್ಘಾಟನಾ ಪಂದ್ಯದಲ್ಲಿ ಶ್ರೀಲಂಕಾ ನಮೀಬಿಯಾ ತಂಡವನ್ನು ಎದುರಿಸಲಿದೆ. ಭಾರತ ವಿಶ್ವಕಪ್‌ ನಲ್ಲಿ ತನ್ನ ಮೊದಲ ಪಂದ್ಯವನ್ನು ಅಕ್ಟೋಬರ್‌ ೨೩ರಂದು ಆಡಲಿದ್ದು, ಮೊದಲ ಪಂದ್ಯದಲ್ಲಿಯೇ ಭಾರತ ಬದ್ದವೈರಿ ಪಾಕಿಸ್ತಾನವನ್ನು ಎದುರಿಸಲಿದೆ. ವಿಶ್ವಕಪ್‌ ವೇಳಾಪಟ್ಟಿ, ತಂಡಗಳ ವಿವರ, ಸ್ಥಳದ ಕುರಿತು ಮಾಹಿತಿ ಇಲ್ಲಿದೆ.

ಮೊದಲ ರೌಂಡ್‌ ಹಾಗೂ ಸೂಪರ್‌ 12 ಮಾದರಿಯಲ್ಲಿ ಪಂದ್ಯಾವಳಿ ನಡೆಯಲಿದೆ. ಮೊದಲ ರೌಂಡ್‌ನಲ್ಲಿ ಶ್ರೀಲಂಕಾ, ವೆಸ್ಟ್‌ ಇಂಡಿಸ್‌, ಸ್ಕಾಟ್‌ಲ್ಯಾಂಡ್‌, ನಮೀಬಿಯಾ ಹಾಗೂ ಕ್ವಾಲಿಫೈಯರ್‌ ತಂಡಗಳು ಸೆಣೆಸಾಟವನ್ನು ನಡೆಸಲಿವೆ. ಅಲ್ಲದೇ ಸೂಪರ್ 12 ಹಂತದಲ್ಲಿ ಗ್ರೂಪ್ 1ರಲ್ಲಿ ಆಸ್ಟ್ರೇಲಿಯಾ, ಅಫ್ಘಾನಿಸ್ತಾನ, ಇಂಗ್ಲೆಂಡ್, ನ್ಯೂಜಿಲೆಂಡ್ ಹಾಗೂ ಮೊದಲ ರೌಂಡ್‌ನಲ್ಲಿ ಅರ್ಹತೆ ಪಡೆಯುವ ಎ ಗ್ರೂಫ್‌ನ ಎರಡು ತಂಡಗಳು ಭಾಗಿಯಾಗಲಿವೆ. ಇನ್ನು ಗ್ರೂಪ್ 2ರಲ್ಲಿ ಬಾಂಗ್ಲಾದೇಶ, ಭಾರತ, ಪಾಕಿಸ್ತಾನ, ವೆಸ್ಟ್ ಇಂಡೀಸ್ ಹಾಗೂ ಮೊದಲ ರೌಂಡ್‌ನಲ್ಲಿ ಅರ್ಹತೆ ಪಡೆದ ಬಿ ಗ್ರೂಪ್‌ ನ ಎರಡು ತಂಡಗಳು ಪಾಲ್ಗೊಳ್ಳಲಿವೆ.

ಅಕ್ಟೋಬರ್ 16 ರಂದು ಸ್ಥಳೀಯ ಕಾಲಮಾನ ಮಧ್ಯಾಹ್ನ 3 ಗಂಟೆಗೆ ಶ್ರೀಲಂಕಾ ಮತ್ತು ನಮೀಬಿಯಾ ನಡುವಿನ ರೌಂಡ್ 1 ಗ್ರೂಪ್ ಎ ಪಂದ್ಯದೊಂದಿಗೆ ಪಂದ್ಯಾವಳಿಯು ಪ್ರಾರಂಭವಾಗುತ್ತದೆ. 2015ರಲ್ಲಿ ನಡೆದ ವಿಶ್ವಕಪ್‌ ನಂತರದಲ್ಲಿ ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಮೊದಲ ಪುರುಷರ ICC ಪಂದ್ಯಾವಳಿಯಾಗಿದೆ. ಇನ್ನು ನವೆಂಬರ್ 13 ರಂದು ಮೆಲ್ಬೋರ್ನ್ ಫೈನಲ್‌ಗೆ ಆತಿಥ್ಯ ವಹಿಸಲಿದೆ.

ICC ಪುರುಷರ T20 ವಿಶ್ವಕಪ್ 2022 ಪೂರ್ಣ ವೇಳಾಪಟ್ಟಿ

(ಎಲ್ಲಾ ಸಮಯಗಳು IST ನಲ್ಲಿ)

ರೌಂಡ್ 1 ಅರ್ಹತಾ ಪಂದ್ಯಗಳು

ಅಕ್ಟೋಬರ್ 16 : ಶ್ರೀಲಂಕಾ ವಿರುದ್ಧ ನಮೀಬಿಯಾ – 9:30am – ಕಾರ್ಡಿನಿಯಾ ಪಾರ್ಕ್, ಗೀಲಾಂಗ್

ಅಕ್ಟೋಬರ್. 16 : Q2 ವಿರುದ್ಧ Q3 – 1:30pm – ಕಾರ್ಡಿನಿಯಾ ಪಾರ್ಕ್, ಗೀಲಾಂಗ್

ಅಕ್ಟೋಬರ್. 17 : ವೆಸ್ಟ್ ಇಂಡೀಸ್ ವಿರುದ್ಧ ಸ್ಕಾಟ್ಲೆಂಡ್ – ಬೆಳಿಗ್ಗೆ 9:30 – ಬೆಲ್ಲೆರಿವ್ ಓವಲ್, ಹೋಬರ್ಟ್

ಅಕ್ಟೋಬರ್ 17 : Q1 vs Q4 – 1:30pm – ಬೆಲ್ಲೆರಿವ್ ಓವಲ್, ಹೋಬರ್ಟ್

ಅಕ್ಟೋಬರ್ 18 : ನಮೀಬಿಯಾ vs Q3 – 9:30am – ಕಾರ್ಡಿನಿಯಾ ಪಾರ್ಕ್, ಗೀಲಾಂಗ್

ಅಕ್ಟೋಬರ್ 18 : ಶ್ರೀಲಂಕಾ vs Q2 – 1:30pm – ಕಾರ್ಡಿನಿಯಾ ಪಾರ್ಕ್, ಗೀಲಾಂಗ್

ಅಕ್ಟೋಬರ್ 19 : ಸ್ಕಾಟ್ಲೆಂಡ್ ವಿರುದ್ಧ Q4 – 9:30am – ಬೆಲ್ಲೆರಿವ್ ಓವಲ್, ಹೋಬರ್ಟ್

ಅಕ್ಟೋಬರ್. 19 : ವೆಸ್ಟ್ ಇಂಡೀಸ್ ವಿರುದ್ಧ Q1 -1:30pm – ಬೆಲ್ಲೆರಿವ್ ಓವಲ್, ಹೋಬರ್ಟ್

ಅಕ್ಟೋಬರ್. 20 : ಶ್ರೀಲಂಕಾ ವಿರುದ್ಧ Q3 – 9:30am – ಕಾರ್ಡಿನಿಯಾ ಪಾರ್ಕ್, ಗೀಲಾಂಗ್

ಅಕ್ಟೋಬರ್ 20 : ನಮೀಬಿಯಾ vs Q2 – 1:30 -pm – ಕಾರ್ಡಿನಿಯಾ ಪಾರ್ಕ್, ಗೀಲಾಂಗ್

ಅಕ್ಟೋಬರ್. 21 : ವೆಸ್ಟ್ ಇಂಡೀಸ್ ವಿರುದ್ಧ Q4 – 9:30am – ಬೆಲ್ಲೆರಿವ್ ಓವಲ್, ಹೋಬರ್ಟ್

ಅಕ್ಟೋಬರ್. 21 : ಸ್ಕಾಟ್ಲೆಂಡ್ ವಿರುದ್ಧ Q1 – 1:30pm – ಬೆಲ್ಲೆರಿವ್ ಓವಲ್, ಹೋಬರ್ಟ್

ಸೂಪರ್ 12

ಗುಂಪು 1 ಪಂದ್ಯಗಳು

ಅಕ್ಟೋಬರ್. 22 : ಆಸ್ಟ್ರೇಲಿಯಾ ವಿರುದ್ಧ ನ್ಯೂಜಿಲೆಂಡ್ – ಮಧ್ಯಾಹ್ನ 12:30 – SCG, ಸಿಡ್ನಿ

ಅಕ್ಟೋಬರ್. 22 : ಇಂಗ್ಲೆಂಡ್ ವಿರುದ್ಧ ಅಫ್ಘಾನಿಸ್ತಾನ – ಸಂಜೆ 4:30 – ಪರ್ತ್ ಕ್ರೀಡಾಂಗಣ

ಅಕ್ಟೋಬರ್. 23 : A1 vs B2 – 9:30am – ಬೆಲ್ಲೆರಿವ್ ಓವಲ್, ಹೋಬಾರ್ಟ್

ಅಕ್ಟೋಬರ್. 25 : ಆಸ್ಟ್ರೇಲಿಯಾ ವಿರುದ್ಧ A1 – 4:30pm – ಪರ್ತ್ ಕ್ರೀಡಾಂಗಣ

ಅಕ್ಟೋಬರ್. 26 : ಇಂಗ್ಲೆಂಡ್ ವಿರುದ್ಧ B2 – 9:30am – MCG, ಮೆಲ್ಬೋರ್ನ್

ಅಕ್ಟೋಬರ್. 26 : ನ್ಯೂಜಿಲೆಂಡ್ ವಿರುದ್ಧ ಅಫ್ಘಾನಿಸ್ತಾನ – ಮಧ್ಯಾಹ್ನ 1:30 – MCG, ಮೆಲ್ಬೋರ್ನ್

ಅಕ್ಟೋಬರ್. 28 : ಅಫ್ಘಾನಿಸ್ತಾನ ವಿರುದ್ಧ B2 – 9:30am – MCG, ಮೆಲ್ಬೋರ್ನ್

ಅಕ್ಟೋಬರ್. 28 : ಇಂಗ್ಲೆಂಡ್ ವಿರುದ್ಧ ಆಸ್ಟ್ರೇಲಿಯಾ – ಮಧ್ಯಾಹ್ನ 1:30 – MCG, ಮೆಲ್ಬೋರ್ನ್

ಅಕ್ಟೋಬರ್. 29 : ನ್ಯೂಜಿಲೆಂಡ್ ವಿರುದ್ಧ A1 – 1:30pm – SCG, ಸಿಡ್ನಿ

ಅಕ್ಟೋಬರ್. 31 : ಆಸ್ಟ್ರೇಲಿಯಾ ವಿರುದ್ಧ B2 – 1:30pm – ಗಬ್ಬಾ, ಬ್ರಿಸ್ಬೇನ್

ನವೆಂಬರ್. 1: ಅಫ್ಘಾನಿಸ್ತಾನ ವಿರುದ್ಧ A1 – 9:30am – ಗಬ್ಬಾ, ಬ್ರಿಸ್ಬೇನ್

ನವೆಂಬರ್. 1: ಇಂಗ್ಲೆಂಡ್ ವಿರುದ್ಧ ನ್ಯೂಜಿಲೆಂಡ್- ಮಧ್ಯಾಹ್ನ 1:30 – ಗಬ್ಬಾ, ಬ್ರಿಸ್ಬೇನ್

ನವೆಂಬರ್. 4 : ನ್ಯೂಜಿಲೆಂಡ್ ವಿರುದ್ಧ B2 – 9:30am – ಅಡಿಲೇಡ್ ಓವಲ್, ಅಡಿಲೇಡ್

ನವೆಂಬರ್. 4 : ಆಸ್ಟ್ರೇಲಿಯಾ ವಿರುದ್ಧ ಅಫ್ಘಾನಿಸ್ತಾನ – ಮಧ್ಯಾಹ್ನ 1:30 – ಅಡಿಲೇಡ್ ಓವಲ್, ಅಡಿಲೇಡ್

ನವೆಂಬರ್. 5 : ಇಂಗ್ಲೆಂಡ್ ವಿರುದ್ಧ A1 – 1:30pm – SCG, ಸಿಡ್ನಿ

ಗುಂಪು 2 ಪಂದ್ಯಗಳು

ಅಕ್ಟೋಬರ್. 23 : ಭಾರತ ವಿರುದ್ಧ ಪಾಕಿಸ್ತಾನ – ಮಧ್ಯಾಹ್ನ 1:30 – MCG, ಮೆಲ್ಬೋರ್ನ್

ಅಕ್ಟೋಬರ್. 24 : ಬಾಂಗ್ಲಾದೇಶ ವಿರುದ್ಧ A2 – 9:30am – ಬೆಲ್ಲೆರಿವ್ ಓವಲ್, ಹೋಬರ್ಟ್

ಅಕ್ಟೋಬರ್. 24 : ದಕ್ಷಿಣ ಆಫ್ರಿಕಾ ವಿರುದ್ಧ B1 – 1:30pm – ಬೆಲ್ಲೆರಿವ್ ಓವಲ್, ಹೋಬರ್ಟ್

ಅಕ್ಟೋಬರ್. 27 : ದಕ್ಷಿಣ ಆಫ್ರಿಕಾ ವಿರುದ್ಧ ಬಾಂಗ್ಲಾದೇಶ – ಬೆಳಗ್ಗೆ 8:30 – SCG, ಸಿಡ್ನಿ

ಅಕ್ಟೋಬರ್. 27 : ಭಾರತ ವಿರುದ್ಧ A2 – 12:30pm – SCG, ಸಿಡ್ನಿ

ಅಕ್ಟೋಬರ್. 27 – ಪಾಕಿಸ್ತಾನ ವಿರುದ್ಧ B1 – 4:30pm – ಪರ್ತ್ ಸ್ಟೇಡಿಯಂ, ಪರ್ತ್

ಅಕ್ಟೋಬರ್. 30 : ಬಾಂಗ್ಲಾದೇಶ ವಿರುದ್ಧ B1 – 8:30am – ಗಬ್ಬಾ, ಬ್ರಿಸ್ಬೇನ್

ಅಕ್ಟೋಬರ್. 30 : ಪಾಕಿಸ್ತಾನ ವಿರುದ್ಧ A2 – 12:30pm – ಪರ್ತ್ ಸ್ಟೇಡಿಯಂ, ಪರ್ತ್

ಅಕ್ಟೋಬರ್. 30 : ಭಾರತ ವಿರುದ್ಧ ದಕ್ಷಿಣ ಆಫ್ರಿಕಾ – ಸಂಜೆ 4:30 – ಪರ್ತ್ ಸ್ಟೇಡಿಯಂ, ಪರ್ತ್

ನವೆಂಬರ್. 2 : B1 ವಿರುದ್ಧ A2 – 9:30am – ಅಡಿಲೇಡ್ ಓವಲ್, ಅಡಿಲೇಡ್

ನವೆಂಬರ್. 2 – ಭಾರತ ವಿರುದ್ಧ ಬಾಂಗ್ಲಾದೇಶ – ಮಧ್ಯಾಹ್ನ 1:30 – ಅಡಿಲೇಡ್ ಓವಲ್, ಅಡಿಲೇಡ್

ನವೆಂಬರ್. 3 : ಪಾಕಿಸ್ತಾನ ವಿರುದ್ಧ ದಕ್ಷಿಣ ಆಫ್ರಿಕಾ – ಮಧ್ಯಾಹ್ನ 1:30 – SCG, ಸಿಡ್ನಿ

ನವೆಂಬರ್. 6 : ದಕ್ಷಿಣ ಆಫ್ರಿಕಾ ವಿರುದ್ಧ A2 – 5:30am – ಅಡಿಲೇಡ್ ಓವಲ್, ಅಡಿಲೇಡ್

ನವೆಂಬರ್. 6 : ಪಾಕಿಸ್ತಾನ ವಿರುದ್ಧ ಬಾಂಗ್ಲಾದೇಶ – ಬೆಳಗ್ಗೆ 9:30 – ಅಡಿಲೇಡ್ ಓವಲ್, ಅಡಿಲೇಡ್

ನವೆಂಬರ್. 6 : ಭಾರತ ವಿರುದ್ಧ B1 – 1:30pm – MCG, ಮೆಲ್ಬೋರ್ನ್

ನಾಕೌಟ್‌ಗಳು

ನವೆಂಬರ್ 9 : ಸೆಮಿಫೈನಲ್ 1 – 1:30pm – SCG, ಸಿಡ್ನಿ

ನವೆಂಬರ್ 10 : ಸೆಮಿಫೈನಲ್ 2 – 1:30pm – ಅಡಿಲೇಡ್ ಓವಲ್, ಅಡಿಲೇಡ್

ನವೆಂಬರ್ 13 : ಅಂತಿಮ – 1:30pm – MCG, ಮೆಲ್ಬೋರ್ನ್

ಇದನ್ನೂ ಓದಿ : ವಿರಾಟ್‌ ಕೊಹ್ಲಿ ರಾಜೀನಾಮೆ ಹಿಂದಿದೆ ಆ ಮೂರು ಕಾರಣ

ಇದನ್ನೂ ಓದಿ : ವೃತ್ತಿಪರ ಟೆನ್ನಿಸ್​​ಗೆ ವಿದಾಯ ಘೋಷಿಸುವ ಮಾತುಗಳನ್ನಾಡಿದ ಸಾನಿಯಾ ಮಿರ್ಜಾ

(ICC Announced the schedule for the 2022 T20 World Cup, India first match against Pakistan)

Comments are closed.