ICC ODI World Cup 2023 : ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಭಾರತ Vs ಪಾಕಿಸ್ತಾನ ಪಂದ್ಯ, ಅಕ್ಟೋಬರ್ 5ರಿಂದ ವರ್ಲ್ಡ್ ಕಪ್ ಕಿಕ್ ಸ್ಟಾರ್ಟ್

ಬೆಂಗಳೂರು: ICC ODI World Cup 2023 : ಭಾರತದಲ್ಲಿ ಅಕ್ಟೋಬರ್ ಹಾಗೂ ನವೆಂಬರ್ ತಿಂಗಳಲ್ಲಿ ನಡೆಯಲಿರುವ ಐಸಿಸಿ ಏಕದಿನ ವಿಶ್ವಕಪ್ (ICC Men’s World Cup 2023) ಟೂರ್ನಿಯ ಮೇಲೆ ಇಡೀ ಕ್ರಿಕೆಟ್ ಜಗತ್ತಿನ ಕಣ್ಣು ನೆಟ್ಟಿದೆ. ಅದರಲ್ಲೂ ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ನಡುವಿನ ಹೈವೋಲ್ಟೇಜ್ ಪಂದ್ಯವನ್ನು (India vs Pakistan) ಕ್ರಿಕೆಟ್ ಪ್ರಿಯರು ಚಾತಕ ಪಕ್ಷಿಗಳಂತೆ ಎದುರು ನೋಡುತ್ತಿದ್ದಾರೆ.

ಭಾರತ ಮತ್ತು ಪಾಕಿಸ್ತಾನ ನಡುವಿನ ವಿಶ್ವಕಪ್ (ICC ODI World Cup 2023) ಮೆಗಾ ಪಂದ್ಯಕ್ಕೆ ಅಹ್ಮದಾಬಾದ್’ನ ನರೇಂದ್ರ ಮೋದಿ ಕ್ರೀಡಾಂಗಣ ಆತಿಥ್ಯ ವಹಿಸಲಿದೆ. ಐಪಿಎಲ್ ಟೂರ್ನಿ ಮುಗಿದ ಬೆನ್ನಲ್ಲೇ ಬಿಸಿಸಿಐ ವಿಶ್ವಕಪ್ ಟೂರ್ನಿಯ ವೇಳಾಪಟ್ಟಿಯನ್ನು ಪ್ರಕಟಿಸಲಿದ್ದು, ಭಾರತ Vs ಪಾಕ್ ಪಂದ್ಯವನ್ನು ತಮ್ಮ ತವರು ರಾಜ್ಯ ಅಹ್ಮದಾಬಾದ್’ನಲ್ಲಿ ಆಯೋಜಿಸಲು ಬಿಸಿಸಿಐ ಕಾರ್ಯದರ್ಶಿ ಜೈ ಶಾ ಮುಂದಾಗಿದ್ದಾರೆ. ಅಹ್ಮದಾಬಾದ್’ನ ನರೇಂದ್ರ ಮೋದಿ ಕ್ರೀಡಾಂಗಣ ಕ್ರಿಕೆಟ್ ಜಗತ್ತಿನಲ್ಲೇ ಅತ್ಯಂತ ದೊಡ್ಡ ಮೈದಾನವೆಂಬ ದಾಖಲೆ ಹೊಂದಿದೆ. ಇತ್ತೀಚೆಗಷ್ಟೇ ನವೀಕರಣಗೊಂಡಿದ್ದ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಮಂದಿ ಕುಳಿತು ಪಂದ್ಯ ವೀಕ್ಷಿಸುವ ವ್ಯವಸ್ಥೆಯಿದೆ.

ವಿಶ್ವಕಪ್ ಟೂರ್ನಿಗೆ ಅಕ್ಟೋಬರ್ 5ರಂದು ಚಾಲನೆ ಸಿಗಲಿದ್ದು, ಫೈನಲ್ ಪಂದ್ಯವೂ ನರೇಂದ್ರ ಮೋದಿ ಕ್ರೀಡಾಂಗಣದಲ್ಲೇ ನಡೆಯುವ ಸಾಧ್ಯತೆಯಿದೆ. ಆದರೆ ಭದ್ರತಾ ಕಾರಣ ಗಳಿಗಾಗಿ ಪಾಕಿಸ್ತಾನ ತಂಡ ಗುಜರಾತ್’ನಲ್ಲಿರುವ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಆಡಲು ಹಿಂದೇಟು ಹಾಕುವ ಸಾಧ್ಯತೆಯಿದೆ. ಬೆಂಗಳೂರು ಅಥವಾ ಚೆನ್ನೈನಲ್ಲಿ ಆಡಲು ಪಾಕಿಸ್ತಾನ (India vs Pakistan) ಉತ್ಸುಕವಾಗಿದ್ದು, ಕೋಲ್ಕತಾದ ಈಡನ್ ಗಾರ್ಡನ್ಸ್ ಮೈದಾನ ಪಾಕಿಸ್ತಾನ ಕಣ್ಣಿಟ್ಟಿರುವ ಮತ್ತೊಂದು ಕ್ರೀಡಾಂಗಣವೆಂದು ಹೇಳಲಾಗುತ್ತಿದೆ.

ಮತ್ತೊಂದು ಇಂಟ್ರೆಸ್ಟಿಂಗ್ ಸಂಗತಿ ಏನಂದ್ರೆ ಆಸ್ಟ್ರೇಲಿಯಾ, ಇಂಗ್ಲೆಂಡ್, ನ್ಯೂಜಿಲೆಂಡ್ ಮತ್ತು ದಕ್ಷಿಣ ಆಫ್ರಿಕಾ ತಂಡಗಳ ವಿರುದ್ಧದ ಪಂದ್ಯಗಳನ್ನು ಸ್ಪಿನ್ ಸ್ನೇಹಿ ಪಿಚ್’ಗಳಲ್ಲಿ ಆಡಿಸಲು ಭಾರತ ಕ್ರಿಕೆಟ್ ತಂಡ ಬಿಸಿಸಿಐಗೆ ಮನವಿ ಸಲ್ಲಿಸಿದೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ : Karun Nair : ಐಪಿಎಲ್‌ನಿಂದ ಕೆ.ಎಲ್ ರಾಹುಲ್ ಔಟ್, ಕನ್ನಡಿಗನ ಸ್ಥಾನಕ್ಕೆ ಮತ್ತೊಬ್ಬ ಕನ್ನಡಿಗ ?

ಇದನ್ನು ಓದಿ : Commentators in RCB team: ರಾಯಲ್ ಚಾಲೆಂಜರ್ಸ್ ತಂಡದಲ್ಲಿ ಆಡುತ್ತಿದ್ದಾರೆ ಇಬ್ಬರು ಕಾಮೆಂಟೇಟರ್ಸ್ !

Comments are closed.