KL Rahul : ವಿಶ್ವ ಟೆಸ್ಟ್ ಚಾಂಪಿಯನ್’ಷಿಪ್ ಫೈನಲ್‌ನಲ್ಲಿ ಕನ್ನಡಿಗನನ್ನು ಆಡಿಸಲು ಸೂಪರ್ ಪ್ಲಾನ್, ಕೆ.ಎಲ್ ರಾಹುಲ್ ಆಡೋದು ಪಕ್ಕಾ!

ಅಹ್ಮದಾಬಾದ್ : ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ (Border-Gavaskar test series) ಕೊನೆಯ ಎರಡು ಪಂದ್ಯಗಳಿಗೆ ಟೀಮ್ ಇಂಡಿಯಾ ಪ್ಲೇಯಿಂಗ್ XIನಲ್ಲಿ ಸ್ಥಾನ ಕಳೆದುಕೊಂಡಿರುವ ಕನ್ನಡಿಗ ಕೆ.ಎಲ್ ರಾಹುಲ್ (KL Rahul) ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್’ಷಿಪ್ ಫೈನಲ್’ನಲ್ಲಿ (ICC World test championship final) ಆಡಲಿದ್ದಾರೆ.

ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್’ಷಿಪ್ ಫೈನಲ್ ಪಂದ್ಯ ಮುಂದಿನ ಜೂನ್ ತಿಂಗಳಲ್ಲಿ ಇಂಗ್ಲೆಂಡ್’ನ ಕ್ರಿಕೆಟ್ ಕಾಶಿ ಲಾರ್ಡ್ ಮೈದಾನದಲ್ಲಿ ನಡೆಯಲಿದ್ದು, ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು ಮುಖಾಮುಖಿಯಾಗಲಿವೆ. ಆಸೀಸ್ ವಿರುದ್ಧದ ಸರಣಿಯಲ್ಲಿ ಆಡುವ ಬಳಗದಲ್ಲಿ ಸ್ಥಾನ ಕಳೆದುಕೊಂಡಿದ್ದರೂ ವಿಶ್ವ ಟೆಸ್ಟ್ ಚಾಂಪಿಯನ್’ಷಿಪ್ ಫೈನಲ್’ನಲ್ಲಿ ರಾಹುಲ್ ಅವರನ್ನು ಆಡಿಸಲು ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್ ಸೂಪರ್ ಪ್ಲಾನ್ ರೆಡಿ ಮಾಡಿದೆ.

ಹಾಗಾದ್ರೆ ವಿಶ್ವ ಟೆಸ್ಟ್ ಚಾಂಪಿಯನ್’ಷಿಪ್ ಫೈನಲ್’ನಲ್ಲಿ ರಾಹುಲ್ ಆರಂಭಿಕನಾಗಿ ಆಡುತ್ತಾರಾ..? ಖಂಡಿತಾ ಇಲ್ಲ. ಆರಂಭಿಕರಾಗಿ ನಾಯಕ ರೋಹಿತ್ ಶರ್ಮಾ ಮತ್ತು ಶುಭಮನ್ ಗಿಲ್ ಕಣಕ್ಕಿಳಿಯುವುದು ಖಚಿತ. ಇನ್ನು 3ನೇ ಕ್ರಮಾಂಕದಲ್ಲಿ ಚೇತೇಶ್ವರ್ ಪೂಜಾರ, 4ನೇ ಕ್ರಮಾಂಕದಲ್ಲಿ ವಿರಾಟ್ ಕೊಹ್ಲಿ ಮತ್ತು 5ನೇ ಕ್ರಮಾಂಕದಲ್ಲಿ ಶ್ರೇಯಸ್ ಅಯ್ಯರ್ ಇದ್ದಾರೆ. ಹಾಗಾದ್ರೆ ರಾಹುಲ್ ಯಾವ ಕ್ರಮಾಂಕದಲ್ಲಿ ಆಡಲಿದ್ದಾರೆ..? ಅದೇ ಇಂಟ್ರೆಸ್ಟಿಂಗ್.

ವಿಶ್ವ ಟೆಸ್ಟ್ ಚಾಂಪಿಯನ್’ಷಿಪ್ ಫೈನಲ್’ನಲ್ಲಿ ಕೆ.ಎಲ್ ರಾಹುಲ್ ವಿಕೆಟ್ ಕೀಪರ್ ಆಗ ಕಾಣಸಿಕೊಳ್ಳಲಿದ್ದಾರೆ. ಆಸೀಸ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ವಿಕೆಟ್ ಕೀಪರ್ ಕೆ.ಎಸ್ ಭರತ್ ದಯನೀಯ ವೈಫಲ್ಯ ಎದುರಿಸಿದ್ದಾರೆ. ಆಡಿರುವ 5 ಇನ್ನಿಂಗ್ಸ್’ಗಳಿಂದ ಕೇವಲ 57 ರನ್ ಕಲೆ ಹಾಕಿದ್ದಾರೆ. ಹೀಗಾಗಿ ವಿಶ್ವ ಟೆಸ್ಟ್ ಚಾಂಪಿಯನ್’ಷಿಪ್ ಫೈನಲ್’ನಲ್ಲಿ ಭರತ್ ಆಡುವ ಸಾಧ್ಯತೆಗಳು ಕಡಿಮೆ. ಟೀಮ್ ಇಂಡಿಯಾಗೊಬ್ಬ ಸಾಲಿಡ್ ವಿಕೆಟ್ ಕೀಪರ್ ಬ್ಯಾಟ್ಸ್’ಮನ್ ಅವಶ್ಯಕತೆಯಿದ್ದು, ರಾಹುಲ್ ಅವರನ್ನೇ ಆಡಿಸಲು ಟೀಮ್ ಮ್ಯಾನೇಜ್ಮೆಂಟ್ ಪ್ಲಾನ್ ಮಾಡ್ತಿದೆ. ಇದಕ್ಕೆ ಪುಷ್ಠಿ ನೀಡುವಂತೆ ಆಸೀಸ್ ವಿರುದ್ಧದ 4ನೇ ಟೆಸ್ಟ್ ಪಂದ್ಯದ ಬಿಡುವಿನ ವೇಳೆಯಲ್ಲಿ ಕೆ.ಎಲ್ ರಾಹುಲ್ ವಿಕೆಟ್ ಕೀಪಿಂಗ್ ಅಭ್ಯಾಸ ನಡೆಸುತ್ತಿದ್ದಾರೆ.

ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್’ಷಿಪ್’ಗೆ ಆತಿಥ್ಯ ವಹಿಸಲಿರುವ ಇಂಗ್ಲೆಂಡ್’ನ ಲಾರ್ಡ್ ಮೈದಾನ ಸ್ವಿಂಗ್ ಬೌಲರ್’ಗಳ ಪಾಲಿನ ಸ್ವರ್ಗ. ಅಲ್ಲಿ ಕ್ರೀಸ್ ಕಚ್ಚಿ ನಿಂತು ರನ್ ಗಳಿಸುವುದು ಬ್ಯಾಟ್ಸ್’ಮನ್’ಗಳಿಗೆ ನಿಜಕ್ಕೂ ಸವಾಲು. ಅಂತಹ ಪಿಚ್’ನಲ್ಲಿ ಕೆ.ಎಲ್ ರಾಹುಲ್ 2021ರ ಇಂಗ್ಲೆಂಡ್ ಪ್ರವಾಸದ ಲಾರ್ಡ್ಸ್ ಟೆಸ್ಟ್ ಪಂದ್ಯದಲ್ಲಿ ಅಮೋಘ ಶತಕ ಬಾರಿಸಿದ್ದರು.

ಇದನ್ನೂ ಓದಿ : Border-Gavaskar test series: ಆಸ್ಟ್ರೇಲಿಯಾ ಬೃಹತ್ ಮೊತ್ತ, ಟೀಮ್ ಇಂಡಿಯಾ ಮುಂದಿದೆ ಬಿಗ್ ಚಾಲೆಂಜ್

ಇದನ್ನೂ ಓದಿ : KL Rahul : ಕಳೆದ ಟೆಸ್ಟ್ ಸರಣಿಯಲ್ಲಿ ನಾಯಕ, ಈಗ ವಾಟರ್ ಬಾಯ್ ಕಾಯಕ : ಕೆ.ಎಲ್ ರಾಹುಲ್ ಕಥೆ ಹೇಗಾಯ್ತು ನೋಡಿ!

ಇದನ್ನೂ ಓದಿ : Women’s Premier League: ಯು.ಪಿ ವಿರುದ್ಧ ಆರ್‌ಸಿಬಿಗೆ ಮಾಡು ಇಲ್ಲ ಮಡಿ ಪಂದ್ಯ : ಇಂದೂ ಸೋತರೆ ರಾಯಲ್ ಚಾಲೆಂಜರ್ಸ್ ವನಿತೆಯರ ಪ್ಲೇ ಆಫ್ ಕನಸು ಭಗ್ನ

ICC World test championship final: Super plan to play Kannadigas in the World Test Championship final, KL Rahul is sure to play!

Comments are closed.