Dhoni vs Gambhir : ಧೋನಿ “ಓರಿಯೊ” ಅಂದ್ರೆ, ನಮ್ಮನೆ ನಾಯಿ ಓರಿಯೊ ಅಂದ್ರಲ್ಲಾ ಗಂಭೀರ್.. ಹೊಟ್ಟೆಕಿಚ್ಚಿನ ಮೊಟ್ಟೆಕೋಳಿಗೆ ಧೋನಿ ಮೇಲೇಕೆ ಇಷ್ಟೊಂದು ಕಿಚ್ಚು?

ಬೆಂಗಳೂರು : (Dhoni vs Gambhir) ಟೀಮ್ ಇಂಡಿಯಾದ ಮಾಜಿ ಆರಂಭಿಕ ಬ್ಯಾಟ್ಸ್’ಮನ್ ಗೌತಮ್ ಗಂಭೀರ್ ಉತ್ತಮ ಆಟಗಾರ ನಿಜ. ಆದರೆ ಅಷ್ಟೇ ಹೊಟ್ಟೆಕಿಚ್ಚಿನ ಮನುಷ್ಯ ಕೂಡ. ಇದನ್ನು ಸ್ವತಃ ಗಂಭೀರ್ ಅವರೇ ಪದೇ ಪದೇ ಸಾಬೀತು ಪಡಿಸುತ್ತಿದ್ದಾರೆ. ಭಾರತಕ್ಕೆ ಎರಡು ವಿಶ್ವಕಪ್’ಗಳನ್ನು ಗೆದ್ದು ಕೊಟ್ಟಿದ್ದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ (MS Dhoni) ಬಗ್ಗೆ ಗೌತಮ್ ಗಂಭೀರ್ (Gautam Gambhir) ಆಗಾಗ ಅಸೂಯೆಯ ಮಾತುಗಳನ್ನಾಡುತ್ತಲೇ ಇರುತ್ತಾರೆ. ಧೋನಿಯೊಬ್ಬರಿಂದಲೇ ಭಾರತ ವಿಶ್ವಕಪ್ ಗೆದ್ದಿಲ್ಲ ಎಂದು ಈ ಹಿಂದೆ ಸಾಕಷ್ಟು ಬಾರಿ ಹೇಳಿದ್ದ ಗಂಭೀರ್, ಧೋನಿ ಕುರಿತಾಗಿ ತಮ್ಮ ಮನಸ್ಸಲ್ಲಿರುವ ಅಸೂಯೆಯನ್ನು ಸಾಕಷ್ಟು ಬಾರಿ ಹೊರ ಹಾಕಿದ್ದಾರೆ.

(Dhoni vs Gambhir)ಈಗ ಮತ್ತೆ ಅಂಥದ್ದೇ ನಡವಳಿಕೆಯಿಂದ ಧೋನಿ ಅಭಿಮಾನಿಗಳ ಆಕ್ರೋಶಕ್ಕೆ ಗಂಭೀರ್ ಗುರಿಯಾಗಿದ್ದಾರೆ. ಅಷ್ಟಕ್ಕೂ ಆಗಿದ್ದೇನಂದ್ರೆ, ಇತ್ತೀಚೆಗಷ್ಟೇ ಎಂ.ಎಸ್ ಧೋನಿ ಓರಿಯೊ ಬಿಸ್ಕಟ್ (Oreo Biscuit) ಜಾಹೀರಾತೊಂದು ಬಿಡುಗಡೆಯಾಗಿತ್ತು. ಆ ಜಾಹೀರಾತಿನಲ್ಲಿ ಧೋನಿ ಒಂದು ಡೈಲಾಗ್ ಹೊಡೆದಿದ್ದಾರೆ. ಅದೇನಂದ್ರೆ, “2011ರಲ್ಲಿ ಭಾರತದಲ್ಲಿ ಓರಿಯಾ ಬಿಸ್ಕೆಟ್ ಬಿಡುಗಡೆಗೊಂಡಿತ್ತು. ಆ ವರ್ಷ ಭಾರತ ವಿಶ್ವಕಪ್ ಗೆದ್ದಿತ್ತು. ಈ ವರ್ಷ ಮತ್ತೊಂದು ವಿಶ್ವಕಪ್ ಎದುರಾಗಿದ್ದು, ಇದೇ ವರ್ಷ ಓರಿಯಾ ಬಿಸ್ಕೆಟ್ ಮತ್ತೆ ಮರು ಬಿಡುಗಡೆಗೊಂಡಿದೆ. ನಾನೇನು ಹೇಳುತ್ತಿದ್ದೇನೆಂಬುದು ನಿಮಗೆ ಅರ್ಥವಾಗಿರಬಹುದು” ಎಂಬುದು ಜಾಹೀರಾತಿನಲ್ಲಿ ಧೋನಿ ಹೊಡೆದಿರುವ ಡೈಲಾಗ್.


ಧೋನಿ ಈ ಡೈಲಾಗ್ ಹೊಡೆದಿರುವು ಒಂದು ಜಾಹೀರಾತಿನಲ್ಲಿ… ಜಾಹೀರಾತಿನಲ್ಲಿ ತಮಗೆ ಕೊಟ್ಟಿರುವ ಡೈಲಾಗನ್ನು ಧೋನಿ ಹೇಳಿದ್ದಾರೆ. ಇಷ್ಟಕ್ಕೇ ಉರಿದು ಬಿದ್ದಿರುವ ಗೌತಮ್ ಗಂಭೀರ್, “1983ರಲ್ಲೂ ಭಾರತ ವಿಶ್ವಕಪ್ ಗೆದ್ದಿತ್ತು, ಆಗ ಓರಿಯೊ ಬಿಸ್ಕೆಟ್ ಬಿಡುಗಡೆಯಾಗಿರಲಿಲ್ಲ” ಎಂದಿದ್ದರು. ಇದೀಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿರುವ ಗಂಭೀರ್ ತಮ್ಮ ಇಬ್ಬರು ಮಕ್ಕಳು ಹಾಗೂ ನಾಯಿಗಳೊಂದಿಗೆ ಆಟವಾಡುತ್ತಿರುವ ವೀಡಿಯೊವೊಂದನ್ನು ಇನ್’ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ. ಅಲ್ಲಿರುವ ಮೂರು ನಾಯಿಗಳ ಪೈಕಿ ಒಂದು ನಾಯಿಯ ಹೆಸರು ”ಓರಿಯೊ”. ವಿಶ್ವಕಪ್ ಗೆಲುವು ಹಾಗೂ ಓರಿಯೊ ಬಿಸ್ಕೆಟ್ ಕುರಿತಾಗಿ ಜಾಹೀರಾತಿನಲ್ಲಿ ಧೋನಿ ಡೈಲಾಗ್ ಹೊಡೆಯುತ್ತಿದ್ದಂತೆ ಗಂಭೀರ್ ಈ ವೀಡಿಯೊವನ್ನು ಪ್ರಕಟಿಸಿದ್ದಾರೆ.

ಗಂಭೀರ್ ಅವರ ಈ ನಡೆಯ ವಿರುದ್ಧ ಕ್ರಿಕೆಟ್ ಪ್ರಿಯರು, ಧೋನಿ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಕಿಡಿ ಕಾರುತ್ತಿದ್ದಾರೆ. ಗೌತಮ್ ಗಂಭೀರ್ ಅವರನ್ನು ಲೇವಡಿ ಮಾಡುವಂತಹ ಟ್ವೀಟ್’ಗಳನ್ನು ಮಾಡಿದ್ದಾರೆ.

https://twitter.com/Deefuk_Kahar/status/1574212859235823616?s=20&t=1Csq8AFMZ0waQgXDco665A

ಇದನ್ನೂ ಓದಿ : ಬುಮ್ರಾಗೆ ಗಾಯದ ಬಗ್ಗೆ ವಾರ್ನಿಂಗ್ ಕೊಟ್ಟಿದ್ದರು ಪಾಕ್ ವೇಗಿ ಅಖ್ತರ್… ಕಡೆಗಣಿಸಿದ್ದಕ್ಕೆ ಟಿ20 ವಿಶ್ವಕಪ್‌ನಿಂದಲೇ ಔಟ್

ಇದನ್ನೂ ಓದಿ : ಧೋನಿ ದಾಖಲೆ ಮುರಿದ ರೋಹಿತ್, ಪಾಕ್ ರೆಕಾರ್ಡ್ ಸರಿಗಟ್ಟಿದ ಭಾರತ; ಒಂದೇ ಪಂದ್ಯದಲ್ಲಿ ಎರಡು ದಾಖಲೆ

ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದಿದ್ದ 2011ರ ಐಸಿಸಿ ವಿಶ್ವಕಪ್ ಫೈನಲ್’ನಲ್ಲಿ ಶ್ರೀಲಂಕಾವನ್ನು 6 ವಿಕೆಟ್’ಗಳಿಂದ ಮಣಿಸಿದ್ದ ಭಾರತ ಧೋನಿ ನಾಯಕತ್ವದಲ್ಲಿ ವಿಶ್ವಕಪ್ ಎತ್ತಿ ಹಿಡಿದಿತ್ತು. ಫೈನಲ್ ಪಂದ್ಯದಲ್ಲಿ ಕೇವಲ 79 ಎಸೆತಗಳಲ್ಲಿ ಅಜೇಯ 92 ರನ್ ಬಾರಿಸಿದ್ದ ನಾಯಕ ಧೋನಿ ಭಾರತದ ವಿಜಯಶಿಲ್ಪಿಯಾಗಿ ಮೂಡಿ ಬಂದಿದ್ದರು. ಅದೇ ಪಂದ್ಯದಲ್ಲಿ ಗೌತಮ್ ಗಂಭೀರ್ 97 ರನ್ ಗಳಿಸಿದ್ದರು.

Dhoni is “Oreo”, our dog is Oreo Andralla Gambhir

Comments are closed.