Iodine Deficiency : ಅಯೋಡಿನ್‌ ಕೊರತೆ ನಿವಾರಿಸುವ 5 ಸೂಪರ್‌ ಫುಡ್‌ಗಳು ಯಾವುದು ಗೊತ್ತಾ

ನಮ್ಮ ದೇಹಕ್ಕೆ ಅಯೋಡಿನ್‌ (Iodine) ಅತ್ಯಗತ್ಯ. ಅದು ಕಡಿಮೆಯಾದರೂ ಸಮಸ್ಯೆ, ಹೆಚ್ಚಾದರೂ ಸಮಸ್ಯೆ. ಇತ್ತೀಚೆಗೆ ಐಯೋಡಿನ್‌ ಕೊರತೆ (Iodine Deficiency) ಹೆಚ್ಚಾಗಿ ಕಾಣಿಸುತ್ತಿದೆ ಎಂದು ಹಲವಾರು ಅಧ್ಯಯನಗಳಿಂದ ತಿಳಿದುಬಂದಿದೆ. ಅಯೋಡಿನ್‌ ಕೊರತೆಯಿಂದ ಮೆದುಳಿಗೆ ಹಾನಿಯಾಗುವ ಅಪಾಯ ಹೆಚ್ಚಿರುತ್ತದೆ. ಇದರಿಂದ ಶಾಶ್ವತ ಮಾನಸಿಕ ದುರ್ಬಲತೆಗೆ ಕಾರಣವಾಗಬಹುದು. ಮಣ್ಣಿನಲ್ಲಿನ ಅಯೋಡಿನ್‌ ಕೊರತೆಯು ಆಹಾರ ಉತ್ಪನ್ನಗಳಲ್ಲೂ ಅಯೋಡಿನ್‌ ಸಾಂದ್ರತೆಯನ್ನು ಕಡಿಮೆ ಮಾಡುತ್ತದೆ.

ಅಯೋಡಿನ್‌ ಪರಿಣಾಮವಾಗಿ ಥೈರಾಯ್ಡ್‌ ಹಾರ್ಮೋನ್‌ಗಳು ಉತ್ಪತ್ತಿಯಾಗುತ್ತವೆ. ಇದು ಮಾನಸಿಕ ದುರ್ಬಲತೆ ಸೇರಿದಂತೆ ಹಲವಾರು ಸಮಸ್ಯೆಗಳಿಗೆ ಕಾರಣವಾಗುತ್ತದೆ. ಸರಿಯಾದ ಆಹಾರವನ್ನು ಸೇವಿಸುವುದರಿಂದ ಅಯೋಡಿನ್‌ ಕೊರತೆಯನ್ನು ಸರಿದೂಗಿಸಿಕೊಳ್ಳಬಹುದು. ಅಯೋಡಿನ್‌ ಕೊರತೆಯನ್ನು ನಿವಾರಿಸುವ ಆಹಾರಗಳು ಇಲ್ಲಿವೆ.

ಇದನ್ನೂ ಓದಿ: Heart Attack in Gym : ಹೃದಯಾಘಾತದ ಹಿಂದೆ ಇರುವ ಅಪಾಯಕಾರಿ ಅಂಶಗಳ ಬಗ್ಗೆ ನಿಮಗೆ ಗೊತ್ತಾ

ಹಾಲು :
ಹಾಲಿನಲ್ಲಿ ಅಯೋಡಿನ್‌ ಹೆಚ್ಚಾಗಿರುತ್ತದೆ. ಒಂದು ಕಪ್‌ ಹಾಲಿನಲ್ಲಿ 56mcg ಅಯೋಡಿನ್‌ ಇರುತ್ತದೆ. ಅದಕ್ಕಾಗಿಯೇ ದೇಹದಲ್ಲಿ ಅಯೋಡಿನ್‌ ಪ್ರಮಾಣ ಹೆಚ್ಚಿಸಿಕೊಳ್ಳಲು ಹಾಲು ಉತ್ತಮವಾಗಿದೆ. ಇದು ಮಕ್ಕಳ ಮೆದುಳಿನ ಬೆಳವಣಿಗೆಗೆ ಅತ್ಯಂತ ಮಹತ್ವದ್ದಾಗಿದೆ.

ಅಯೊಡೈಸ್ಡ್‌ ಉಪ್ಪು :
1.5 ಗ್ರಾಮ್‌ ಅಯೋಡೈಸ್ಡ್‌ ಉಪ್ಪಿನಲ್ಲಿ 71mcg ಅಯೋಡಿನ್‌ ಇರುತ್ತದೆ. ಅಯೋಡಿನ್‌ಯುಕ್ತ ಉಪ್ಪನ್ನು ಸರಿಯಾದ ಪ್ರಮಾಣದಲ್ಲಿ ಡಯಟ್‌ನಲ್ಲಿ ಸೇರಿಸಿಕೊಳ್ಳುವುದು ಅತಿ ಮುಖ್ಯ.

ಮ್ಯಾಕ್ರೋನಿ:
ಕುದಿಸಿದ ಮ್ಯಾಕ್ರೋನಿಗಳು 27 mcg ಅಷ್ಟು ಅಯೋಡಿನ್‌ ಹೊಂದಿರುತ್ತವೆ. ಇದು ದಿನವೊಂದಕ್ಕೆ ನಿಮಗೆ ಸಾಕಾಗುವ ಅಯೋಡಿನ್‌ ಪ್ರಮಾಣವಾಗಿದೆ.

ಸೀಫುಡ್‌ :
ಸೀಫುಡ್‌ಗಳು ಅತಿ ಹೆಚ್ಚಿನ ಅಯೋಡಿನ್‌ ಅಂಶವನ್ನು ಹೊಂದಿರುತ್ತವೆ. ಸೀಫುಡ್‌ಗಳಲ್ಲಿ ಇರುವ ಶೆಲ್‌ಗಳಲ್ಲಿ ಇದರ ಅಂಶ ಹೆಚ್ಚು ಅದಕ್ಕಾಗಿ ಶೆಲ್‌ಗಳ ಸಹಿತ ಸೇವಿಸುವುದರಿಂದ ಅಯೋಡಿನ್‌ ಕೊರತೆ ನೀಗಿಸಬಹುದು.

ಸೀ ವೀಡ್‌ಗಳು :
ಅಧ್ಯಯನಗಳ ಪ್ರಕಾರ ಒಂದು ಸೀವೀಡ್‌ನಲ್ಲಿ 16 ರಿಂದ 2984 mcg ಅಯೋಡಿನ್‌ ಇರುತ್ತದೆ. ಆದಕಾರಣ ದೇಹದ ಅಯೋಡಿನ್‌ ಪ್ರಮಾಣ ಹೆಚ್ಚಿಸಿಕೊಳ್ಳಲು ಸೀವೀಡ್‌ ಆಹಾರಗಳು ಉತ್ತಮವಾಗಿದೆ.

ಇದನ್ನೂ ಓದಿ: Calcium Deficiency Problems: ಕ್ಯಾಲ್ಸಿಯಂ ಕೊರತೆಯಿಂದ ಏನೆಲ್ಲಾ ತೊಂದರೆಯಾಗುತ್ತದೆ? ತಿಳಿದುಕೊಳ್ಳಲೇಬೇಕಾದ ಮಾಹಿತಿ ಇಲ್ಲಿದೆ

ಇದನ್ನೂ ಓದಿ : Dry Cough : ಅತಿಯಾಗಿ ಕಾಡುವ ಒಣ ಕೆಮ್ಮು : ಕಾಳು ಮೆಣಸು ಲಿಂಬೆಯ ಅಕ್ರೂಟ್‌ ರಾಮಬಾಣ

(Iodine Deficiency, using these 5 superfoods you can eliminate body iodine deficiency)

Comments are closed.