Siraj replaces Jasprit Bumrah: ಗಾಯಾಳು ಜಸ್ಪ್ರೀತ್ ಬುಮ್ರಾ ಬದಲು ಟೀಮ್ ಇಂಡಿಯಾ ಸೇರಿದ ಆರ್‌ಸಿಬಿ ವೇಗಿ ಸಿರಾಜ್

ಬೆಂಗಳೂರು: (Jasprit Bumrah Mohamed Siraj) ಬೆನ್ನು ನೋವಿನ ಗಾಯದ ಕಾರಣ ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಯಿಂದ (India Vs South Africa T20 Series) ಹೊರ ಬಿದ್ದಿರುವ ವೇಗಿ ಜಸ್ಪ್ರೀತ್ ಬುಮ್ರಾ ಬದಲು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಯುವ ವೇಗದ ಬೌಲರ್ ಮೊಹಮ್ಮದ್ ಸಿರಾಜ್ (Mohammed Siraj) ಅವರನ್ನು ಟೀಮ್ ಇಂಡಿಯಾಗೆ ಸೇರಿಸಿಕೊಳ್ಳಲಾಗಿದೆ.

ಬೆನ್ನು ನೋವಿನಿಂದ ಬಳಲುತ್ತಿರುವ ಜಸ್ಪ್ರೀತ್ ಬುಮ್ರಾ ಸದ್ಯ ಬಿಸಿಸಿಐ (BCCI) ಮೆಡಿಕಲ್ ಟೀಮ್’ನ ಮೇಲ್ವಿಚಾರಣೆಯಲ್ಲಿದ್ದು, ಟಿ20 ವಿಶ್ವಕಪ್’ಗೆ ಬುಮ್ರಾ ಲಭ್ಯತೆಯ ಬಗ್ಗೆ ಬಿಸಿಸಿಐ ಇನ್ನಷ್ಟೇ ಅಧಿಕೃತ ಮಾಹಿತಿ ನೀಡಬೇಕಿದೆ. ಆದರೆ ಬುಮ್ರಾ ಅವರ ಗಾಯ ಗಂಭೀರ ಸ್ವರೂಪದ್ದಾಗಿರುವ ಕಾರಣ ಐಸಿಸಿ ಟಿ20 ವಿಶ್ವಕಪ್ (ICC T20 World Cup) ಟೂರ್ನಿಗೂ ಅಲಭ್ಯರಾಗಲಿದ್ದಾರೆ.

ಬುಮ್ರಾ ಅವರಿಗೆ ಬದಲಿ ಆಟಗಾರನನ್ನಾಗಿ ಮೊಹಮ್ಮದ್ ಸಿರಾಜ್ ಅವರನ್ನು ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಗೆ ಮಾತ್ರ ಬದಲಿ ಆಟಗಾರನನ್ನಾಗಿ ಆಯ್ಕೆ ಮಾಡಲಾಗಿದೆ. ವಿಶ್ವಕಪ್ ತಂಡದಲ್ಲಿ ಬುಮ್ರಾ ಅವರ ಸ್ಥಾನವನ್ನು ಅನುಭವಿ ವೇಗದ ಬೌಲರ್ ಮೊಹಮ್ಮದ್ ಶಮಿ ಅಥವಾ ದೀಪಕ್ ಚಹರ್ ತುಂಬಲಿದ್ದಾರೆ. ಈ ಇಬ್ಬರೂ ವಿಶ್ವಕಪ್ ತಂಡದಲ್ಲಿ ಮೀಸಲು ಆಟಗಾರರಾಗಿದ್ದು, ಬುಮ್ರಾ ಅನುಪಸ್ಥಿತಿಯಲ್ಲಿ ಶಮಿ ಅಥವಾ ಚಹರ್ ಅಂತಿಮ 15ರ ತಂಡ ಸೇರಲಿದ್ದಾರೆ. ಆಸ್ಟ್ರೇಲಿಯಾ ಹಾಗೂ ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಗಳಿಗೆ ಆಯ್ಕೆಯಾಗಿದ್ದ ಮೊಹಮ್ಮದ್ ಶಮಿ ಕೋವಿಡ್ ಕಾರಣದಿಂದ ಅಲಭ್ಯರಾಗಿದ್ದರು. ವಿಶ್ವಕಪ್ ಹೊತ್ತಿಗೆ ಶಮಿ ಚೇತರಿಸಿಕೊಳ್ಳುವ ನಿರೀಕ್ಷೆಯಿದೆ.

ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಗೆ ಭಾರತದ ಪರಿಷ್ಕೃತ ತಂಡ
ರೋಹಿತ್ ಶರ್ಮಾ (ನಾಯಕ), ಕೆ.ಎಲ್ ರಾಹುಲ್ (ಉಪನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್ (ವಿಕೆಟ್ ಕೀಪರ್), ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಅಕ್ಷರ್ ಪಟೇಲ್, ಆರ್.ಅಶ್ವಿನ್, ಯುಜ್ವೇಂದ್ರ ಚಹಲ್, ದೀಪಕ್ ಚಹರ್, ಅರ್ಷದೀಪ್ ಸಿಂಗ್, ಹರ್ಷಲ್ ಪಟೇಲ್, ಶ್ರೇಯಸ್ ಅಯ್ಯರ್, ಉಮೇಶ್ ಯಾದವ್, ಶಹಬಾಜ್ ಅಹ್ಮದ್, ಮೊಹಮ್ಮದ್ ಸಿರಾಜ್.

ಸೆಪ್ಟೆಂಬರ್ 28ರಂದು ಕೇರಳದ ತಿರುವನಂತಪುರದಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ 3 ಪಂದ್ಯಗಳ ಸರಣಿಯ ಮೊದಲ ಪಂದ್ಯವನ್ನು 8 ವಿಕೆಟ್’ಗಳಿಂದ ಗೆದ್ದುಕೊಂಡಿದ್ದ ಭಾರತ, ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಸರಣಿಯ 2ನೇ ಪಂದ್ಯ ಶನಿವಾರ (ಅಕ್ಟೋಬರ್ 2) ಗುವಾಹಟಿಯಲ್ಲಿ ನಡೆಯಲಿದ್ದು, 3ನೇ ಪಂದ್ಯ ಅಕ್ಟೋಬರ್ 4ರಂದು ಇಂದೋರ್’ನಲ್ಲಿ ನಡೆಯಲಿದೆ.

ಇದನ್ನೂ ಓದಿ : Akhtar Warned Bumrah : ಬುಮ್ರಾಗೆ ಗಾಯದ ಬಗ್ಗೆ ವಾರ್ನಿಂಗ್ ಕೊಟ್ಟಿದ್ದರು ಪಾಕ್ ವೇಗಿ ಅಖ್ತರ್… ಕಡೆಗಣಿಸಿದ್ದಕ್ಕೆ ಟಿ20 ವಿಶ್ವಕಪ್‌ನಿಂದಲೇ ಔಟ್

ಇದನ್ನೂ ಓದಿ : Rohit Sharma breaks MS Dhoni record : ಧೋನಿ ದಾಖಲೆ ಮುರಿದ ರೋಹಿತ್, ಪಾಕ್ ರೆಕಾರ್ಡ್ ಸರಿಗಟ್ಟಿದ ಭಾರತ; ಒಂದೇ ಪಂದ್ಯದಲ್ಲಿ ಎರಡು ದಾಖಲೆ

India Vs South Africa T20 Series RCB Mohamed Siraj Replace Jasprit Bumrah in Indian Cricket Team

Comments are closed.