India cricket Player Rishabh Pant : “ನೆಟ್ಟಗೆ ಆಟವಾಡದಿದ್ದರೂ ಮಾತಿನಲ್ಲೇನು ಕಮ್ಮಿಯಿಲ್ಲ..” ರಿಷಭ್ ಪಂತ್ ಆಡಿದ ಮಾತು ಕೇಳಿದಿರಾ?

ಬೆಂಗಳೂರು : ಭಾರತ ತಂಡದಲ್ಲಿ ವೈಫಲ್ಯಗಳ ಮೇಲೆ ವೈಫಲ್ಯಗಳನ್ನು ಎದುರಿಸುತ್ತಿದ್ದರೂ ಸತತ ಅವಕಾಶಗಳನ್ನು ಪಡೆಯುತ್ತಿರುವ ಆಟಗಾರ ಅಂತ ಯಾರಾದ್ರೂ ಇದ್ರೆ ಅದು ವಿಕೆಟ್ ಕೀಪರ್ ಬ್ಯಾಟ್ಸ್’ಮನ್ ರಿಷಭ್ ಪಂತ್ (India cricket Player Rishabh Pant). ನ್ಯೂಜಿಲೆಂಡ್ ಪ್ರವಾಸದಲ್ಲಿ ಎಲ್ಲಾ ಪಂದ್ಯಗಳಲ್ಲಿ ಆಡುವ ಅವಕಾಶ ಪಡೆದಿದ್ದ ರಿಷಭ್ ಪಂತ್ ಘೋರ ವೈಫಲ್ಯ ಎದುರಿಸಿದ್ದಾರೆ.

ಕಿವೀಸ್ ಪ್ರವಾಸದ ಟಿ20 ಹಾಗೂ ಏಕದಿನ ಸರಣಿಯಲ್ಲಿ ಆಡಿದ 4 ಇನ್ನಿಂಗ್ಸ್’ಗಳಲ್ಲಿ ರಿಷಭ್ ಪಂತ್ ಗಳಿಸಿರುವ ಒಟ್ಟು ರನ್ ಕೇವಲ 42. ಟಿ20 ಸರಣಿಯ 2ನೇ ಪಂದ್ಯದಲ್ಲಿ 6, ಮೂರನೇ ಪಂದ್ಯದಲ್ಲಿ 11, ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ 15 ಹಾಗೂ 3ನೇ ಪಂದ್ಯದಲ್ಲಿ 10 ರನ್ ಗಳಿಸಿ ಔಟಾಗಿದ್ದರು. ಸತತ ವೈಫಲ್ಯಗಳನ್ನು ಅನುಭವಿಸುತ್ತಿದ್ದರೂ ರಿಷಭ್ ಪಂತ್ ಅವರಿಗೆ ಅವಕಾಶಗಳು ಸಿಗುತ್ತಿರುವುದರ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆ ನಡೆಸುತ್ತಿದೆ.

ಅದರಲ್ಲೂ ಕೇರಳದ ಪ್ರತಿಭಾವಂತ ವಿಕೆಟ್ ಕೀಪರ್ ಸಂಜು ಸ್ಯಾಮ್ಸನ್ ಅವರನ್ನು ಕಡೆಗಣಿಸಿ ರಿಷಭ್ ಪಂತ್’ಗೆ ಸತತ ಅವಕಾಶಗಳನ್ನು ನೀಡುತ್ತಿರುವುದರ ವಿರುದ್ಧ ಕ್ರಿಕೆಟ್ ಪ್ರಿಯರು ಆಕ್ರೋಶ ಹೊರ ಹಾಕುತ್ತಿದ್ದಾರೆ. ನ್ಯೂಜಿಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಮಿಂಚಿದ್ದ ಸ್ಯಾಮ್ಸನ್ ಅವರನ್ನು ಮುಂದಿನ ಎರಡೂ ಪಂದ್ಯಗಳಿಗೆ ಕೈಬಿಡಲಾಗಿತ್ತು. ಅವಕಾಶಗಳನ್ನು ವ್ಯರ್ಥಗೊಳಿಸುತ್ತಿರುವ ರಿಷಭ್ ಪಂತ್, ಮಾತಿನಲ್ಲೂ ತಾವೆಷ್ಟು ಬೇಜವಾಬ್ದಾರಿ ಎಂಬುದನ್ನು ಮತ್ತೊಮ್ಮೆ ತೋರಿಸಿದ್ದಾರೆ.

ನ್ಯೂಜಿಲೆಂಡ್ ವಿರುದ್ಧದ 3ನೇ ಏಕದಿನ ಪಂದ್ಯಕ್ಕೂ ಮುನ್ನ ‘ಪ್ರೈಮ್ ವೀಡಿಯೊ’ ಜೊತೆ ಮಾತನಾಡದ ಪಂತ್ “ದಾಖಲೆ ಎಂಬುದು ಒಂದು ಸಂಖ್ಯೆ ಅಷ್ಟೇ. ನನ್ನ ವೈಟ್ ಬಾಲ್ ಕ್ರಿಕೆಟ್ ದಾಖಲೆಗಳು ತುಂಬಾ ಕೆಟ್ಟದ್ದಾಗಿಯೇನೂ ಇಲ್ಲ. ಹೋಲಿಕೆ ಎಂಬುದು ನನ್ನ ಜೀವನದ ಭಾಗವಲ್ಲ. ನನಗೀಗ ಕೇವಲ 24-25 ವರ್ಷ ಅಷ್ಟೇ. ನನಗೆ 30-32 ವರ್ಷ ತುಂಬಿದಾಗ ನನ್ನ ರೆಡ್ ಬಾಲ್ ದಾಖಲೆ ಮತ್ತು ವೈಟ್ ಬಾಲ್ ಕ್ರಿಕೆಟ್ ದಾಖಲೆಗಳನ್ನು ಹೋಲಿಕೆ ಮಾಡಿ. ಅದಕ್ಕೂ ಮುನ್ನ ಹೋಲಿಕೆ ಸರಿಯಲ್ಲ” ಎಂದಿದ್ದಾರೆ. ಆದರೆ ಈ ಲಾಜಿಕ್ ಬೇರೆ ಆಟಗಾರರಿಗೆ ಯಾಕೆ ಅನ್ವಯವಾಗುವುದಿಲ್ಲ ಎಂದು ಕ್ರಿಕೆಟ್ ಪ್ರಿಯರು ಪ್ರಶ್ನಿಸುತ್ತಿದ್ದಾರೆ.

ರೆಡ್ ಬಾಲ್ ಕ್ರಿಕೆಟ್ ಅಂದ್ರೆ ಟೆಸ್ಟ್ ಕ್ರಿಕೆಟ್’ನಲ್ಲಿ ರಿಷಭ್ ಪಂತ್ ಮ್ಯಾಚ್ ವಿನ್ನರ್. ಅದರಲ್ಲಿ ಅನುಮಾನವೇ ಇಲ್ಲ. ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ, ಇಂಗ್ಲೆಂಡ್ ನೆಲಗಳಲ್ಲಿ ಪಂತ್ ಶತಕಗಳನ್ನು ಬಾರಿಸಿದ್ದಾರೆ. ಆದರೆ ವೈಟ್ ಬಾಲ್ ಕ್ರಿಕೆಟ್’ನಲ್ಲಿ (ಏಕದಿನ ಮತ್ತು ಟಿ20) ಪಂತ್ ಆಟ ನಿರೀಕ್ಷಿತ ಮಟ್ಟದಲ್ಲಿಲ್ಲ. ಅದರಲ್ಲೂ ಕಳೆದ ಏಷ್ಯಾ ಕಪ್ ಟೂರ್ನಿಯಿಂದೀಚೆಗೆ ಪಂತ್ ಏಕದಿನ ಹಾಗೂ ಟಿ20 ಕ್ರಿಕೆಟ್’ನಲ್ಲಿ ಭಾರೀ ವೈಫಲ್ಯ ಎದುರಿಸಿದ್ದಾರೆ. ಏಷ್ಯಾ ಕಪ್ ಟೂರ್ನಿಯಿಂದ ಇಲ್ಲಿಯವರೆಗೆ ಪಂತ್’ಗೆ ಒಟ್ಟು 10 ಇನ್ನಿಂಗ್ಸ್’ಗಳಲ್ಲಿ ಬ್ಯಾಟಿಂಗ್ ಅವಕಾಶ ಸಿಕ್ಕಿದ್ದು ಗಳಿಸಿರುವ ರನ್ ಕೇವಲ 129 ರನ್.

ಇದನ್ನೂ ಓದಿ : ವಿಜಯ್‌ ಹಜಾರೆ ಟ್ರೋಫಿ : ಬ್ಯಾಟಿಂಗ್ ವೈಫಲ್ಯಕ್ಕೆ ಬೆಲೆ ತೆತ್ತ ಕರ್ನಾಟಕಕ್ಕೆ ಸೆಮಿಫೈನಲ್’ನಲ್ಲಿ ಸೋಲು

ಇದನ್ನೂ ಓದಿ : India Tour of Bangladesh: ಟೀಮ್ ಇಂಡಿಯಾಗೆ ವಿರಾಟ್, ರೋಹಿತ್, ರಾಹುಲ್ ಕಂಬ್ಯಾಕ್; ಇಂದು ಬಾಂಗ್ಲಾದೇಶಕ್ಕೆ ಹಾರಲಿದೆ ಟೀಮ್ ಇಂಡಿಯಾ

ಇದನ್ನೂ ಓದಿ : James Anderson Rehan Ahmed : ಆ್ಯಂಡರ್ಸನ್ ಟೆಸ್ಟ್ ಡೆಬ್ಯೂ 2003, ರೆಹಾನ್ ಹುಟ್ಟಿದ್ದು 2004 : ಇಂಗ್ಲೆಂಡ್ ತಂಡದಲ್ಲಿ ಅಪರೂಪದ ಜೋಡಿ

ಕಳೆದ 10 ಅಂತಾರಾಷ್ಟ್ರೀಯ ಇನ್ನಿಂಗ್ಸ್’ಗಳಲ್ಲಿ ರಿಷಭ್ ಪಂತ್ ಸಾಧನೆ
14, 17, 20*, 27, 3, 6, 6, 11, 15, 10

India cricket Player Rishabh Pant :Have you heard Rishabh Pant’s words, “Even if you don’t play straight, there is no shortage of words?”

Comments are closed.