Vijay Hazare Trophy Karnataka Team : ಮತ್ತೊಂದು ಟೂರ್ನಿ, ಮತ್ತೊಂದು ವೈಫಲ್ಯ; ಕರ್ನಾಟಕದ ಸೋಲಿಗೆ ಕೊನೆಯೇ ಇಲ್ಲ

ಬೆಂಗಳೂರು : ಮತ್ತೊಂದು ಟೂರ್ನಿ, ಮತ್ತೊಂದು ವೈಫಲ್ಯ, ಮತ್ತೊಂದು ಸೆಮಿಫೈನಲ್’ನಲ್ಲಿ ಸೋಲು. (Vijay Hazare Trophy Karnataka Team) ಕರ್ನಾಟಕ ತಂಡ ಮತ್ತೊಮ್ಮೆ ದೇಶೀಯ ಕ್ರಿಕೆಟ್ ಟ್ರೋಫಿ ಗೆಲ್ಲಲು ವಿಫಲವಾಗಿದೆ. ಮಯಾಂಕ್ ಅಗರ್ವಾಲ್ ನಾಯಕತ್ವದ ಕರ್ನಾಟಕ ತಂಡ ವಿಜಯ್ ಹಜಾರೆ ಟ್ರೋಫಿ ಟೂರ್ನಿಯ ಸೆಮಿಫೈನಲ್’ನಲ್ಲಿ ಸೌರಾಷ್ಟ್ರ ವಿರುದ್ಧ ಸೋತು ನಿರಾಸೆ ಅನುಭವಿಸಿದೆ.

ಮಯಾಂಕ್ ನಾಯಕತ್ವದಲ್ಲೇ ಕರ್ನಾಟಕ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಟಿ20 ಟೂರ್ನಿಯಲ್ಲಿ ಕ್ವಾರ್ಟರ್ ಫೈನಲ್’ನಲ್ಲಿ ಮುಗ್ಗರಿಸಿತ್ತು. ಈ ಬಾರಿ ವಿಜಯ್ ಹಜಾರೆ ಟ್ರೋಫಿಯ ಸೆಮಿಫೈನಲ್’ನಲ್ಲಿ ಕರ್ನಾಟಕದ ಸೋಲಿಗೆ ಕಾರಣ ಬ್ಯಾಟಿಂಗ್ ವೈಫಲ್ಯ. ಅದರಲ್ಲೂ ನಾಯಕ ಮಯಾಂಕ್ ಅಗರ್ವಾಲ್ ಮತ್ತು ಮಾಜಿ ನಾಯಕ ಮನೀಶ್ ಪಾಂಡೆ ನಿರ್ಣಾಯ ಪಂದ್ಯದಲ್ಲಿ ತಂಡಕ್ಕೆ ಕೈ ಕೊಟ್ಟರು. ಇದರೊಂದಿಗೆ ಕರ್ನಾಟಕ ದೇಶೀಯ ಕ್ರಿಕೆಟ್ ಟೂರ್ನಿಗಳಲ್ಲಿ ಮತ್ತೊಮ್ಮೆ ಪ್ರಶಸ್ತಿ ಗೆಲ್ಲಲು ವಿಫಲವಾಯಿತು.

ಒಟ್ಟು ನಾಲ್ಕು ಬಾರಿ ವಿಜಯ್ ಹಜಾರೆ ಟ್ರೋಫಿ ಗೆದ್ದಿದ್ದ ಕರ್ನಾಟಕ ಈ ಬಾರಿ ಚಾಂಪಿಯನ್ ಆಗುವ ವಿಶ್ವಾಸದಲ್ಲಿತ್ತು. ಆದರೆ ತಂಡದ ಕನಸು ಮತ್ತೊಮ್ಮೆ ನುಚ್ಚುನೂರಾಗಿದೆ. 2019-20ನೇ ಸಾಲಿನಲ್ಲಿ ರಾಜ್ಯ ತಂಡ ಕೊನೆಯ ಬಾರಿ ವಿಜಯ್ ಹಜಾರೆ ಟ್ರೋಫಿ ಟೂರ್ನಿಯಲ್ಲಿ ಚಾಂಪಿಯನ್ ಆಗಿತ್ತು. ಅದಕ್ಕೂ ಮೊದಲು 2013-14 ಹಾಗೂ 2014-15ನೇ ಸಾಲಿನಲ್ಲಿ ಸತತ ಎರಡು ಬಾರಿ ಹಾಗೂ 2018-19ನೇ ಸಾಲಿನಲ್ಲಿ ಪ್ರಶಸ್ತಿ ಗೆದ್ದಿತ್ತು.

ಈ ಬಾರಿಯ ಸಮಾಧಾನಕರ ಸಂಗತಿ ಏನೆಂದರೆ ಕರ್ನಾಟಕ ಪರ ಯುವ ಆಟಗಾರರು ತೋರಿದ ಉತ್ತಮ ಪ್ರದರ್ಶನ. ಕರ್ನಾಟಕ ತಂಡಕ್ಕೆ ಪದಾರ್ಪಣೆ ಮಾಡಿದ ಯುವ ಬಲಗೈ ಬ್ಯಾಟ್ಸ್’ಮನ್ ನಿಕಿನ್ ಜೋಸ್ ಆಡಿದ 10 ಪಂದ್ಯಗಳಲ್ಲಿ 1 ಶತಕ ಹಾಗೂ 3 ಅರ್ಧಶತಕಗಳ ಸಹಿತ 447 ರನ್ ಕಲೆ ಹಾಕಿ ಭರವಸೆ ಮೂಡಿಸಿದ್ದಾರೆ. ಆದರೆ ಮಾಜಿ ನಾಯಕ ಮನೀಶ್ ಪಾಂಡೆ 279 ಮತ್ತು ನಾಯಕ ಮಯಾಂಕ್ ಅಗರ್ವಾಲ್ ಕೇವಲ 211 ರನ್ ಗಳಿಸಿ ನಿರೀಕ್ಷೆಗೆ ತಕ್ಕ ಆಟವಾಡುವಲ್ಲಿ ವಿಫಲವಾಗಿದ್ದೆ.

ಬ್ಯಾಟಿಂಗ್ ವೈಫಲ್ಯದ ಮಧ್ಯೆ ಬೌಲರ್’ಗಳ ಉತ್ತಮ ಪ್ರದರ್ಶನದ ಬಗ್ಗೆ ಹೇಳಲೇಬೇಕು. ಅದರಲ್ಲೂ ಮುಖ್ಯವಾಗಿ ಯುವ ವೇಗದ ಬೌಲರ್ ವಿ.ಕೌಶಿಕ್ 9 ಪಂದ್ಯಗಳಿಂದ 18 ವಿಕೆಟ್ ಕಬಳಿಸಿ ಮಿಂಚಿದ್ದಾರೆ. ಅಷ್ಟೇ ಅಲ್ಲ, ಸೆಮಿಫೈನಲ್ ಪಂದ್ಯಗಳ ಅಂತ್ಯಕ್ಕೆ ಟೂರ್ನಿಯಲ್ಲಿ ಅತೀ ಹೆಚ್ಚು ವಿಕೆಟ್ ಪಡೆದವರ ಸಾಲಿನಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಕರ್ನಾಟಕದ ಮತ್ತೊಬ್ಬ ಯುವ ಬಲಗೈ ಮಧ್ಯಮ ವೇಗದ ಬೌಲರ್ ವಿದ್ವತ್ ಕಾವೇರಪ್ಪ, 8 ಪಂದ್ಯಗಳಿಂದ 17 ವಿಕೆಟ್ ಕಬಳಿಸಿ ಭರವಸೆ ಮೂಡಿಸಿದ್ದಾರೆ.

ಇದನ್ನೂ ಓದಿ : James Anderson Rehan Ahmed : ಆ್ಯಂಡರ್ಸನ್ ಟೆಸ್ಟ್ ಡೆಬ್ಯೂ 2003, ರೆಹಾನ್ ಹುಟ್ಟಿದ್ದು 2004 : ಇಂಗ್ಲೆಂಡ್ ತಂಡದಲ್ಲಿ ಅಪರೂಪದ ಜೋಡಿ

ಇದನ್ನೂ ಓದಿ : ವಿಜಯ್‌ ಹಜಾರೆ ಟ್ರೋಫಿ : ಬ್ಯಾಟಿಂಗ್ ವೈಫಲ್ಯಕ್ಕೆ ಬೆಲೆ ತೆತ್ತ ಕರ್ನಾಟಕಕ್ಕೆ ಸೆಮಿಫೈನಲ್’ನಲ್ಲಿ ಸೋಲು

ವಿಜಯ್ ಹಜಾರೆ ಟ್ರೋಫಿ (Vijay Hazare Trophy Karnataka) : ಕರ್ನಾಟಕದ ಸಾಧನೆ :
ಮೊದಲ ಪಂದ್ಯ: ಮೇಘಾಲಯ ವಿರುದ್ಧ 115 ರನ್ ಗೆಲುವು
2ನೇ ಪಂದ್ಯ: ವಿರರ್ಭ ವಿರುದ್ಧ 66 ರನ್ ಗೆಲುವು
3ನೇ ಪಂದ್ಯ: ಜಾರ್ಖಂಡ್ ವಿರುದ್ಧ 6 ವಿಕೆಟ್ ಗೆಲುವು
4ನೇ ಪಂದ್ಯ: ದೆಹಲಿ ವಿರುದ್ಧ 4 ವಿಕೆಟ್ ಗೆಲುವು
5ನೇ ಪಂದ್ಯ: ಅಸ್ಸಾಂ ವಿರುದ್ಧ 6 ವಿಕೆಟ್ ಸೋಲು
6ನೇ ಪಂದ್ಯ: ಸಿಕ್ಕಿಂ ವಿರುದ್ಧ 6 ವಿಕೆಟ್ ಗೆಲುವು
7ನೇ ಪಂದ್ಯ: ರಾಜಸ್ಥಾನ ವಿರುದ್ಧ 60 ರನ್ ಗೆಲುವು
ಪ್ರೀ ಕ್ವಾರ್ಟರ್ ಫೈನಲ್: ಜಾರ್ಖಂಡ್ ವಿರುದ್ಧ 5 ವಿಕೆಟ್ ಗೆಲುವು
ಕ್ವಾರ್ಟರ್ ಫೈನಲ್: ಪಂಜಾಬ್ ವಿರುದ್ಧ 4 ವಿಕೆಟ್ ಗೆಲುವು
ಸೆಮಿಫೈನಲ್: ಸೌರಾಷ್ಟ್ರ ವಿರುದ್ಧ 5 ವಿಕೆಟ್ ಸೋಲು

Vijay Hazare Trophy Karnataka Team : Another tournament, another failure; There is no end to Karnataka’s defeat

Comments are closed.