KL Rahul : ಕಳೆದ ಟೆಸ್ಟ್ ಸರಣಿಯಲ್ಲಿ ನಾಯಕ, ಈಗ ವಾಟರ್ ಬಾಯ್ ಕಾಯಕ : ಕೆ.ಎಲ್ ರಾಹುಲ್ ಕಥೆ ಹೇಗಾಯ್ತು ನೋಡಿ!

ಅಹ್ಮದಾಬಾದ್ : ಕೇವಲ ಎರಡೂವರೆ ತಿಂಗಳುಗಳ ಹಿಂದೆ ಟೀಮ್ ಇಂಡಿಯಾ ಟೆಸ್ಟ್ ತಂಡದ ನಾಯಕ, ಈಗ ವಾಟರ್ ಬಾಯ್ ಕಾಯಕ. ಇದು ಕನ್ನಡಿಗ ಕೆ.ಎಲ್ ರಾಹುಲ್ (KL Rahul) ಅವರ ಕಥೆ. ಅಹ್ಮದಾಬಾದ್’ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಭಾರತ ಮತ್ತು ಆಸ್ಟ್ರೇಲಿಯಾ (India Vs Australia 4th test match) ನಡುವಿನ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ (Border-Gavaskar test series) 4ನೇ ಪಂದ್ಯದಲ್ಲಿ ಟೀಮ್ ಇಂಡಿಯಾ ಆಡುವ ಬಳಗದಲ್ಲಿ ಸ್ಥಾನ ಪಡೆಯಲು ವಿಫಲರಾಗಿರುವ ರಾಹುಲ್, ವಾಟರ್ ಬಾಯ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಗೂ ಮುನ್ನ ನಡೆದ ಬಾಂಗ್ಲಾದೇಶ ವಿರುದ್ಧದ 2 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ರಾಹುಲ್ ಟೀಮ್ ಇಂಡಿಯಾ ನಾಯಕತ್ವ ವಹಿಸಿದ್ದರು. ರಾಹುಲ್ ನಾಯಕತ್ವದಲ್ಲಿ ಭಾರತ ತಂಡ ಬಾಂಗ್ಲಾ ವಿರುದ್ಧದ ಟೆಸ್ಟ್ ಸರಣಿಯನ್ನು 2-0 ಅಂತರದಲ್ಲಿ ಕ್ಲೀನ್ ಸ್ವೀಪ್ ಮಾಡಿತ್ತು. ಆದರೆ ಬ್ಯಾಟಿಂಗ್’ನಲ್ಲಿ ಎಡವಿದ್ದ ರಾಹುಲ್ 4 ಇನ್ನಿಂಗ್ಸ್’ಗಳಿಂದ ಕೇವಲ 57 ರನ್ ಗಳಿಸಲಷ್ಟೇ ಶಕ್ತರಾಗಿದ್ದರು.

ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ಮೊದಲರೆಡು ಪಂದ್ಯಗಳಲ್ಲಿ ಆಡಿದ್ದ ರಾಹುಲ್ ಆಡಿದ 3 ಇನ್ನಿಂಗ್ಸ್’ಗಳಿಂದ 38 ರನ್ ಗಳಿಸಿದ್ದರು. ಸತತ 7 ಇನ್ನಿಂಗ್ಸ್’ಗಳ ವೈಫಲ್ಯದ ನಂತರ ರಾಹುಲ್ ಅವರನ್ನು ಇಂದೋರ್’ನಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ 3ನೇ ಪಂದ್ಯದ ಪ್ಲೇಯಿಂಗ್ XIನಿಂದ ಕೈಬಿಡಲಾಗಿತ್ತು. ಕಳೆದ ಟೆಸ್ಟ್’ನಲ್ಲಿ ಬೆಂಚ್ ಕಾಯಿಸಿದ್ದ ರಾಹುಲ್, ಅಹ್ಮದಾಬಾದ್’ನಲ್ಲಿ ನಡೆಯುತ್ತಿರುವ 4ನೇ ಟೆಸ್ಟ್ ಪಂದ್ಯದಲ್ಲಿ ವಾಟರ್ ಬಾಯ್ ಆಗಿದ್ದಾರೆ.

ಇದನ್ನೂ ಓದಿ : India Vs Australia 4th test match : ಖವಾಜ 150, ಕ್ಯಾಮರೂನ್ ಗ್ರೀನ್ ಚೊಚ್ಚಲ ಶತಕ; 24 ಗಂಟೆಗಳಲ್ಲಿ 2ನೇ ಬಾರಿ ಟೀಮ್ ಇಂಡಿಯಾ ವಿಕೆಟ್ ಲೆಸ್

ಇದನ್ನೂ ಓದಿ : Women’s Premier League: ಯು.ಪಿ ವಿರುದ್ಧ ಆರ್‌ಸಿಬಿಗೆ ಮಾಡು ಇಲ್ಲ ಮಡಿ ಪಂದ್ಯ : ಇಂದೂ ಸೋತರೆ ರಾಯಲ್ ಚಾಲೆಂಜರ್ಸ್ ವನಿತೆಯರ ಪ್ಲೇ ಆಫ್ ಕನಸು ಭಗ್ನ

ಇದನ್ನೂ ಓದಿ : India Vs Australia test : ಉಸ್ಮಾನ್ ಖವಾಜ ಭರ್ಜರಿ ಶತಕ, ಮೋದಿ ಸ್ಟೇಡಿಯಂನಲ್ಲಿ ಕಾಂಗರೂಗಳ ಆರ್ಭಟ, ಮೊದಲ ದಿನವೇ ಕೈಜಾರಿತಾ ಟೆಸ್ಟ್?

ಅಹ್ಮದಾಬಾದ್ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿರುವ ಆಸ್ಟ್ರೇಲಿಯಾ, ಭಾರತದ ದಾಳಿಗೆ 2ನೇ ದಿನವೂ ಸಡ್ಡು ಹೊಡೆದು ನಿಂತಿದೆ. ಎಡಗೈ ಆರಂಭಕಾರ ಉಸ್ಮಾನ್ ಖವಾಜ 150ರ ಗಡಿ ದಾಟಿ ಆಟ ಮುಂದುವರಿಸಿದ್ರೆ, ಯುವ ಆಲ್ರೌಂಡರ್ ಕ್ಯಾಮರೂನ್ ಗ್ರೀನ್ ಟೆಸ್ಟ್ ವೃತ್ತಿಜೀವನದ ಚೊಚ್ಚಲ ಶತಕ ಬಾರಿಸಿದ್ದಾರೆ. ಕ್ಯಾಮರೂನ್ ಗ್ರೀನ್ 114 ರನ್ ಗಳಿಸಿ ಆರ್.ಅಶ್ವಿನ್’ಗೆ ವಿಕೆಟ್ ಒಪ್ಪಿಸುವ ಮುನ್ನ ಉಸ್ಮಾನ್ ಖವಾಜ ಜೊತೆ 5ನೇ ವಿಕೆಟ್’ಗೆ ಭರ್ಜರಿ 208 ರನ್’ಗಳ ಜೊತೆಯಾಟವಾಡಿದರು.

India Vs Australia 4th test : Captain in the last test series, now a water boy Kayak: See how the story of KL Rahul turned out!

Comments are closed.