India Vs Bangladesh 2nd test : ನಾಳೆಯಿಂದ 2ನೇ ಟೆಸ್ಟ್, ಸೇಡಿನ ಬೆಂಕಿಯಲ್ಲಿ ಧಗ ಧಗಿಸುತ್ತಿದೆ ಟೀಮ್ ಇಂಡಿಯಾ

ಮೀರ್’ಪುರ್: ಭಾರತ ಮತ್ತು ಆತಿಥೇಯ ಬಾಂಗ್ಲಾದೇಶ ತಂಡಗಳ ನಡುವಿನ 2 ಪಂದ್ಯಗಳ ಟೆಸ್ಟ್ ಸರಣಿಯ (India Vs Bangladesh 2nd test ) ಅಂತಿಮ ಪಂದ್ಯ ನಾಳೆ ಮೀರ್’ಪುರ್’ನಲ್ಲಿರುವ ಶೇರ್ ಎ ಬಾಂಗ್ಲಾ ನ್ಯಾಷನಲ್ ಕ್ರೀಡಾಂಗಣದಲ್ಲಿ ಆರಂಭವಾಗಲಿದೆ.

ಕೆ.ಎಲ್ ರಾಹುಲ್ ನಾಯಕತ್ವದ ಭಾರತ ತಂಡ ಈ ಪಂದ್ಯವನ್ನು ಗೆದ್ದು ಏಕದಿನ ಸರಣಿ ಸೋಲಿಗೆ ಸೇಡು ತೀರಿಸಿಕೊಳ್ಳುವ ತವಕದಲ್ಲಿದೆ. 3 ಪಂದ್ಯಗಳ ಏಕದಿನ ಸರಣಿಯಲ್ಲಿ ಭಾರತಕ್ಕೆ ಬಾಂಗ್ಲಾ 2-1ರ ಅಂತರದಲ್ಲಿ ಶಾಕ್ ಕೊಟ್ಟಿತ್ತು. ಇದೀಗ ಟೆಸ್ಟ್ ಸರಣಿಯಲ್ಲಿ ಸೇಡು ತೀರಿಸಿಕೊಳ್ಳಲು ಮುಂದಾಗಿರುವ ಟೀಮ್ ಇಂಡಿಯಾ, ಪ್ರಥಮ ಟೆಸ್ಟ್ ಪಂದ್ಯವನ್ನು 188 ರನ್’ಗಳಿಂದ ಭರ್ಜರಿಯಾಗಿ ಗೆದ್ದು ಸರಣಿಯಲ್ಲಿ ಈಗಾಗ್ಲೇ 1-0 ಮುನ್ನಡೆಯಲ್ಲಿದೆ.

ಏಕದಿನ ಸರಣಿಯ ವೇಳೆ ಎಡಗೈ ಹೆಬ್ಬೆರಳ ಗಾಯಕ್ಕೊಳಗಾಗಿದ್ದ ನಾಯಕ ರೋಹಿತ್ ಶರ್ಮಾ 2ನೇ ಟೆಸ್ಟ್ ಪಂದ್ಯಕ್ಕೂ ಅಲಭ್ಯರಾಗಿರುವ ಕಾರಣ 2ನೇ ಟೆಸ್ಟ್’ನಲ್ಲೂ ಕನ್ನಡಿಗ ಕೆ.ಎಲ್ ರಾಹುಲ್ ಅವರೇ ಟೀಮ್ ಇಂಡಿಯಾವನ್ನು ಮುನ್ನಡೆಸಲಿದ್ದಾರೆ. ದ್ವಿತೀಯ ಟೆಸ್ಟ್ ಪಂದ್ಯವನ್ನೂ ಭಾರತ ಗೆದ್ದರೆ, ರಾಹುಲ್ ನಾಯಕತ್ವದಲ್ಲಿ ಟೀಮ್ ಇಂಡಿಯಾ ಮೊದಲ ಸರಣಿ ಗೆದ್ದಂತಾಗಲಿದೆ.

ಪ್ರಥಮ ಟೆಸ್ಟ್ ಪಂದ್ಯವನ್ನು ಗೆದ್ದಿರುವ ರಾಹುಲ್ ಈಗಾಗ್ಲೇ ವಿಶಿಷ್ಠ ದಾಖಲೆಯೊಂದನ್ನು ಬರೆದಿದ್ದಾರೆ. ವಿದೇಶಿ ನೆಲಗಳಲ್ಲಿ ಟೆಸ್ಟ್, ಏಕದಿನ ಹಾಗೂ ಟಿ20 ಪಂದ್ಯಗಳನ್ನು ಗೆದ್ದಿರುವ ಭಾರತದ 5ನೇ ನಾಯಕನೆಂಬ ಹಿರಿಮೆಗೆ ರಾಹುಲ್ ಪಾತ್ರರಾಗಿದ್ದಾರೆ. ಇದಕ್ಕೂ ಮೊದಲು ವೀರೇಂದ್ರ ಸೆಹ್ವಾಗ್, ಎಂ.ಎಸ್ ಧೋನಿ, ವಿರಾಟ್ ಕೊಹ್ಲಿ ಮತ್ತು ಅಜಿಂಕ್ಯ ರಹಾನೆ ಈ ಸಾಧನೆ ಮಾಡಿದ್ದಾರೆ.

India Vs Bangladesh 2nd test : ಭಾರತ ಪರ ವಿದೇಶದಲ್ಲಿ ಟೆಸ್ಟ್/ಏಕದಿನ/ಟಿ20 ಪಂದ್ಯ ಗೆದ್ದ ನಾಯಕರು
*ವೀರೇಂದ್ರ ಸೆಹ್ವಾಗ್
*ಎಂ.ಎಸ್ ಧೋನಿ
*ವಿರಾಟ್ ಕೊಹ್ಲಿ
*ಅಜಿಂಕ್ಯ ರಹಾನೆ
ಕೆ.ಎಲ್ ರಾಹುಲ್

ಬಾಂಗ್ಲಾದೇಶ ವಿರುದ್ಧದ 2ನೇ ಟೆಸ್ಟ್ ಪಂದ್ಯಕ್ಕೆ ಭಾರತದ ಸಂಭಾವ್ಯ ಪ್ಲೇಯಿಂಗ್ XI
1.ಕೆ.ಎಲ್ ರಾಹುಲ್ (ನಾಯಕ), 2.ಶುಭಮನ್ ಗಿಲ್, 3.ಚೇತೇಶ್ವರ್ ಪೂಜಾರ, 4.ವಿರಾಟ್ ಕೊಹ್ಲಿ, 5.ರಿಷಭ್ ಪಂತ್ (ವಿಕೆಟ್ ಕೀಪರ್), 6.ಶ್ರೇಯಸ್ ಅಯ್ಯರ್, 7.ಅಕ್ಷರ್ ಪಟೇಲ್, 8.ರವಿಚಂದ್ರನ್ ಅಶ್ವಿನ್, 9.ಕುಲ್ದೀಪ್ ಯಾದವ್, 10.ಉಮೇಶ್ ಯಾದವ್, 11.ಮೊಹಮ್ಮದ್ ಸಿರಾಜ್.

ಇದನ್ನೂ ಓದಿ : Newsnext special: Manish Pandey IPL 2023 : ಐಪಿಎಲ್‌ನಲ್ಲಿ ಮೊದಲ ಶತಕ ಬಾರಿಸಿದ ಭಾರತೀಯ, ಯಾರ ಪಾಲಾಗಲಿದ್ದಾರೆ ಮನೀಶ್ ಪಾಂಡೆ ?

ಇದನ್ನೂ ಓದಿ : Ranji Trophy Karnataka: ಪಾಂಡಿಚೇರಿ ವಿರುದ್ಧ ಮೊದಲ ದಿನವೇ ಕನ್ನಡಿಗರ ಭರ್ಜರಿ ಆಟ

ಇದನ್ನೂ ಓದಿ : Karnataka star to captain Sunrisers IPL: ಸನ್ ರೈಸರ್ಸ್ ಹೈದರಾಬಾದ್ ತಂಡಕ್ಕೆ ಕನ್ನಡಿಗ ನಾಯಕ ?

ಭಾರತ Vs ಬಾಂಗ್ಲಾದೇಶ 2ನೇ ಟೆಸ್ಟ್
ಪಂದ್ಯ ಆರಂಭ: ಬೆಳಗ್ಗೆ 9ಕ್ಕೆ
ಸ್ಥಳ: ಶೇರ್ ಎ ಬಾಂಗ್ಲಾ ನ್ಯಾಷನಲ್ ಸ್ಟೇಡಿಯಂ, ಮೀರ್’ಪುರ್
ನೇರ ಪ್ರಸಾರ: ಸೋನಿ ಸ್ಪೋರ್ಟ್ಸ್ ನೆಟ್ವರ್ಕ್ (Sony Sports Network)
ಲೈವ್ ಸ್ಟ್ರೀಮಿಂಗ್: Sony Liv app

India Vs Bangladesh 2nd Test: 2nd Test from tomorrow, Team India is on fire for revenge.

Comments are closed.