India vs New Zeeland T20: ನಾಳೆ 3ನೇ ಟಿ20 ಪಂದ್ಯ, ಭಾರತ ಗೆದ್ದರೆ ಕಿವೀಸ್ ನೆಲದಲ್ಲಿ ಸತತ 2ನೇ ಸರಣಿ ಗೆಲುವು

ನೇಪಿಯರ್: ಪ್ರವಾಸಿ ಭಾರತ ಮತ್ತು ಆತಿಥೇಯ ನ್ಯೂಜಿಲೆಂಡ್ ತಂಡಗಳ ನಡುವಿನ 3 ಪಂದ್ಯಗಳ ಟಿ20 ಸರಣಿಯ (India vs New Zealand 3rd T20) ಅಂತಿಮ ಪಂದ್ಯ ನಾಳೆ (ಮಂಗಳವಾರ) ನೇಪಿಯರ್’ನಲ್ಲಿರುವ ಮೆಕ್’ಲೀನ್ ಪಾರ್ಕ್ (McLean Park, Napier) ಮೈದಾನದಲ್ಲಿ ನಡೆಯಲಿದೆ.

ಭಾನುವಾರ ಮೌಂಟ್ ಮೌಂಗನ್ಯುಯ್’ನಲ್ಲಿ ನಡೆದ 2ನೇ ಪಂದ್ಯವನ್ನು 65 ರನ್’ಗಳಿಂದ ಭರ್ಜರಿಯಾಗಿ ಗೆದ್ದುಕೊಂಡಿದ್ದ ಭಾರತ, ಸರಣಿಯಲ್ಲಿ 1-0 ಮುನ್ನಡೆಯಲ್ಲಿದ್ದು, 3ನೇ ಪಂದ್ಯವನ್ನೂ ಗೆದ್ದರೆ ಸರಣಿ ಕೈವಶ ಮಾಡಿಕೊಳ್ಳಲಿದೆ. ವೆಲ್ಲಿಂಗ್ಟನ್’ನಲ್ಲಿ ನಡೆಯಬೇಕಿದ್ದ ಮೊದಲ ಪಂದ್ಯ ಮಳೆಯಿಂದ ರದ್ದಾಗಿತ್ತು. 3ನೇ ಪಂದ್ಯದಲ್ಲಿ ಗೆಲ್ಲುವ ಮೂಲಕ ಟೀಮ್ ಇಂಡಿಯಾ ಕೀವೀಸ್ ನಾಡಿನಲ್ಲಿ ಸತತ 2ನೇ ಟಿ20 ಸರಣಿ ಗೆಲುವಿನ ವಿಶ್ವಾಸದಲ್ಲಿದೆ. 2020ರಲ್ಲಿ ನ್ಯೂಜಿಲೆಂಡ್ ಪ್ರವಾಸ ಕೈಗೊಂಡಿದ್ದ ಭಾರತ 5 ಪಂದ್ಯಗಳ ಟಿ20 ಸರಣಿಯನ್ನು 5-0 ಅಂತರದಲ್ಲಿ ಕ್ಲೀನ್ ಸ್ವೀಪ್ ಮಾಡಿತ್ತು.

ಸರಣಿ ನಿರ್ಣಾಯಕ 3ನೇ ಟಿ20 ಪಂದ್ಯದಲ್ಲಿ ಭಾರತದ ಪ್ಲೇಯಿಂಗ್ XIನಲ್ಲಿ ಯಾವುದೇ ಬದಲಾವಣೆಗಳಾಗುವ ನಿರೀಕ್ಷೆಯಿಲ್ಲ. 2ನೇ ಪಂದ್ಯದಲ್ಲಿ ಗೆದ್ದ ತಂಡವೇ 3ನೇ ಪಂದ್ಯದಲ್ಲೂ ಕಣಕ್ಕಿಳಿಯುವುದು ಬಹುತೇಕ ಖಚಿತ. ನ್ಯೂಜಿಲೆಂಡ್ ವಿರುದ್ಧದ ಕಳೆದ 11 ಟಿ20 ಪಂದ್ಯಗಳಲ್ಲಿ ಭಾರತ 10ರಲ್ಲಿ ಗೆಲುವು ಸಾಧಿಸಿದೆ. ಕಳೆದ ವರ್ಷ ದುಬೈನಲ್ಲಿ ನಡೆದ ಐಸಿಸಿ ಟಿ20 ವಿಶ್ವಕಪ್’ನಲ್ಲಿ ಕಿವೀಸ್ ವಿರುದ್ಧ ಭಾರತ ಸೋತಿತ್ತು. ಆ ಪಂದ್ಯವನ್ನು ಹೊರತು ಪಡಿಸಿದ್ರೆ, ಉಳಿದ 10 ಪಂದ್ಯಗಳಲ್ಲಿ ಭಾರತವೇ ಗೆದ್ದಿದೆ.

India vs New Zealand 3rd T20 : ಭಾರತದ ಸಂಭಾವ್ಯ ಪ್ಲೇಯಿಂಗ್ XI

ಹಾರ್ದಿಕ್ ಪಾಂಡ್ಯ (ನಾಯಕ), ಇಶಾನ್ ಕಿಶನ್, ರಿಷಭ್ ಪಂತ್ (ಉಪನಾಯಕ, ವಿಕೆಟ್ ಕೀಪರ್), ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್, ದೀಪಕ್ ಹೂಡ, ವಾಷಿಂಗ್ಟನ್ ಸುಂದರ್, ಯುಜ್ವೇಂದ್ರ ಚಹಲ್, ಅರ್ಷದೀಪ್ ಸಿಂಗ್, ಮೊಹಮ್ಮದ್ ಸಿರಾಜ್, ಭುವನೇಶ್ವರ್ ಕುಮಾರ್.

ಭಾರತ Vs ನ್ಯೂಜಿಲೆಂಡ್ 3ನೇ ಟಿ20

ಪಂದ್ಯ ಆರಂಭ: ಮಧ್ಯಾಹ್ನ 12.00 (ಭಾರತೀಯ ಕಾಲಮಾನ)
ಸ್ಥಳ: ಮೆಕ್’ಲೀನ್ ಪಾರ್ಕ್, ನೇಪಿಯರ್ (McLean Park, Napier)
ನೇರ ಪ್ರಸಾರ: ಅಮೆಜಾನ್ ಪ್ರೈಮ್ ವೀಡಿಯೊ

ಇದನ್ನೂ ಓದಿ : Virat Kohli : ಪತ್ನಿ, ಪುತ್ರಿಯೊಂದಿಗೆ ಉತ್ತರಾಖಂಡ್ ಪ್ರವಾಸದಲ್ಲಿ ಕಿಂಗ್ ಕೊಹ್ಲಿ, ಅಭಿಮಾನಿಗಳೊಂದಿಗೆ ಫೋಟೋ ಕ್ಲಿಕ್ಕಿಸಿಕೊಂಡ ವಿರಾಟ್

ಇದನ್ನೂ ಓದಿ : KL Rahul Or Rishabh Panth : 2023ರ ವಿಶ್ವಕಪ್ ನಂತರ ಏಕದಿನ, ಟೆಸ್ಟ್ ತಂಡಕ್ಕೆ ಕೆ ಎಲ್ ರಾಹುಲ್ ಅಥವಾ ರಿಷಭ್ ಪಂತ್ ಕ್ಯಾಪ್ಟನ್

India vs New Zealand 3rd T20 McLean Park, Napier Complete Details

Comments are closed.