Suicide Case Baby died: ಮಗುವನ್ನು ಕೊಂದು ತಾನು ಆತ್ಮಹತ್ಯೆ ಮಾಡಿಕೊಂಡ ತಂದೆ

ಕೋಲಾರ: (Suicide Case Baby died) ಮಗುವಿನೊಂದಿಗೆ ತಂದೆಯೂ ಕೂಡ ಕೆರೆಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೋಲಾರ ಸಮೀಪದ ಬೆಂಗಳೂರು-ಕೋಲಾರ ಹೆದ್ದಾರಿಯ ಕೆಂದಟ್ಟಿ ಬಳಿಯಲ್ಲಿ ನಡೆದಿದೆ. ಮೂರು ವರ್ಷದ ಜಿಯಾ ಹೆಣ್ಣು ಮಗುವಿನ ಶವ ಕೆಂದಟ್ಟಿ ಕೆರಯಲ್ಲಿ ಪತ್ತೆಯಾಗಿದ್ದು, ತಂದೆ ರಾಹುಲ್‌ ಗಾಗಿ ಹುಡುಕಾಟ ಮುಂದುವರೆದಿದೆ.

ರಾಹುಲ್‌ ಗುಜರಾತ್‌ ಮೂಲದವರಾಗಿದ್ದು, ಹೊಸಕೋಟೆ ಸಮೀಪದ ಎನ್‌ಐಟಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು, ಕಳೆದ ಆರು ತಿಂಗಳಿಂದ ಬಾಗಲೂರಿನ ಕಣ್ಣೂರು ಸಮೀಪದಲ್ಲಿ ಮನೆ ಮಾಡಿಕೊಂಡು ವಾಸವಿದ್ದರು ಎನ್ನಲಾಗಿದೆ. ರಾಹುಲ್‌ ಮತ್ತು ರಿಯಾ ಮಂಗಳವಾರ ಮನೆಯಿಂದ ಕಾಣೆಯಾಗಿದ್ದು, ಮಗು ಜಿಯಾಳ ಶವ(Suicide Case Baby died) ಕೆಂದಟ್ಟಿ ಕೆರೆಯಲ್ಲಿ ಪತ್ತೆಯಾಗಿದೆ. ತಂದೆ ರಾಹುಲ್‌ ಗಾಗಿ ಶೋಧ ಕಾರ್ಯ ಮುಂದುವರೆದಿದ್ದು, ಈ ವರೆಗೆ ಆತನ ಸುಳಿವು ಸಿಕ್ಕಿಲ್ಲ.

ಕೌಟುಂಬಿಕ ಕಲಹದ ಹಿನ್ನಲೆಯಲ್ಲಿ ಮನೆಯಲ್ಲಿದ್ದ ಒಡವೆಗಳನ್ನು ಅಡವಿಟ್ಟಿದ್ದು, ಈ ಕುರಿತು ಬಾಗಲೂರು ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿತ್ತು, ಈ ಹಿನ್ನಲೆಯಲ್ಲಿ ರಾಹುಲ್‌ ನನ್ನು ವಿಚಾರಣೆಗಾಗಿ ಮಂಗಳವಾರ ಠಾಣೆಗೆ ಕರೆದಿದ್ದರು. ರಾಹುಲ್‌ ತನ್ನ ಮಗಳನ್ನು ಶಾಲೆಗೆ ಬಿಟ್ಟು ಹಾಗೆ ವಿಚಾರಣೆಗೆ ಹೋಗುವುದಾಗಿ ಹೇಳಿ ಕಾರಿನಲ್ಲಿ ಹೊರಟಿದ್ದವರು ಸಂಜೆಯಾದರೂ ಮನೆಗೆ ಹಿಂದಿರುಗಲಿಲ್ಲ. ಇದರಿಂದ ರಾಹುಲ್‌ ಕುಟುಂಬದವರು ಮೊಬೈಲ್‌ ಜಾಡು ಹಿಡಿದು ಬಂದಾಗ ಕೆಂದಟ್ಟಿಕೆರೆ ಸಮೀಪದಲ್ಲಿ ಅವರ ಕಾರು ಪತ್ತೆಯಾಗಿತ್ತು. ಈ ಕುರಿತು ಕೋಲಾರದ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದು, ಪೊಲೀಸರು ಸ್ಥಳಕ್ಕೆ ಬಂದು ಕಾರ್ಯಾಚರಣೆ ನಡೆಸಿದ್ದಾರೆ. ಈ ವೇಳೆ ಮಗುವಿನ ಶವ ಕೆರೆಯಲ್ಲಿ ಪತ್ತೆಯಾಗಿದ್ದು, ತಂದೆ ರಾಹುಲ್‌ಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

ಇದನ್ನೂ ಓದಿ : Black magic: ಇನ್ ಸ್ಟಾಗ್ರಾಂನಲ್ಲಿ ಪರಿಚಯವಾದ ಜ್ಯೋತಿಷಿ ಉದ್ಯಮಿ ಮನೆಗೆ ಬಂದು ಮಾಡಿದ್ದು ಎಂಥಾ ಕೆಲಸ ನೋಡಿ..

ಇದನ್ನೂ ಓದಿ : Pet Dog Attack : ಅಪಾರ್ಟ್‌ಮೆಂಟ್‌ ಲಿಫ್ಟ್‌ನಲ್ಲಿ ಶಾಲಾ ಬಾಲಕನ ಮೇಲೆ ದಾಳಿ ಮಾಡಿದ ಸಾಕು ನಾಯಿ

ಇದನ್ನೂ ಓದಿ : Cuts Womans Throat : ಪ್ರೇಯಸಿಯ ಗಂಟಲು ಸೀಳಿದ ಪ್ರಿಯತಮ : ಕಾರಣ ಕೇಳಿದ್ರೆ ದಂಗಾಗುವುದು ಗ್ಯಾರಂಟಿ

ಕುಟುಂಬದವರು ಹೇಳುವ ಪ್ರಕಾರ ಮಗುವನ್ನು ಕೊಲೆ ಮಾಡಿ ಕೆರೆಗೆ ಎಸೆದು ತಂದೆ ಪರಾರಿಯಾಗಿರಬಹುದು ಅಥವಾ ಆತ್ಮಹತ್ಯೆ ಮಾಡಿಕೊಂಡಿರಬಹುದು ಎನ್ನಲಾಗುತ್ತಿದೆ. ಕಳೆದ ಆರು ತಿಂಗಳಿನಿಂದ ರಾಹುಲ್‌ ಕೆಲಸವಿಲ್ಲದೇ ಮನೆಯಲ್ಲಿಯೇ ಇದ್ದರು ಎನ್ನಲಾಗುತ್ತಿದೆ. ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ನಡೆಸುತ್ತಿದ್ದಾರೆ.

(Suicide Case) The incident in which the father also fell into the lake with the child and committed suicide took place near Kendatti on Bangalore-Kolar highway near Kolar. The body of the three-year-old girl Zia was found in the Kendatti lake, and the search for her father Rahul continues.

Comments are closed.