World Heart Day 2022 : ಇಂದು ವಿಶ್ವ ಹೃದಯ ದಿನ : ಹೃದಯದ ಆರೋಗ್ಯ ಕಾಪಾಡುವ ಆಹಾರಗಳು

ಪ್ರತಿ ವರ್ಷ ಸೆಪ್ಟೆಂಬರ್‌ 29 ರಂದು ವಿಶ್ವ ಹೃದಯ ದಿನವನ್ನು ಆಚರಿಸಲಾಗುತ್ತದೆ (World Heart Day 2022). ವಿಶ್ವದಲ್ಲಿ ಸಾವಿಗೆ ಕಾರಣವಾಗುವ ಪ್ರಮುಖ ಅಂಶಗಳಲ್ಲಿ ಹೃದಯದ ಕಾಯಿಲೆಗಳು (Heart Diseases) ಒಂದು. ಹೃದಯರಕ್ತನಾಳದ ಕಾಯಿಲೆ ಮತ್ತು ಪಾರ್ಶವಾಯು ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ವಿಶ್ವ ಹೃದಯ ದಿನವನ್ನು ಆಚರಿಸಲಾಗುತ್ತದೆ. ಈ ದಿನ ವಿವಿಧ ಚಟುವಟಿಕೆ ಮತ್ತು ಕಾರ್ಯಕಮಗಳನ್ನು ಆಯೋಜಿಸುವುದರ ಮೂಲಕ ಜಾಗತಿಕವಾಗಿ ಆಚರಿಸಲಾಗುತ್ತದೆ. ಜನರು ಹೃದಯದ ಸಮಸ್ಯೆಗಳ ಬಗ್ಗೆ ಮುಕ್ತವಾಗಿ ಮಾತನಾಡಲು ಮತ್ತು ಅವುಗಳನ್ನು ತಡೆಗಟ್ಟುವ ಕ್ರಮಗಳ ಬಗ್ಗೆ ತಿಳಿ ಹೇಳಲಾಗುವುದು.

ದೇಹದ ಅತ್ಯಂತ ಮಹತ್ವದ ಅಂಗ ಹೃದಯ. ಇತ್ತೀಚೆಗೆ ಬಹಳಷ್ಟು ಜನರು ಹೃದಯರಕ್ತನಾಳದ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ. ಅದಕ್ಕಾಗಿಯೇ ಪ್ರಪಂಚದ ಗಮನವನ್ನು ಸೆಳೆಯಲು ಪ್ರತಿವರ್ಷ ಸೆಪ್ಟೆಂಬರ್‌ 29 ರಂದು ವಿಶ್ವ ಹೃದಯ ದಿನವನ್ನು ಆಚರಿಸಲಾಗುತ್ತದೆ. ಪ್ರಸ್ತುತ ದಿನಗಳಲ್ಲಿ ಹೃದಯಾಘಾತಗಳು ಮತ್ತು ಹೃದಯ ಸಂಬಂಧಿ ಕಾಯಿಲೆಗಳು ಹೆಚ್ಚುತ್ತಿರುವ ಕಾರಣದಿಂದ 2022 ರ ವಿಶ್ವ ಹೃದಯ ದಿನವು ಹೆಚ್ಚು ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ.

ಹೊರಗಿನ ಆಹಾರಗಳಲ್ಲಿ ಎಣ್ಣೆಯ ಅತಿಯಾಗಿ ಬಳಕೆ ಮಾಡುತ್ತಾರೆ. ಅದು ಹೃದಯದ ಆರೋಗ್ಯದ ಮೇಲೆ ತೀವ್ರ ಪರಿಣಾಮ ಬೀರುತ್ತದೆ. ಇಂತಹ ಅನಾರೋಗ್ಯಕರ ಆಹಾರಗಳ ಅಪಾಯದ ಬಗ್ಗೆ ಜನರಿಗೆ ತಿಳಿಸಲು ವರ್ಲ್ಡ್‌ ಹಾರ್ಟ್‌ ಫೆಡರೇಶನ್‌ ವಿಶ್ವ ಹೃದಯ ದಿನವನ್ನು ಸ್ಥಾಪಿಸಿತು. ನಮ್ಮ ಹೃದಯದ ಆರೋಗ್ಯ ಹೆಚ್ಚಿಸಲು ಸಹಾಯ ಮಾಡುವ ಆಹಾರಗಳು ಯಾವವು ಎಂಬುದನ್ನು ನೋಡೋಣ.

ಇದನ್ನೂ ಓದಿ : Steaming Benefits : ಮನೆಯಲ್ಲಿಯೇ ಮುಖಕ್ಕೆ ಸ್ಟೀಮ್‌ ತೆಗೆದುಕೊಳ್ಳುವುದರಿಂದ ಏನೆಲ್ಲಾ ಪ್ರಯೋಜನವಿದೆ ಗೊತ್ತಾ….

ಹೃದಯದ ಆರೋಗ್ಯ ಕಾಪಾಡುವ ಆಹಾರಗಳು :

ಹಸಿರು ತರಕಾರಿಗಳು :
ವಿಟಮಿನ್‌ ಕೆ ಮತ್ತು ನೈಟ್ರೇಟ್ಸ್‌ಗಳು ಹಸಿರು ಸೊಪ್ಪುಗಳಲ್ಲಿ ಅತಿ ಹೆಚ್ಚಿನ ಪ್ರಮಾಣದಲ್ಲಿರುತ್ತದೆ. ಇದು ಅಧಿಕ ರಕ್ತದೊತ್ತಡವನ್ನು ತಡೆಗಟ್ಟುತ್ತದೆ ಮತ್ತು ರಕ್ತನಾಳಗಳ ಕ್ಷಮತೆಯನ್ನು ಹೆಚ್ಚಿಸುತ್ತದೆ. USAಯ ನ್ಯಾಷನಲ್‌ ಇನ್‌ಸ್ಟಿಟ್ಯೂಟ್‌ ಆಪ್‌ ಹೆಲ್ತ್‌ ನಡೆಸಿದ ಅಧ್ಯಯನದ ಪ್ರಕಾರ ಹಸಿರು ಸೊಪ್ಪುಗಳು ಹೃದಯದ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡುತ್ತವೆ.

ಬೇರಿ ಹಣ್ಣುಗಳು :
ಆಂಟಿಒಕ್ಸಿಡೆಂಟ್‌ ಹೆಚ್ಚಾಗಿರುವ ಬೇರಿ ಹಣ್ಣುಗಳು ಹೃದಯದ ಆರೋಗ್ಯ ಕಾಪಾಡುವಲ್ಲಿ ಮಹತ್ವದ ಪಾತ್ರವಹಿಸುತ್ತವೆ. ಸ್ಟ್ರಾಬೆರಿ, ಬ್ಲೂಬೆರಿ, ರಾಸ್ಪ್‌ಬೆರಿ ಮತ್ತು ಬ್ಲ್ಯಾಕ್‌ಬೆರಿ ಹಣ್ಣುಗಳು ಹೃದಯಕ್ಕೆ ಉತ್ತಮವಾಗಿದೆ. ಆಂಥೋಸಿಯಾನ್‌ ಆಂಟಿಒಕ್ಸಿಡೆಂಟ್‌ ಹೆಚ್ಚಾಗಿರುವ ಇವುಗಳು ಆಕ್ಸಿಡೇಟಿವ್‌ ಸ್ಟ್ರೆಸ್‌ ಮತ್ತು ಉರಿಯೂತವನ್ನು ತಡೆಯುತ್ತದೆ.

ಟೊಮೆಟೊ :
ಟೊಮೆಟೊ ಐಸೊಪೆನ್‌ ಎಂಬ ಒಳ್ಳೆಯ ಕೊಲೆಸ್ಟ್ರಾಲ್‌ನಿಂದ ಸಮೃದ್ಧವಾಗಿದೆ. ಇದು HDL ಅನ್ನು ಹೆಚ್ಚಿಸುತ್ತದೆ. ಇದರಿಂದ ಆರ್ಟರಿಸ್‌ಗಳಲ್ಲಿನ ಕೆಟ್ಟ ಕೊಲೆಸ್ಟ್ರಾಲ್‌ಗಳು ದೂರವಾಗುತ್ತದೆ. ಇದು ಹೃದಯದ ಕಾಯಿಲೆ ಮತ್ತು ಪಾರ್ಶವಾಯುವಿನಿಂದ ರಕ್ಷಣೆ ಒದಗಿಸುತ್ತದೆ.

ಡಾರ್ಕ್‌ ಚಾಕಲೇಟ್‌ :
ಡಾರ್ಕ್‌ ಚ್ಯಾಕೋಲೆಟ್‌ಗಳು ಫ್ಲೆನೈಡ್‌ ಎಂಬ ಆಂಟಿಒಕ್ಸಿಡೆಂಟ್‌ನಿಂದ ಸಮೃದ್ಧವಾಗಿರುತ್ತದೆ. ಇದು ಆರ್ಟರಿಸ್‌ ಮತ್ತು ಕೊರೊನರಿ ಹಾರ್ಟ್‌ ಡಿಸೀಸ್‌ಗಳ ಅಪಾಯವನ್ನು ಕಡಿಮೆ ಮಾಡುತ್ತದೆ.

ಮೀನು ಮತ್ತು ಮೀನಿನ ಎಣ್ಣೆ :
ಒಮೆಗಾ–3 ಫ್ಯಾಟಿ ಆಸಿಡ್‌ಗಳು ಹೃದಯದ ಆರೋಗ್ಯಕ್ಕೆ ಉತ್ತಮವಾಗಿದೆ. ಮೀನು ಮತ್ತು ಮೀನಿನ ಎಣ್ಣೆಯಲ್ಲಿ ಇದು ಹೇರಳವಾಗಿರುತ್ತದೆ. ಫ್ಯಾಟಿ ಆಸಿಡ್‌ ಗಳು ಕಾರ್ಡಿಯೋವೆಸ್ಕ್ಯುಲಾರ್‌ ಕಾಯಿಲೆಯಿಂದ ರಕ್ಷಣೆ ಒದಗಿಸುತ್ತವೆ. ಸೀಫುಡ್‌ಗಳನ್ನು ಸೇವಿಸದೇ ಇರುವವರು ಒಮೆಗಾ–3 ಫ್ಯಾಟಿ ಆಸಿಡ್‌ ಇರುವ ಪರ್ಯಾಯಗಳನ್ನು ಸೇವಿಸುವುದರಿಂದ ಹೃದಯದ ಆರೋಗ್ಯ ಕಾಪಾಡಿಕೊಳ್ಳುಬಹುದಾಗಿದೆ.

ಇದನ್ನೂ ಓದಿ : Heart Attack in Gym : ಹೃದಯಾಘಾತದ ಹಿಂದೆ ಇರುವ ಅಪಾಯಕಾರಿ ಅಂಶಗಳ ಬಗ್ಗೆ ನಿಮಗೆ ಗೊತ್ತಾ

(World Heart Day 2022 these foods may help improve heart health)

Comments are closed.