ಸೋಮವಾರ, ಏಪ್ರಿಲ್ 28, 2025
HomeSportsCricketIndia vs South Africa T20 Series : ವಿಶ್ವಕಪ್‌ಗೂ ಮುನ್ನ ಕೊನೇ ಎರಡು ಪಂದ್ಯ;...

India vs South Africa T20 Series : ವಿಶ್ವಕಪ್‌ಗೂ ಮುನ್ನ ಕೊನೇ ಎರಡು ಪಂದ್ಯ; ಇನ್ನೂ ಸೆಟ್ಲ್ ಆಗಿಲ್ಲ ಟೀಮ್ ಇಂಡಿಯಾ ಪ್ಲೇಯಿಂಗ್ XI

- Advertisement -

ಗುವಾಹಟಿ: ಭಾರತ ಮತ್ತು ಪ್ರವಾಸಿ ದಕ್ಷಿಣ ಆಫ್ರಿಕಾ ನಡುವಿನ 3 ಪಂದ್ಯಗಳ ಟಿ20 ಸರಣಿಯ (India vs South Africa T20 Series playing XI) 2ನೇ ಪಂದ್ಯ ಇಂದು (ಆಕ್ಟೋಬರ್ 2) ಅಸ್ಸಾಂನ ಗುವಾಹಟಿಯಲ್ಲಿರುವ ಬರ್ಸಪರ ಕ್ರಿಕೆಟ್ ಮೈದಾನದಲ್ಲಿ ನಡೆಯಲಿದೆ. ತಿರುವನಂತಪುರದಲ್ಲಿ ನಡೆದ ಮೊದಲ ಪಂದ್ಯವನ್ನು 8 ವಿಕೆಟ್’ಗಳಿಂದ ಭರ್ಜರಿ ಯಾಗಿ ಗೆದ್ದಿದ್ದ ಟೀಮ್ ಇಂಡಿಯಾ 2ನೇ ಪಂದ್ಯವನ್ನೂ ಗೆದ್ದು ಸರಣಿ ಕೈವಶ ಮಾಡಿಕೊಳ್ಳುವ ವಿಶ್ವಾಸದಲ್ಲಿದೆ. ಟಿ20 ವಿಶ್ವಕಪ್ ಟೂರ್ನಿಗೂ (T20 World Cup 2022) ಮೊದಲು ಭಾರತ ಆಡುತ್ತಿರುವ ಕಡೆಯ 2 ಟಿ20 ಪಂದ್ಯಗಳಲ್ಲಿ ಇದೂ ಒಂದು. ಹೀಗಾಗಿ ಎರಡೂ ಪಂದ್ಯಗಳನ್ನು ಗೆದ್ದು ವಿಶ್ವಕಪ್’ಗೆ ಆತ್ಮವಿಶ್ವಾಸದಿಂದ ಸಜ್ಜಾಗುವ ನಿಟ್ಟಿನಲ್ಲಿ ಭಾರತಕ್ಕೆ ದಕ್ಷಿಣ ಆಫ್ರಿಕಾ ವಿರುದ್ಧದ ಮುಂದಿನ ಎರಡೂ ಪಂದ್ಯಗಳು ಮಹತ್ವದ್ದಾಗಿವೆ.

ಆದರೆ ವಿಶ್ವಕಪ್’ಗೆ ದಿನಗಣನೆ ಆರಂಭವಾಗಿದ್ದರೂ ಭಾರತದ ಪ್ಲೇಯಿಂಗ್ XI ಸಮಸ್ಯೆಗೆ ಇನ್ನೂ ಪರಿಹಾರ ಸಿಕ್ಕಿಲ್ಲ. ಬ್ಯಾಟಿಂಗ್ ಲೈನಪ್ ಬಗ್ಗೆ ಯಾವುದೇ ಗೊಂದಲಗಳಿಲ್ಲ. ವಿಶ್ವಕಪ್ ಟೂರ್ನಿಯಲ್ಲಿ ಭಾರತದ ಟಾಪ್ ಆರ್ಡರ್’ನಲ್ಲಿ ನಾಯಕ ರೋಹಿತ್ ಶರ್ಮಾ ಮತ್ತು ಉಪನಾಯಕ ಕೆ.ಎಲ್ ರಾಹುಲ್, 3ನೇ ಕ್ರಮಾಂಕದಲ್ಲಿ ವಿರಾಟ್ ಕೊಹ್ಲಿ, 4ನೇ ಕ್ರಮಾಂಕದಲ್ಲಿ ಸೂರ್ಯಕುಮಾರ್ ಯಾದವ್, 5ನೇ ಕ್ರಮಾಂಕದಲ್ಲಿ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಹಾಗೂ 6ನೇ ಕ್ರಮಾಂಕದಲ್ಲಿ ಅನುಭವಿ ವಿಕೆಟ್ ಕೀಪರ್ ದಿನೇಶ್ ಕಾರ್ತಿಕ್ ಆಡಲಿದ್ದಾರೆ. ಆದರೆ ಸಮಸ್ಯೆ ಇರುವುದು ಬೌಲಿಂಗ್ ವಿಭಾಗದಲ್ಲಿ.

ಟ್ರಂಪ್ ಕಾರ್ಡ್ ವೇಗಿ ಜಸ್ಪ್ರೀತ್ ಬುಮ್ರಾ ಬೆನ್ನು ನೋವಿನ ಗಾಯದ ಕಾರಣ ವಿಶ್ವಕಪ್’ನಿಂದ ಹೊರಬಿದ್ದಿರುವುದು ಭಾರತಕ್ಕೆ ಆಘಾತ ತಂದಿದೆ. ಬುಮ್ರಾ ಬದಲು ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯುವವರು ಯಾರು ಎಂಬ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಲಿಲ್ಲ. ವಿಶ್ವಕಪ್’ಗೆ ಮೀಸಲು ಆಟಗಾರರಾಗಿರುವ ಮೊಹಮ್ಮದ್ ಶಮಿ ಅಥವಾ ದೀಪಕ್ ಚಹರ್ ಅಂತಿಮ 15ರ ಬಳಗವನ್ನು ಸೇರುವ ಸಾಧ್ಯತೆಯಿದೆ.

ದಕ್ಷಿಣ ಆಫ್ರಿಕಾ ವಿರುದ್ಧದ 2ನೇ ಟಿ20 ಪಂದ್ಯಕ್ಕೆ ಭಾರತದ ಸಂಭಾವ್ಯ ಪ್ಲೇಯಿಂಗ್ XI
1.ರೋಹಿತ್ ಶರ್ಮಾ (ನಾಯಕ), 2.ಕೆ.ಎಲ್ ರಾಹುಲ್ (ಉಪನಾಯಕ), 3.ವಿರಾಟ್ ಕೊಹ್ಲಿ, 4.ಸೂರ್ಯಕುಮಾರ್ ಯಾದವ್, 5.ರಿಷಭ್ ಪಂತ್ (ವಿಕೆಟ್ ಕೀಪರ್), 6.ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), 7.ಅಕ್ಷರ್ ಪಟೇಲ್, 8.ರವಿಚಂದ್ರನ್ ಅಶ್ವಿನ್, 9.ದೀಪಕ್ ಚಹರ್, 10.ಹರ್ಷಲ್ ಪಟೇಲ್, 11.ಅರ್ಷದೀಪ್ ಸಿಂಗ್.

ಪಂದ್ಯ ಆರಂಭ: ಸಂಜೆ 7ಕ್ಕೆ
ಸ್ಥಳ: ಬರ್ಸಪರ ಕ್ರಿಕೆಟ್ ಮೈದಾನ, ಗುವಾಹಟಿ
ನೇರ ಪ್ರಸಾರ: ಡಿಸ್ನಿ+ಹಾಟ್ ಸ್ಟಾರ್

ಇದನ್ನೂ ಓದಿ : Jasprit Bumrah fitness update : ಟಿ20 ವಿಶ್ವಕಪ್‌ನಲ್ಲಿ ಆಡ್ತಾರಾ ಜಸ್‌ಪ್ರೀತ್ ಬುಮ್ರಾ..? ಬ್ರೇಕಿಂಗ್ ನ್ಯೂಸ್ ಕೊಟ್ಟ ಬಿಸಿಸಿಐ ಅಧ್ಯಕ್ಷ ಗಂಗೂಲಿ

ಇದನ್ನೂ ಓದಿ : Virat Kohli Retirement : ನಿವೃತ್ತಿಗೂ ಮೊದಲು ವಿರಾಟ್ ಕೊಹ್ಲಿ ಪಾಕಿಸ್ತಾನದಲ್ಲಿ ಆಡ್ಬೇಕಂತೆ

India vs South Africa T20 Series Team India playing XI is not settled yet T20 World Cup 2022

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular