India vs WI 1st ODI: ಸಖತ್ ಬೌಲಿಂಗ್ ಸಖತ್ ಬ್ಯಾಟಿಂಗ್; ಭಾರತದ 1000ನೇ ಏಕದಿನ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಭರ್ಜರಿ ಜಯ

ಅಹಮದಾಬಾದ್​: ವೆಸ್ಟ್ ಇಂಡೀಸ್ ವಿರುದ್ದ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾ 6 ವಿಕೆಟ್​ಗಳ ಭರ್ಜರಿ ಜಯಭೇರಿ (India vs WI 1st ODI) ಗಳಿಸಿದೆ. ಈಮೂಲಕ ರೋಹಿತ್ ಶರ್ಮಾ (Team India Captain Rohit Sharma) ನಾಯಕತ್ವದಲ್ಲಿ ಭಾರತ ತಂಡ ತನ್ನ 1000ನೇ ಏಕದಿನ ಪಂದ್ಯದಲ್ಲಿ ಗೆಲುವಿನ ಸಿಹಿ (India vs WI 1st ODI ಉಣ್ಣುವಂತಾಯಿತು. ವೆಸ್ಟ್ ಇಂಡೀಸ್‌ ತಂಡವನ್ನು ತನ್ನ ಪ್ರಖರ ಬೌಲಿಂಗ್ ದಾಳಿಯಿಂದ ಕಟ್ಟಿಹಾಕಿದ ಭಾರತೀಯ ಬೌಲರ್‌ಗಳು 177  ಟಾರ್ಗೆಟ್‌ಗೆ ಕೆರಿಬಿಯನ್ನರನ್ನು (India vs West Indies 1st ODI Highlights) ಸೀಮಿತಗೊಳಿಸಿದರು.

ಮೊದಲು ಬೌಲಿಂಗ್ ಆಯ್ದುಕೊಂಡಿದ್ದ ಟೀಮ್ ಇಂಡಿಯಾ ಸಿರಾಜ್ ಅವರ ಕೈಗೆ ಬೌಲ್ ನೀಡಿತು. ಸಮರ್ಥವಾಗಿ ಚೆಂಡೆಸೆದ ಸಿರಾಜ್ ಮೊದಲ ಓವರ್‌ನಲ್ಲಿ ಒಂದು ರನ್ನನ್ನೂ ಬಿಟ್ಟುಕೊಡಲಿಲ್ಲ. ಮುರನೆ ಓವರ್‌ನಲ್ಲಿ ಶಾಯ್ ಹೋಪ್ ವಿಕೆಟ್ ಪಡೆದರು. ವಾಷಿಂಗ್ಟನ್ ಸುಂದರ್ ಬ್ರಾಂಡನ್ ಕಿಂಗ್ ಹಾಗೂ ಬ್ರಾವೊ ವಿಕೆಟ್ ಪಡೆದರು. ಒಟ್ಟಾರೆ ಸೂಪರ್ ಬೌಲಿಂಗ್ ಮಾಡಿದ ಟೀಮ್ ಇಂಡಿಯಾ ವೆಸ್ಟ್ ಇಂಡೀಸ್ ತಂಡವನ್ನು 43.5 ಓವರ್​ಗಳಲ್ಲಿ 179 ರನ್ನುಗಳಿಗೆ ಕಟ್ಟಿಹಾಕಿತು. ಚಹಲ್ 4 ವಿಕೆಟ್, ಸುಂದರ್ 3 ವಿಕೆಟ್, ಪ್ರಸಿದ್ಧ್ ಕೃಷ್ಣ 2 ವಿಕೆಟ್, ಸಿರಾಜ್ 1 ವಿಕೆಟ್ ಪಡೆದು ಮೆರೆದರು.​

ಭಾರತ ತಂಡದ ಪರ ಓಪನರ್‌ಗಳಾಗಿ ಕಣಕ್ಕಿಳಿದ ತಂಡದ ನಾಯಕ ರೋಹಿತ್ ಶರ್ಮಾ ಮತ್ತು ಇಶಾನ್ ಕಿಶನ್ ಉತ್ತಮವಾಗಿ ಬ್ಯಾಟ್ ಬೀಸಿದರು. ಕ್ಯಾಪ್ಟನ್ ರೊಹಿತ್ ಶರ್ಮಾ 42 ಎಸೆತಗಳಲ್ಲಿ ಐವತ್ತು ರನ್ ಗಳಿಸಿ ಮಿಂಚಿದರು. ತಂಡದ ಮೊತ್ತ 84 ರನ್​ ಆಗಿದ್ದ ವೇಳೆ ಅಲ್ಝಾರಿ ಜೋಸೆಫ್ ಎಸೆತದಲ್ಲಿ ಎಲ್​ಬಿ ಆಗಿ ಔಟ್ ಆದರು. ನಂತರ ಕಣಕ್ಕಿಳಿದ ವಿರಾಟ್ ಕೊಹ್ಲಿ 8 ರನ್‌ಗೆ ಪೆವಿಲಿಯನ್ ಸೇರಿದರು. ಮುಂದಿನ ಹಂತದಲ್ಲಿ ಜೋಡಿಯಾದ ಸೂರ್ಯಕುಮಾರ್ ಯಾದವ್ (34) ಮತ್ತು ದೀಪಕ್ (26) ಭಾರತ ತಂಡಕ್ಕೆ ಗೆಲುವಿನ ಹಾರ ಹಾಕಿದರು. ಈಮೂಲಕ ಭಾರತ ವೆಸ್ಟ್ ಇಂಡೀಸ್ ವಿರುದ್ಧದ ಸರಣಿಯಲ್ಲಿ ಮೊದಲ ಪಂದ್ಯ ಗೆದ್ದು ಮುನ್ನಡೆ ಸಾಧಿಸಿದೆ.

ಭಾರತ-ವೆಸ್ಟ್ ಇಂಡೀಸ್ ಏಕದಿನ ಸರಣಿಯ ಮುಂದಿನ ಪಂದ್ಯಗಳು ಈ ದಿನಾಂಕಗಳಂದು ನಡೆಯಲಿವೆ. ಪಂದ್ಯಗಳನ್ನು ವೀಕ್ಷಿಸಲು ದಿನಾಂಕಗಳನ್ನು ಮಾರ್ಕ್ ಮಾಡಿಟ್ಟುಕೊಳ್ಳಿ.

ಫೆಬ್ರವರಿ 9 – 2 ನೇ ODI, ಅಹಮದಾಬಾದ್
ಫೆಬ್ರವರಿ 11 – 3 ನೇ ODI, ಅಹಮದಾಬಾದ್

ಇದನ್ನೂ ಓದಿ: Hijab Explainer: ಹಿಜಾಬ್ ಎಂದರೇನು? ಬುರ್ಖಾ, ನಿಕಾಬ್‌ಗೂ ಹಿಜಾಬ್‌ಗೂ ಇರುವ ವ್ಯತ್ಯಾಸವೇನು?

(India vs WI 1st ODI Results highlights India lead series)

Comments are closed.