Ishan Kishan : ರಾಷ್ಟ್ರಗೀತೆ ಹಾಡುತ್ತಿದ್ದ ಇಶಾನ್ ಕಿಶನ್‌ಗೆ ನೊಣದ ಕಾಟ, “ಈಗ”ಕ್ಕೆ ಬೆಚ್ಚಿ ಬಿದ್ದ ವಿಕೆಟ್ ಕೀಪರ್

ಹರಾರೆ: ಭಾರತ ಮತ್ತು ಜಿಂಬಾಬ್ವೆ (India Vs Zimbabwe ODI Series) ನಡುವಿನ ಮೊದಲ ಏಕದಿನ ಪಂದ್ಯಕ್ಕೂ ಮುನ್ನ ಟೀಮ್ ಇಂಡಿಯಾ ವಿಕೆಟ್ ಕೀಪರ್ ಇಶಾನ್ ಕಿಶನ್’ಗೆ (Ishan Kishan bitten by a fly) ನೊಣದ ಕಾಟ ಎದುರಾಗಿದೆ. ಪಂದ್ಯ ಆರಂಭಕ್ಕೂ ಮುನ್ನ ರಾಷ್ಟ್ರಗೀತೆ ಹಾಡುತ್ತಿದ್ದ ಇಶಾನ್ ಕಿಶನ್, ನೊಣದ ಕಾಟಕ್ಕೆ ಬೆಚ್ಚಿ ಬಿದ್ದಿದ್ದಾರೆ. ಸಹ ಆಟಗಾರರ ಜೊತೆ ನಿಂತಿದ್ದ ಇಶಾನ್ ಕಿಶನ್ ತದೇಕ ಚಿತ್ತದಿಂದ ರಾಷ್ಟ್ರಗೀತೆ ಹಾಡ್ತಾ ಇದ್ರು. ಅದೆಲ್ಲಿತ್ತೋ ಏನೋ..? ನುಗ್ಗಿ ಬಂದ ದೈತ್ಯಾಕಾರದ ನೊಣವೊಂದು (ಸಾಮಾನ್ಯ ನೊಣಕ್ಕಿಂತ ದೊಡ್ಡ ಗಾತ್ರ) ಇಶಾನ್ ಕಿಶನ್ ಅವರ ಕಿವಿಗೆ ನುಗ್ಗಲು ಪ್ರಯತ್ನಿಸಿತು. ನೊಣ ಕೊಟ್ಟ ಶಾಕ್’ಗೆ ಇಶಾನ್ ಕಿಶನ್ ಒಂದು ಕ್ಷಣ ಬೆಚ್ಚಿ ಬಿದ್ರು. ನೊಣದ ಕಾಟದಿಂದ ತಪ್ಪಿಸಿಕೊಂಡ ಇಶಾನ್ ಕಿಶನ್ ರಾಷ್ಟ್ರಗೀತೆ ಹಾಡುವುದನ್ನು ಮುಂದುವರಿಸಿದ್ರು. ಆ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಹರಾರೆ ಸ್ಪೋರ್ಟ್ಸ್ ಕ್ಲಬ್ (Harare Sports Club) ಮೈದಾನದಲ್ಲಿ ಗುರುವಾರ ನಡೆದ ಜಿಂಬಾಬ್ವೆ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಭಾರತ 10 ವಿಕೆಟ್’ಗಳ ಭರ್ಜರಿ ಗೆಲುವು ದಾಖಲಿಸಿತ್ತು. ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ್ದ ಜಿಂಬಾಬ್ವೆ ಭಾರತದ ಸಂಘಟಿತ ಬೌಲಿಂಗ್ ದಾಳಿಗೆ ತತ್ತರಿಸಿ 40.3 ಓವರ್’ಗಳಲ್ಲಿ 189 ರನ್ನಿಗೆ ಆಲೌಟಾಗಿತ್ತು. ನಂತರ ಗುರಿ ಬೆನ್ನಟ್ಟಿದ ಭಾರತ ಕೇವಲ 30.5 ಓವರ್’ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 192 ರನ್ ಗಳಿಸಿ ಸುಲಭ ಜಯ ದಾಖಲಿಸಿ 3 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿತ್ತು. ಎಡಗೈ ಆರಂಭಕಾರ ಶಿಖರ್ ಧವನ್ ಅಜೇಯ 81 ರನ್ ಮತ್ತು ಬಲಗೈ ಯುವ ಓಪನರ್ ಶುಭಮನ್ ಗಿಲ್ ಅಜೇಯ 82 ರನ್ ಸಿಡಿಸಿ ಭಾರತಕ್ಕೆ 10 ವಿಕೆಟ್’ಗಳ ಭರ್ಜರಿ ಜಯ ತಂದುಕೊಟ್ಟಿದ್ದರು. ಸರಣಿಯ 2ನೇ ಪಂದ್ಯ ನಾಳೆ (ಶನಿವಾರ) ಹರಾರೆ ಸ್ಪೋರ್ಟ್ಸ್ ಕ್ಲಬ್ ಮೈದಾನದಲ್ಲಿ ನಡೆಯಲಿದೆ.

ಇದನ್ನೂ ಓದಿ : Kumble to be sacked as Punjab coach: ಅನಿಲ್ ಕುಂಬ್ಳೆಗೆ ಶಾಕಿಂಗ್ ನ್ಯೂಸ್: ಪಂಜಾಬ್ ಕಿಂಗ್ಸ್ ಕೋಚ್ ಸ್ಥಾನದಿಂದ ಜಂಬೋಗೆ ಗೇಟ್‌ಪಾಸ್

ಇದನ್ನೂ ಓದಿ : Team India’s 2023-27 FTP Cycle : 2023ರಿಂದ 2027ರವರೆಗೆ ಟೀಮ್ ಇಂಡಿಯಾ ಆಡಲಿರುವ ಸರಣಿಗಳ ಕಂಪ್ಲೀಟ್ ಡೀಟೇಲ್ಸ್

India Vs Zimbabwe ODI Series Ishan Kishan who was singing the national anthem, was bitten by a fly

Comments are closed.