Bangladesh Vs England T20 series : ವಿಶ್ವ ಚಾಂಪಿಯನ್ನರಿಗೆ 3-0 ಅಂತರದಲ್ಲಿ ವೈಟ್‌ವಾಶ್ ಬಳಿದ ಬಾಂಗ್ಲಾ ಟೈಗರ್ಸ್

ಮೀರ್‌ಪುರ : ಆತಿಥೇಯ ಬಾಂಗ್ಲಾದೇಶ ತಂಡ ವಿಶ್ವ ಚಾಂಪಿಯನ್ ಇಂಗ್ಲೆಂಡ್ ವಿರುದ್ಧದ 3 ಪಂದ್ಯಗಳ ಟಿ20 ಸರಣಿಯನ್ನು (Bangladesh Vs England T20 series) 3-0 ಅಂತರದಲ್ಲಿ ವೈಟ್ ವಾಶ್ ಮಾಡಿದೆ.

ಮೀರ್‌ಪುರದ ಶೇರ್ ಎ ಬಾಂಗ್ಲಾ ನ್ಯಾಷನಲ್ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ 3ನೇ ಟಿ20 ಪಂದ್ಯದಲ್ಲಿ ಬಾಂಗ್ಲಾದೇಶ 16 ರನ್’ಗಳ ರೋಚಕ ಗೆಲುವು ಸಾಧಿಸಿತು. ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಬಾಂಗ್ಲಾದೇಶ, ನಿಗದಿತ 20 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 158 ರನ್‌ಗಳ ಸಾಧಾರಣ ಮೊತ್ತ ಕಲೆ ಹಾಕಿತು. ಬಾಂಗ್ಲಾ ಪರ ಓಪನರ್ ಲಿಟ್ಟನ್ ದಾಸ್ 57 ಎಸೆತಗಳಲ್ಲಿ 73 ರನ್ ಸಿಡಿಸಿದ್ರೆ, ನಜ್ಮುಲ್ ಹೊಸೇನ್ ಶಾಂತೋ 36 ಎಸೆತಗಳಲ್ಲಿ ಅಜೇಯ 47 ರನ್ ಸಿಡಿಸಿದರು.

ನಂತರ ಸುಲಭ ಗುರಿ ಬೆನ್ನಟ್ಟಿದ ಜೋಸ್ ಬಟ್ಲರ್ ನಾಯಕತ್ವದ ಟಿ20 ವಿಶ್ವ ಚಾಂಪಿಯನ್ ಇಂಗ್ಲೆಂಡ್ ತಂಡ ಬಾಂಗ್ಲಾ ಬೌಲರ್’ಗಳ ಸಂಘಟಿತ ದಾಳಿಗೆ ತತ್ತರಿಸಿ 20 ಓವರ್’ಗಳಲ್ಲಿ 6 ವಿಕೆಟ್ ನಷ್ಟಕ್ಕೆ 142 ರನ್ ಕಲೆ ಹಾಕಲಷ್ಟೇ ಶಕ್ತವಾಯಿತು. ಇಂಗ್ಲೆಂಡ್ ಪರ ಡಾವಿಡ್ ಮಲಾನ್ 47 ಎಸೆತಗಳಲ್ಲಿ 53 ರನ್ ಗಳಿಸಿದ್ರೆ, ನಾಯಕ್ ಜೋಸ್ ಬಟ್ಲರ್ 31 ಎಸೆತಗಳಲ್ಲಿ 40 ರನ್ ಗಳಿಸಿದರು. ಮೀರ್‌ಪುರದಲ್ಲೇ ನಡೆದಿದ್ದ 2ನೇ ಟಿ20 ಪಂದ್ಯದಲ್ಲಿ ಬಾಂಗ್ಲಾದೇಶ 4 ವಿಕೆಟ್‌ಗಳ ಗೆಲುವು ಸಾಧಿಸಿತ್ತು. ಅದಕ್ಕೂ ಮೊದಲು ಛಟ್ಟೋಗ್ರಾಮ್‌ನಲ್ಲಿ ನಡೆದ ಮೊದಲ ಟಿ20 ಪಂದ್ಯದಲ್ಲಿ 156 ರನ್‌ಗಳನ್ನು ಚೇಸ್ ಮಾಡಿದ್ದ ಬಾಂಗ್ಲಾದೇಶ 6 ವಿಕೆಟ್’ಗಳಿಂದ ಇಂಗ್ಲೆಂಡ್‌ಗೆ ಶಾಕ್ ಕೊಟ್ಟಿತ್ತು.

ಇದನ್ನೂ ಓದಿ : ಸೂರ್ಯಕುಮಾರ್ ಯಾದವ್ ಜಿಯೋ ಸಿನಿಮಾ ಬ್ರಾಂಡ್ ಅಂಬಾಸಿಡರ್

ಇದನ್ನೂ ಓದಿ : ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿ : ಟೀಮ್ ಇಂಡಿಯಾ ವಿಜಯೋತ್ಸವದ Exclusive ಫೋಟೋಗಳಿಗೆ ಇಲ್ಲಿ ಕ್ಲಿಕ್ ಮಾಡಿ!

ಇದಕ್ಕೂ ಮೊದಲು ನಡೆದಿದ್ದ 3 ಪಂದ್ಯಗಳ ಏಕದಿನ ಸರಣಿಯನ್ನು ಇಂಗ್ಲೆಂಡ್ ತಂಡ 2-1ರ ಅಂತರದಲ್ಲಿ ಗೆದ್ದುಕೊಂಡಿತ್ತು. ಆದರೆ ಟಿ20 ಸರಣಿಯನ್ನು ವೈಟ್ ವಾಶ್ ಮಾಡುವ ಮೂಲಕ ವಿಶ್ವ ಚಾಂಪಿಯನ್ನರಿಗೆ ಆಘಾತ ನೀಡಿರುವ ಬಾಂಗ್ಲಾದೇಶ, ಏಕದಿನ ಸರಣಿ ಸೋಲಿಗೆ ಸೇಡುತೀರಿಸಿಕೊಂಡಿದೆ.

ಇದನ್ನೂ ಓದಿ : India Vs Australia ODI series : ವಾರ್ನರ್ ಭಾರತಕ್ಕೆ ವಾಪಸ್, ಕಾಂಗರೂ ಪಡೆಗೆ ಸ್ಟೀವ್ ಸ್ಮಿತ್ ಕ್ಯಾಪ್ಟನ್

Bangladesh Vs England T20 series: Bangladesh Tigers whitewash the world champions 3-0

Comments are closed.