Chris Gayle play for RCB next year : ಮುಂದಿನ ವರ್ಷ ಆರ್’ಸಿಬಿ ಪರ ಆಡ್ತಾರಾ ಕ್ರಿಸ್ ಗೇಲ್ ? ಗೇಲ್’ಗೆ ಬಿಗ್ ಆಫರ್ ಕೊಟ್ಟ ಕೊಹ್ಲಿ!

Chris Gayle play for RCB next year : ಬೆಂಗಳೂರು: ಕೆರಿಬಿಯನ್ ದೈತ್ಯ ಕ್ರಿಸ್ ಗೇಲ್ (Chris Gayle) ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bengaluru) ತಂಡದ ದಿಗ್ಗಜ ಆಟಗಾರ. 2011ರಿಂದ ಏಳು ವರ್ಷಗಳ ಕಾಲ ಆರ್’ಸಿಬಿ ಪರ ಆಡಿದ್ದ ಕ್ರಿಸ್ ಗೇಲ್ ಅವರಿಗೆ ದೊಡ್ಡ ಸಂಖ್ಯೆಯ ಅಭಿಮಾನಿಗಳಿದ್ದಾರೆ

Chris Gayle play for RCB next year : ಬೆಂಗಳೂರು: ಕೆರಿಬಿಯನ್ ದೈತ್ಯ ಕ್ರಿಸ್ ಗೇಲ್ (Chris Gayle) ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bengaluru) ತಂಡದ ದಿಗ್ಗಜ ಆಟಗಾರ. 2011ರಿಂದ ಏಳು ವರ್ಷಗಳ ಕಾಲ ಆರ್’ಸಿಬಿ ಪರ ಆಡಿದ್ದ ಕ್ರಿಸ್ ಗೇಲ್ ಅವರಿಗೆ ದೊಡ್ಡ ಸಂಖ್ಯೆಯ ಅಭಿಮಾನಿಗಳಿದ್ದಾರೆ. 2018ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕ್ರಿಸ್ ಗೇಲ್ ಅವರನ್ನು ತಂಡದಿಂದ ಕೈ ಬಿಟ್ಟಿತ್ತು. ಹೀಗಾಗಿ ಗೇಲ್ ಪಂಜಾಬ್ ಕಿಂಗ್ಸ್ ಪರ ಆಡಿದ್ದರು. ಇದೀಗ ಕ್ರಿಕೆಟ್’ ನಿಂದ ನಿವೃತ್ತಿಯಾಗಿರುವ ಕ್ರಿಸ್ ಗೇಲ್ ರಿಟೈರ್ಡ್ ಲೈಫನ್ವು ಎಂಜಾಯ್ ಮಾಡುತ್ತಿದ್ದಾರೆ.

IPL 2024 RCB vs CSK Will Gayle play for RCB next year Kohli gave a big offer to Gayle
Image Credit : RCB

ಕ್ರಿಕೆಟ್’ನಿಂದ ನಿವೃತ್ತಿಯಾಗಿರುವ 44 ವರ್ಷದ ಕ್ರಿಸ್ ಗೇಲ್ ಮುಂದಿನ ವರ್ಷ ಕ್ರಿಕೆಟ್ ಮೈದಾನಕ್ಕೆ ಕಂಬ್ಯಾಕ್ ಮಾಡ್ತಾರಾ? ಮತ್ತೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಬ್ಯಾಟ್ ಬೀಸಲಿದ್ದಾರಾ ? ಮೊನ್ನೆಯಷ್ಟೇ ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಚೆನ್ನೈ ಸೂಪರ್ ಕಿಂಗ್ಸ್ (Chennai Super Kings) ತಂಡಗಳ ನಡುವಿನ ಪಂದ್ಯವನ್ನು ವೀಕ್ಷಿಸಲು ಕ್ರಿಸ್ ಗೇಲ್ ಆಗಮಿಸಿದ್ದರು.

ಇದನ್ನೂ ಓದಿ : CSK ವಿರುದ್ಧ RCB ಗೆಲುವಿಗೆ ಕಾರಣ ಧೋನಿ ಬಾರಿಸಿದ ಆ ಸಿಕ್ಸರ್! ವಿಜಯಮಂತ್ರದ ರಹಸ್ಯ ಬಿಚ್ಚಿಟ್ಟ ದಿನೇಶ್‌ ಕಾರ್ತಿಕ್

ಆರ್’ಸಿಬಿ ಫ್ರಾಂಚೈಸಿಯ ವಿಶೇಷ ಆಹ್ವಾನದ ಮೇರೆಗೆ ಕ್ರಿಸ್ ಗೇಲ್ ಬೆಂಗಳೂರಿಗೆ ಬಂದಿದ್ದರು. ಪಂದ್ಯದುದ್ದಕ್ಕೂ ಕ್ರಿಸ್ ಗೇಲ್ ಆರ್’ಸಿಬಿ ತಂಡವನ್ನು ಬೆಂಬಲಿಸಿದ್ದರು. ಚೆನ್ನೈ ತಂಡವನ್ನು 27 ರನ್’ಗಳಿಂದ ಸೋಲಿಸಿದ್ದ ರಾಯಲ್ ಚಾಲೆಂಜರ್ಸ್ ಐಪಿಎಲ್ 2024 ಟೂರ್ನಿಯಲ್ಲಿ ಪ್ಲೇ ಆಫ್’ಗೆ ಲಗ್ಗೆ ಇಟ್ಟಿತ್ತು. ಪಂದ್ಯದ ನಂತರ ಕ್ರಿಸ್ ಗೇಲ್ ಆರ್’ಸಿಬಿ ತಂಡದ ಡ್ರೆಸ್ಸಿಂಗ್ ರೂಮ್’ಗೆ ಭೇಟಿ ಕೊಟ್ಟಿದ್ದರು. ಈ ವೇಳೆ ವಿರಾಟ್ ಕೊಹ್ಲಿ ಮತ್ತು ಕ್ರೀಸ್ ಗೇಲ್ ನಡುವಿನ ಸಂಭಾಷಣೆ ಗಮನ ಸೆಳೆಯಿತು.

IPL 2024 RCB vs CSK Will Gayle play for RCB next year Kohli gave a big offer to Gayle
Image Credit : BCCI

ವಿರಾಟ್ ಕೊಹ್ಲಿ-ಕ್ರಿಸ್ ಗೇಲ್ ಸಂಭಾಷಣೆಯ ಆಯ್ದ ಭಾಗ ಇಲ್ಲಿದೆ:

ವಿರಾಟ್ ಕೊಹ್ಲಿ: ಕಾಕಾ, ಈ ಬಾರಿ ಐಪಿಎಲ್’ನಲ್ಲಿ ಅತೀ ಹೆಚ್ಚು ಸಿಕ್ಸರ್’ಗಳನ್ನು ಬಾರಿಸಿದ್ದೇನೆ!
ಕ್ರಿಸ್ ಗೇಲ್: ಹೌದಾ, ಎಷ್ಟು ಸಿಕ್ಸರ್ಸ್?

ವಿರಾಟ್ ಕೊಹ್ಲಿ: 37 ಸಿಕ್ಸರ್ಸ್
ಕ್ರಿಸ್ ಗೇಲ್: ವ್ಹಾವ್ ಸೂಪರ್

ಇದನ್ನೂ ಓದಿ :  Hardik Pandya Ban : ಐಪಿಎಲ್’ನಲ್ಲಿ ಆಟ ಮುಗಿದ ಮೇಲೆ ಹಾರ್ದಿಕ್ ಪಾಂಡ್ಯಗೆ ಒಂದು ಮ್ಯಾಚ್ ಬ್ಯಾನ್ ಶಿಕ್ಷೆ! ಏನಿದು ಕಥೆ ?

ವಿರಾಟ್ ಕೊಹ್ಲಿ: ಕಾಕಾ, ಮುಂದಿನ ವರ್ಷ ಬಂದು ಆರ್’ಸಿಬಿ ಪರ ಆಡುವಿಯಂತೆ! ಇಂಪ್ಯಾಕ್ಟ್ ಪ್ಲೇಯರಿ ರೂಲ್ಸ್ ಬಂದಿದೆ. ನೀನು ಫೀಲ್ಡಿಂಗ್ ಮಾಡಲೇಬೇಕಿಲ್ಲ. ಈ ರೂಲ್ಸ್ ಅನ್ನು ನಿನಗಾಗಿಯೇ ಮಾಡಲಾಗಿದೆ.
ಕ್ರಿಸ್ ಗೇಲ್: ಹ್ಹ ಹ್ಹ ಹ್ಹ ಹ್ಹ..

https://x.com/rcbtweets/status/1792367134799970317?s=46

ಕ್ರಿಸ್ ಗೇಲ್ ಜೊತೆಗಿನ ಈ ಸ್ವಾರಸ್ಯಕರ ಸಂಭಾಷಣೆಯ ನಂತರ ತನ್ಮ ಆರ್’ಸಿಬಿ ಜರ್ಸಿಯ ಮೇಲೆ ಹಸ್ತಾಕ್ಷರ ಹಾಕಿ ಅದನ್ನು ಗೇಲ್ ಅವರಿಗೆ ಕೊಹ್ಲಿ ಉಡುಗೊರೆಯಾಗಿ ನೀಡಿದ್ದಾರೆ.

ಇದನ್ನೂ ಓದಿ : 1% ಚಾನ್ಸ್, 99% ನಂಬಿಕೆ.. ಭರವಸೆಗಳೇ ಬತ್ತಿ ಹೋಗಿದ್ದವರ ಎದೆಯಲ್ಲಿ ಗೆಲುವಿನ ಕಿಚ್ಚು ಹೊತ್ತಿಸಿದ ಧೀರನೊಬ್ಬನ ಕಥೆ..!

ಐಪಿಎಲ್ ಪ್ಲೇ ಅಫ್ ಪ್ರವೇಶಿಸಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಬುಧವಾರ ಅಹ್ಮದಾಬಾದ್’ನ ಮೊಟೇರಾ ಕ್ರೀಡಾಂಗಣದಲ್ಲಿ ನಡೆಯಲಿರುವ ಎಲಿಮಿನೇಟರ್ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವನ್ನು ಎದುರಿಸಲಿದೆ.

IPL 2024 RCB vs CSK Will Gayle play for RCB next year ? Virat Kohli gave a big offer to Chris Gayle !

Comments are closed.