IPL Injury : ಐಪಿಎಲ್ ಫ್ರಾಂಚೈಸಿಗಳಿಗೆ “ಇಂಜ್ಯುರಿ” ಶಾಕ್, ಯಾವೆಲ್ಲಾ ತಂಡಗಳಿಗೆ ತಟ್ಟಿದೆ ಗಾಯದ ಬಿಸಿ..? ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್

ಬೆಂಗಳೂರು: ಐಪಿಎಲ್ (IPL 2023) ಆರಂಭಕ್ಕೆ ಬೆರಳೆಣಿಕೆಯ ದಿನಗಳಷ್ಟೇ ಬಾಕಿ. ಬಹು ನಿರೀಕ್ಷಿತ ಐಪಿಎಲ್-16 ಟೂರ್ನಿ ಮಾರ್ಚ್ 31ರಂದು ಆರಂಭವಾಗಲಿದೆ. ಐಪಿಎಲ್ ಶುರುವಾಗಲು ಕೆಲವೇ ದಿನಗಳಷ್ಟೇ ಬಾಕಿ ಇರೋ ಹೊತ್ತಲ್ಲಿ ಫ್ರಾಂಚೈಸಿಗಳಿಗೆ ಇಂಜ್ಯುರಿ ಶಾಕ್ (IPL Injury) ತಗುಲಿದೆ. ಒಟ್ಟು 11 ಆಟಗಾರರು ಗಾಯದಿಂದ, ಫಿಟ್ನೆಸ್ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಗಾಯಗೊಂಡಿರುವ ಕೆಲ ಆಟಗಾರರಿಗೆ ಈಗಾಗಲೇ ಬದಲಿ ಆಟಗಾರರನ್ನು ಹೆಸರಿಸಲಾಗಿತ್ತು, ಉಳಿದ ಆಟಗಾರರ ಫಿಟ್ನೆಸ್ ನೋಡಿಕೊಂಡು ನಿರ್ಧಾರ ಪ್ರಕಟಿಸಲು ಫ್ರಾಂಚೈಸಿಗಳು ಮುಂದಾಗಿವೆ.

ಮುಂಬೈ ಇಂಡಿಯನ್ಸ್:
5 ಬಾರಿಯ ಚಾಂಪಿಯನ್ಸ್ ಮುಂಬೈ ಇಂಡಿಯನ್ಸ್ ತಂಡದ ಉಪನಾಯಕ ಜಸ್ಪ್ರೀತ್ ಬುಮ್ರಾ ಬೆನ್ನು ನೋವಿನ ಶಸ್ತ್ರಚಿಕಿತ್ಸೆಗೊಳಗಾಗಿದ್ದು ಐಪಿಎಲ್-16 ಟೂರ್ನಿಗೆ ಲಭ್ಯರಿಲ್ಲ. ಮುಂಬೈ ಪರ ಆಡಬೇಕಿದ್ದ ಆಸ್ಟ್ರೇಲಿಯಾ ವೇಗಿ ಝಾಯ್ ರಿಚರ್ಡ್ಸನ್ ಕೂಡ ಗಾಯಗೊಂಡಿದ್ದು, ಐಪಿಎಲ್ ಟೂರ್ನಿಯಿಂದ ಹೊರ ಬಿದ್ದಿದ್ದಾರೆ. ಟೂರ್ನಿ ಆರಂಭಕ್ಕೆ ಏಳು ದಿನಗಳಷ್ಟೇ ಬಾಕಿ. ಆದರೂ ಮುಂಬೈ ಫ್ರಾಂಚೈಸಿ ಇನ್ನೂ ಬದಲಿ ಆಟಗಾರರನ್ನು ಹೆಸರಿಸಿಲ್ಲ.

ರಾಜಸ್ಥಾನ್ ರಾಯಲ್ಸ್:
ರಾಜಸ್ಥಾನ್ ರಾಯಲ್ಸ್ ಪರ ಆಡಬೇಕಿದ್ದ ಕರ್ನಾಟಕದ ಯುವ ವೇಗಿ ಪ್ರಸಿದ್ಧ್ ಕೃಷ್ಣ ಬೆನ್ನು ನೋವಿನ ಶಸ್ತ್ರಚಿಕಿತ್ಸೆಗೊಳಗಾಗಿದ್ದು ಐಪಿಎಲ್’ಗೆ ಲಭ್ಯರಿಲ್ಲ. ಪ್ರಸಿದ್ಧ್ ಬದಲು ಪಂಜಾಬ್’ನ ಅನುಭವಿ ವೇಗಿ ಸಂದೀಪ್ ಶರ್ಮಾ ಅವರನ್ನು ರಾಯಲ್ಸ್ ಪಡೆ ತಂಡಕ್ಕೆ ಸೇರಿಸಿಕೊಂಡಿದೆ. ರಾಯಲ್ ಬಳಗ ವಿಂಡೀಸ್ ಮೀಡಿಯಂ ಪೇಸರ್ ಒಬೇಡ್ ಮೆಕಾಯ್ ಕೂಡ ಗಾಯದಿಂದ ಬಳಲುತ್ತಿದ್ದು, ಇನ್ನೂ ಸಂಪೂರ್ಣ ಫಿಟ್ ಆಗಿಲ್ಲ.

ಡೆಲ್ಲಿ ಕ್ಯಾಪಿಟಲ್ಸ್:
ರಸ್ತೆ ಅಪಘಾತದಲ್ಲಿ ಗಾಯಗೊಂಡು ಇದೀಗ ಚೇತರಿಸಿಕೊಳ್ಳುತ್ತಿರುವ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ರಿಷಭ್ ಪಂತ್ ಐಪಿಎಲ್’ಗೆ ಲಭ್ಯರಿಲ್ಲ. ಪಂತ್ ಕಂಬ್ಯಾಕ್’ಗೆ ಇನ್ನೂ ಒಂದು ವರ್ಷ ಹಿಡಿಯಲಿದ್ದು, ಡೇವಿಡ್ ವಾರ್ನರ್’ಗೆ ಕ್ಯಾಪಿಟಲ್ಸ್ ಪಡೆಯ ನಾಯಕತ್ವ ವಹಿಸಲಾಗಿದೆ. ಆದರೆ ರಿಷಭ್ ಪಂತ್ ಅವರಿಗೆ ಬದಲಿ ಆಟಗಾರನನ್ನ ಡೆಲ್ಲಿ ಫ್ರಾಂಚೈಸಿ ಇನ್ನೂ ಹೆಸರಿಸಿಲ್ಲ.

ಪಂಜಾಬ್ ಕಿಂಗ್ಸ್:
ಪಂಜಾಬ್ ಕಿಂಗ್ಸ್ ಪರ ಆಡಬೇಕಿದ್ದ ಇಂಗ್ಲೆಂಡ್ ವಿಕೆಟ್ ಕೀಪರ್ ಜಾನಿ ಬೇರ್’ಸ್ಟೋ ಗಾಯದಿಂದ ಇಡೀ ಟೂರ್ನಿಯಿಂದ ಹೊರ ಬಿದ್ದಿದ್ದಾರೆ. ಬೇರ್’ಸ್ಟೋಗೆ ಬದಲಿ ಆಟಗಾರನನ್ನ ಪಂಜಾಬ್ ಫ್ರಾಂಚೈಸಿ ಇನ್ನೂ ಹೆಸರಿಸಿಲ್ಲ.

ಕೋಲ್ಕತಾ ನೈಟ್ ರೈಡರ್ಸ್:
ಎರಡು ಬಾರಿಯ ಚಾಂಪಿಯನ್ಸ್ ಕೋಲ್ಕತಾ ನೈಟ್ ರೈಡರ್ಸ್ ತಂಡಕ್ಕೂ ಗಾಯದ ಬಿಸಿ ತಟ್ಟಿದೆ. ತಂಡದ ನಾಯಕ ಶ್ರೇಯಸ್ ಅಯ್ಯರ್ ಬೆನ್ನು ನೋವಿನ ಕಾರಣ ಪ್ರಥಮಾರ್ಧದ ಪಂದ್ಯಗಳಿಗೆ ಅಲಭ್ಯರಾಗಿದ್ದಾರೆ. ಎಡಗೈ ಬ್ಯಾಟ್ಸ್’ಮನ್ ನಿತೀಶ್ ರಾಣಾ ಕೂಡ ಫಿಟ್ನೆಸ್ ಸಮಸ್ಯೆ ಎದುರಿಸುತ್ತಿದ್ದಾರೆ.

ಚೆನ್ನೈ ಸೂಪರ್ ಕಿಂಗ್ಸ್:
4 ಬಾರಿಯ ಚಾಂಪಿಯನ್ಸ್ ಚೆನ್ನೈ ಸೂಪರ್ ಕಿಂಗ್ಸ್ ಪರ ಆಡಬೇಕಿದ್ದ ಕಿವೀಸ್ ಆಲ್ರೌಂಡರ್ ಕೈಲ್ ಜೇಮಿಸನ್ ಗಾಯದ (IPL Injury) ಕಾರಣ ಟೂರ್ನಿಯಿಂದ ಹೊರ ಬಿದ್ದಿದ್ದು, ಅವರ ಬದಲು ದಕ್ಷಿಣ ಆಫ್ರಿಕಾ ವೇಗಿ ಸಿಸಾಂಡ ಮಗಾಲ ಅವರನ್ನು ಚೆನ್ನೈ ಫ್ರಾಂಚೈಸಿ ತಂಡಕ್ಕೆ ಸೇರಿಸಿಕೊಂಡಿದೆ. ಮತ್ತೊಂದೆಡೆ ಚೆನ್ನೈ ತಂಡದ ಯುವ ಎಡಗೈ ವೇಗದ ಬೌಲರ್ ಮುಕೇಶ್ ಚೌಧರಿ ಫಿಟ್ನೆಸ್ ಸಮಸ್ಯೆ ಎದುರಿಸುತ್ತಿದ್ದಾರೆ.

ಇದನ್ನೂ ಓದಿ : Indian Cricket Team : ಟೀಮ್ ಇಂಡಿಯಾ ಒಗ್ಗಟ್ಟು ಛಿದ್ರ ಛಿದ್ರ, ಸ್ನೇಹಿತರೆಲ್ಲಾ ಇನ್ನು ಮುಂದೆ ದುಷ್ಮನ್‌ಗಳು

ಇದನ್ನೂ ಓದಿ : IPL 2023 RCB : ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಬೆಸ್ಟ್ ಪ್ಲೇಯಿಂಗ್ XI, ಸ್ಟ್ರೆಂತ್ & ವೀಕ್ನೆಸ್

Comments are closed.