T20 Franchise in South Africa : ದಕ್ಷಿಣ ಆಫ್ರಿಕಾದಲ್ಲಿ ಮಿನಿ ಐಪಿಎಲ್, 6 ಟಿ20 ತಂಡ ಖರೀದಿಸಿದ 6 ಐಪಿಎಲ್ ಫ್ರಾಂಚೈಸಿಗಳು

ಕೇಪ್’ಟೌನ್: ಜಗತ್ತಿನ ಅತ್ಯಂತ ಶ್ರೀಮಂತ ಟಿ20 ಕ್ರಿಕೆಟ್ ಲೀಗ್ ಐಪಿಎಲ್’ನ 6 ಫ್ರಾಂಚೈಸಿಗಳು ಕ್ರಿಕೆಟ್ ಸೌತ್ ಆಫ್ರಿಕಾ ( IPL Teams Bags T20 Franchise in South Africa) ಟಿ20 ಲೀಗ್’ನಲ್ಲಿ 5 ತಂಡಗಳ ಫ್ರಾಂಚೈಸಿಗಳನ್ನು ತಮ್ಮದಾಗಿಸಿಕೊಂಡಿವೆ. ಐದು ಬಾರಿಯ ಐಪಿಎಲ್ ಚಾಂಪಿಯನ್ಸ್ ಮುಂಬೈ ಇಂಡಿಯನ್ಸ್, ನಾಲ್ಕು ಬಾರಿಯ ಚಾಂಪಿಯನ್ಸ್ ಚೆನ್ನೈ ಸೂಪರ್ ಕಿಂಗ್ಸ್, ಡೆಲ್ಲಿ ಕ್ಯಾಪಿಟಲ್ಸ್, ರಾಜಸ್ಥಾನ್ ರಾಯಲ್ಸ್, ಸನ್’ರೈಸರ್ಸ್ ಹೈದರಾಬಾದ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ತಂಡಗಳು ಸೌತ್ ಆಫ್ರಿಕಾ ಟಿ20 ಲೀಗ್’ನಲ್ಲಿ ಆರು ತಂಡಗಳ ಮಾಲೀಕತ್ವವನ್ನು ತಮ್ಮದಾಗಿಸಿಕೊಂಡಿವೆ.

ಮುಂಬೈ ಇಂಡಿಯನ್ಸ್, ಕೇಪ್’ಟೌನ್ ತಂಡದ ಫ್ರಾಂಚೈಸಿಯನ್ನು ತನ್ನದಾಗಿಸಿಕೊಂಡಿದ್ರೆ, ಜೋಹಾನ್ಸ್’ಬರ್ಗ್ ತಂಡದ ಫ್ರಾಂಚೈಸಿ ಚೆನ್ನೈ ಸೂಪರ್ ಕಿಂಗ್ಸ್ ಪಾಲಾಗಿದೆ. ಪ್ರಿಟೋರಿಯಾ ತಂಡದ ಫ್ರಾಂಚೈಸಿ ಡೆಲ್ಲಿ ಕ್ಯಾಪಿಟಲ್ಸ್ ಪಾಲಾಗಿದ್ರೆ, ಡರ್ಬನ್ ತಂಡದ ಫ್ರಾಂಚೈಸಿಯನ್ನು ಲಕ್ನೋ ಸೂಪರ್ ಜೈಂಟ್ಸ್ ತಂಡ ಖರೀದಿಸಿದೆ. 2016ರ ಐಪಿಎಲ್ ಚಾಂಪಿಯನ್ ಸನ್ ರೈಸರ್ಸ್ ಹೈದರಾಬಾದ್ ಫ್ರಾಂಚೈಸಿ ಪೋರ್ಟ್ ಎಲಿಜಬೆತ್ ತಂಡದ ಫ್ರಾಂಚೈಸಿಯನ್ನು ಬಗಲಿಗೆ ಹಾಕಿಕೊಂಡ್ರೆ, ಐಪಿಎಲ್-2022ರ ರನ್ನರ್ಸ್ ಅಪ್ ರಾಜಸ್ಥಾನ್ ರಾಯಲ್ಸ್, ಪಾರ್ಲ್ ತಂಡದ ಫ್ರಾಂಚೈಸಿಯನ್ನು ತನ್ನದಾಗಿಸಿಕೊಂಡಿದೆ. ದಕ್ಷಿಣ ಆಫ್ರಿಕಾ ತಂಡದ ಮಾಜಿ ನಾಯಕ ಗ್ರೇಮ್ ಸ್ಮಿತ್ ಕ್ರಿಕೆಟ್ ಸೌತ್ ಆಫ್ರಿಕಾ ಟಿ20 ಲೀಗ್ ಕಮಿಷನರ್ ಆಗಿ ನೇಮಕಗೊಂಡಿದ್ದಾರೆ.

ದಕ್ಷಿಣ ಆಫ್ರಿಕಾ ಟಿ20 ಲೀಗ್’ನಲ್ಲಿ 6 ಫ್ರಾಂಚೈಸಿಗಳನ್ನು ಖರೀದಿಸಿರುವ 6 ತಂಡಗಳು ಐಪಿಎಲ್’ನಲ್ಲಿ ಒಟ್ಟು 11 ಪ್ರಶಸ್ತಿಗಳನ್ನು ಗೆದ್ದಿವೆ. ಸೌತ್ ಆಫ್ರಿಕಾ ಟಿ20 ಲೀಗ್’ಗೆ ಐಪಿಎಲ್ ಫ್ರಾಂಚೈಸಿಗಳ ಎಂಟ್ರಿಯೊಂದಿಗೆ ಟೂರ್ನಿಗೆ ಹೊಸ ಮೆರುಗು ಬಂದಿದೆ. ಕ್ರಿಕೆಟ್ ಜಗತ್ತಿನ ಅತ್ಯಂತ ಯಶಸ್ವಿ ಹಾಗೂ ಪ್ರತಿಷ್ಠಿತ ಫ್ರಾಂಚೈಸಿಗಳ ಆಗಮನದಿಂದಾಗಿ ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿ ಟಿ20 ಲೀಗ್ ಮೂಲಕ ಸಾಕಷ್ಟು ಲಾಭ ಮಾಡಿಕೊಳ್ಳಲಿದೆ.

ಐಪಿಎಲ್’ನ ಮಾಜಿ COO (ಚೀಫ್ ಆಪರೇಟಿಂಗ್ ಆಫೀಸರ್) ಆಗಿರುವ ಸುಂದರ್ ರಾಮನ್, ಕ್ರಿಕೆಟ್ ಸೌತ್ ಆಫ್ರಿಕಾ ಟಿ20 ಲೀಗ್’ನ ಪ್ರಮುಖ ಸೂತ್ರಧಾರನಾಗಿದ್ದಾರೆ. ಸಿಎಸ್ಎ ಟಿ20 ಲೀಗ್’ನಲ್ಲಿ ಸುಂದರ್ ರಾಮನ್ 12.5% ಪಾಲುದಾರಿಕೆ ಹೊಂದಿದ್ದಾರೆ. ಕ್ರಿಕೆಟ್ ಸೌತ್ ಆಫ್ರಿಕಾ ಟಿ20 ಲೀಗ್ ಮುಂದಿನ ವರ್ಷದ ಜನವರಿ ತಿಂಗಳಲ್ಲಿ ನಡೆಯಲಿದೆ. ಹೀಗಾಗಿ ಅದೇ ತಿಂಗಳು ಆಸ್ಟ್ರೇಲಿಯಾದಲ್ಲಿ ನಡೆಯಬೇಕಿದ್ದ ಏಕದಿನ ಸರಣಿಯಿಂದ ದಕ್ಷಿಣ ಆಫ್ರಿಕಾ ಹಿಂದೆ ಸರಿದಿದೆ.

ಇದನ್ನೂ ಓದಿ : ಇಂಗ್ಲೆಂಡ್ ನೆಲದಲ್ಲಿ ಸರಣಿ ಗೆಲ್ಲಿಸಿಕೊಟ್ಟ ‘’ಪಾಂಡು’’ಗೆ ವಿಶೇಷ ಅಭಿನಂದನೆ ತಿಳಿಸಿದ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ

ಇದನ್ನೂ ಓದಿ : KL Rahul Training at NCA : ಕೆ.ಎಲ್ ರಾಹುಲ್ ಬ್ಯಾಟಿಂಗ್ ; ದಿಗ್ಗಜ ಮಹಿಳಾ ಕ್ರಿಕೆಟರ್ ಬೌಲಿಂಗ್, NCAನಲ್ಲಿ ಭರ್ಜರಿ ಪ್ರಾಕ್ಟೀಸ್

IPL Teams Bags T20 Franchise in South Africa

Comments are closed.