ಟಿ20 ವಿಶ್ವಕಪ್ ಗೆದ್ದ ಇಂಗ್ಲೆಂಡ್‌ : 2ನೇ ಬಾರಿಗೆ ಟಿ20 ವಿಶ್ವಕಪ್ ಕಿರೀಟ

ಮೆಲ್ಬೋರ್ನ್: T20 World cup 2022 England : ಜೋಸ್ ಬಟ್ಲರ್ ನಾಯಕತ್ವದ ಇಂಗ್ಲೆಂಡ್ ತಂಡ ಆಸ್ಟ್ರೇಲಿಯಾದಲ್ಲಿ ನಡೆದ ಟಿ20 ವಿಶ್ವಕಪ್ (T20 World Cup 2022) ಟೂರ್ನಿಯಲ್ಲಿ ಚಾಂಪಿಯನ್ ಆಗಿ ಹೊರ ಹೊಮ್ಮಿದೆ. ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್’ನಲ್ಲಿ ನಡೆದ ಫೈನಲ್ ಹಣಾಹಣಿಯಲ್ಲಿ ಪಾಕಿಸ್ತಾನ ತಂಡವನ್ನು 5 ವಿಕೆಟ್’ಗಳಿಂದ ಮಣಿಸಿದ ಇಂಗ್ಲೆಂಡ್ ವಿಶ್ವಕಪ್ ಟ್ರೋಫಿ ಮುಡಿಗೇರಿಸಿಕೊಂಡಿತು. ಇದರೊಂದಿಗೆ ಇಂಗ್ಲೆಂಡ್ ತಂಡ 2ನೇ ಬಾರಿ ಟಿ20 ವಿಶ್ವಕಪ್ ಗೆದ್ದ ಸಾಧನೆ ಮಾಡಿತು. 2010ರಲ್ಲಿ ಇಂಗ್ಲೆಂಡ್ ಪಾಲ್ ಕಾಲಿಂಗ್’ವುಡ್ ನಾಯಕತ್ವದಲ್ಲಿ ಮೊದಲ ಬಾರಿ ಚಾಂಪಿಯನ್ ಆಗಿತ್ತು.

ಮೆಲ್ಬೋರ್ನ್ ಮೈದಾನದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಪಾಕಿಸ್ತಾನಕ್ಕೆ ತಂಡಕ್ಕೆ ನಾಯಕ ಬಾಬರ್ ಅಜಮ್ ಹಾಗೂ ರಿಜ್ವಾನ್ ಉತ್ತಮ ಆರಂಭ ಒದಗಿಸಿದ್ರು. ಆದರೆ ಸ್ಯಾಮ್ ಕರನ್ ಹಾಗೂ ಆದೀಲ್ ರಿಶೀದ್ ಆಘಾತ ನೀಡಿದ್ರು. ರಿಜ್ವಾನ್ 15 ರನ್ ಗಳಿಸಿ ಔಟಾದ್ರೆ, ಮೊಹಮ್ಮದ್ ಹ್ಯಾರಿಸ್ ಕೇವಲ 8ರನ್ ಗೆ ವಿಕೆಟ್ ಒಪ್ಪಿಸಿದ್ದಾರೆ. ನಂತರ ಕ್ರೀಸ್ ಗೆ ಬಂದ ಮಸೂದ್ ಉತ್ತಮ ಇನ್ನಿಂಗ್ಸ್ ಕಟ್ಟಿದ್ರು. ಆದರೆ ಇನ್ನೊಂದೆಡೆಯಲ್ಲಿ ಇಂಗ್ಲೆಂಡ್ ಬೌಲರ್ ಗಳು ಸಾಲು ಸಾಲು ವಿಕೆಟ್ ಗಳನ್ನು ಕಬಳಿಸಿದ್ದಾರೆ. ಇಫ್ತಿಕಾರ್ ಅಹಮದ್ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದ್ರೆ, ನವಾಜ್ 5, ಮೊಹಮ್ಮದ್ ವಾಸಿಂ 4 ರನ್ ಗಳಿಸಿದ್ರೆ ಶಬಾದ್ ಖಾನ್ 20 ರನ್ ಸಿಡಿಸಿದ್ದಾರೆ.

ಅಂತಿಮವಾಗಿ ಪಾಕಿಸ್ತಾನ ತಂಡ 20 ಓವರ್ ಗಳಲ್ಲಿ 8 ವಿಕೆಟ್ ಕಳೆದುಕೊಂಡು 137ರನ್ ಗಳಿಸಿತ್ತು. ಇಂಗ್ಲೆಂಡ್ ತಂಡದ ಪರ ಸ್ಯಾಮ್ ಕರನ್ 12 ರನ್ ಗೆ 3 ವಿಕೆಟ್ ಪಡೆದುಕೊಂಡ್ರೆ, ಆದೀಲ್ ರಶೀದ್ ಹಾಗೂ ಕ್ರಿಸ್ ಜೋರ್ಡನ್ ತಲಾ ಎರಡು ವಿಕೆಟ್ ಪಡೆದುಕೊಂಡಿದ್ದಾರೆ. ನಂತರ ಪಾಕಿಸ್ತಾನ ನೀಡಿದ್ದ ಗುರಿಯನ್ನು ಬೆನ್ನತ್ತಲು ಹೊರಟ ಇಂಗ್ಲೆಂಡ್ ತಂಡಕ್ಕೆ ಶಾಹಿನ್ ಆಫ್ರಿದಿ ಆಘಾತ ನೀಡಿದ್ರು. ಭರ್ಜರಿ ಫಾರ್ಮ್ ನಲ್ಲಿದ್ದ ಅಲೆಕ್ಸ್ ಹೇಲ್ಸ್ ಅವರು ಕೇವಲ 1 ರನ್ ಗಳಿಗೆ ವಿಕೆಟ್ ಒಪ್ಪಿಸಿದ್ರು. ನಂತರ ಸಾಲ್ಟ್ ಆಟ ಕೇವಲ 10 ರನ್ ಗಳಿಗೆ ಸೀಮಿತವಾಯ್ತು.

ಒಂದೆಡೆ ಉತ್ತಮವಾಗಿ ಬ್ಯಾಟಿಂಗ್ ನಡೆಸುತ್ತಿದ್ದ ರೋಸ್ ಬಟ್ಲರ್ ಗೆ ಹಾರಿಸ್ ರೌಫ್ ಆಘಾತ ನೀಡಿದ್ರು. 26ರನ್ ಗಳಿಸಿ ಬಟ್ಲರ್ ಔಟ್ ಆಗುತ್ತಿದ್ದಂತೆಯೇ ಕ್ರೀಸ್ ಗೆ ಬಂದ ಬೆನ್ ಸ್ಟೋಕ್ಸ್, ಬ್ರೋಕ್ಸ್ ಹಾಗೂ ಮೊಯಿನ್ ಆಲಿ ಉತ್ತಮ ಆಟದ ನೆರವಿನಿಂದ ಇಂಗ್ಲೆಂಡ್ ತಂಡ ಭರ್ಜರಿ ಗೆಲುವು ದಾಖಲಿಸಿದೆ. ಬೆನ್ ಸ್ಟೋಕ್ಸ್ 52 ರನ್ ಗಳಿಸಿದ್ರೆ, ಬ್ರೂಕ್ 20 ಹಾಗೂ ಮೊಯಿನ್ ಆಲಿ 19 ರನ್ ಗಳಿಸಿದ್ದಾರೆ. ಪಾಕಿಸ್ತಾನ ಪರ ಹ್ಯಾರಿಸ್ ರೌಫ್ 2 ಹಾಗೂ ಶಾಹಿನ್ ಆಫ್ರಿದಿ, ಶಬಾದ್ ಖಾನ್ ಹಾಗೂ ಮೊಹಮ್ಮದ್ ವಾಸಿಮ್ ತಲಾ ಒಂದೊಂದು ವಿಕೆಟ್ ಪಡೆದುಕೊಂಡಿದ್ದಾರೆ.

T20 World cup 2022 England : ಎರಡನೇ ಬಾರಿಗೆ ವಿಶ್ವಕಪ್ ಗೆದ್ದ ಇಂಗ್ಲೆಂಡ್‌

ಫೈನಲ್’ನಲ್ಲಿ ಪಾಕಿಸ್ತಾನವನ್ನು ಮಣಿಸಿ ವಿಶ್ವಕಪ್ ಗೆಲ್ಲುವುದರೊಂದಿಗೆ 1992ರ ಫೈನಲ್’ನಲ್ಲಿ ಅನುಭವಿಸಿದ್ದ ಸೋಲಿಗೆ ಇಂಗ್ಲೆಂಡ್ ಸೇಡು ತೀರಿಸಿಕೊಂಡಿತು. 30 ವರ್ಷಗಳ ಹಿಂದೆ ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲೇ ನಡೆದ ಏಕದಿನ ವಿಶ್ವಕಪ್ ಫೈನಲ್’ನಲ್ಲಿ ಪಾಕಿಸ್ತಾನ ವಿರುದ್ಧ ಇಂಗ್ಲೆಂಡ್ ಸೋಲು ಕಂಡಿತ್ತು. ಫೈನಲ್ ಗೆಲ್ಲಲು ಪಾಕಿಸ್ತಾನ ಒಡ್ಡಿದ 138 ರನ್’ಗಳ ಗುರಿ ಬೆನ್ನಟ್ಟಿದ ಇಂಗ್ಲೆಂಡ್ 19 ಓವರ್’ಗಳಲ್ಲಿ 5 ವಿಕೆಟ್ ನಷ್ಟಕ್ಕೆ 138 ರನ್ ಗಳಿಸಿ ಜಯಭೇರಿ ಬಾರಿಸಿತು. ನಾಯಕ ಜೋಸ್ ಬಟ್ಲರ್ 17 ಎಸೆತಗಳಲ್ಲಿ 26 ರನ್ ಗಳಿಸಿದರೆ, ಜವಾಬ್ದಾರಿಯುತ ಆಟವಾಡಿದ ಆಲ್ರೌಂಡರ್ ಬೆನ್ ಸ್ಟೋಕ್ಸ್ ಅಜೇಯ 52 ರನ್ ಗಳಿಸಿ ಇಂಗ್ಲೆಂಡ್’ಗೆ ಗೆಲುವು ತಂದು ಕೊಟ್ಟರು.

ಇದಕ್ಕೂ ಮೊದಲು ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ, ನಿಗದಿತ 20 ಓವರ್’ಗಳಲ್ಲಿ 8 ವಿಕೆಟ್ ನಷ್ಟಕ್ಕೆ 137 ರನ್’ಗಳ ಸಾಧಾರಣ ಮೊತ್ತ ಕಲೆ ಹಾಕಿತು. ಪಾಕಿಸ್ತಾನ ಇನ್ನಿಂಗ್ಸ್’ಮಲ್ಲಿ ನಾಯಕ ಬಾಬರ್ ಅಜಮ್ 32 ರನ್, ಶಾನ್ ಮಸೂದ್ 38 ರನ್ ಹಾಗೂ ಶದಬ್ ಖಾನ್ 14 ಎಸೆತಗಳಲ್ಲಿ 20 ರನ್’ಗಳ ಕೊಡುಗೆ ನೀಡಿದರು.

ಇದನ್ನೂ ಓದಿ : IPL Trading : 9 ಆಟಗಾರರನ್ನು ಉಳಿಸಿಕೊಂಡ ರಾಯಲ್ ಚಾಲೆಂಜರ್ಸ್, ಐವರು RCBಯಿಂದ ಔಟ್

ಇದನ್ನೂ ಓದಿ : Sachin Tendulkar : ವಿಶ್ವಕಪ್ ಸೆಮಿಫೈನಲ್ ನಲ್ಲಿ ಭಾರತಕ್ಕೆ ಸೋಲು : ಒಂದೇ ಪಂದ್ಯದಿಂದ ತಂಡವನ್ನು ನಿರ್ಣಯಿಸಬೇಡಿ : ಸಚಿನ್ ತೆಂಡೂಲ್ಕರ್

T20 World cup 2022 win England By 5 wicket England vs Pakistan

Comments are closed.