Jaspreet Bumrah : ಒಂದೇ ಓವರ್‌ನಲ್ಲಿ 35 ರನ್.. ಬ್ಯಾಟಿಂಗ್ ದಿಗ್ಗಜ ಲಾರಾ ದಾಖಲೆ ಮುರಿದ ಬುಮ್ರಾ !

ಎಡ್ಜ್’ಬಾಸ್ಟನ್: ಇಂಗ್ಲೆಂಡ್ ವಿರುದ್ಧದ 5ನೇ ಟೆಸ್ಟ್ ಪಂದ್ಯದಲ್ಲಿ (India vs England Test Match) ಟೀಮ್ ಇಂಡಿಯಾವನ್ನು ಮುನ್ನಡೆಸುತ್ತಿರುವ ವೇಗಿ ಜಸ್ಪ್ರೀತ್ ಬುಮ್ರಾ, ವೆಸ್ಟ್ ಇಂಡೀಸ್ ಬ್ಯಾಟಿಂಗ್ ದಿಗ್ಗಜ ಬ್ರಯಾನ್ ಲಾರಾ ಅವರ ದಾಖಲೆಯೊಂದನ್ನು ಮುರಿದಿದ್ದಾರೆ (Jaspreet Bumrah breaks Brian Lara’s World Record).

ಭಾರತದ ಪ್ರಥಮ ಇನ್ನಿಂಗ್ಸ್’ನ ಅಂತ್ಯದಲ್ಲಿ ಅಬ್ಬರಿಸಿದ ಬುಮ್ರಾ, ಕೇವಲ 16 ಎಸೆತಗಳಲ್ಲಿ 4 ಬೌಂಡರಿ, 2 ಸಿಕ್ಸರ್ ನೆರವಿನಿಂದ ಅಜೇಯ 31 ರನ್ ಸಿಡಿಸಿದ್ರು,. ಈ ವೇಳೆ ಇಂಗ್ಲೆಂಡ್ ವೇಗಿ ಸ್ಟುವರ್ಟ್ ಬ್ರಾಡ್ ಅವರ ಒಂದೇ ಓವರ್’ನಲ್ಲಿ ಬುಮ್ರಾ 29 ರನ್ ಸಿಡಿಸಿದ್ರು. ಇದು ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲೇ ಬ್ಯಾಟ್ಸ್’ಮನ್ ಒಬ್ಬ ಒಂದೇ ಓವರ್”ನಲ್ಲಿ ಗಳಿಸಿದ ಅತೀ ಹೆಚ್ಚು ರನ್. ಈ ಮೂಲಕ ಬುಮ್ರಾ ವಿಂಡೀಸ್ ದಿಗ್ಗಜ ಲಾರಾ ಅವರ 18 ವರ್ಷಗಳ ಹಿಂದಿನ ದಾಖಲೆಯನ್ನು ಪುಡಿಗಟ್ಟಿದರು. 2003ರಲ್ಲಿ ಬ್ರಯಾನ್ ಲಾರಾ ದಕ್ಷಿಣ ಆಫ್ರಿಕಾದ ಎಡಗೈ ಸ್ಪಿನ್ನರ್ ರಾಬಿನ್ ಪೀಟರ್ಸನ್ ಅವರ ಒಂದೇ ಓವರ್”ನಲ್ಲಿ 28 ರನ್ ಸಿಡಿಸಿದ್ದು ಇದುವರೆಗಿನ ವಿಶ್ವದಾಖಲೆಯಾಗಿತ್ತು. ಬ್ಯಾಟಿಂಗ್ ದಿಗ್ಗಜನೊಬ್ಬನ ವಿಶ್ವದಾಖಲೆಯನ್ನು ಬೌಲರ್ ಒಬ್ಬ ಪುಡಿಗಟ್ಟಿದ್ದು ವಿಶೇಷ.

ಮತ್ತೊಂದು ವಿಶೇಷ ಏನಂದ್ರೆ ಬುಮ್ರಾ ಈ ದಾಖಲೆ ಬರೆದದ್ದು ಸ್ಟುವರ್ಟ್ ಬ್ರಾಡ್ ಬೌಲಿಂಗ್’ನಲ್ಲಿ. 2007ರ ಟಿ20 ವಿಶ್ವಕಪ್’ನಲ್ಲಿ ಭಾರತದ ಯುವರಾಜ್ ಸಿಂಗ್, ಇದೇ ಸ್ಟುವರ್ಟ್ ಬ್ರಾಡ್ ಅವರ ಒಂದೇ ಓವರ್”ನಲ್ಲಿ ಆರು ಸಿಕ್ಸರ್ ಸಿಡಿಸಿದ್ದರು. ಬ್ರಾಡ್ ಅವರ ಒಂದೇ ಓವರ್”ನಲ್ಲಿ ಬುಮ್ರಾ 29 ರನ್ ಗಳಿಸಿದ್ರೆ, ಉಳಿದ ಐದು ರನ್’ಗಳ ಎಕ್ಸ್’ಟ್ರಾ ರೂಪದಲ್ಲಿ ಬಂದಿದ್ದರಿಂದ ಆ ಓವರ್’ನಲ್ಲಿ ಒಟ್ಟು 35 ರನ್ ದಾಖಲಾಯ್ತು. ನಾಯಕ ಜಸ್ಪ್ರೀತ್ ಬುಮ್ರಾ ಅಬ್ಬರ, ವಿಕೆಟ್ ಕೀಪರ್ ರಿಷಭ್ ಪಂತ್ ಅವರ ಸ್ಫೋಟಕ ಶತಕ (111 ಎಸೆತಗಳಲ್ಲಿ 146 ರನ್) ಹಾಗೂ ಆಲ್ರೌಂಡರ್ ರವೀಂದ್ರ ಜಡೇಜಾ ಅವರ ತಾಳ್ಮೆಯ ಶತಕ (194 ಎಸೆತಗಳಲ್ಲಿ 104 ರನ್)ಗಳ ನೆರವಿನಿಂದ ಭಾರತ ತನ್ನ ಪ್ರಥಮ ಇನ್ನಿಂಗ್ಸ್’ನಲ್ಲಿ 416 ರನ್’ಗಳ ಉತ್ತಮ ಮೊತ್ತ ಕಲೆ ಹಾಕಿತು.

ಒಂದು ಹಂತದಲ್ಲಿ ಕೇವಲ 98 ರನ್ನಿಗೆ 5 ವಿಕೆಟ್ ಕಳೆದುಕೊಂಡಿದ್ದ ಭಾರತಕ್ಕೆ ರಿಷಭ್ ಪಂತ್ ಮತ್ತು ರವೀಂದ್ರ ಜಡೇಜಾ ಆಸರೆಯಾಗಿದ್ದರು. ಈ ಎಡಗೈ ಜೋಡಿ 6ನೇ ವಿಕೆಟ್’ಗೆ ಅಮೋಘ 222 ರನ್’ಗಳ ಜೊತೆಯಾಟವಾಡಿತು. ಪಂತ್-ಜಡೇಜಾ ಸಾಹಸದಿಂದ ಭಾರತ ಕೊನೆಯ 5 ವಿಕೆಟ್”ಗಳ ನೆರವಿನಿಂದ 318 ರನ್ ಕಲೆ ಹಾಕಿತು.

ಇದನ್ನೂ ಓದಿ : Ravi Shastri : ಒಂದೇ ಸರಣಿ… 2 ಟೂರ್… ಹೊಸ ಅವತಾರದಲ್ಲಿ ಟೀಮ್ ಇಂಡಿಯಾ ಮಾಜಿ ಕೋಚ್ ಶಾಸ್ತ್ರಿ !

ಇದನ್ನೂ ಓದಿ : Rahul Dravid celebrate : ರಾಹುಲ್ ದ್ರಾವಿಡ್ ಯಾವತ್ತಾದ್ರೂ ಈ ರೀತಿ ಸಂಭ್ರಮಿಸಿದ್ದನ್ನು ನೋಡಿದ್ದೀರಾ ?

Jaspreet Bumrah breaks Brian Lara’s World Record

Comments are closed.