Virat Kohli world record : ಅಂತರಾಷ್ಟ್ರೀಯ ಕ್ರಿಕೆಟ್’ನಲ್ಲಿ ಅತಿ ವೇಗದ 25 ಸಾವಿರ ರನ್; ಸಚಿನ್ ವಿಶ್ವದಾಖಲೆ ಪುಡಿಗಟ್ಟಿದ ಕಿಂಗ್ ಕೊಹ್ಲಿ

ದೆಹಲಿ: ಟೀಮ್ ಇಂಡಿಯಾದ ರನ್ ಮಷಿನ್ ವಿರಾಟ್ ಕೊಹ್ಲಿ (Virat Kohli), ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ (Sachin Tendulkar) ಅವರ ಮತ್ತೊಂದು (King Kohli world record) ವಿಶ್ವದಾಖಲೆಯನ್ನು ಪುಡಿಗಟ್ಟಿದ್ದಾರೆ. ಅಂತರಾಷ್ಟ್ರೀಯ ಕ್ರಿಕೆಟ್’ನಲ್ಲಿ ಅತೀ ವೇಗವಾಗಿ 25 ಸಾವಿರ ರನ್ ಪೂರ್ತಿಗೊಳಿಸಿದ ವಿಶ್ವದಾಖಲೆಯನ್ನು ವಿರಾಟಾ ಕೊಹ್ಲಿ ತಮ್ಮ ಹೆಸರಿಗೆ ವರ್ಗಾಯಿಸಿಕೊಂಡಿದ್ದಾರೆ.

ಭಾನುವಾರ ದೆಹಲಿಯ ಫಿರೋಜ್ ಶಾ ಕೋಟ್ಲಾ ಮೈದಾನದಲ್ಲಿ ಅಂತ್ಯಗೊಂಡ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ (Border – Gavaskar test series) 2ನೇ ಪಂದ್ಯದ ಮೂರನೇ ದಿನ ಕೊಹ್ಲಿ ಈ ವಿಶ್ವದಾಖಲೆ ನಿರ್ಮಿಸಿದರು. ವಿರಾಟ್ ಕೊಹ್ಲಿ 549 ಇನ್ನಿಂಗ್ಸ್’ಗಳಲ್ಲಿ 25 ಸಾವಿರ ಅಂತರಾಷ್ಟ್ರೀಯ ರನ್ ಪೂರ್ತಿಗೊಳಿಸಿದ್ರೆ, ಸಚಿನ್ ಇದಕ್ಕಾಗಿ 577 ಇನ್ನಿಂಗ್ಸ್’ಗಳನ್ನು ಆಡಿದ್ದಾರೆ.

Virat Kohli world record : ಅಂತರಾಷ್ಟ್ರೀಯ ಕ್ರಿಕೆಟ್’ನಲ್ಲಿ ವೇಗದ 25 ಸಾವಿರ ರನ್ :

ವಿರಾಟ್ ಕೊಹ್ಲಿ (ಭಾರತ): 549 ಇನ್ನಿಂಗ್ಸ್
ಸಚಿನ್ ತೆಂಡೂಲ್ಕರ್ (ಭಾರತ): 577 ಇನ್ನಿಂಗ್ಸ್
ರಿಕಿ ಪಾಂಟಿಂಗ್ (ಆಸ್ಟ್ರೇಲಿಯಾ): 588 ಇನ್ನಿಂಗ್ಸ್
ಜ್ಯಾಕ್ ಕಾಲೀಸ್ (ದಕ್ಷಿಣ ಆಫ್ರಿಕಾ): 594 ಇನ್ನಿಂಗ್ಸ್)
ಕುಮಾರ ಸಂಗಕ್ಕಾರ (ಶ್ರೀಲಂಕಾ): 608 ಇನ್ನಿಂಗ್ಸ್)

ದೆಹಲಿಯ ಫಿರೋಜ್ ಶಾ ಕೋಟ್ಲಾ ಮೈದಾನದಲ್ಲಿ ನಡೆದ ದ್ವಿತೀಯ ಟೆಸ್ಟ್ ಪಂದ್ಯವನ್ನು ಭಾರತ 6 ವಿಕೆಟ್’ಗಳಿಂದ ಗೆದ್ದುಕೊಂಡಿತು. ಈ ಮೂಲಕ 4 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 2-0 ಅಂತರದ ಮುನ್ನಡೆ ಸಾಧಿಸಿತು. ನಾಗ್ಪುರದಲ್ಲಿ ನಡೆದ ಪ್ರಥಮ ಟೆಸ್ಟ್ ಪಂದ್ಯವನ್ನು ಭಾರತ ಇನ್ನಿಂಗ್ಸ್ ಅಂತರದಲ್ಲಿ ಗೆದ್ದುಕೊಂಡಿತ್ತು.

ಪ್ರಥಮ ಇನ್ನಿಂಗ್ಸ್’ನಲ್ಲಿ ಒಂದು ರನ್ ಮುನ್ನಡೆ ಸಾಧಿಸಿದ್ದ ಆಸ್ಟ್ರೇಲಿಯಾ ದ್ವಿತೀಯ ಇನ್ನಿಂಗ್ಸ್’ನಲ್ಲಿ ಭಾರತದ ಸ್ಪಿನ್ ದಾಳಿಗೆ ತತ್ತರಿಸಿ ಕೇವಲ 113 ರನ್ನಿಗೆ ಆಲೌಟಾಯಿತು. ಒಂದು ವಿಕೆಟ್ ನಷ್ಟಕ್ಕೆ 61 ರನ್’ಗಳಿಂದ 3ನೇ ದಿನದಾಟ ಮುಂದುವರಿಸಿದ ಆಸ್ಟ್ರೇಲಿಯಾ ಒಂದು ಹಂತದಲ್ಲಿ 2 ವಿಕೆಟ್ ಕಳೆದುಕೊಂಡು 85 ರನ್ ಗಳಿಸಿ ಉತ್ತಮ ಸ್ಥಿತಿಯಲ್ಲಿತ್ತು. ಆದರೆ ಇದಕ್ಕಿದ್ದಂತೆ ರವೀಂದ್ರ ಜಡೇಜ ಅವರ ಮಾರಕ ದಾಳಿಗೆ ತತ್ತರಿಸಿ ನಾಟಕೀಯ ಕುಸಿತ ಕಂಡ ಆಸೀಸ್ ಕೇವಲ 28 ರನ್’ಗಳ ಅಂತರದಲ್ಲಿ ಕೊನೆಯ 8 ವಿಕೆಟ್’ಗಳನ್ನು ಕಳೆದುಕೊಂಡಿತು. ಜೀವನಶ್ರೇಷ್ಠ ಬೌಲಿಂಗ್ ಪ್ರದರ್ಶಿಸಿದ ರವೀಂದ್ರ ಜಡೇಜ 42 ರನ್ನಿತ್ತು 7 ವಿಕೆಟ್ ಕಬಳಿಸಿದ್ರೆ ರವಿಚಂದ್ರನ್ ಅಶ್ವಿನ್ 3 ವಿಕೆಟ್ ಪಡೆದರು.

ಇದನ್ನೂ ಓದಿ : ICC world test championship : ಮತ್ತೆ ಮೂರೇ ದಿನಗಳಲ್ಲಿ ಕಾಂಗರೂ ಮರ್ಧನ, ದೆಹಲಿಯಲ್ಲೂ ಸ್ಪಿನ್ ಬಲೆಗೆ ಬಿದ್ದ ಆಸೀಸ್

ಇದನ್ನೂ ಓದಿ : Saurashtra Ranji Champions : ಬಂಗಾಳವನ್ನು ಬಗ್ಗು ಬಡಿದು 2ನೇ ಬಾರಿ ರಣಜಿ ಟ್ರೋಫಿ ಗೆದ್ದ ಸೌರಾಷ್ಟ್ರ

ಇದನ್ನೂ ಓದಿ : Axar Patel : ಟೀಮ್ ಇಂಡಿಯಾಗೆ ಆಪದ್ಬಾಂಧವನಾದ ಅಕ್ಷರ್, ರೋಚಕ ಘಟ್ಟದಲ್ಲಿ ದೆಹಲಿ ಟೆಸ್ಟ್; 2ನೇ ದಿನ ಆಸೀಸ್ ಮೇಲುಗೈ

ನಂತರ 115 ರನ್’ಗಳ ಗೆಲುವಿನ ಗುರಿ ಬೆನ್ನಟ್ಟಿದ ಭಾರತ 4 ವಿಕೆಟ್ ನಷ್ಟದಲ್ಲಿ ಗುರಿ ತಲುಪಿ 6 ವಿಕೆಟ್’ಗಳ ಸುಲಭ ಜಯ ದಾಖಲಿಸಿತು. ಈ ಗೆಲುವಿನೊಂದಿಗೆ ಭಾರತ ತಂಡ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್’ಷಿಪ್ ಫೈನಲ್’ಗೆ (ICC world test championship) ಮತ್ತಷ್ಟು ಹತ್ತಿರವಾಯಿತು. ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ 3ನೇ ಟೆಸ್ಟ್ ಪಂದ್ಯ ಮಾರ್ಚ್ 1ರಂದು ಇಂದೋರ್’ನಲ್ಲಿ ಆರಂಭವಾಗಲಿದೆ.

King Kohli world record : Fastest 25 thousand runs in international cricket; Virat Kohli crushed Sachin’s world record

Comments are closed.