ಹಿಂಸಾಚಾರಕ್ಕೆ ತಿರುಗಿದ ಶಿವರಾತ್ರಿ ಆಚರಣೆ:ಎರಡು ಗುಂಪುಗಳ ನಡುವೆ ಘರ್ಷಣೆ: 14 ಮಂದಿಗೆ ಗಾಯ

ಭೋಪಾಲ್: (Violence on Shivaratri celebration) ನೈರುತ್ಯ ಮಧ್ಯಪ್ರದೇಶದಲ್ಲಿ ಶಿವರಾತ್ರಿ ಹಬ್ಬದ ವೇಳೆ ಪ್ರಾರ್ಥನೆ ಸಲ್ಲಿಸುವ ವಿಚಾರದಲ್ಲಿ ಜಗಳ ನಡೆದಿದ್ದು, ಕನಿಷ್ಠ 14 ಮಂದಿ ಗಾಯಗೊಂಡಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ಎನ್‌ಡಿಟಿವಿ ವರದಿಯ ಪ್ರಕಾರ, ದಲಿತ ಸಮುದಾಯದ ಸದಸ್ಯರು ಖಾರ್ಗೋನ್ ಜಿಲ್ಲೆಯ ದೇವಸ್ಥಾನಕ್ಕೆ ಪ್ರವೇಶಿಸದಂತೆ “ಮೇಲ್ವರ್ಗದ” ಕೆಲವರು ತಮ್ಮನ್ನು ತಡೆದಿದ್ದಾರೆ ಎಂದು ಆರೋಪಿಸಿದ್ದಾರೆ.

ಸನವಾಡ ಪ್ರದೇಶದ ಛಾಪ್ರಾ ಗ್ರಾಮದಲ್ಲಿ ಇತರ ಮೂರು ಸಮುದಾಯಗಳ ಜನರು ನಿರ್ಮಿಸಿದ ಶಿವನ ದೇವಸ್ಥಾನದಲ್ಲಿ ದಲಿತರು ಪ್ರಾರ್ಥನೆ ಸಲ್ಲಿಸುತ್ತಾರೆ ಎಂಬ ವಾದವು ನಂತರ ಸಂಪೂರ್ಣ ಕದನವಾಗಿ ಮಾರ್ಪಟ್ಟಿದೆ ಎಂದು ಪೊಲೀಸರು ತಿಳಿಸಿದ್ದಾರೆ.”ಎರಡೂ ಕಡೆಯಿಂದ ಭಾರೀ ಕಲ್ಲು ತೂರಾಟ ನಡೆದಿದೆ. ಎರಡೂ ಕಡೆಯಿಂದ ದೂರುಗಳನ್ನು ಸ್ವೀಕರಿಸಲಾಗಿದ್ದು, ಕ್ರಮ ಕೈಗೊಳ್ಳಲಾಗುವುದು ಎಂದು ಹಿರಿಯ ಪೊಲೀಸ್ ಅಧಿಕಾರಿ ವಿನೋದ್ ದೀಕ್ಷಿತ್ ಎನ್‌ಡಿಟಿವಿಗೆ ತಿಳಿಸಿದ್ದಾರೆ.

ದಲಿತ ಸಮುದಾಯದ ಪ್ರೇಮಲಾಲ್ ಅವರು ಸಲ್ಲಿಸಿದ ದೂರಿನ ಪ್ರಕಾರ ಗುರ್ಜರ್ ಸಮುದಾಯದ ಭಯ್ಯಾ ಲಾಲ್ ಪಟೇಲ್ ನೇತೃತ್ವದ ಗುಂಪು ದಲಿತ ಹುಡುಗಿಯರನ್ನು ದೇವಾಲಯಕ್ಕೆ ಪ್ರವೇಶಿಸದಂತೆ ತಡೆದಿದೆ ಎಂದು ಆರೋಪಿಸಲಾಗಿದೆ.“ಪೊಲೀಸ್ ಮತ್ತು ಕಂದಾಯ ಅಧಿಕಾರಿಗಳ ತಂಡ ಗ್ರಾಮಕ್ಕೆ ಭೇಟಿ ನೀಡಿತು. ದೇವಸ್ಥಾನಕ್ಕೆ ಯಾವುದೇ ಜಾತಿಯ ಪ್ರವೇಶವನ್ನು ತಡೆಯಲು ಸಾಧ್ಯವಿಲ್ಲ ಎಂದು ಎರಡೂ ಪಕ್ಷಗಳಿಗೆ ವಿವರಿಸಲಾಗಿದೆ ಎಂದು ದೀಕ್ಷಿತ್ ಎನ್‌ಡಿಟಿವಿಗೆ ತಿಳಿಸಿದ್ದಾರೆ.

ಈ ಪ್ರದೇಶದಲ್ಲಿ ಕೆಲ ದಿನಗಳಿಂದ ಪವಿತ್ರ ಎಂದು ಭಾವಿಸಲಾದ ಆಲದ ಮರವನ್ನು ಕಡಿಯುವುದು ಹಾಗೂ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಪ್ರತಿಮೆ ಸ್ಥಾಪಿಸುವ ಪ್ರಸ್ತಾವನೆಯ ಕಾರಣ ಕೆಲ ದಿನಗಳಿಂದ ಉದ್ವಿಗ್ನತೆ ಉಂಟಾಗಿದ್ದು,ಮರಕ್ಕೆ ಕೊಡಲಿ ಹಾಕಿದ ಆರೋಪದ ಮೇಲೆ ದಲಿತ ಸಮುದಾಯದ ಆರು ಜನರ ವಿರುದ್ಧ ಗುರ್ಜರ್‌ಗಳು ದೂರು ದಾಖಲಿಸಿದ್ದರು ಎಂದು ತಿಳಿಸಿದರು.

ಇದನ್ನೂ ಓದಿ : Noida serial accident: ಮಂಜು ಕವಿದ ಎಕ್ಸ್‌ ಪ್ರೆಸ್‌ ವೇ ನಲ್ಲಿ ಸರಣಿ ಅಪಘಾತ: ಹಲವರಿಗೆ ಗಾಯ

ಇದೀಗ ರವೀಂದ್ರ ರಾವ್ ಮರಾಠಾ ಅವರ ದೂರಿನ ಮೇರೆಗೆ ಪ್ರೇಮಲಾಲ್ ಮತ್ತು ಇತರ 33 ಜನರ ವಿರುದ್ಧ ಆಯುಧಗಳಿಂದ ಹಲ್ಲೆ ನಡೆಸಿದ ಆರೋಪದ ಮೇಲೆ ಪ್ರತಿ ಪ್ರಕರಣವನ್ನೂ ದಾಖಲಿಸಲಾಗಿದೆ.ಪೊಲೀಸರು 17 ಶಂಕಿತರು ಮತ್ತು 25 ಅಪರಿಚಿತರ ವಿರುದ್ಧ ಗಲಭೆ ಮತ್ತು ಇತರ ಆರೋಪಗಳ ಮೇಲೆ ಪ್ರಕರಣ ದಾಖಲಿಸಿದ್ದಾರೆ.

Violence on Shivaratri celebration: Shivaratri celebration turned violent: Clash between two groups: 14 injured

Comments are closed.