KL Rahul 50 ODI matches : 24 ವರ್ಷಗಳ ನಂತರ ಭಾರತ ಪರ 50 ಏಕದಿನ ಪಂದ್ಯಗಳನ್ನಾಡಿದ ಮೊದಲ ಕನ್ನಡಿಗ

ಕೋಲ್ಕತಾ: ಕನ್ನಡಿಗ ಕೆ.ಎಲ್ ರಾಹುಲ್ (KL Rahul) ತಮ್ಮ ಟೀಕಾಕಾರರಿಗೆ ಬ್ಯಾಟ್ ಮೂಲಕವೇ ಉತ್ತರ ಕೊಟ್ಟಿದ್ದಾರೆ. ಶ್ರೀಲಂಕಾ ವಿರುದ್ಧದ 2ನೇ ಏಕದಿನ (India Vs Sri Lanka ODI series) ಪಂದ್ಯದಲ್ಲಿ ಸೋಲಿನ ಸುಳಿಗೆ ಸಿಲುಕಿದ್ದ ಟೀಮ್ ಇಂಡಿಯಾವನ್ನು ತಮ್ಮ ಜವಾಬ್ದಾರಿಯುತ ಆಟದಿಂದ ರಾಹುಲ್ (KL Rahul 50 ODI matches) ಗೆಲ್ಲಿಸಿದ್ದರು.

ಕೋಲ್ಕತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ 216 ರನ್’ಗಳ ಟಾರ್ಗೆಟ್ ಬೆನ್ನಟ್ಟಿದ್ದ ಭಾರತ ಒಂದು ಹಂತದಲ್ಲಿ 86 ರನ್ನಿಗೆ 4 ವಿಕೆಟ್ ಕಳೆದುಕೊಂಡು ಸೋಲಿನ ಸುಳಿಗೆ ಸಿಲುಕಿತ್ತು. ನಾಯಕ ರೋಹಿತ್ ಶರ್ಮಾ, ಶುಭಮನ್ ಗಿಲ್, ವಿರಾಟ್ ಕೊಹ್ಲಿ ಮತ್ತು ಶ್ರೇಯಸ್ ಅಯ್ಯರ್ ಪೆವಿಲಿಯನ್ ಸೇರಿಕೊಂಡಿದ್ದರು.

ಭಾರತ 62 ರನ್ನಿಗೆ 3 ವಿಕೆಟ್ ಕಳೆದುಕೊಂಡಿದ್ದಾಗ 5ನೇ ಕ್ರಮಾಂಕದಲ್ಲಿ ಕ್ರೀಸ್’ಗಿಳಿದಿದ್ದ ರಾಹುಲ್ ಕೊನೆಯವರೆಗೂ ಅಜೇಯವಾಗಿ ನಿಂತು 103 ಎಸೆತಗಳಲ್ಲಿ 6 ಬೌಂಡರಿಗಳ ನೆರವಿನಿಂದ ಅಜೇಯ 64 ರನ್ ಗಳಿಸಿ ಭಾರತವನ್ನು ಗೆಲುವಿನ ದಡ ಸೇರಿಸಿದ್ದರು. ರಾಹುಲ್ ಅವರ ಜವಾಬ್ದಾರಿಯುತ ಆಟದ ನೆರವಿನಿಂದ ಭಾರತ 43.2 ಓವರ್’ಗಳಲ್ಲಿ 6 ವಿಕೆಟ್ ನಷ್ಟಕ್ಕೆ 219 ರನ್ ಗಳಿಸಿ 4 ವಿಕೆಟ್’ಗಳ ಗೆಲುವಿನೊಂದಿಗೆ 3 ಪಂದ್ಯಗಳ ಏಕದಿನ ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿ ಸರಣಿ ಕೈವಶ ಮಾಡಿಕೊಂಡಿತ್ತು.

ಇದನ್ನೂ ಓದಿ : Exclusive Virat Kohli: ಭಾರತ ತಂಡದ ಜೊತೆ ಕೋಲ್ಕತ್ತಾಗೆ ಕಿಂಗ್ ಕೊಹ್ಲಿ ಬರಲಿಲ್ಲ.. ಅವಸರವಸರವಾಗಿ ಮುಂಬೈಗೆ ತೆರಳಿದ ವಿರಾಟ್, ಕಾರಣ ಏನು ಗೊತ್ತಾ?

ಇದನ್ನೂ ಓದಿ : Rohit Sharma Dasun Shanaka : ರನೌಟ್ ಅಪೀಲ್ ವಾಪಸ್ ಪಡೆದು ಶನಕ ಶತಕ ಬಾರಿಸಲು ನೆರವಾದ ಹೃದಯವಂತ ಹಿಟ್‌ಮ್ಯಾನ್

ಶ್ರೀಲಂಕಾ ವಿರುದ್ಧದ ದ್ವಿತೀಯ ಏಕದಿನ ಪಂದ್ಯ ಕನ್ನಡಿಗ ರಾಹುಲ್ ಪಾಲಿಗೆ 50ನೇ ಏಕದಿನ ಅಂತರಾಷ್ಟ್ರೀಯ ಪಂದ್ಯವಾಗಿತ್ತು. ಆ ಪಂದ್ಯವನ್ನು ಅಜೇಯ ಅರ್ಧಶತಕದೊಂದಿಗೆ ರಾಹುಲ್ ಸ್ಮರಣೀಯವಾಗಿಸಿಕೊಂಡಿದ್ದಾರೆ. ಅಷ್ಟೇ ಅಲ್ಲ, 24 ವರ್ಷಗಳ ಭಾರತ ಪರ 50 ಏಕದಿನ ಪಂದ್ಯಗಳನ್ನಾಡಿದ ಮೊದಲ ಕನ್ನಡಿಗನೆಂಬ ಹಿರಿಮೆಗೆ ರಾಹುಲ್ ಪಾತ್ರರಾಗಿದ್ದಾರೆ. 1999ರಲ್ಲಿ ಸ್ಪಿನ್ ಮಾಂತ್ರಿ ಸುನಿಲ್ ಜೋಶಿ ಭಾರತ ಪರ 50ನೇ ಏಕದಿನ ಪಂದ್ಯವಾಡಿದ್ದರು. ಆ ನಂತರ ಕರ್ನಾಟಕ ಯಾವೊಬ್ಬ ಆಟಗಾರನೂ ಏಕದಿನ ಅಂತರಾಷ್ಟ್ರೀಯ ಕ್ರಿಕೆಟ್’ನಲ್ಲಿ ಭಾರತ ಪರ 50 ಪಂದ್ಯಗನ್ನಾಡಿರಲಿಲ್ಲ.

ಇದನ್ನೂ ಓದಿ : Karnataka Team beat Rajasthan : ರಾಜಸ್ಥಾನವನ್ನು ಮೂರೇ ದಿನಗಳಲ್ಲಿ ಹೆಡಮುರಿ ಕಟ್ಟಿದ ಕನ್ನಡಿಗರು, ಹೊಸ ವರ್ಷ ಕರ್ನಾಟಕಕ್ಕೆ ಸತತ 2ನೇ ಜಯ

ಇದನ್ನೂ ಓದಿ : ರಣಜಿ ಟ್ರೋಫಿ ಮನೀಶ್ ಪಾಂಡೆಗೆ ಡಬಲ್ ಧಮಾಕ, 20ನೇ ಶತಕ, 6 ಸಾವಿರ ರನ್ ಗಡಿ ದಾಟಿದ ಪಾಂಡೆ

ಇದನ್ನೂ ಓದಿ : Prithvi Shaw : ರಣಜಿ ತ್ರಿಶತಕವೀರ ಪೃಥ್ವಿ ಶಾಗೆ ಟೀಮ್ ಇಂಡಿಯಾದಲ್ಲಿ ಏಕಿಲ್ಲ ಸ್ಥಾನ? ಅಸಲಿ ಗುಟ್ಟು ಇಲ್ಲಿ ರಟ್ಟು!

ಇದನ್ನೂ ಓದಿ : Virat Kohli vs Sachin Tendulkar : ದಿಗ್ಗಜರಲ್ಲಿ ಯಾರು ಗ್ರೇಟ್? “45 ಶತಕಗಳು ಸುಮ್ ಸುಮ್ನೆ ಬರಲ್ಲ”; ದಾದಾ ಬಿಗ್ ಸ್ಟೇಟ್ಮೆಂಟ್

KL Rahul 50 ODI matches : First Kannadigas to play 50 ODI matches for India after 24 years

Comments are closed.