KLRahul – Athiya Shetty Marriage : ದಕ್ಷಿಣ ಭಾರತ ಸಂಪ್ರದಾಯದಲ್ಲಿ ನಡೆಯಲಿದೆ ರಾಹುಲ್-ಆತಿಯಾ ಶೆಟ್ಟಿ ಮದುವೆ

ಮುಂಬೈ: ಟೀಮ್ ಇಂಡಿಯಾದ ವಿಕೆಟ್ ಕೀಪರ್ ಬ್ಯಾಟ್ಸ್’ಮನ್, ಕನ್ನಡಿಗ ಕೆ.ಎಲ್ ರಾಹುಲ್ ಮತ್ತು ಬಾಲಿವುಡ್ ತಾರೆ ಆತಿಯಾ ಶೆಟ್ಟಿ ಮದುವೆಗೆ (KL Rahul Athiya Shetty marriage) ಕ್ಷಣಗಣನೆ ಆರಂಭವಾಗಿದೆ. ಸ್ಟಾರ್ ಜೋಡಿಯ ಮದುವೆ ಜನವರಿ 22 ಮತ್ತು 23ರಂದು ಮುಂಬೈ-ಪುಣೆ ರಾಷ್ಟ್ರೀಯ ಹೆದ್ದಾರಿಯ ಖಂಡಾಲ ಬಳಿ ಇರುವ ಸುನಿಲ್ ಶೆಟ್ಟಿಯವರ ಫಾರ್ಮ್ ಹೌಸ್’ನಲ್ಲಿ ನಡೆಯಲಿದೆ. ಎರಡೂ ಕುಟುಂಬಗಳು ಈಗಾಗಲೇ ಮದುವೆ ತಯಾರಿಯಲ್ಲಿವೆ.

ರಾಹುಲ್-ಆತಿಯಾ ಶೆಟ್ಟಿ ಮದುವೆ ದಕ್ಷಿಣ ಭಾರತ ಸಂಪ್ರದಾಯದಲ್ಲಿ ನಡೆಯಲಿದೆ. ರಾಹುಲ್ ಮಂಗಳೂರು ಮೂಲದವರು. ಸುನಿಲ್ ಶೆಟ್ಟಿ ಕೂಡ ದಕ್ಷಿಣ ಕನ್ನಡ ಜಿಲ್ಲೆಯ ಮೂಲ್ಕಿಯವರು. ಹೀಗಾಗಿ ದಕ್ಷಿಣ ಭಾರತ ಸಂಪ್ರದಾಯದಲ್ಲಿ ಮದುವೆ ಮಾಡಲು ಎರಡೂ ಕುಟುಂಬಗಳು ನಿರ್ಧರಿಸಿವೆ.

ರಾಹುಲ್ ಮತ್ತು ಆತಿಯಾ ಶೆಟ್ಟಿ ಮದುವೆಗೆ ಎರಡೂ ಕುಟುಂಬಗಳ ಅತ್ಯಂತ ಹತ್ತಿರ ಸದಸ್ಯರನ್ನು ಮತ್ತು ಆಪ್ತ ಸ್ನೇಹಿತರನ್ನಷ್ಟೇ ಆಹ್ವಾನಿಸಲಾಗಿದೆ. ಇಂಟ್ರೆಸ್ಟಿಂಗ್ ಸಂಗತಿ ಏನಂದ್ರೆ ಬಾಲಿವುಡ್ ತಾರೆಗಳನ್ನು ಮದುವೆಗೆ ಆಹ್ವಾನಿಸಲಾಗಿದೆ. ಕುಟುಂಬ ಸದಸ್ಯರು ಮತ್ತು ಆಪ್ತ ಸ್ನೇಹಿತರ ಸಮ್ಮುಖದಲ್ಲಿ ರಾಹುಲ್ ಮತ್ತು ಆತಿಯಾ ಶೆಟ್ಟಿ ದಕ್ಷಿಣ ಭಾರತದ ಸಂಪ್ರದಾಯದಲ್ಲಿ ಸಪ್ತಪದಿ ತುಳಿಯಲಿದ್ದಾರೆ. ಬಾಲಿವುಡ್’ನ ಹಿರಿಯ ನಟ ಸುನಿಲ್ ಶೆಟ್ಟಿಯವರ ಪುತ್ರಿ ಆತಿಯಾ ಶೆಟ್ಟಿ ಮತ್ತು ಕೆ.ಎಲ್ ರಾಹುಲ್ ಕಳೆದ 4 ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದಾರೆ.

ಇದನ್ನೂ ಓದಿ : Yuvraj Singh – Shubman Gill : ದ್ವಿಶತಕ ವೀರ ಶುಭಮನ್ ಗಿಲ್‌ಗೆ ಯುವರಾಜನೇ ದ್ರೋಣಾಚಾರ್ಯ

ಇದನ್ನೂ ಓದಿ : Virat Kohli’s successor in Team India: ಟೀಮ್ ಇಂಡಿಯಾದಲ್ಲಿ ವಿರಾಟ್ ಕೊಹ್ಲಿ ಉತ್ತರಾಧಿಕಾರಿ ಇವನೇ..!

ಇದನ್ನೂ ಓದಿ : Shubman Gill double century: ಗಿಲ್ ಗಿಲ್ ಗಿಲ್ಲಕ್ಕು, ಶುಭಮನ್ ಗಿಲ್ ಡಬಲ್ ಸೆಂಚುರಿ ಕಿಕ್ಕು ; ಭರ್ಜರಿ ದ್ವಿಶತಕ ಸಿಡಿಸಿದ ಪಂಜಾಬ್ ಕಾ ಪುತ್ತರ್

ಇದನ್ನೂ ಓದಿ : Veda Krishnamurthy captain: ಮದುವೆಯ ಬೆನ್ನಲ್ಲೇ ಕ್ರಿಕೆಟ್ ಮೈದಾನಕ್ಕೆ ವೇದಾ ಕೃಷ್ಣಮೂರ್ತಿ, ಕರ್ನಾಟಕ ತಂಡಕ್ಕೆ ವೇದಾ ನಾಯಕಿ

ಶ್ರೀಲಂಕಾ ವಿರುದ್ಧದ 3 ಪಂದ್ಯಗಳ ಏಕದಿನ ಸರಣಿಯಲ್ಲಿ ಆಡಿದ್ದ ಕೆ.ಎಲ್ ರಾಹುಲ್ ಮದುವೆಯ ಕಾರಣ ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಯಿಂದ ಹೊರಗುಳಿದಿದ್ದಾರೆ. ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧದ 4 ಪಂದ್ಯಗಳ ಟೆಸ್ಟ್ ಸರಣಿಯ ಮೂಲಕ ರಾಹುಲ್ ಮತ್ತೆ ಟೀಮ್ ಇಂಡಿಯಾಗೆ ಕಂಬ್ಯಾಕ್ ಮಾಡಲಿದ್ದಾರೆ. ಆಸೀಸ್ ವಿರುದ್ಧದ ಮೊದಲೆರಡು ಟೆಸ್ಟ್ ಪಂದ್ಯಗಳಿಗೆ ಈಗಾಗ್ಲೇ ಟೀಮ್ ಇಂಡಿಯಾವನ್ನು ಆಯ್ಕೆ ಮಾಡಲಾಗಿದ್ದು, ರಾಹುಲ್ ಉಪನಾಯಕನಾಗಿ ಮುಂದುವರಿದಿದ್ದಾರೆ.

ಇದನ್ನೂ ಓದಿ : Virat Kohli century Gift: ಕೊಹ್ಲಿ ಶತಕ ಬಾರಿಸುವವರೆಗೆ ಮದುವೆಯಾಗದಿರುವ ಶಪಥ, ಅಭಿಮಾನಿಯ ಮದುವೆಗೆ ಶತಕದ ಉಡುಗೊರೆ ಕೊಟ್ಟ ವಿರಾಟ್

KL Rahul – Athiya Shetty marriage will be held in South Indian tradition

Comments are closed.