KL Rahul – Mayank Agarwal : ಆಸೀಸ್ ವಿರುದ್ಧ ಕೆ.ಎಲ್ ರಾಹುಲ್ ಮತ್ತೆ ಫೇಲ್, ಗೆಳೆಯನ ಸ್ಥಾನವನ್ನು ಆಕ್ರಮಿಸಿಕೊಳ್ತಾರಾ ಮತ್ತೊಬ್ಬ ಕನ್ನಡಿಗ?

ನವದೆಹಲಿ : ಟೆಸ್ಟ್ ಕ್ರಿಕೆಟ್’ನಲ್ಲಿ ಕನ್ನಡಿಗ ಕೆ.ಎಲ್ ರಾಹುಲ್ ಅವರ ವೈಫಲ್ಯ (KL Rahul – Mayank Agarwal) ಮುಂದುವರಿದಿದೆ. ದೆಹಲಿಯ ಫಿರೋಜ್ ಶಾ ಕೋಟ್ಲಾ ಮೈದಾನದಲ್ಲಿ ನಡೆಯುತ್ತಿರುವ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ (India vs Australia Border-Gavaskar test series) 2ನೇ ಪಂದ್ಯದಲ್ಲಿ ರಾಹುಲ್ ಪ್ರಥಮ ಇನ್ನಿಂಗ್ಸ್‌ನಲ್ಲಿ ಕೇವಲ 17 ರನ್ ಗಳಿಸಿ ಔಟಾಗಿದ್ದಾರೆ. ನಾಗ್ಪುರದಲ್ಲಿ ನಡೆದ ಪ್ರಥಮ ಟೆಸ್ಟ್ ಪಂದ್ಯದಲ್ಲಿ 20 ರನ್ ಗಳಿಸಿ ಔಟಾಗಿದ್ದ ರಾಹುಲ್, ದ್ವಿತೀಯ ಟೆಸ್ಟ್’ನಲ್ಲೂ ಎಡವಿದ್ದಾರೆ. 41 ಎಸೆತಗಳನ್ನೆದುರಿಸಿದ ರಾಹುಲ್ 1 ಸಿಕ್ಸರ್ ಸಹಿತ 17 ರನ್ ಗಳಿಸಿ ಆಫ್’ಸ್ಪಿನ್ನರ್ ನೇಥನ್ ಲಯಾನ್ ದಾಳಿಯಲ್ಲಿ ಎಲ್ಬಿಡಬ್ಲ್ಯೂ ಬಲೆಗೆ ಬಿದ್ದು ಔಟಾದರು.

2021ರಲ್ಲಿ ದಕ್ಷಣ ಆಫ್ರಿಕಾ ವಿರುದ್ಧ ಸೆಂಚುರಿಯನ್’ನಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ಆಕರ್ಷಕ ಶತಕ (123) ಬಾರಿಸಿದ್ದ ರಾಹುಲ್, ನಂತರದ 11 ಇನ್ನಿಂಗ್ಸ್’ಗಳಲ್ಲಿ ಕೇವಲ ಒಂದು ಅರ್ಧಶತಕವನ್ನಷ್ಟೇ ಗಳಿಸಲು ಶಕ್ತರಾಗಿದ್ದಾರೆ. ಹೀಗಾಗಿ ಆಸ್ಟ್ರೇಲಿಯಾ ವಿರುದ್ಧದ 3 ಹಾಗೂ 4ನೇ ಟೆಸ್ಟ್ ಪಂದ್ಯಕ್ಕೆ ರಾಹುಲ್ ಟೀಮ್ ಇಂಡಿಯಾದಲ್ಲಿ ಸ್ಥಾನ ಕಳೆದುಕೊಳ್ಳುವ ಸಾಧ್ಯತೆಯಿದೆ. ಟೆಸ್ಟ್ ತಂಡದ ಉಪನಾಯಕರೂ ಆಗಿರುವ ರಾಹುಲ್ ಬದಲು ಯುವ ಬ್ಯಾಟ್ಸ್’ಮನ್ ಶುಭಮನ್ ಗಿಲ್ (Shubman Gill) ಆಡುವ ಬಳಗದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಯಿದೆ.

ಕಳಪೆ ಫಾರ್ಮ್’ನಲ್ಲಿರುವ ರಾಹುಲ್ ಸ್ಥಾನದಲ್ಲಿ ಕರ್ನಾಟಕದ ಮತ್ತೊಬ್ಬ ಓಪನರ್ ಮಯಾಂಕ್ ಅಗರ್ವಾಲ್ (Mayank Agarwal) ಸ್ಥಾನ ಪಡೆಯುವ ಸಾಧ್ಯತೆಗಳಿವೆ. ಪ್ರಸಕ್ತ ಸಾಲಿನ ರಣಜಿ ಟ್ರೋಫಿ ಟೂರ್ನಿಯಲ್ಲಿ ಅಮೋಘ ಪ್ರದರ್ಶನ ತೋರಿರುವ ಮಯಾಂಕ್ ಅಗರ್ವಾಲ್ ಆಡಿದ 9 ಪಂದ್ಯಗಳಿಂದ 990 ರನ್ ಕಲೆ ಹಾಕಿದ್ದರು. ಎರಡು ದ್ವಿಶತಕಗಳನ್ನೂ ಬಾರಿಸಿದ್ದ ಮಯಾಂಕ್, ಒಟ್ಟು 3 ಶತಕ ಹಾಗೂ 6 ಅರ್ಧಶತಕಗಳೊಂದಿಗೆ ಅಬ್ಬರಿಸಿದ್ದರು.

ಇದನ್ನೂ ಓದಿ : Smriti Mandhana RCB captain : ಮಹಿಳಾ ಪ್ರೀಮಿಯರ್ ಲೀಗ್: ರಾಯಲ್ ಚಾಲೆಂಜರ್ಸ್ ತಂಡದ ನಾಯಕಿಯ ಹೆಸರನ್ನು ಘೋಷಿಸಿದ ವಿರಾಟ್ ಕೊಹ್ಲಿ

ಇದನ್ನೂ ಓದಿ : Sandeep Lamichhane : ಅತ್ಯಾಚಾರ ಆರೋಪಿ ಸಂದೀಪ್ ಲಾಮಿಚಾನೆ ಕೈಕುಲುಕಲು ನಿರಾಕರಿಸಿದ ಸ್ಕಾಟ್ಲೆಂಡ್ ಆಟಗಾರರು

ಇದನ್ನೂ ಓದಿ : Usman Khawaja : ಅಶ್ವಿನ್‌ಗೆ ಹಿಂದಿಯಲ್ಲಿ ಕೊಹ್ಲಿ ಸೀಕ್ರೆಟ್ ಮೆಸೇಜ್; “ನನಗೂ ಹಿಂದಿ ಬರತ್ತೆ” ಅಂದ ಆಸೀಸ್ ಆಟಗಾರ

82.50ರ ಸರಾಸರಿಯಲ್ಲಿ ರನ್ ಗಳಿಸಿದ್ದ ಮಯಾಂಕ್ ಬಿಸಿಸಿಐ ಆಯ್ಕೆ ಸಮಿತಿಗೆ ಈಗಾಗಲೇ ಸ್ಟ್ರಾಂಗ್ ಮೆಸೇಜ್ ಕಳುಹಿಸಿದ್ದಾರೆ. ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ಮುಂದಿನ ಪಂದ್ಯಗಳಿಗೆ ಒಂದು ವೇಳೆ ರಾಹುಲ್ ಅವರನ್ನು ತಂಡದಿಂದ ಕೈಬಿಟ್ಟರೆ, ಆ ಸ್ಥಾನದಲ್ಲಿ ಮಯಾಂಕ್ ಅಗರ್ವಾಲ್ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ.

KL Rahul – Mayank Agarwal: KL Rahul fails again against Aussies, will another Kannadigas take his friend’s place?

Comments are closed.