Sandeep Lamichhane : ಅತ್ಯಾಚಾರ ಆರೋಪಿ ಸಂದೀಪ್ ಲಾಮಿಚಾನೆ ಕೈಕುಲುಕಲು ನಿರಾಕರಿಸಿದ ಸ್ಕಾಟ್ಲೆಂಡ್ ಆಟಗಾರರು

ಕೀರ್ತಿಪುರ (ನೇಪಾಳ) : ಅತ್ಯಾಚಾರದ ಆರೋಪ ಎದುರಿಸುತ್ತಿರುವ ನೇಪಾಳ ಕ್ರಿಕೆಟ್ ತಂಡದ (Nepal Cricket Team) ಆಟಗಾರ ಸಂದೀಪ್ ಲಾಮಿಚಾನೆಗೆ (Sandeep Lamichhane) ಕ್ರಿಕೆಟ್ ಪಂದ್ಯವೊಂದರ ವೇಳೆ ಭಾರೀ ಮುಜುಗರ ಎದುರಾಗಿದೆ. ಅತ್ಯಾಚಾರ ಆರೋಪಿ ಸಂದೀಪ್ ಲಾಮಿಚಾನೆ (Sandeep Lamichhane Rape Case) ಅವರ ಕೈಕುಲುಕಲು ಸ್ಕಾಟ್ಲೆಂಡ್ ತಂಡದ ಆಟಗಾರರು ನಿರಾಕರಿಸಿದ್ದಾರೆ. ನೇಪಾಳದ ಕೀರ್ತಿಪುರದಲ್ಲಿರುವ ತ್ರಿಭುವನ್ ಯೂನಿವರ್ಸಿಟಿ ಇಂಟರ್’ನ್ಯಾಷನಲ್ ಕ್ರಿಕೆಟ್ ಗ್ರೌಂಡ್’ನಲ್ಲಿ ಶುಕ್ರವಾರ ನಡೆದ ಪಂದ್ಯದ ವೇಳೆ ಈ ಘಟನೆ ನಡೆದಿದೆ.

ಐಸಿಸಿ ಕ್ರಿಕೆಟ್ ವಿಶ್ವಕಪ್ ಲೀಗ್ 2 ಸಿರೀಸ್’ನ ಪಂದ್ಯದಲ್ಲಿ ನೇಪಾಳ ಹಾಗೂ ಸ್ಕಾಟ್ಲೆಂಡ್ ತಂಡಗಳು ಮುಖಾಮುಖಿಯಾಗಿದ್ದವು. ಆ ಪಂದ್ಯದಲ್ಲಿ ನೇಪಾಳ 3 ವಿಕೆಟ್’ಗಳ ರೋಚಕ ಗೆಲುವು ಸಾಧಿಸಿತ್ತು. ಬೌಲಿಂಗ್’ನಲ್ಲಿ ಮಿಂಚಿದ್ದ ಸಂದೀಪ್ ಲಾಮಿಚಾನೆ 10 ಓವರ್’ಗಳಲ್ಲಿ 27 ರನ್ನಿತ್ತು 3 ವಿಕೆಟ್ ಕಬಳಿಸಿದ್ದರು. ಪಂದ್ಯ ನಂತರ ಸ್ಕಾಟ್ಲೆಂಡ್ ತಂಡದ ಆಟಗಾರರು ನೇಪಾಳ ತಂಡದ ಎಲ್ಲಾ ಆಟಗಾರರ ಕೈಕುಲುಕಿ ಗೆಲುವಿಗೆ ಅಭಿನಂದಿಸಿದ್ದರು. ಆದರೆ ಸಂದೀಪ್ ಲಾಮಿಚಾನೆ ಕೈಕುಲುಕಲು ನಿರಾಕರಿಸಿದ್ದು, ಈ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಲಿಂಗ ಆಧಾರಿತ ಹಿಂಸಾಚಾರದ ವಿರುದ್ಧ ಪ್ರಬಲ ಹೇಳಿಕೆ ನೀಡಿರುವ ಕ್ರಿಕೆಟಿಗನೊಬ್ಬ ತ್ರಿಕೋನ ಸರಣಿಯಲ್ಲಿ ಭಾಗವಹಿಸುತ್ತಿರುವುದಕ್ಕೆ ನಮೀಬಿಯಾ ಮತ್ತು ಸ್ಕಾಟ್ಲೆಂಡ್ ಅಸಮಾಧಾನ ವ್ಯಕ್ತಪಡಿಸಿವೆ. ಇದೇ ಕಾರಣದಿಂದ ಸಂದೀಪ್ ಲಾಮಿಚಾನೆ ಅವರ ಕೈಕುಲುಕಲು ಸ್ಕಾಟ್ಲೆಂಡ್ ಆಟಗಾರರು ನಿರಾಕರಿಸಿದ್ದಾರೆ.

ಇದನ್ನೂ ಓದಿ : Smriti Mandhana RCB captain : ಮಹಿಳಾ ಪ್ರೀಮಿಯರ್ ಲೀಗ್: ರಾಯಲ್ ಚಾಲೆಂಜರ್ಸ್ ತಂಡದ ನಾಯಕಿಯ ಹೆಸರನ್ನು ಘೋಷಿಸಿದ ವಿರಾಟ್ ಕೊಹ್ಲಿ

ಇದನ್ನೂ ಓದಿ : Usman Khawaja : ಅಶ್ವಿನ್‌ಗೆ ಹಿಂದಿಯಲ್ಲಿ ಕೊಹ್ಲಿ ಸೀಕ್ರೆಟ್ ಮೆಸೇಜ್; “ನನಗೂ ಹಿಂದಿ ಬರತ್ತೆ” ಅಂದ ಆಸೀಸ್ ಆಟಗಾರ

ಇದನ್ನೂ ಓದಿ : IPL 2023 fixtures: ರಾಯಲ್ ಚಾಲೆಂಜರ್ಸ್‌ಗೆ ಮುಂಬೈ ಇಂಡಿಯನ್ಸ್ ಮೊದಲ ಎದುರಾಳಿ; ಇಲ್ಲಿದೆ ಆರ್‌ಸಿಬಿ ಪಂದ್ಯಗಳ ಕಂಪ್ಲೀಟ್ ಡೀಟೇಲ್ಸ್

22 ವರ್ಷದ ಸಂದೀಪ್ ಲಾಮಿಚಾನೆ ನೇಪಾಳದಲ್ಲಿ ಯುವತಿಯೊಬ್ಬಳ ಮೇಲೆ ಅತ್ಯಾಚಾರ ನಡೆಸಿದ ಆರೋಪ ಎದುರಿಸುತ್ತಿದ್ದಾರೆ. ಕಳೆದ ವರ್ಷದ ಸೆಪ್ಟೆಂಬರ್’ನಲ್ಲಿ ಸಂದೀಪ್ ಲಾಮಿಚಾನೆ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಾಗಿತ್ತು. ಪ್ರಕರಣದಲ್ಲಿ ಲಾಮಿಚಾನೆ ಬಂಧನಕ್ಕೊಳಗಾಗಿ ಜಾಮೀನಿನ ಮೇಲೆ ಹೊರಗಿದ್ದಾರೆ. ಅತ್ಯಾಚಾರ ಪ್ರಕರಣ ದಾಖಲಾಗುತ್ತಿದ್ದಂತೆ ಸಂದೀಪ್ ಲಾಮಿಚಾನೆ ಅವರ ಮೇಲೆ ನೇಪಾಳ ಕ್ರಿಕೆಟ್ ಸಂಸ್ಥೆ ನಿಷೇಧ ಹೇರಿತ್ತು. ಇದೀಗ ನಿಷೇಧವನ್ನು ಹಿಂಪಡೆದಿರುವ ನೇಪಾಳ ಕ್ರಿಕೆಟ್ ಮಂಡಳಿ, ಸಂದೀಪ್ ಲಾಮಿಚಾನೆ ಅವರಿಗೆ ನೇಪಾಳ ರಾಷ್ಟ್ರೀಯ ತಂಡದಲ್ಲಿ ಮತ್ತೆ ಸ್ಥಾನ ನೀಡಿದೆ.

Sandeep Lamichhane Rape Case : Scotland players refused to shake hands with rape accused Sandeep Lamichhane

Comments are closed.