ಟೀಂ ಇಂಡಿಯಾ ಸದ್ಯ ವಿಶ್ವಕಪ್‌ನಲ್ಲಿ (World Cup 2023) ಭರ್ಜರಿ ಪ್ರದರ್ಶನವನ್ನು ನೀಡುತ್ತಿದೆ. ಬ್ಯಾಟಿಂಗ್, ಬೌಲಿಂಗ್‌ನಲ್ಲಿಯೂ ಆಟಗಾರರು ಮಿಂಚು ಹರಿಸುತ್ತಿದ್ದಾರೆ. ಈ ನಡುವಲ್ಲೇ ಕನ್ನಡಿಗ ಕೆಎಲ್ ರಾಹುಲ್‌ಗೆ (KL Rahul ) ಮುಂದಿನ ಪಂದ್ಯದ ವೇಳೆಗೆ ಲಕ್ ಖುಲಾಯಿಸುವ ಸಾಧ್ಯತೆಯಿದ್ದು, ಮತ್ತೆ ಟೀಂ ಇಂಡಿಯಾದ ಉಪನಾಯಕ ಆಗಲಿದ್ದಾರೆ.
ಭಾರತ ಹಾಗೂ ಬಾಂಗ್ಲಾದೇಶ ವಿರುದ್ದದ ಪಂದ್ಯದ ವೇಳೆಯಲ್ಲಿ ಭಾರತ ತಂಡದ ಖ್ಯಾತ ಆಲ್‌ರೌಂಡರ್ ಹಾರ್ದಿಕ್ ಪಾಂದ್ಯ ಗಾಯಗೊಂಡಿದ್ದಾರೆ. ಮುಂದಿನ ಭಾರತ ಹಾಗೂ ನ್ಯೂಜಿಲೆಂಡ್ ವಿರುದ್ದ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ಕಣಕ್ಕೆ ಇಳಿಯುವುದು ಅನುಮಾನ.

ಹಾರ್ದಿಕ್ ಪಾಂಡ್ಯ ಅನುಪಸ್ಥಿತಿಯಲ್ಲಿ ಯಾರು ತಂಡಕ್ಕೆ ಎಂಟ್ರಿ ಕೊಡ್ತಾರೆ ಅನ್ನೋ ಕುತೂಹಲ ಒಂದೆಡೆಯಾದ್ರೆ, ಇನ್ನೊಂದೆಡೆಯಲ್ಲಿ ಟೀಂ ಇಂಡಿಯಾದ ಉಪನಾಯಕ ಯಾರು ಆಗ್ತಾರೆ ಅನ್ನುವ ಕುರಿತ ಚರ್ಚೆಯು ಶುರುವಾಗಿದೆ. ಸದ್ಯ ಟೀಂ ಇಂಡಿಯಾದ ಉಪನಾಯಕನ ಹುದ್ದೆಗೆ ಕನ್ನಡಿಗ ಕೆಎಲ್ ರಾಹುಲ್ ಹೆಸರು ಕೇಳಿಬಂದಿದೆ.
ಇದನ್ನೂ ಓದಿ : ಭಾರತ-ಪಾಕಿಸ್ತಾನ ವಿಶ್ವಕಪ್ ಪಂದ್ಯ : 3.5 ಕೋಟಿ Realtime ವೀಕ್ಷಣೆ : ಜಾಗತಿಕ ಸ್ಟ್ರೀಮಿಂಗ್ ದಾಖಲೆ ಬರೆದ ಡಿಸ್ನಿ ಹಾಟ್‌ಸ್ಟಾರ್
ಈ ಹಿಂದೆ ಕೆಎಲ್ ರಾಹುಲ್ ಭಾರತ ಕ್ರಿಕೆಟ್ ತಂಡದ ನಾಯಕನಾಗಿದ್ದರು. ಆದರೆ ಗಾಯದ ಸಮಸ್ಯೆಯಿಂದಾಗಿ ರಾಹುಲ್ ತಂಡದಿಂದ ಹೊರ ನಡೆದ ಬೆನ್ನಲ್ಲೇ ಅವರನ್ನು ಉಪನಾಯಕ ಸ್ಥಾನದಿಂದ ತೆಗೆಯಲಾಗಿತ್ತು. ಐಪಿಎಲ್ ಬೆನ್ನಲ್ಲೇ ಹಾರ್ದಿಕ್ ಪಾಂಡ್ಯ ಅವರನ್ನು ಉಪನಾಯಕನನ್ನಾಗಿ ನೇಮಿಸಲಾಗಿದೆ.
ಹಾರ್ದಿಕ್ ಪಾಂಡ್ಯ ಹಲವು ಸರಣಿಯಲ್ಲಿಯೂ ಭಾರತ ತಂಡವನ್ನ ನಾಯಕನಾಗಿಯೂ ಮುನ್ನೆಡೆಸಿದ್ದರು. ಇದೀಗ ಭಾರತದ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಪಾದದ ಗಾಯದಿಂದಾಗಿ ವಿಶ್ವಕಪ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧದ ಮುಂದಿನ ಪಂದ್ಯವನ್ನು ಕಳೆದುಕೊಳ್ಳಲಿದ್ದಾರೆ.
ಇದನ್ನೂ ಓದಿ : ಪಾಕಿಸ್ತಾನದ ವಿರುದ್ದ ಕೊನೆಗೂ ಕಣಕ್ಕಿಳಿದ ಶುಭಮನ್ ಗಿಲ್ : ಡೆಂಗ್ಯೂ ಗೆಲುವಿನ ಹಿಂದಿದೆ ಗಿಲ್ ರೋಚಕ ಸ್ಟೋರಿ
ಸದ್ಯ ಹಾರ್ದಿಕ್ ಪಾಂದ್ಯ ಗಾಯದ ಬೆನ್ನಲ್ಲೇ ಬೆಂಗಳೂರಿನಲ್ಲಿರುವ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಗೆ ಆಗಮಿಸಿದ್ದು, ಚಿಕಿತ್ಸೆಯನ್ನು ಪಡೆದುಕೊಳ್ಳುತ್ತಿದ್ದಾರೆ. ಹಾರ್ದಿಕ್ ಪಾಂಡ್ಯ ಅವರ ಆರೋಗ್ಯದ ಲೆಕ್ಕಚಾರದ ರಾಹುಲ್ ಅವರ ಭವಿಷ್ಯ ನಿರ್ಧಾರವಾಗಲಿದೆ.

ಅಕ್ಟೋಬರ್ 22 ರಂದು ಧರ್ಮಶಾಲಾದಲ್ಲಿ ನ್ಯೂಜಿಲೆಂಡ್ ವಿರುದ್ಧ ಭಾರತ ವಿಶ್ವಕಪ್ ಪಂದ್ಯವನ್ನು ಆಡಬೇಕಾಗಿದೆ. ಬಿಸಿಸಿಐ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ, ‘ಟೀಂ ಇಂಡಿಯಾದ ಉಪನಾಯಕ ಹಾರ್ದಿಕ್ ಪಾಂಡ್ಯ ಬಾಂಗ್ಲಾದೇಶ ವಿರುದ್ಧ ಫೀಲ್ಡಿಂಗ್ ಮಾಡುವಾಗ ಎಡ ಪಾದದ ಗಾಯಕ್ಕೆ ಒಳಗಾಗಿದ್ದಾರೆ. ಸ್ಕ್ಯಾನ್ ಮಾಡಲಾಗಿದ್ದು, ವಿಶ್ರಾಂತಿ ಪಡೆಯಲು ಸೂಚಿಸಲಾಗಿದೆ.
ಇದನ್ನೂ ಓದಿ : ಶತಕದಲ್ಲೇ ವಿಶ್ವದಾಖಲೆ ಬರೆದ ವಿರಾಟ್ ಕೊಹ್ಲಿ : ಸಚಿನ್ ದಾಖಲೆ ಸರಿಗಟ್ಟುತ್ತಾರಾ ಕಿಂಗ್ ಕೊಹ್ಲಿ
ಭಾನುವಾರ ನಡೆಯಲಿರುವ ನ್ಯೂಜಿಲೆಂಡ್ ವಿರುದ್ದದ ಪಂದ್ಯಕ್ಕೂ ಮೊದಲೇ ಹಾರ್ದಿಕ್ ಪಂಡ್ಯ ಅವರ ಗಾಯದ ಕುರಿತು ಮಾಗಹಿತಿ ಲಭಿಸಲಿದೆ. ಬಿಸಿಸಿಐ ಅಧಿಕಾರಿಗಳು ಹಾರ್ದಿಕ್ ಪಾಂಡ್ಯ ಆರೋಗ್ಯದ ಮೇಲೆ ನಿಗಾ ಇರಿಸಿದ್ದಾರೆ.
ಭಾರತ ತನ್ನ ಮುಂದಿನ ಪಂದ್ಯವನ್ನು ನ್ಯೂಜಿಲೆಂಡ್ ವಿರುದ್ದ ಆಡಲಿದೆ. ಆದರೆ ಈ ಪಂದ್ಯವನ್ನು ಹಾರ್ದಿಕ್ ಪಾಂಡ್ಯ ಮಿಸ್ ಮಾಡಿಕೊಳ್ಳುವುದು ಖಚಿತ. ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ ತಂಡ ಆಡಿದ ನಾಲ್ಕು ಪಂದ್ಯಗಳಲ್ಲಿಯೂ ಗೆಲುವು ದಾಖಲಿಸಿದ್ದು, ಸೆಮಿಫೈನಲ್ ಪ್ರವೇಶಿಸುವುದು ಬಹುತೇಕ ಖಚಿತ.
KL Rahul vice-captain for Indian team Hardik Pandya out of World Cup 2023