KL Rahul visits SG cricket factory: ಕೈಕೊಟ್ಟ ಬ್ಯಾಟಿಂಗ್ ಫಾರ್ಮ್, ಎಸ್‌ಜಿ ಕ್ರಿಕೆಟ್ ಫ್ಯಾಕ್ಟರಿಗೆ ಭೇಟಿ ಕೊಟ್ಟ ಕನ್ನಡಿಗ ಕೆ.ಎಲ್ ರಾಹುಲ್

ಮುಂಬೈ: ಬ್ಯಾಟಿಂಗ್ ಫಾರ್ಮ್ ಕಳೆದುಕೊಂಡಿರುವ ಕನ್ನಡಿಗ ಕೆ.ಎಲ್ ರಾಹುಲ್ ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯ (India Vs Australia Border-Gavaskar test series) ನಡುವೆಯೇ ಎಸ್’ಜಿ ಕ್ರಿಕೆಟ್ ಫ್ಯಾಕ್ಟರಿಗೆ (KL Rahul visits SG cricket factory) ಭೇಟಿ ಕೊಟ್ಟಿದ್ದಾರೆ. ದೆಹಲಿಯ ಫಿರೋಜ್ ಶಾ ಕೋಟ್ಲಾ ಮೈದಾನದಲ್ಲಿ ನಡೆದ 2ನೇ ಟೆಸ್ಟ್ ಪಂದ್ಯ ಅಂತ್ಯಗೊಂಡ ಬೆನ್ನಲ್ಲೇ ಸೋಮವಾರ ಎಸ್’ಜಿ ಕ್ರಿಕೆಟ್ ಫ್ಯಾಕ್ಟರಿಗೆ ರಾಹುಲ್ ಭೇಟಿ ನೀಡಿದ್ದಾರೆ.

ಎಸ್’ಜಿ ಕಂಪನಿ ರಾಹುಲ್ ಅವರ ಬ್ಯಾಟ್ ಹಾಗೂ ಕ್ರಿಕೆಟ್ ಕಿಟ್ ಪ್ರಾಯೋಜಕತ್ವ ಹೊಂದಿದೆ. ಈ ಹಿನ್ನೆಲೆಯಲ್ಲಿ ಎಸ್’ಜಿ ಕ್ರಿಕೆಟ್ ಫ್ಯಾಕ್ಟರಿಗೆ ರಾಹುಲ್ ಭೇಟಿ ಕೊಟ್ಟು ಕಂಪನಿಯ ಸಹ ಮಾಲೀಕ ಪರಾಸ್ ಆನಂದ್ ಅವರನ್ನು ಭೇಟಿ ಮಾಡಿದ್ದಾರೆ. ರಾಹುಲ್ ಅವರ ಭೇಟಿಯ ಚಿತ್ರಗಳನ್ನು ಎಸ್’ಜಿ ಕ್ರಿಕೆಟ್ ಫ್ಯಾಕ್ಟರಿ ತನ್ನ ಇನ್’ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದೆ.

https://www.instagram.com/reel/Co7KiP5g9zP/?utm_source=ig_web_copy_link

ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ಮೊದಲ ಎರಡೂ ಪಂದ್ಯಗಳಲ್ಲಿ ಕೆ.ಎಲ್ ರಾಹುಲ್ (KL Rahul) ಮುಗ್ಗರಿಸಿದ್ದಾರೆ. ಆಸೀಸ್ ವಿರುದ್ಧ ಟೆಸ್ಟ್ ಸರಣಿಯಲ್ಲಿ ಆಡಿರುವ 3 ಇನ್ನಿಂಗ್ಸ್’ಗಳಿಂದ ರಾಹುಲ್ ಕೇವಲ 38 ರನ್ (20, 1, 17) ಗಳಿಸಿದ್ದಾರೆ. ವೈಫಲ್ಯದ ನಡುವೆಯೂ ರಾಹುಲ್ ಅವರ ಸಾಮರ್ಥ್ಯದ ಮೇಲೆ ಟೀಮ್ ಮ್ಯಾನೇಜ್ಮೆಂಟ್ ನಂಬಿಕೆಯಿಟ್ಟಿದ್ದು ಅಂತಿಮ ಎರಡು ಟೆಸ್ಟ್ ಪಂದ್ಯಗಳಿಗೆ ಕನ್ನಡಿಗನನ್ನು ತಂಡದಲ್ಲಿ ಉಳಿಸಿಕೊಂಡಿದೆ. ಆದರೆ ಉಪನಾಯಕನ ಪಟ್ಟದಿಂದ ರಾಹುಲ್ ಅವರನ್ನು ಕೆಳಗಿಳಿಸಲಾಗಿದೆ. ಇದು 3ನೇ ಟೆಸ್ಟ್ ಪಂದ್ಯದಲ್ಲಿ ರಾಹುಲ್ ಆಡುವ ಬಳಗದಲ್ಲಿ ಸ್ಥಾನ ಕಳೆದುಕೊಳ್ಳಲಿದ್ದಾರೆ ಎಂಬುದರ ಸ್ಪಷ್ಟ ಸೂಚನೆ. ಕಳೆದ ಬಾಂಗ್ಲಾದೇಶ ವಿರುದ್ಧದ 3 ಪಂದ್ಯಗಳ ಟೆಸ್ಟ್ ಸರಣಿಯಲ್ಲೂ ರಾಹುಲ್ ವೈಫಲ್ಯ ಎದುರಿಸಿದ್ದರು.

ಇದನ್ನೂ ಓದಿ : Jersey Sponsor for Team India: ಟೀಮ್ ಇಂಡಿಯಾಗೆ ಸಿಕ್ತು ಹೊಸ ಜರ್ಸಿ ಸ್ಪಾನ್ಸರ್, ಅಡಿಡಾಸ್ ಜೊತೆ 5 ವರ್ಷಗಳ ಒಪ್ಪಂದ

ಇದನ್ನೂ ಓದಿ : KL Rahul Harbhajan Singh: “ರಾಹುಲ್ ಯಾವುದೇ ಅಪರಾಧ ಎಸಗಿಲ್ಲ” ಕನ್ನಡಿಗನ ವಿರುದ್ಧ ದ್ವೇಷ ಕಾರುತ್ತಿರುವ ವೆಂಕಿಗೆ ಟರ್ಬನೇಟರ್ ತಪರಾಕಿ

ಇದನ್ನೂ ಓದಿ : Suryakumar Yadav Visit Tirupati Thimmappa : ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯಿಂದ 6 ದಿನಗಳ ಬ್ರೇಕ್, ತಿರುಪತಿ ತಿಮ್ಮಪ್ಪನ ದರ್ಶನ ಪಡೆದ ಸೂರ್ಯಕುಮಾರ್ ಯಾದವ್

ಭಾರತ ಮತ್ತು ಆಸೀಸ್ ನಡುವಿನ 3ನೇ ಟೆಸ್ಟ್ ಪಂದ್ಯ ಮಾರ್ಚ್ 1ರಂದು ಮಧ್ಯಪ್ರದೇಶದ ಇಂದೋರ್’ನಲ್ಲಿರುವ ಹೋಳ್ಕರ್ ಕ್ರಿಕೆಟ್ ಮೈದಾನದಲ್ಲಿ ಆರಂಭವಾಗಲಿದೆ. ನಾಗ್ಪುರ ಮತ್ತು ದೆಹಲಿಯಲ್ಲಿ ನಡೆದ ಮೊದಲೆರಡು ಟೆಸ್ಟ್ ಪಂದ್ಯಗಳನ್ನು ಸುಲಭವಾಗಿ ಗೆದ್ದಿರುವ ಟೀಮ್ ಇಂಡಿಯಾ, ಈಗಾಗಲೇ ಸರಣಿಯಲ್ಲಿ 2-0 ಅಂತರದಲ್ಲಿ ಮುನ್ನಡೆಯಲ್ಲಿದೆ.

KL Rahul visits SG cricket factory: Kannadigas KL Rahul visits SG cricket factory after hand-picked batting farm

Comments are closed.