Couple died: ಆರತಕ್ಷತೆಗೂ ಮೊದಲೇ ಹೆಣವಾದ ನವದಂಪತಿಗಳು

ಛತ್ತೀಸ್‌ ಗಢ: (Couple died) ಮೂರು ದಿನಗಳ ಹಿಂದಷ್ಟೇ ಮದುವೆಯಾಗಿದ್ದ ನವದಂಪತಿಗಳು ಆರತಕ್ಷತೆಗೂ ಮೊದಲೇ ಶವವಾಗಿ ಪತ್ತೆಯಾಗಿರುವ ಘೋರ ದುರಂತ ಛತ್ತೀಸ್‌ ಗಢದ ರಾಜಧಾನಿ ರಾಯಪುರದಲ್ಲಿ ನಡೆದಿದೆ. ದಂಪತಿಗಳ ದೇಹದ ಮೇಲೆ ಚಾಕುವಿನಿಂದ ಇರಿದ ಗಾಯದ ಗುರುತುಗಳಿರುವುದು ಪತ್ತೆಯಾಗಿದೆ.

ರಾಯ್ಪುರದಲ್ಲಿನ ಟಿಕಾರಪಾರಾ ಪೊಲೀಸ್‌ ಠಾಣೆ ವ್ಯಾಪ್ತಿಯ ಬ್ರಿಜ್‌ ನಗರದಲ್ಲಿ ಈ ಘಟನೆ ನಡೆದಿದ್ದು, ಫೆ. 19 ರಂದು ವಿವಾಹವಾಗಿದ್ದ 24 ವರ್ಷದ ಅಸ್ಲಾಂ ಹಾಗೂ ೨೨ ವರ್ಷದ ಕಾಕಶಾ ಭಾನು ಹತ್ಯೆಯಾಗಿದ್ದಾರೆ. ಮಂಗಳವಾರದಂದು ಇವರ ಆರತಕ್ಷತೆ ಕಾರ್ಯಕ್ರಮ ನಡೆಯಬೇಕಿತ್ತು ಎಂದು ಹೇಳಲಾಗಿದೆ. ಇದಕ್ಕಾಗಿ ನವದಂಪತಿಗಳು ಕೋಣೆಯಲ್ಲಿ ಸಿದ್ದತೆ ನಡೆಸುತ್ತಿದ್ದು, ಈ ಸಂದರ್ಭದಲ್ಲಿ ವಧುವಿನ ಕೂಗಾಟ ಕೇಳಿ ಬಂದಿದೆ.

ವರನ ತಾಯಿ ಕೂಡಲೆ ಕೋಣೆಗೆ ಧಾವಿಸಿದ್ದು, ಒಳಗಿನಿಂದ ಚಿಲಕ ಹಾಕಲಾಗಿತ್ತು. ಬಳಿಕ ಬಾಗಿಲನ್ನು ಒಡೆದು ಒಳ ಪ್ರವೇಶಿಸಿದಾಗ ರಕ್ತದ ಮಡುವಿನಲ್ಲಿ ಇಬ್ಬರ ಮೃತದೇಹ ಪತ್ತೆಯಾಗಿದೆ. ಅಸ್ಲಾಂ ಮೊದಲಿಎ ತನ್ನ ಪತ್ನಿಗೆ ಚಾಕು ಇರಿದು ಬಳಿಕ ತಾನೂ ಇರಿದುಕೊಂಡಿರಬಹುದು ಎಂಬ ಅನುಮಾನ ವ್ಯಕ್ತವಾಗಿದೆ.

ಸದ್ಯ ಈ ಘಟನೆಯ ಕುರಿತು ಟಿಕಾರಪಾರಾ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಹೆಚ್ಚಿನ ತನಿಖೆಯನ್ನು ನಡೆಸುತ್ತಿದ್ದಾರೆ.

ಇದನ್ನೂ ಓದಿ : Car-truck Accident: ಛತ್ತೀಸ್‌ಗಢದಲ್ಲಿ ಕಾರು-ಟ್ರಕ್ ಢಿಕ್ಕಿ: ತಾಯಿ, ಮಗ ಸೇರಿ ನಾಲ್ವರು ಸಾವು

ಛತ್ತೀಸ್‌ಗಢದಲ್ಲಿ ಕಾರು-ಟ್ರಕ್ ಢಿಕ್ಕಿ: ತಾಯಿ, ಮಗ ಸೇರಿ ನಾಲ್ವರು ಸಾವು

ಛತ್ತೀಸ್‌ಗಢ: ಟ್ರಕ್‌ಗೆ ಕಾರು ಢಿಕ್ಕಿ ಹೊಡೆದ ಪರಿಣಾಮ ಮಹಿಳೆ ಮತ್ತು ಆಕೆಯ ಮಗ ಸೇರಿದಂತೆ ನಾಲ್ವರು ಸಾವನ್ನಪ್ಪಿರುವ ಘಟನೆ ಛತ್ತೀಸ್‌ಗಢದ ಬಲೋದ್ ಜಿಲ್ಲೆಯಲ್ಲಿ ನಡೆದಿದೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ. ಮೃತರನ್ನು ಸಿಮ್ರಾನ್ ಸಲೂಜಾ (48 ವರ್ಷ), ಆಕೆಯ ಮಗ ರಾಜವೀರ್ ಸಲೂಜಾ (19 ವರ್ಷ), ಅಶೋಕ್ ಮತ್ತು ಉಮೇಶ್ ಸಾಹು (24 ವರ್ಷ) ಎಂದು ಗುರುತಿಸಲಾಗಿದೆ. ರಾಜಧಾನಿ ರಾಯ್‌ಪುರದಿಂದ ಕಾರಿನಲ್ಲಿ ಬಲೋದ್‌ಗೆ ತೆರಳುತ್ತಿದ್ದಾಗ ಗುಂಡರ್‌ದೇಹಿ ಪೊಲೀಸ್ ಠಾಣೆ ವ್ಯಾಪ್ತಿಯ ಖಪ್ಪರವಾಡ ಗ್ರಾಮದ ಬಳಿ ಈ ಘಟನೆ ನಡೆದಿದೆ ಎಂದು ಬಲೋದ್‌ನ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಪ್ರಾಥಮಿಕ ಮಾಹಿತಿಯ ಪ್ರಕಾರ, ಬಾಲೋಡ್ ನಿವಾಸಿಗಳಾದ ಮಹಿಳೆ ಮತ್ತು ಅವರ ಮಗ ತನ್ನ ಕಾರಿನಲ್ಲಿ ಕುಟುಂಬ ಕೆಲಸಕ್ಕಾಗಿ ರಾಯ್‌ಪುರಕ್ಕೆ ತೆರಳಿದ್ದರು. ರಾಯ್‌ಪುರದಲ್ಲಿ ಅವರ ಕಾರು ಕೆಟ್ಟುಹೋದ ನಂತರ, ಅವರು ಮತ್ತೊಂದು ಕಾರನ್ನು ಬಾಡಿಗೆಗೆ ತೆಗೆದುಕೊಂಡು ತಮ್ಮ ಚಾಲಕ ಅಶೋಕ್‌ನೊಂದಿಗೆ ಮನೆಗೆ ಮರಳುತ್ತಿದ್ದರು ಎಂದು ತಿಳಿದುಬಂದಿದೆ.

ಇದನ್ನೂ ಓದಿ : Mangaluru student died: ಆಟೋ ಚಾಲಕನ ನಿರ್ಲಕ್ಷ್ಯ: ಜೀವ ಕಳೆದುಕೊಂಡ ವಿದ್ಯಾರ್ಥಿ

ಇದನ್ನೂ ಓದಿ : Ayushman Bharat scheme scam: ಆಯುಷ್ಮಾನ್ ಭಾರತ್ ಯೋಜನೆಯಲ್ಲಿ ವಂಚನೆ: 13 ಆಸ್ಪತ್ರೆಗಳ ವಿರುದ್ಧ ಕ್ರಮ

Couple died: The newlyweds died before the reception

Comments are closed.