World Test Championship Final : ಟೆಸ್ಟ್ ವಿಶ್ವಕಪ್ ಫೈನಲ್’ಗೆ ಕ್ರಿಕೆಟ್ ಕಾಶಿ ಲಾರ್ಡ್ಸ್ ಆತಿಥ್ಯ

ಲಂಡನ್: ( World Test Championship Final ) ಮುಂದಿನ ವರ್ಷ ನಡೆಯಲಿರುವ ಐಸಿಸಿ ಟೆಸ್ಟ್ ಚಾಂಪಿಯನ್”ಷಿಪ್ ಫೈನಲ್ ಪಂದ್ಯಕ್ಕೆ ಕ್ರಿಕೆಟ್ ಕಾಶಿ ಐತಿಹಾಸಿಕ ಲಾರ್ಡ್ಸ್ ಮೈದಾನ ಆತಿಥ್ಯ ವಹಿಸಲಿದೆ. 2025ರ ಐಸಿಸಿ ಟೆಸ್ಟ್ ಚಾಂಪಿಯನ್”ಷಿಪ್ ಫೈನಲ್ ಪಂದ್ಯವೂ ಇಂಗ್ಲೆಂಡ್’ನ ಲಾರ್ಡ್ಸ್ ಕ್ರೀಡಾಂಗಣವೇ ಆತಿಥ್ಯ ವಹಿಸಲಿದೆ. 2021ರ ಐಸಿಸಿ ಟೆಸ್ಟ್ ಚಾಂಪಿಯನ್”ಷಿಪ್ ಫೈನಲ್’ಗೆ ಕ್ರಿಕೆಟ್ ಕಾಶಿ ಲಾರ್ಡ್ಸ್ ಮೈದಾನವೇ ಆತಿಥ್ಯ ವಹಿಸಬೇಕಿತ್ತು. ಆದರೆ ಕೋವಿಡ್ ಕಾರಣದಿಂದ ಫೈನಲ್ ಪಂದ್ಯ ಲಾರ್ಡ್ಸ್”ನಿಂದ ಸೌಥಾಂಪ್ಟನ್’ನ ಏಜೀಸ್ ಬೌಲ್ ಮೈದಾನಕ್ಕೆ ಸ್ಥಳಾಂತರ ಗೊಂಡಿತ್ತು. ಆ ಫೈನಲ್”ನಲ್ಲಿ ವಿರಾಟ್ ಕೊಹ್ಲಿ ನಾಯಕತ್ವದ ಭಾರತ ತಂಡವನ್ನು 8 ವಿಕೆಟ್’ಗಳಿಂದ ಮಣಿಸಿದ್ದ ನ್ಯೂಜಿಲೆಂಡ್, ಚೊಚ್ಚಲ ಆವೃತ್ತಿಯ ಟೆಸ್ಟ್ ವಿಶ್ವಕಪ್ ಕಿರೀಟವನ್ನು ಮುಡಿಗೇರಿಸಿಕೊಂಡಿತ್ತು.

2021-23ನೇ ಸಾಲಿನ ಐಸಿಸಿ ಟೆಸ್ಟ್ ಚಾಂಪಿಯನ್”ಷಿಪ್ ಅಂಕಪಟ್ಟಿಯಲ್ಲಿ ಭಾರತ 4ನೇ ಸ್ಥಾನದಲ್ಲಿದ್ದು, ದಕ್ಷಿಣ ಆಫ್ರಿಕಾ ತಂಡ ಅಗ್ರಸ್ಥಾನದಲ್ಲಿದೆ. 7 ಪಂದ್ಯಗಳನ್ನಾಡಿರುವ ದಕ್ಷಿಣ ಆಫ್ರಿಕಾ 5 ಗೆಲುವು, 2 ಸೋಲಿನೊಂದಿಗೆ 60 ಅಂಕ ಗಳಿಸಿ ಪಾಯಿಂಟ್ ಪರ್ಸಂಟೇಜ್’ನಲ್ಲಿ ಮೊದಲ ಸ್ಥಾನದಲ್ಲಿದ್ರೆ, ಆಸ್ಟ್ರೇಲಿಯಾ (10 ಪಂದ್ಯ, 6 ಗೆಲುವು, 1 ಸೋಲು, 84 ಪಾಯಿಂಟ್ಸ್) 2ನೇ ಸ್ಥಾನದಲ್ಲಿದೆ. ಪಾಕಿಸ್ತಾನ 8 ಪಂದ್ಯಗಳಿಂದ 56 ಅಂಕ ಸಂಪಾದಿಸಿ 3ನೇ ಸ್ಥಾನದಲ್ಲಿದೆ.

12 ಪಂದ್ಯಗಳನ್ನಾಡಿರುವ ಭಾರತ ತಂಡ 6 ಗೆಲುವು, 4 ಸೋಲು ಮತ್ತು 2 ಡ್ರಾಗಳೊಂದಿಗೆ 75 ಅಂಕ ಸಂಪಾದಿಸಿದ್ದು ಸರಾಸರಿ 52.08 ಅಂಕಳಗೊಂದಿಗೆ 4ನೇ ಸ್ಥಾನದಲ್ಲಿದೆ. ಅಂಕಪಟ್ಟಿಯಲ್ಲಿ ಅಗ್ರ ಎರಡು ಸ್ಥಾನ ಪಡೆಯುವ ತಂಡಗಳು ಫೈನಲ್”ನಲ್ಲಿ ಮುಖಾಮುಖಿಯಾಗಲಿವೆ.

2021-23ನೇ ಸಾಲಿನ ಐಸಿಸಿ ಟೆಸ್ಟ್ ಚಾಂಪಿಯನ್”ಷಿಪ್’ನಲ್ಲಿ ಭಾರತ ತಂಡ ಇದುವರೆಗೆ ಇಂಗ್ಲೆಂಡ್ ವಿರುದ್ಧ 2 ಗೆಲುವು, ವಿಶ್ವಚಾಂಪಿಯನ್ ನ್ಯೂಜಿಲೆಂಡ್ ವಿರುದ್ಧ 1 ಗೆಲುವು, ದಕ್ಷಿಣ ಆಫ್ರಿಕಾ ವಿರುದ್ಧ ಒಂದು ಗೆಲುವು ಹಾಗೂ ಶ್ರೀಲಂಕಾ ವಿರುದ್ಧ 2 ಗೆಲುವು ದಾಖಲಿಸಿದೆ. ಇಂಗ್ಲೆಂಡ್ ಹಾಗೂ ದಕ್ಷಿಣ ಆಫ್ರಿಕಾ ತಂಡಗಳ ವಿರುದ್ಧ ತಲಾ ಎರಡು ಸೋಲು ಅನುಭವಿಸಿರುವ ಭಾರತ ತಂಡ, ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ವಿರುದ್ಧದ ತಲಾ ಒಂದೊಂದು ಪಂದ್ಯಗಳನ್ನು ಡ್ರಾ ಮಾಡಿಕೊಂಡಿದೆ.

ಇದನ್ನೂ ಓದಿ : Women Cricketers Marriage Story : ಮಂದಾನ, ಮಿಥಾಲಿ, ಹರ್ಮನ್, ಮಹಿಳಾ ಕ್ರಿಕೆಟರ್”ಗಳೇಕೆ ಮದುವೆಯಾಗಲ್ಲ.. ಇಲ್ಲಿದೆ ಅಸಲಿ ಸತ್ಯ !

ಇದನ್ನೂ ಓದಿ : Exclusive : ಕೆ.ಎಲ್ ರಾಹುಲ್ ಕಂಬ್ಯಾಕ್ ಪ್ಲಾನ್ ಔಟ್.. ಜಿಂಬಾಬ್ವೆ ಸರಣಿಗೆ ಕನ್ನಡಿಗ ಕ್ಯಾಪ್ಟನ್ ?

Lords to Host ICC World Test Championship Final

Comments are closed.