Lucknow list out IPL 2022 : ಲಕ್ನೋ ತಂಡದಲ್ಲಿ ರಾಹುಲ್, ರಶೀದ್ ಖಾನ್, ಸ್ಟೀವ್ ಸ್ಮಿತ್ ಮತ್ತು ಸುರೇಶ್ ರೈನಾ

ಲಕ್ನೋ : ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2022)ನ ಹೊಸ ತಂಡ ಲಕ್ನೋ ಭರ್ಜರಿ ಸಿದ್ದತೆಯಲ್ಲಿದೆ. ಈಗಾಗಲೇ ಆಂಡಿ ಪ್ಲವರ್‌ ಹಾಗೂ ಗೌತಮ್‌ ಗಂಭೀರ್‌ ಅವರನ್ನು ತನ್ನ ತೆಕ್ಕೆಗೆ ಹಾಕಿಕೊಂಡಿರುವ ಲಕ್ನೋ ಇದೀಗ ಬಲಾಢ್ಯ ಆಟಗಾರರ ಪಟ್ಟಿಯನ್ನೇ (Lucknow list out IPL 2022) ಸಿದ್ದತೆ ಮಾಡಿಕೊಂಡಿದೆ. ವರದಿಗಳ ಪ್ರಕಾರ ಕೆಎಲ್ ರಾಹುಲ್ ( Kl Rahul ) ಲಕ್ನೋ ಫ್ರಾಂಚೈಸಿಯನ್ನು ಮುನ್ನಡೆಸುವುದು ಬಹುತೇಕ ಖಚಿತ. ಅಲ್ಲದೇ ಮೆಗಾ ಹರಾಜಿನ ಮೊದಲು ರಶೀದ್ ಖಾನ್ ( Rashid Khan ), ಸ್ಟೀವ್ ಸ್ಮಿತ್ಮ (Steve Smith)ತ್ತು ಸುರೇಶ್ ರೈನಾ ( Suresh Raina ) ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಿದೆ.

ಆದರೆ ಅಹಮದಾಬಾದ್ ಮತ್ತು ಲಕ್ನೋದಿಂದ ಎರಡು ಹೊಸ ತಂಡಗಳಿಗೆ ಕ್ರಮವಾಗಿ 5000 ಮತ್ತು 7000 ಕೋಟಿ ಬಿಡ್ ಮಾಡಿವೆ.. ಎರಡು ಹೊಸ ತಂಡಗಳಿಗೆ ಹರಾಜಿನ ಮೊದಲು ಆಟಗಾರರನ್ನು ಖರೀದಿಸುವ ಹಕ್ಕನ್ನು ಸಹ ನೀಡಲಾಗಿದೆ. ಹೀಗಾಗಿ 8 ತಂಡಗಳು 4 ಆಟಗಾರರನ್ನು ಉಳಿಸಿಕೊಳ್ಳಲು ಅನುಮತಿ ನೀಡಲಾಗಿದೆ. ಕನ್ನಡಿಗ ಕೆಎಲ್ ರಾಹುಲ್, ತಮ್ಮ ಐಪಿಎಲ್ ಫ್ರಾಂಚೈಸಿ ಪಂಜಾಬ್ ಕಿಂಗ್ಸ್ (ಪಿಬಿಕೆಎಸ್) ನಿಂದ ಹೊರಬಂದ ನಂತರ ಲಕ್ನೋ ಮೂಲದ ಫ್ರಾಂಚೈಸಿಯನ್ನು ಪ್ರತಿನಿಧಿಸುವ ಮಾತು ಕೇಳಿಬಂದಿತ್ತು. ಐಪಿಎಲ್ 2022. ಅವರು ತಮ್ಮ ತಂಡವನ್ನು ಮುನ್ನಡೆಸುವ ಪ್ರಸ್ತಾಪವನ್ನು ಒಪ್ಪಿಕೊಂಡಿದ್ದಾರೆ ಎಂದು ವರದಿಗಳು ಹೇಳುತ್ತಿವೆ.

ಮತ್ತೊಂದೆಡೆ ರಶೀದ್ ಖಾನ್, ಲಕ್ನೋ ಮೂಲದ ಫ್ರಾಂಚೈಸಿಗಾಗಿ ಕೆಎಲ್ ರಾಹುಲ್ ಜೊತೆಗೆ ಆಡುವ ಸಾಧ್ಯತೆಯಿದೆ. ಲೆಗ್ ಸ್ಪಿನ್ನರ್ ರಶೀದ್ ಖಾನ್ ಅವರನ್ನು ಎರಡನೇ ಸ್ಥಾನದಲ್ಲಿ ಉಳಿಸಿಕೊಳ್ಳಲು ಅವರ ಹಿಂದಿನ ಫ್ರಾಂಚೈಸಿ (ಸನ್ ರೈಸರ್ಸ್ ಹೈದರಾಬಾದ್) ನಿರ್ಧಾರದಿಂದ ಅತೃಪ್ತಿ ಹೊಂದಿದ್ದರು ಎಂದು ವರದಿಯಾಗಿದೆ. ಲಕ್ನೋ ತಂಡ ರಾಹುಲ್ ಮತ್ತು ರಶೀದ್ ಇಬ್ಬರಿಗೂ ಕ್ರಮವಾಗಿ 20 ಕೋಟಿ ಮತ್ತು 16 ಕೋಟಿ ರೂಪಾಯಿ ಹಣವನ್ನು ವಿನಿಯೋಗಿಸಲು ಮುಂದಾಗಿದೆ ಎಂದು ಹೇಳಲಾಗುತ್ತಿದೆ. ರಾಹುಲ್‌, ರಶೀದ್‌ ಖಾನ್‌ ಜೊತೆಗೆ ಆಸ್ಟ್ರೇಲಿಯಾದ ಮಾಜಿ ನಾಯಕ ಸ್ಟೀವ್‌ ಸ್ಮಿತ್‌ ಕೂಡ ಲಕ್ನೋ ಸೇರುವ ಸಾಧ್ಯತೆಯಿದೆ. ಈಗಾಗಲೇ ಕ್ರಿಕೆಟ್‌ ವಿಶ್ಲೇಷಕರು ಅನುಭವಿ ಆಟಗಾರನ ಕಡೆಗೆ ಬೊಟ್ಟು ಮಾಡುತ್ತಿದ್ದಾರೆ. ಐಪಿಎಲ್‌ನಲ್ಲಿ ಅದ್ಬುತ ಪ್ರದರ್ಶನ ನೀಡಿರುವುದರ ಜೊತೆಗೆ ನಾಯಕನಾಗಿಯೂ ಯಶಸ್ಸನ್ನು ಕಂಡಿದ್ದಾರೆ. ಧೋನಿ, ರೋಹಿತ್‌ ಶರ್ಮಾಗಿಂತಲೂ ಉತ್ತಮ ನಾಯಕ ಅನ್ನೋ ಮಾತು ಕೇಳಿಬರುತ್ತಿದೆ.

ಈ ಹಿಂದೆ ಸ್ಟೀವ್‌ ಸ್ಮಿತ್‌ ಪುಣೆ ಸೂಪರ್‌ ಜೈಂಟ್‌ (RPSG) ತಂಡವನ್ನು ಪ್ರತಿನಿಧಿಸಿದ್ದರು. ಆಗ ತಂಡದ ಮಾಲೀಕರಾಗಿದ್ದವರು, ಲಕ್ನೋ ತಂಡದ ಮಾಲೀಕ ಸಂಜೀವ್ ಗೋಯೆಂಕಾ, ಸ್ಟೀವ್‌ ಸ್ಮಿತ್‌ ತಮ್ಮ ತಂಡವನ್ನು ಫೈನಲ್‌ಗೆ ಕೊಂಡೊಯ್ದಿದ್ದರು. ಇದೇ ಕಾರಣಕ್ಕೆ ಸ್ಟೀವ್‌ ಸ್ಮಿತ್‌ ಕೂಡ ಲಕ್ನೋ ಪಾಲಾಗುವ ಸಾಧ್ಯತೆಯಿದೆ. ಇನ್ನೊಂದೆಡೆಯಲ್ಲಿ ಟೀಂ ಇಂಡಿಯಾದ ಮಾಜಿ ಆಟಗಾರ ಸುರೇಶ್‌ ರೈನಾ ಹೆಸರು ಬಲವಾಗಿ ಕೇಳಿಬರುತ್ತಿದೆ. ಐಪಿಎಲ್‌ ಆರಂಭದಿಂದಲೂ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದಲ್ಲಿ ಕಾಣಿಸಿಕೊಂಡಿದ್ದ ಸುರೇಶ್‌ ರೈನಾ, ಈ ಭಾರಿ ತಂಡದಿಂದ ಹೊರ ನಡೆದಿದ್ದಾರೆ.

ಸುರೇಶ್ ರೈನಾ ಅವರು ಉತ್ತರ ಪ್ರದೇಶದವರು. ಇದೇ ಕಾರಣಕ್ಕೆ ಲಕ್ನೋ ತಂಡದಿಂದ ಸಹಿ ಮಾಡಬಹುದು ಎನ್ನಲಾಗುತ್ತಿದೆ. ಸುರೇಶ್‌ ರೈನಾ 2016 ರಲ್ಲಿ ಗುಜರಾತ್ ತಂಡ ಮತ್ತು ಐಪಿಎಲ್‌ನಲ್ಲಿ ಸಿಎಸ್‌ಕೆ ಕೆಲವು ಬಾರಿ ನಾಯಕರಾಗಿದ್ದರು. ಆದರೆ ಕಳೆದ ಎರಡು ವರ್ಷಗಳಿಂದಲೂ ಅವರು ಫಾರ್ಮ್‌ ಕಳಪೆಯಾಗಿದೆ. ಆದರೆ ಯಾವುದೇ ಸಂದರ್ಭದಲ್ಲಿಯೂ ಅವರು ಸಿಡಿದೇಳುವ ಸಾಧ್ಯತೆಯಿದೆ. ಹೀಗಾಗಿಯೇ ಅಪಾಯಕಾರಿ ಆಟಗಾರನ ಖರೀದಿಗೆ ಐಪಿಎಲ್‌ ಪ್ರಾಂಚೈಸಿಗಳು ತುದಿಗಾಲಲ್ಲಿ ನಿಂತಿವೆ.

ಇದನ್ನೂ ಓದಿ : Mumbai Indians IPL 2022: ಹಾರ್ದಿಕ್‌ ಪಾಂಡ್ಯ, ಟ್ರೆಂಟ್‌ ಬೌಲ್ಟ್‌ ಅವರನ್ನು ಕರೆತರಲಿದೆ ಮುಂಬೈ ಇಂಡಿಯನ್ಸ್‌

ಇದನ್ನೂ ಓದಿ : RCB IPL 2022 ಗೆ ನಾಯಕನಾಗಿ ಮನೀಶ್ ಪಾಂಡೆ

(Lucknow list out Kl Rahul, Rashid Khan, Steve Smith and Suresh Raina for IPL 2022)

Comments are closed.