Delta Omicron Alert : ಡೆಲ್ಟಾಕ್ಕಿಂತ 3 ಪಟ್ಟು ಅಪಾಯಕಾರಿ ಓಮಿಕ್ರಾನ್‌ : ಶಾಕ್‌ ಕೊಟ್ಟ ಆರೋಗ್ಯ ಇಲಾಖೆ, ಕಠಿಣ ಕ್ರಮಕ್ಕೆ ಕೇಂದ್ರದ ಸೂಚನೆ

ಬೆಂಗಳೂರು : ದೇಶದ ಮೊದಲ ಓಮಿಕ್ರಾನ್ ಪ್ರಕರಣ ಬೆಂಗಳೂರಿನಲ್ಲಿ ದಾಖಲಾದ ಬಳಿಕ ದೇಶಕ್ಕೆ ದೇಶವೇ ಹೈ ಅಲರ್ಟ್ ಆಗಿದೆ. ಈ ಮಧ್ಯೆ ದೇಶದ ವಿವಿಧ ರಾಜ್ಯಗಳಲ್ಲಿ ಪ್ರತಿದಿನವೂ ಓಮಿಕ್ರಾನ್ ಪ್ರಕರಣಗಳು ಏರಿಕೆಯಾಗುತ್ತಲೇ ಇದೆ. ಈ ಮಧ್ಯೆ ಓಮಿಕ್ರಾನ್ (Delta Omicron Alert) ಹಿನ್ನೆಲೆಯಲ್ಲಿ ಹೆಚ್ಚಿನ ಎಚ್ಚರಿಕೆ ವಹಿಸುವಂತೆ ಕೇಂದ್ರ ಆರೋಗ್ಯ ಇಲಾಖೆ ಕಾರ್ಯದರ್ಶಿ ರಾಜೇಶ್ ಭೂಷಣ್ ರಾಜ್ಯಗಳಿಗೆ ಪತ್ರ ಬರೆದಿದ್ದಾರೆ.

ರಾಜೇಶ್ ಭೂಷಣ್ ರಾಜ್ಯಗಳಿಗೆ ಹಲವು ಸೂಚನೆಗಳನ್ನು‌ ನೀಡಿದ್ದು ಮುನ್ನೆಚ್ಚರಿಕೆ,ಕಠಿಣ ಕ್ರಮ ಹಾಗೂ ನಿಯಮ ರೂಪಿಸುವಂತೆ ರಾಜ್ಯಗಳಿಗೆ ಸೂಚನೆ ನೀಡಿದ್ದಾರೆ. ಓಮಿಕ್ರಾನ್ ಡೆಲ್ಟಾ ಗಿಂತ ಮೂರುಪಟ್ಟು ಹೆಚ್ಚು ವೇಗವಾಗಿ ಹರಡುತ್ತದೆ. ಹಾಗೂ ಇದು ಡೆಲ್ಟಾಗಿಂತ ಹೆಚ್ಚು ಅಪಾಯಕಾರಿ. ಹೀಗಾಗಿ ಕಟ್ಟುನಿಟ್ಟಾದ ಹಾಗೂ ತ್ವರಿತ ನಿಯಂತ್ರಣ ಕ್ರಮದ ಅಗತ್ಯವಿದೆ ಎಂದು ರಾಜೇಶ್ ಭೂಷಣ್ ಸೂಚಿಸಿದ್ದಾರೆ. ಅಲ್ಲದೇ ಓಮಿಕ್ರಾನ್ ನಿಯಂತ್ರಣಕ್ಕೆ ಮತ್ತಷ್ಟು ಕ್ರಿಯಾತ್ಮಕವಾದ ನಿರ್ಧಾರಕೈಗೊಳ್ಳುವಂತೆ ಸೂಚಿಸಲಾಗಿದ್ದು ಸ್ಥಳೀಯ ಹಾಗೂ ಜಿಲ್ಲಾ ಮಟ್ಟದಲ್ಲಿ ಹೆಚ್ಚು ನಿಗಾವಹಿಸಲು ಹೇಳಿದ್ದಾರೆ.

ಓಮಿಕ್ರಾನ್ ಹಿನ್ನೆಲೆಯಲ್ಲಿ ರಾಜ್ಯಗಳು ಕೈಗೊಳ್ಳಬೇಕಾಗಿರುವ ನಿಯಮಗಳ ಕುರಿತು ಕೇಂದ್ರದ ಆರೋಗ್ಯ ಇಲಾಖೆ ಕಾರ್ಯದರ್ಶಿ ರಾಜೇಶ್ ಭೂಷಣ ಹಲವು ಸಲಹೆಗಳನ್ನು ನೀಡಿದ್ದು, ಮುಖ್ಯವಾಗಿ ರಾಜ್ಯಗಳಲ್ಲಿ ನೈಟ್ ಕರ್ಫ್ಯೂ ಜಾರಿಗೊಳಿಸುವಂತೆ ಸೂಚಿಸಿದ್ದಾರೆ. ಅಲ್ಲದೇ ಹೆಚ್ಚು ಜನಸಂದಣಿ ಸೇರದಂತೆ ಕ್ರಮ ವಹಿಸಬೇಕು. ಸಮಾರಂಭ, ಮದುವೆ, ಅಂತ್ಯಕ್ರಿಯೆಗೆ ಜನರ ಮಿತಿ ಹೇರಿ ಸೋಂಕು ಹರಡುವುದನ್ನು ತಪ್ಪಿಸಿ. ಖಾಸಗಿ ಹಾಗೂ ಸರ್ಕಾರಿ ಕಚೇರಿಗಳಲ್ಲೂ ಸಿಬ್ಬಂದಿಗಳಿಗೆ ಮಿತಿ ಹೇರಬೇಕು. ಸಾರ್ವಜನಿಕ ಸಾರಿಗೆಗಳಲ್ಲೂ ಪ್ರಯಾಣಿಕರ ಸಂಖ್ಯೆಯನ್ನು ನಿಯಂತ್ರಿಸಬೇಕು.

Delta Omicron Alert Omicron three times more dangerous than Delta, Strict Rules implementation Central health department directions state Government 1

ಆಸ್ಪತ್ರೆಗಳಲ್ಲಿ ICU ಬೆಡ್, ಆಕ್ಸಿಜನ್​ ಪ್ರಮಾಣ ಹೆಚ್ಚಿಸಿ, ಕೊರೋನಾ ಹಾಗೂ ಒಮೈಕ್ರಾನ್ ಸಂದರ್ಭದಲ್ಲಿ ನಿರ್ಲಕ್ಷ್ಯ ವಹಿಸದೇ ಸೂಕ್ತ ಚಿಕಿತ್ಸೆಗೆ ಸೂಚನೆ ನೀಡಬೇಕು. ಅಲ್ಲದೇ ರಾಜ್ಯಗಳು ಮನೆ ಮನೆ ಲಸಿಕೆ ಅಭಿಯಾನವನ್ನ ಹೆಚ್ಚು ಮಾಡಿ ಲಸಿಕೆ ವಿತರಣೆಯಲ್ಲಿ ನೀರಿಕ್ಷಿತ ಗುರಿ ತಲುಪಬೇಕು ಎಂದು ಪತ್ರದಲ್ಲಿ ಸೂಚಿಸಲಾಗಿದೆ. ಇದಲ್ಲದೇ ಎಲ್ಲಾ ರಾಜ್ಯಗಳಲ್ಲಿ ಜಿಲ್ಲಾಮಟ್ಟದಲ್ಲಿ ಕೋವಿಡ್​ ಕೇಸ್​, ಲಸಿಕೆ ದತ್ತಾಂಶ ಪರಿಶೀಲಿಸಿ ಅಧಿಕಾರಿಗಳಿಗೆ ಅಗತ್ಯ ಸೂಚನೆ ನೀಡಬೇಕು. ಸೋಂಕಿತ ಪ್ರದೇಶಗಳಲ್ಲಿ ಕಂಟೈನ್ಮೆಂಟ್​​ ಕಟ್ಟುನಿಟ್ಟಾಗಿ ಪಾಲಿಸಬೇಕು.

Delta Omicron Alert Omicron three times more dangerous than Delta, Strict Rules implementation Central health department directions state Government 2

ಟೆಸ್ಟ್​​, ಟ್ರ್ಯಾಕ್​​, ಟ್ರೀಟ್​ಮೆಂಟ್​​ ಹೆಚ್ಚಳ ಮಾಡಬೇಕು. ಜನರು ಕೊರೋನಾ ನಿಯಮಗಳನ್ನು ಪಾಲಿಸುವಂತೆ ಖಡಕ್ ಆದೇಶ ನೀಡಬೇಕೆಂದು ರಾಜ್ಯಗಳಿಗೆ ಕೇಂದ್ರ ಅರೋಗ್ಯ ಇಲಾಖೆ ಸೂಚಿಸಿದೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ನಿಯಮಗಳು ಮತ್ತಷ್ಟು ಬಿಗಿಯಾಗುವ ಸಾಧ್ಯತೆ ಇದ್ದು, ಬೆಳಗಾವಿ ಅಧಿವೇಶನದ ಬಳಿಕ ರಾಜ್ಯ ಸರ್ಕಾರ ಮತ್ತೆ ರಾಜ್ಯದಾದ್ಯಂತ ನೈಟ್ ಕರ್ಪ್ಯೂ ಜಾರಿ ಮಾಡುವ ಸಾಧ್ಯತೆ ಇದೆ.

ಇದನ್ನೂ ಓದಿ : Karnataka Lockdown Again : ಮತ್ತೆ ಕರ್ನಾಟಕದಲ್ಲಿ ಲಾಕ್ ಡೌನ್ ಭೂತ : ಸರ್ಕಾರದ ಮುಂದಿರೋ ಆಯ್ಕೆಗಳೇನು?!

ಇದನ್ನೂ ಓದಿ : New Record Corona Vaccine : ಕೊನೆಗೂ ಓಮಿಕ್ರಾನ್ ಭಯಕ್ಕೆ ಎಚ್ಚೆತ್ತ ಜನರು: ಕೊರೊನಾ ಲಸಿಕೆಯಲ್ಲಿ ದಾಖಲೆ ಬರೆದ ಮಧ್ಯವಯಸ್ಕರು

(Delta Omicron Alert : Omicron three times more dangerous than Delta, Strict Rules implementation Central health department directions state Government)

Comments are closed.