Free buspass garment employees : ಗಾರ್ಮೆಂಟ್ಸ್ ಮಹಿಳಾ ಉದ್ಯೋಗಿಗಳಿಗೆ ಸಿಹಿಸುದ್ದಿ: BMTC ನೀಡಲಿದೆ ಉಚಿತ ಪಾಸ್

ಬೆಂಗಳೂರು : ಬೆಂಗಳೂರು ನಗರ ಹಾಗೂ ಬೆಂಗಳೂರು ಗ್ರಾಮಾಂತರ ಪ್ರದೇಶದ ಗಾರ್ಮೆಂಟ್ಸ್ ಮಹಿಳಾ ಉದ್ಯೋಗಿಗಳಿಗೆ ಸರ್ಕಾರ ಸಿಹಿಸುದ್ದಿ ನೀಡಿದ್ದು, ವಿಳಂಭವಾಗಿ ಆದ್ರೂ ಹೊಸ ವರ್ಷಕ್ಕೆ ಭರ್ಜರಿ ಗಿಫ್ಟ್ ನೀಡಿದೆ. ಬಿಎಂಟಿಸಿ ಸಹಯೋಗದಲ್ಲಿ ಸರ್ಕಾರ 3 ಲಕ್ಷ ಮಹಿಳಾ ಉದ್ಯೋಗಿಗಳಿಗೆ ಉಚಿತ ಬಸ್ ಪಾಸ್ (Free buspass garment employees) ನೀಡಲು ನಿರ್ಧರಿಸಿದೆ. ಈ ಹಿಂದೆ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಬಜೆಟ್ ನಲ್ಲಿ ವನಿತಾ ಸಂಗಾತಿ ಯೋಜನೆಯಡಿಯಲ್ಲಿ ಗಾರ್ಮೆಂಟ್ಸ್ ಮಹಿಳಾ‌ ಉದ್ಯೋಗಿಗಳಿಗೆ ಉಚಿತ ಬಸ್ ಪಾಸ್ ಯೋಜನೆ ಘೋಷಿಸಿದ್ದರು. ಆ ಯೋಜನೆ ಈ ಜಾರಿಗೆ ಬರಲು ಸಿದ್ಧವಾಗಿದ್ದು ಜನವರಿ 22 ರಿಂದ ಪಾಸ್ ವಿತರಣೆ ಬೆಂಗಳೂರಿನ ಕೆಂಪೇಗೌಡ ಬಸ್ ನಿಲ್ದಾಣದಲ್ಲಿ ಆರಂಭವಾಗಲಿದೆ.

ವನಿತಾ ಸಂಗಾತಿ ಯೋಜನೆಯಿಂದ ಬೆಂಗಳೂರು ಹಾಗೂ ಬೆಂಗಳೂರಿನ ಗ್ರಾಮಾಂತರ ಪ್ರದೇಶದಲ್ಲಿರುವ ಸುಮಾರು 850 ಕ್ಕೂ ಹೆಚ್ಚು ಗಾರ್ಮೆಂಟ್ಸ್ ಗಳ 3 ಲಕ್ಷಕ್ಕೂ ಅಧಿಕ ಮಹಿಳಾ ಉದ್ಯೋಗಿಗಳಿಗೆ ನೆರವಾಗಲಿದೆ. ಬಹುತೇಕ ಗಾರ್ಮೆಂಟ್ಸ್ ಗಳಲ್ಲಿ ಶೇಕಡಾ 80% ರಷ್ಟು ಮಹಿಳೆಯರು ಕೆಲಸ ಮಾಡುತ್ತಾರೆ. ಈ ಎಲ್ಲಾ ಮಹಿಳಾ ಉದ್ಯೋಗಿಗಳಿಗೆ ಅನುಕೂಲವಾಗಲು ಉಚಿತ ಬಸ್ ಪಾಸ್ ವಿತರಣೆ ಮಾಡಲು ನಿರ್ಧರಿಸಲಾಗಿದೆ.

ಇನ್ನು ಸರ್ಕಾರ ವಿತರಿಸುವ ಈ ಉಚಿತ ಪಾಸಿನ ಹಣವನ್ನ ಸರ್ಕಾರ 40% ಗಾರ್ಮೆಂಟ್ಸ್ ಮಾಲೀಕರು 40% ಬಿಎಂಟಿಸಿ 20% ಭರಿಸಲಿದೆ.ಈ ಮೂಲಕ ಮಹಿಳಾ ಕಾರ್ಮಿಕರ ಬದುಕಿಗೆ ನೆರವು ಕಲ್ಪಿಸಲು ಮುಂದಾಗಿದೆ. ಇದಕ್ಕಾಗಿ ಹೇಗೆ ಮಹಿಳಾ ಉದ್ಯೋಗಿಗಳು ಅರ್ಜಿ ಸಲ್ಲಿಸಬೇಕು ಎಂಬುದನ್ನು ಗಮನಿಸೋದಾದರೇ, ಗಾರ್ಮೆಂಟ್ಸ್ ಮಾಲೀಕರು ಮಹಿಳಾ ಉದ್ಯೋಗಿ ಗಳ ದೃಢೀಕರಣ ಪತ್ರ & ಗುರುತಿನ ಚೀಟಿ ಸಂಗ್ರಹಿಸಬೇಕು. ಬಳಿಕ ಉದ್ಯೋಗಿಗಳ ಪ್ರಮಾಣಪತ್ರದ ಜೊತೆಗೆ ಭಾವ ಚಿತ್ರ ಸಂಗ್ರಹಿಸಿ ಗಾರ್ಮೆಂಟ್ಸ್ ಮಾಲಿಕರೇ ಕರ್ನಾಟಕ ಕಾರ್ಮಿಕ ಕಲ್ಯಾಣ ಮಂಡಳಿಯ ಈ-ಮೇಲ್ ಗೆ ಕಳುಹಿಸಬೇಕು. ಅರ್ಜಿಯ ಜೊತೆಗೆ ಗಾರ್ಮೆಂಟ್ಸ್ ಮಾಲೀಕರು ತಮ್ಮ ಪಾಲಿನ 40% ಪಾಸ್ ಮೊತ್ತ ಆರ್‌ಟಿಜಿಎಸ್ ಪಾವತಿ ಮಾಡಬೇಕು. ಹೀಗೆ ಬಂದ ಅರ್ಜಿಗಳನ್ನು ಪರಿಶೀಲಿಸಿ ಅರ್ಹರ ವಿವರಗಳು ಮಂಡಳಿ BMTCಗೆ ರವಾನಿಸಲಾಗುತ್ತದೆ.

ಗಾರ್ಮೆಂಟ್ಸ್ ನಿಂದ ಬಂದ ಅರ್ಜಿ ಹಾಗೂ ಮೊತ್ತವನ್ನು ಪರಿಶೀಲಿಸಿ ಪಟ್ಟಿಗನುಸಾರವಾಗಿ BMTC ಪಾಸ್ ವಿತರಣೆ ಮಾಡುತ್ತದೆ. ಮೆಜೆಸ್ಟಿಕ್ ಬಸ್ ನಿಲ್ದಾಣದ ಪಾಸ್ ಕೌಂಟರ್ ಗಳಿಂದ ಫಲಾನುಭವಿಗಳು ಪಾಸ್ ಪಡೆದು ಕೊಳ್ಳಬಹುದಾಗಿದ್ದು ಈ ಪಾಸ್ ಗಳು BMTC ಸಾಮಾನ್ಯ ಬಸ್ ಗಳಿಗೆ ಮಾತ್ರ ಪಾಸ್ ಅನ್ವಯವಾಗಲಿದೆ, ವೋಲ್ವೋಗೆ ಅವಕಾಶ ಇರುವುದಿಲ್ಲ. ಜನವರಿ 22 ರಿಂದ ಪಾಸ್ ವಿತರಣೆ ಆರಂಭವಾಗಲಿದೆ ಎಂದು ಬಿಎಂಟಿಸಿ ಪ್ರಕಟಣೆಯಲ್ಲಿ ತಿಳಿಸಿದೆ.

ಇದನ್ನೂ ಓದಿ : ಡೆಲ್ಟಾಕ್ಕಿಂತ 3 ಪಟ್ಟು ಅಪಾಯಕಾರಿ ಓಮಿಕ್ರಾನ್‌ : ಶಾಕ್‌ ಕೊಟ್ಟ ಆರೋಗ್ಯ ಇಲಾಖೆ, ಕಠಿಣ ಕ್ರಮಕ್ಕೆ ಕೇಂದ್ರದ ಸೂಚನೆ

ಇದನ್ನೂ ಓದಿ :  ಕೊನೆಗೂ ಓಮಿಕ್ರಾನ್ ಭಯಕ್ಕೆ ಎಚ್ಚೆತ್ತ ಜನರು: ಕೊರೊನಾ ಲಸಿಕೆಯಲ್ಲಿ ದಾಖಲೆ ಬರೆದ ಮಧ್ಯವಯಸ್ಕರು

(Free buspass likely to bring relief for women garment employees for Bangalore Urban And Rural Area )

Comments are closed.