Fazil Murder Final darshan : ಸುರತ್ಕಲ್‌ ಫಾಜಿಲ್ ಹತ್ಯೆ ಪ್ರಕರಣ : ಮಂಗಲಪೇಟೆಯಲ್ಲಿ ಅಂತಿಮ ದರ್ಶನ, ತನಿಖೆ ಚುರುಕು, 14 ಮಂದಿ ಪೊಲೀಸ್‌ ವಶಕ್ಕೆ

ಸುರತ್ಕಲ್‌ : ಸ್ನೇಹಿತನ ಅಂಗಡಿಗೆ ಬಂದಿದ್ದ ವೇಳೆಯಲ್ಲಿ ಫಾಜಿಲ್‌ (Fazil Murder Final darshan) ಮೇಲೆ ದುಷ್ಕರ್ಮಿಗಳ ತಂಡ ಮಾರಕಾಸ್ತ್ರದಿಂದ ಕಡಿದು ಹತ್ಯೆ ಮಾಡಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು ಎರಡು ತಂಡಗಳನ್ನು ರಚಿಸಿಕೊಂಡು ತನಿಖೆಯನ್ನು ಚುರುಕುಗೊಳಿಸಿದ್ದಾರೆ. ಈಗಾಗಲೇ 14 ಮಂದಿಯನ್ನು ವಶಕ್ಕೆ ತೆಗೆದುಕೊಂಡು ಪೊಲೀಸರು ವಿಚಾರಣೆ ನಡೆಸಲಾಗುತ್ತಿದೆ ಎಂದು ಮಂಗಳೂರು ನಗರ ಪೊಲೀಸ್‌ ಆಯುಕ್ತ ಎನ್.ಶಶಿಕುಮಾರ್‌ ತಿಳಿಸಿದ್ದಾರೆ. ಇನ್ನೊಂದೆಡೆಯಲ್ಲಿ ಮಂಗಲಪೇಟೆಯ ಮಸೀದಿಯಲ್ಲಿ ಫಾಜಿಲ್‌ ಅಂತ್ಯಕ್ರೀಯೆಗೆ ಸಿದ್ದತೆ ನಡೆಯುತ್ತಿದೆ.

‌ಫಾಜಿಲ್‌ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮರಣೋತ್ತರ ಕಾರ್ಯವನ್ನು ನಡೆಸಿ ಮೃತದೇಹವನ್ನು ಫಾಜಿಲ್‌ ಸಂಬಂಧಿಕರಿಗೆ ಹಸ್ತಾಂತರಿಸ ಲಾಗಿದೆ. ಈಗಾಗಲೇ ಮೃತದೇಹವನ್ನು ಮಂಗಲಪೇಟೆಯಲ್ಲಿನ ಮಸೀದಿಯಲ್ಲಿ ಸಾರ್ವಜನಿಕರ ದರ್ಶನಕ್ಕೆ ಇರಿಸಲಾಗಿದ್ದು, ನಂತರದಲ್ಲಿ ಅಂತ್ಯಕ್ರೀಯೆ ನಡೆಸಲಾಗುತ್ತದೆ.

ಇನ್ನು ಸ್ಥಳದಲ್ಲಿ ಮಂಗಳೂರು ನಗರ ಪೊಲೀಸ್‌ ಆಯುಕ್ತರಾದ ಎನ್.‌ ಶಶಿಕುಮಾರ್‌ ಅವರು ಮೊಕ್ಕಾಂ ಹೂಡಿದ್ದಾರೆ. ಸುರತ್ಕಲ್‌ ಭಾಗದಲ್ಲಿ ಬಿಗಿ ಪೊಲೀಸ್‌ ಭದ್ರತೆಯನ್ನು ಒದಗಿಸಲಾಗಿದೆ. ಮಾಧ್ಯಮಗಳ ಜೊತೆ ಮಾತನಾಡಿದ ಎನ್.‌ ಶಶಿಕುಮಾರ್‌, ಫಾಜಿಲ್‌ ಹತ್ಯೆಯ ಆರೋಪಿಗಳ ಪತ್ತೆಯಾಗಿ ಸಿಸಿಬಿ ಶೋಧ ಕಾರ್ಯವನ್ನು ಆರಂಭಿಸಿದೆ. ಈಗಾಗಲೇ ಎರಡು ಪೊಲೀಸರ ತಂಡವನ್ನು ರಚಿಸಲಾಗಿದೆ. ಪ್ರತ್ಯಕ್ಷದರ್ಶಿಗಳು ಹಾಗೂ ಫಾಜಿಲ್‌ ಮನೆಯ ಸುತ್ತಮುತ್ತಲಿನ ಜನರಿಂದ ಮಾಹಿತಿಯನ್ನು ಪಡೆಯಲಾಗಿದೆ ಎಂದಿದ್ದಾರೆ.

ಯಾರು ಕೂಡ ವದಂತಿಗಳಿಗೆ ಕಿವಿಗೊಡಬಾರದು. ಸಾಮಾಜಿಕ ಜಾಲತಾಣದಲ್ಲಿ ಯಾರೂ ಕೂಡ ಸುಳ್ಳು ಸುದ್ದಿಗಳನ್ನು ಹರಡುವ ಕಾರ್ಯವನ್ನು ಮಾಡಬಾರದು. ಒಂದೊಮ್ಮೆ ಅಂತಹ ಕೃತ್ಯವನ್ನು ಎಸಗಿದ್ರೆ ನಿರ್ಧಾಕ್ಷಿಣ್ಯ ಕ್ರಮವನ್ನು ಕೈಗೊಳ್ಳಲಾಗುತ್ತದೆ ಎಂದು ಅವರು ಅವರು ಎಚ್ಚರಿಕೆಯನ್ನು ನೀಡಿದ್ದಾರೆ. ಇನ್ನು ಶನಿವಾರ ಮುಂಜಾನೆಯ ವರೆಗೂ ನಿಷೇಧಾಜ್ಞೆಯನ್ನು ಜಾರಿಗೊಳಿಸಲಾಗಿದ್ದು, ಸುಮಾರು 19 ಚೆಕ್‌ ಪೋಸ್ಟ್‌ಗಳನ್ನು ತೆರೆಯಲಾಗಿದೆ. ರಾತ್ರಿ 10 ಗಂಟೆಯ ನಂತರ ಸಂಚರಿಸುವ ವಾಹನಗಳನ್ನು ತಪಾಸಣೆಗೆ ಒಳಪಡಿಸಲಾಗುತ್ತಿದೆ ಎಂದಿದ್ದಾರೆ.

ಪ್ರತ್ಯಕ್ಷದರ್ಶಿಗಳ ಹೇಳಿಕೆಯನ್ನು ಆಧರಿಸಿ ಕೃಷ್ಣಾಪುರ ಹಾಗೂ ಕುಳಾಯಿ ಭಾಗದಲ್ಲಿನ ಕೆಲವು ಯುವಕರನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಅಲ್ಲದೇ ಪೊಲೀಸ್‌ ಇಲಾಖೆ ತನಿಖೆಯನ್ನು ಚುರುಕುಗೊಳಿಸಿದೆ. ತನಿಖೆಗೆ ಎಲ್ಲರೂ ಸಹಕಾರ ನೀಡಬೇಕು. ಜನರು ಶಾಂತಿಯನ್ನು ಕಾಪಾಡುವ ನಿಟ್ಟಿನಲ್ಲಿ ಸಹಕಾರವನ್ನು ನೀಡುವಂತೆ ಮನವಿ ಮಾಡಿದ್ದಾರೆ.

ಇದನ್ನೂ ಓದಿ : Fazil Murder Cases : ಫಾಜಿಲ್ ಹತ್ಯೆ, ಇಂದು ಶಾಲಾ-ಕಾಲೇಜುಗಳಿಗೆ ರಜೆ

ಇದನ್ನೂ ಓದಿ : fazil murder : ಪ್ರವೀಣ್‌ ಹತ್ಯೆಯ ಬೆನ್ನಲ್ಲೇ ಸುರತ್ಕಲ್‌ನಲ್ಲಿ ಫಾಜಿಲ್‌ ಹತ್ಯೆ : ನಿಷೇಧಾಜ್ಞೆ ಜಾರಿ

Surathkal Fazil Murder Final darshan in Mangalpet 14 people in police custody

Comments are closed.