Pro Kabaddi League: ಬೆಂಗಳೂರು ಬುಲ್ಸ್‌ಗೆ ಟಕ್ಕರ್, ಕನ್ನಡಿಗನ ಸಾರಥ್ಯದ ಪುಣೇರಿ ಪಲ್ಟನ್ ಟೇಬಲ್ ಟಾಪರ್


ಪುಣೆ:(Pro Kabaddi League) ಕರ್ನಾಟಕದ ದಿಗ್ಗಜ ಕಬಡ್ಡಿ ಆಟಗಾರ ಬಿ.ಸಿ ರಮೇಶ್ ಅವರ ಗರಡಿಯಲ್ಲಿ ಪಳಗಿರುವ ಪುಣೇರಿ ಪಲ್ಟನ್ ತಂಡ (Puneri Paltan), ಪ್ರೊ ಕಬಡ್ಡಿ ಲೀಗ್ 9ನೇ ಆವೃತ್ತಿಯ (Pro Kabaddi League 9th season) ಟೂರ್ನಿಯಲ್ಲಿ ಅಗ್ರಸ್ಥಾನಕ್ಕೇರಿದೆ.

ಪುಣೆಯ ಬಾಳೇವಾಡಿಯಲ್ಲಿರುವ ಛತ್ರಪತಿ ಶಿವಾಜಿ ಸ್ಪೋರ್ಟ್ಸ್ ಕಾಂಪ್ಲೆಕ್ಸ್’ನಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಫಜಲ್ ಅತ್ರಾಚಲಿ ನಾಯಕತ್ವದ ಪುಣೇರಿ ಪಲ್ಟನ್ ಪಡೆ, ಯು.ಪಿ ಯೋಧಾ ವಿರುದ್ಧ 40-31ರ ಅಂತರದಲ್ಲಿ ಭರ್ಜರಿ ಗೆಲುವು ದಾಖಲಿಸಿತು. ಇದರೊಂದಿಗೆ ಲೀಗ್’ನಲ್ಲಿ ಆಡಿದ 10 ಪಂದ್ಯಗಳಿಂದ 6ನೇ ಗೆಲುವು ದಾಖಲಿಸಿದ ಪಲ್ಟನ್ ಪಡೆ 37 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿತು. 10 ಪಂದ್ಯಗಳಿಂದ 35 ಅಂಕ ಕಲೆ ಹಾಕಿರುವ ಬೆಂಗಳೂರು ಬುಲ್ಸ್ (Bengaluru Bulls) ಬಳಗ 2ನೇ ಸ್ಥಾನಕ್ಕೆ ಕುಸಿಯಿತು.

ಬಿ.ಸಿ ರಮೇಶ್ ಅವರ ಗರಡಿಯಲ್ಲಿ ಪಳಗಿರುವ ಪುಣೇರಿ ಪಲ್ಟನ್ ತಂಡ ಕಳೆದ 7 ಪಂದ್ಯಗಳಲ್ಲಿ ಸೋಲನ್ನೇ ಕಾಣದೆ ಅಜೇಯವಾಗಿ ಮುನ್ನುಗ್ಗುತ್ತಿದೆ. ಅಕ್ಟೋಬರ್ 14ರಂದು ಬೆಂಗಳೂರಿನಲ್ಲಿ ನಡೆದ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ ವಿರುದ್ಧ ಸೋತ ನಂತರ ಪುಣೇರಿ ಪಲ್ಟನ್ ಸೋಲನ್ನೇ ಕಂಡಿಲ್ಲ.

ಪುಣೆಯಲ್ಲಿ ಶುಕ್ರವಾರ ನಡೆದ ಮತ್ತೊಂದು ಪಂದ್ಯದಲ್ಲಿ ಮಾಜಿ ಚಾಂಪಿಯನ್ ಜೈಪುರ ಪಿಂಕ್ ಪ್ಯಾಂಥರ್ಸ್ ವಿರುದ್ಧ 40-45ರ ಅಂತರದಲ್ಲಿ ಸೋತ ಹಾಲಿ ಚಾಂಪಿಯನ್ ದಬಾಂಗ್ ಡೆಲ್ಲಿ ತಂಡ ಸತತ ಆರನೇ ಸೋಲು ಅನುಭವಿಸಿತು. ಇದಕ್ಕೂ ಮೊದಲು ನಡೆದ ದಿನದ ಮೊದಲ ಪಂದ್ಯದಲ್ಲಿ 3 ಬಾರಿಯ ಚಾಂಪಿಯನ್ ಪಾಟ್ನಾ ಪೈರೇಟ್ಸ್ ಪಡೆ, 2ನೇ ಆವೃತ್ತಿಯ ಚಾಂಪಿಯನ್ ಯು ಮುಂಬಾ ವಿರುದ್ಧ 34-31ರ ಅಂತರದಲ್ಲಿ ರೋಚಕ ಗೆಲುವು ಸಾಧಿಸಿತು.

ಇದನ್ನೂ ಓದಿ:CM Basavaraj Bommai : ಸಂಪುಟ ರಚನೆ ಸರ್ಕಸ್ : ಮತ್ತೆ ದೆಹಲಿಗೆ ಹೊರಟ ಬೊಮ್ಮಾಯಿ

ಇದನ್ನೂ ಓದಿ:Anand Mahindra Raghavindra DVGI : ಟೀಮ್ ಇಂಡಿಯಾ ಆಟಗಾರರ Shoes ಕ್ಲೀನ್ ಮಾಡಿದ ಕನ್ನಡಿಗನ ಬಗ್ಗೆ ಮಹೀಂದ್ರಾ ಚೇರ್ಮನ್ ಟ್ವೀಟ್

ಪ್ರೊ ಕಬಡ್ಡಿ ಲೀಗ್-9: ಶನಿವಾರದ ಪಂದ್ಯಗಳು

  1. ಗುಜರಾತ್ ಜೈಂಟ್ಸ್ Vs ಬೆಂಗಾಲ್ ವಾರಿಯರ್ಸ್
  2. ತಮಿಳ್ ತಲೈವಾಸ್ Vs ತೆಲುಗು ಟೈಟನ್ಸ್
  3. ಯು.ಪಿ ಯೋಧಾ Vs ಹರ್ಯಾಣ ಸ್ಟೀಲರ್ಸ್

ಸ್ಥಳ: ಛತ್ರಪತಿ ಶಿವಾಜಿ ಸ್ಪೋರ್ಟ್ಸ್ ಕಾಂಪ್ಲೆಕ್ಸ್, ಬಾಳೇವಾಡಿ; ಪುಣೆ (ಮಹಾರಾಷ್ಟ್ರ)
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್ವರ್ಕ್
ಲೈವ್ ಸ್ಟ್ರೀಮಿಂಗ್: ಡಿಸ್ನಿ+ಹಾಟ್ ಸ್ಟಾರ್

Puneri Paltan team has topped the Pro Kabaddi League 9th season tournament.

Comments are closed.