Mayank Agarwal to lead Rest of India : ಇರಾನಿ ಕಪ್ ಪಂದ್ಯಕ್ಕೆ ರೆಸ್ಟ್ ಆಫ್ ಇಂಡಿಯಾ ತಂಡ ಪ್ರಕಟ, ಕನ್ನಡಿಗ ಮಯಾಂಕ್ ಅಗರ್ವಾಲ್ ನಾಯಕ

ಬೆಂಗಳೂರು: 2021-22ನೇ ಸಾಲಿನ ರಣಜಿ ಟ್ರೋಫಿ ಚಾಂಪಿಯನ್ ಮಧ್ಯಪ್ರದೇಶ ವಿರುದ್ಧದ ಇರಾನಿ ಕಪ್ (Irani Cup) ಪಂದ್ಯಕ್ಕೆ ರೆಸ್ಟ್ ಆಪ್ ಇಂಡಿಯಾ (ಶೇಷ ಭಾರತ) ತಂಡವನ್ನು ಪ್ರಕಟಿಸಲಾಗಿದ್ದು, ಕನ್ನಡಿಗ ಮಯಾಂಕ್ ಅಗರ್ವಾಲ್ ಅವರಿಗೆ ನಾಯಕ ಪಟ್ಟ (Mayank Agarwal to lead Rest of India) ಕಟ್ಟಲಾಗಿದೆ. ಮಧ್ಯಪ್ರದೇಶ ಮತ್ತು ರೆಸ್ಟ್ ಆಫ್ ಇಂಡಿಯಾ ನಡುವಿನ ಇರಾನಿ ಕಪ್ ಪಂದ್ಯ ಮಾರ್ಚ್ 1ರಿಂದ 5ರವರೆಗೆ ಮಧ್ಯಪ್ರದೇಶದ ಗ್ವಾಲಿಯರ್’ನಲ್ಲಿರುವ ಕ್ಯಾಪ್ಟನ್ ರೂಪ್ ಸಿಂಗ್ ಕ್ರೀಡಾಂಗಣದಲ್ಲಿ ನಡೆಯಲಿದೆ.

ಮಯಾಂಕ್ ಅಗರ್ವಾಲ್ ಹೊರತು ಪಡಿಸಿದರೆ ಕರ್ನಾಟಕದ ಬೇರಾವ ಆಟಗಾರನಿಗೂ ರೆಸ್ಟ್ ಆಫ್ ಇಂಡಿಯಾ ತಂಡದಲ್ಲಿ ಸ್ಥಾನ ಸಿಕ್ಕಿಲ್ಲ. ಕರ್ನಾಟಕ ತಂಡದ ನಾಯಕನಾಗಿರುವ ಮಯಾಂಕ್ ಅಗರ್ವಾಲ್ ಪ್ರಸಕ್ತ ಸಾಲಿನ ರಣಜಿ ಟ್ರೋಫಿ ಟೂರ್ನಿಯಲ್ಲಿ 9 ಪಂದ್ಯಗಳಿಂದ ಎರಡು ದ್ವಿಶತಕಗಳ ಸಹಿತ 990 ರನ್ ಕಲೆ ಹಾಕಿದ್ದರು. ಸೌರಾಷ್ಟ್ರ ವಿರುದ್ಧ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದಿದ್ದ ಸೆಮಿಫೈನಲ್ ಪಂದ್ಯದಲ್ಲಿ ಮಯಾಂಕ್ ಅಮೋಘ ದ್ವಿಶತಕ ಬಾರಿಸಿದ್ದರು. ಆದರೆ ಸೆಮಿಫೈನಲ್’ನಲ್ಲಿ ಕರ್ನಾಟಕ ಸೋಲು ಕಂಡಿತ್ತು. ಮುಂಬೈನ ಯುವ ಬ್ಯಾಟ್ಸ್’ಮನ್ ಸರ್ಫರಾಜ್ ಖಾನ್ ಕೈಬೆರಳಿನ ಗಾಯಕ್ಕೊಳಗಾಗಿರುವ ಕಾರಣ ಅವರನ್ನು ಶೇಷ ಭಾರತ ತಂಡಕ್ಕೆ ಆಯ್ಕೆ ಮಾಡಲಾಗಿಲ್ಲ.

ಇದನ್ನೂ ಓದಿ : Jasprit Bumrah IPL 2023 : ಜಸ್ಪ್ರೀತ್ ಬುಮ್ರಾ ಐಪಿಎಲ್ 2023ರಲ್ಲಿ ಆಡುವುದು ಅನುಮಾನ !

ಇದನ್ನೂ ಓದಿ : Sourav Ganguly biopic : ಸೌರವ್ ಗಂಗೂಲಿ ಬಯೋಪಿಕ್ ಸಿನಿಮಾಕ್ಕೆ ಹೀರೋ ಸಿಕ್ಕಾಯ್ತು : ಶೀಘ್ರದಲ್ಲೇ ಸಿನಿಮಾ ಘೋಷಣೆ

ಇದನ್ನೂ ಓದಿ : Sunrisers Hyderabad new captain: ಐಪಿಎಲ್ 2023 ಕ್ಕೆ ಹೊಸ ನಾಯಕನನ್ನು ಘೋಷಿಸಿದ ಸನ್‌ರೈಸರ್ಸ್ ಹೈದರಾಬಾದ್

ಮಧ್ಯಪ್ರದೇಶ ವಿರುದ್ಧದ ಇರಾನಿ ಕಪ್ ಪಂದ್ಯಕ್ಕೆ ರೆಸ್ಟ್ ಆಫ್ ಇಂಡಿಯಾ ತಂಡ:
ಮಯಾಂಕ್ ಅಗರ್ವಾಲ್ (ನಾಯಕ), ಅಭಿಮನ್ಯು ಈಶ್ವರನ್, ಯಶಸ್ವಿ ಜೈಸ್ವಾಲ್, ಯಶ್ ಧುಲ್, ಬಾಬಾ ಇಂದ್ರಜಿತ್, ಉಪೇಂದ್ರ ಯಾದವ್ (ವಿಕೆಟ್ ಕೀಪರ್), ಅತೀತ್ ಸೇಠ್, ಸೌರಭ್ ಕುಮಾರ್, ಹಾರ್ವಿಕ್ ದೇಸಾಯಿ (ವಿಕೆಟ್ ಕೀಪರ್), ನವದೀಪ್ ಸೈನಿ, ಮುಕೇಶ್ ಕುಮಾರ್, ಚೇತನ್ ಸಕಾರಿಯಾ, ಆಕಾಶ್ ದೀಪ್, ಮಯಾಂಕ್ ಮಾರ್ಕಂಡೆ, ಪುಲ್ಕಿತ್ ನಾರಂಗ್, ಸುದೀಪ್ ಕುಮಾರ್ ಫರಮಿ.

Mayank Agarwal to lead Rest of India: Rest of India team announced for Irani Cup match, Kannadiga Mayank Agarwal is the leader.

Comments are closed.