Mitchell Starc Alyssa Healy : ಕ್ರಿಕೆಟ್ ಜಗತ್ತಿನ ಅಪರೂಪದ ಗಂಡ-ಹೆಂಡತಿ: 8 ವಿಶ್ವಕಪ್, ಒಂದು ಕಾಮನ್ವೆಲ್ತ್ ಚಿನ್ನ ಗೆದ್ದ ಭಲೇ ಜೋಡಿ

ಬೆಂಗಳೂರು: ಒಬ್ಬ ಆಸ್ಟ್ರೇಲಿಯಾ ಪುರುಷರ ಕ್ರಿಕೆಟ್ ತಂಡದ ಶರವೇಗದ ಸರದಾರ. ಮತ್ತೊಬ್ಬಾಕೆ ಆಸ್ಟ್ರೇಲಿಯಾ ಮಹಿಳಾ ಕ್ರಿಕೆಟ್ ತಂಡದ ವಿಕೆಟ್ ಕೀಪರ್ ಬ್ಯಾಟರ್. ಇಬ್ಬರೂ ಗಂಡ-ಹೆಂಡತಿ. ಈ ಭಲೇ ಜೋಡಿಯೀಗ ಕ್ರಿಕೆಟ್ ಜಗತ್ತಿನ ಅತ್ಯಂತ ಯಶಸ್ವಿ ಗಂಡ ಹೆಂಡತಿ ಜೋಡಿಯೂ ಹೌದು. ಇಬ್ಬರೂ ಸೇರಿ ಒಟ್ಟು 8 ಐಸಿಸಿ ವಿಶ್ವಕಪ್ ಗೆದ್ದಿದ್ದಾರೆ. ಅಷ್ಟೇ ಅಲ್ಲ, ಈ ಗಂಡ-ಹೆಂಡತಿಯ ಮನೆಯಲ್ಲೀಗ ಕಾಮನ್ವೆಲ್ತ್ ಗೇಮ್ಸ್ ಚಿನ್ನದ ಪದಕವೂ ರಾರಾಜಿಸುತ್ತಿದೆ. ಇದು ಆಸೀಸ್ ವೇಗಿ ಮಿಚೆಲ್ ಸ್ಟಾರ್ಕ್ ಮತ್ತು ಅವರ ಪತ್ನಿ ಅಲೀಸಾ ಹೀಲಿ (Mitchell Starc Alyssa Healy) ದಂಪತಿಯ ಯಶೋಗಾಥೆ.

32 ವರ್ಷದ ಮಿಚೆಲ್ ಸ್ಟಾರ್ಕ್ ಮತ್ತು ಅಲೀಸಾ ಹೀಲಿ 2016ರಲ್ಲಿ ಮದುವೆಯಾಗಿದ್ದರು. ಮದುವೆಯ ನಂತರವೂ ಆಟ ಮುಂದುವರಿಸಿರುವ ಅಲೀಸಾ ಹೀಲಿ, ಆಸ್ಟ್ರೇಲಿಯಾ ಮಹಿಳಾ ತಂಡದ ಸ್ಫೋಟಕ ಆರಂಭಿಕ ಆಟಗಾರ್ತಿಯಷ್ಟೇ ಅಲ್ಲದೆ, ಸ್ಟಾರ್ ವಿಕೆಟ್ ಕೀಪರ್ ಕೂಡ ಹೌದು. 1980 ಹಾಗೂ 90ರ ದಶಕದಲ್ಲಿ ಆಸ್ಟ್ರೇಲಿಯಾ ತಂಡದ ಟೆಸ್ಟ್ ವಿಕೆಟ್ ಕೀಪರ್ ಆಗಿದ್ದ ಇಯಾನ್ ಹೀಲಿಯವರ ಅಣ್ಣನ ಮಗಳೇ ಈ ಅಲೀಸಾ ಹೀಲಿ.

ಅಲೀಸಾ ಹೀಲಿ ಒಟ್ಟು ಆರು ಐಸಿಸಿ ವಿಶ್ವಕಪ್’ಗಳನ್ನು ಗೆದ್ದ ಆಸ್ಟ್ರೇಲಿಯಾ ತಂಡದ ಸದಸ್ಯೆ. 2010, 2012, 2014, 2018 ಮತ್ತು 2020ರಲ್ಲಿ ಐಸಿಸಿ ಟಿ20 ಮಹಿಳಾ ವಿಶ್ವಕಪ್’ಗಳನ್ನು ಗೆದ್ದ ಆಸೀಸ್ ತಂಡದ ಸದಸ್ಯೆಯಾಗಿದ್ದ ಹೀಲಿ, 2013ರಲ್ಲಿ ಐಸಿಸಿ ಮಹಿಳಾ ಏಕದಿನ ವಿಶ್ವಕಪ್ ಗೆದ್ದ ಆಸ್ಟ್ರೇಲಿಯಾ ತಂಡದಲ್ಲಿದ್ದರು. ಕಳೆದ ಭಾನುವಾರ ಇಂಗ್ಲೆಂಡ್’ನ ಬರ್ಮಿಂಗ್’ಹ್ಯಾಮ್’ನಲ್ಲಿ ನಡೆದ ಕಾಮನ್ವೆಲ್ತ್ ಗೇಮ್ಸ್ ಫೈನಲ್ ಪಂದ್ಯದಲ್ಲಿ ಭಾರತ ತಂಡವನ್ನು ಸೋಲಿಸಿ ಚಿನ್ನದ ಪದಕ ಗೆದ್ದ ಆಸೀಸ್ ತಂಡದಲ್ಲೂ ಅಲೀಸಾ ಹೀಲಿ ಇದ್ದರು.

ಇನ್ನು ಆಸ್ಟ್ರೇಲಿಯಾ ಪುರುಷರ ತಂಡದ ಎಡಗೈ ವೇಗದ ಬೌಲರ್ ಮಿಚೆಲ್ ಸ್ಟಾರ್ಕ್ ಎರಡು ಐಸಿಸಿ ವಿಶ್ವಕಪ್ ವಿಜೇತ ತಂಡದ ಆಟಗಾರನೆನಿಸಿದ್ದಾರೆ. 2015ರ ಐಸಿಸಿ ಏಕದಿನ ವಿಶ್ವಕಪ್ ಹಾಗೂ 2021ರ ಐಸಿಸಿ ಟಿ20 ವಿಶ್ವಕಪ್ ವಿಜೇತ ಆಸ್ಟ್ರೇಲಿಯಾ ತಂಡದಲ್ಲಿ ಮಿಚೆಲ್ ಸ್ಟಾರ್ಕ್ ಇದ್ದರು.

ಮಿಚೆಲ್ ಸ್ಟಾರ್ಕ್-ಅಲೀಸಾ ಹೀಲಿ (Mitchell Starc Alyssa Healy) ದಂಪತಿಯ ಮೋಡಿ

  • ಪುರುಷರ ಟಿ20 ವಿಶ್ವಕಪ್ (2021)
  • ಮಹಿಳೆಯರ ಟಿ20 ವಿಶ್ವಕಪ್ (2010, 2012, 2014, 2018, 2020)
  • ಪುರುಷರ ಏಕದಿನ ವಿಶ್ವಕಪ್ (2015)
  • ಮಹಿಳೆಯರ ಏಕದಿನ ವಿಶ್ವಕಪ್ (2013)
  • ಕಾಮನ್ವೆಲ್ತ್ ಗೇಮ್ಸ್ ಚಿನ್ನದ ಪದಕ (2022)

ಇದನ್ನೂ ಓದಿ : Rahul Comeback Tenison Hardik Pandya : ನಾಯಕ ಪಟ್ಟದ ಮೇಲೆ ಕಣ್ಣಿಟ್ಟಿದ್ದ ಹಾರ್ದಿಕ್ ಪಾಂಡ್ಯಗೆ ಬಿಗ್ ಶಾಕ್ ಕೊಟ್ಟ ಬಿಸಿಸಿಐ

ಇದನ್ನೂ ಓದಿ : Asia Cup Rahul Comeback: ರಾಹುಲ್‌ಗೆ ಘಾಟಿ ಸುಬ್ರಮಣ್ಯನ ಅನುಗ್ರಹ: ಏಷ್ಯಾ ಕಪ್‌ನಲ್ಲಿ ಆಡಲಿರುವ ಟೀಮ್ ಇಂಡಿಯಾದಲ್ಲಿ ಕನ್ನಡಿಗನಿಗೆ ಸ್ಥಾನ

Mitchell Starc Alyssa Healy 8 World Cup one Commonwealth gold win Couple in World of Cricket

Comments are closed.