Mohammed Shami Shaheen Shah Afridi : ಪಾಕ್ ವೇಗಿ ಶಾಹೀನ್ ಅಫ್ರಿದಿಗೆ ಬೌಲಿಂಗ್ ಟಿಪ್ಸ್ ನೀಡಿದ ಮೊಹಮ್ಮದ್ ಶಮಿ

ಬ್ರಿಸ್ಬೇನ್: ಭಾರತ ಮತ್ತು ಪಾಕಿಸ್ತಾನ ನಡುವಿನ ಟಿ20 ವಿಶ್ವಕಪ್ (T20 World Cup 2022) ಪಂದ್ಯಕ್ಕೆ ಕೌಂಟ್ ಡೌನ್ ಶುರುವಾಗಿದೆ. ಅಕ್ಟೋಬರ್ 23ರಂದು ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್’ನಲ್ಲಿ ನಡೆಯಲಿರುವ ಈ ಹೈವೋಲ್ಟೇಜ್ ಪಂದ್ಯವನ್ನು ಇಡೀ ಕ್ರಿಕೆಟ್ ಜಗತ್ತು ಎದುರು ನೋಡುತ್ತಿದೆ. ಭಾರತ ವಿರುದ್ಧದ ಮೆಗಾ ಪಂದ್ಯಕ್ಕೂ (India vs Pakistan) ಮುನ್ನ ಪಾಕಿಸ್ತಾನದ ಯುವ ಎಡಗೈ ವೇಗಿ ಶಾಹೀನ್ ಶಾ ಅಫ್ರಿದಿಗೆ (Shaheen Shah Afridi) ಟೀಮ್ ಇಂಡಿಯಾದ ಅನುಭವಿ ವೇಗಿ ಮೊಹಮ್ಮದ್ ಶಮಿ (Mohammed Shami) ಕೆಲ ಬೌಲಿಂಗ್ ಟಿಪ್ಸ್ ನೀಡಿದ್ದಾರೆ. ಬ್ರಿಸ್ಬೇನ್ ಮೈದಾನದಲ್ಲಿ ಸೋಮವಾರ ನಡೆದ ಆಸ್ಟ್ರೇಲಿಯಾ ವಿರುದ್ಧದ ಅಭ್ಯಾಸ ಪಂದ್ಯದ ನಂತರ ಶಮಿ ಜೊತೆ ನೆಟ್ಸ್’ನಲ್ಲಿ ಕಾಣಿಸಿಕೊಂಡ ಶಾಹೀನ್ ಶಾ ಅಫ್ರಿದಿ ಕೆಲ ಬೌಲಿಂಗ್ ಪಾಠಗಳನ್ನು ಹೇಳಿಸಿಕೊಂಡರು.

ದುಬೈನಲ್ಲಿ ನಡೆದ 2021ರ ಟಿ20 ವಿಶ್ವಕಪ್ ಪಂದ್ಯದಲ್ಲಿ ಭಾರತದ ಸೋಲಿಗೆ ಶಾಹೀನ್ ಶಾ ಅಫ್ರಿದಿ ಕಾರಣರಾಗಿದ್ದರು. ರೋಹಿತ್ ಶರ್ಮಾ, ಕೆ.ಎಲ್ ರಾಹುಲ್ ಮತ್ತು ವಿರಾಟ್ ಕೊಹ್ಲಿ ವಿಕೆಟ್ ಪಡೆದಿದ್ದ 22 ವರ್ಷ ಯುವ ವೇಗಿ ಅಫ್ರಿದಿ ಭಾರತದ ಬ್ಯಾಟಿಂಗ್ ಕ್ರಮಾಂಕವನ್ನು ಧ್ವಂಸ ಮಾಡಿದ್ದರು. ಏಷ್ಯಾ ಕಪ್ ಟೂರ್ನಿಗೆ ವೇಳೆ ಕಾಲಿನ ಗಾಯಕ್ಕೊಳಗಾಗಿದ್ದರಿಂದ ಭಾರತ ವಿರುದ್ಧದ ಏಷ್ಯಾ ಕಪ್ ಪಂದ್ಯದಲ್ಲಿ ಅಫ್ರಿದಿ ಆಡಿರಲಿಲ್ಲ. ಇದೀಗ ವಿಶ್ವಕಪ್ ಮುಖಾಮುಖಿಗೆ ಶಾಹೀನ್ ಅಫ್ರಿದಿ ಸಜ್ಜಾಗಿದ್ದು, ಭಾರತದ ಬ್ಯಾಟಿಂಗ್ ದಿಗ್ಗಜರ ಜೊತೆಗಿನ ಮುಖಾಮುಖಿ ತೀವ್ರ ಕುತೂಹಲ ಕೆರಳಿಸಿದೆ.

https://twitter.com/AvinashArya09/status/1581903158959570945?s=20&t=O5rNRhBiJU5hFAqhrD52rQ

ಮತ್ತೊಂದೆಡೆ ಮೊಹಮ್ಮದ್ ಶಮಿ ಆಸ್ಟ್ರೇಲಿಯಾ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಒಂದೇ ಓವರ್’ನಲ್ಲಿ 3 ವಿಕೆಟ್ ಪಡೆದು ಭಾರತಕ್ಕೆ ರೋಚಕ ಗೆಲುವು ತಂದುಕೊಟ್ಟಿದ್ದರು. ಆರಂಭದಲ್ಲಿ ಟಿ20 ವಿಶ್ವಕಪ್ ಟೂರ್ನಿಗೆ ಆಯ್ಕೆ ಮಾಡಲಾಗಿದ್ದ ಭಾರತದ 15ರ ಬಳಗದಲ್ಲಿ ಶಮಿ ಸ್ಥಾನ ಪಡೆದಿರಲಿಲ್ಲ. ಆದರೆ ವೇಗಿ ಜಸ್ಪ್ರೀತ್ ಬುಮ್ರಾ ಗಾಯಗೊಂಡು ವಿಶ್ವಕಪ್’ನಿಂದ ಹೊರಬಿದ್ದ ಕಾರಣ ಅವರ ಬದಲು ಶಮಿ ಟೀಮ್ ಇಂಡಿಯಾ ಸೇರಿಕೊಂಡಿದ್ದಾರೆ. 2021ರ ವಿಶ್ವಕಪ್ ಟೂರ್ನಿಯ ನಂತರ ಮೊಹಮ್ಮದ್ ಶಮಿ ಭಾರತ ಪರ ಟಿ20 ಪಂದ್ಯಗಳನ್ನಾಡಿಲ್ಲ.

English ಸುದ್ದಿಯನ್ನು ಓದಲು newsnext.live ಮಾಡಿ

ಇದನ್ನೂ ಓದಿ : BCCI vs PCB: “ನೀವು ಪಾಕಿಸ್ತಾನಕ್ಕೆ ಬರದಿದ್ದರೆ, ನಾವು ವಿಶ್ವಕಪ್ ಆಡಲು ಭಾರತಕ್ಕೆ ಬರಲ್ಲ” ಬಿಸಿಸಿಐಗೆ ಪಾಕ್ ಕ್ರಿಕೆಟ್ ಬೋರ್ಡ್ ಧಮ್ಕಿ

ಇದನ್ನೂ ಓದಿ : Virat Kohli with fan girl : ವಿರಾಟ್ ಕೊಹ್ಲಿ ಜೊತೆ ಬ್ರಿಸ್ಬೇನ್‌ನಲ್ಲಿ ಕಾಣಿಸಿಕೊಂಡ ಈ ಸುರಸುಂದರಾಗಿ ಯಾರು ?

Mohammed Shami Bowling tips to Shaheen Shah Afridi t20 world cup

Comments are closed.