MS Dhoni bike craze : RX100 ಬೈಕ್’ಗೆ ಹೊಸ ಲುಕ್ ಕೊಟ್ಟ ಎಂ.ಎಸ್ ಧೋನಿ; ಹೇಗಿದೆ ಗೊತ್ತಾ ಮಾಹಿ ಆರ್.ಎಕ್ಸ್ 100 ?

ರಾಂಚಿ: MS Dhoni bike craze : ಟೀಮ್ ಇಂಡಿಯಾದ ಮಾಜಿ ನಾಯಕ, ಕ್ರಿಕೆಟ್ ಜಗತ್ತು ಕಂಡ ಸಾರ್ವಕಾಲಿಕ ಶ್ರೇಷ್ಠ ನಾಯಕ ಮಹೇಂದ್ರ ಸಿಂಗ್ ಧೋನಿ (MS Dhoni) ಕ್ಯಾಪ್ಟನ್ ಕೂಲ್ ಎಂದೇ ಖ್ಯಾತಿ ಪಡೆದವರು. ಕ್ರಿಕೆಟ್ ಹೊರತಾಗಿ ಧೋನಿಯವರಿಗೆ ಒಂದಷ್ಟು ಹವ್ಯಾಸಗಳಿವೆ. ಧೋನಿ ಪ್ರಾಣಿ ಪ್ರಿಯ. ಅಷ್ಟೇ ಅಲ್ಲ, ಕಾರು ಪ್ರಿಯ, ಬೈಕ್ ಪ್ರಿಯನೂ ಹೌದು. ಧೋನಿ ಬಳಿ 10ಕ್ಕೂ ಹೆಚ್ಚು ಐಷಾರಾಮಿ ಕಾರುಗಳಿವೆ. 15ಕ್ಕೂ ಹೆಚ್ಚು ಬೈಕ್’ಗಳಿವೆ. ಜಾರ್ಖಂಡ್’ನ ರಾಂಚಿಯಲ್ಲಿರುವ ತಮ್ಮ ನಿವಾಸದಲ್ಲಿ ಕಾರು-ಬೈಕ್’ಗಳಿಗೆಂದೇ ಧೋನಿ ಗ್ಯಾರೇಜ್ ಒಂದನ್ನು ನಿರ್ಮಿಸಿದ್ದಾರೆ.

ರಾಂಚಿಯಲ್ಲಿದ್ದಾಗ ಧೋನಿ ತಲೆಗೆ ಹೆಲ್ಮೆಟ್ ಧರಿಸಿ ಬೈಕ್ ಏರಿ ಸವಾರಿ ನಡೆಸುತ್ತಾರೆ. ಇತ್ತೀಚೆಗೆ ತಮ್ಮ RX100 ಬೈಕ್ ಏರಿ ಮನೆಯಿಂದ ಜಾರ್ಖಂಡ್ ಕ್ರಿಕೆಟ್ ಸಂಸ್ಥೆ ಮೈದಾನಕ್ಕೆ ಬಂದಿದ್ದಾಗ ಧೋನಿಯವರ RX100 ಬೈಕ್ ವಿಶೇಷ ಗಮನ ಸೆಳೆದಿದೆ. ತಮ್ಮ ಫೇವರಿಟ್ ಆರ್.ಎಕ್ಸ್ 100 ಬೈಕ್’ಗೆ ಧೋನಿ ಹೊಸ ಲುಕ್ ಕೊಟ್ಟಿದ್ದಾರೆ. ಧೋನಿಯವರ RX100 ಬೈಕ್’ನ ಹೊಸ ಲುಕ್’ಗೆ ಅವರ ಅಭಿಮಾನಿಗಳು ಫಿದಾ ಆಗಿದ್ದಾರೆ.

41 ವರ್ಷದ ಎಂ.ಎಸ್ ಧೋನಿ 2020ರಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್’ಗೆ ಗುಡ್ ಬೈ ಹೇಳಿದ್ದರು. ಈ ವರ್ಷದ ಐಪಿಎಲ್ ನಂತರ ಧೋನಿ ಕ್ರಿಕೆಟ್’ನ ಎಲ್ಲಾ ಪ್ರಕಾರಗಳಿಗೆ ನಿವೃತ್ತಿ ಘೋಷಿಸಲಿದ್ದಾರೆ. ಕ್ರಿಕೆಟ್ ಜಗತ್ತು ಕಂಡ ಸಾರ್ವಕಾಲಿಕ ಶ್ರೇಷ್ಠ ನಾಯಕನಾಗಿರುವ ಧೋನಿ ಐಸಿಸಿ ಟಿ20 ವಿಶ್ವಕಪ್, ಐಸಿಸಿ ಏಕದಿನ ವಿಶ್ವಕಪ್ ಹಾಗೂ ಐಸಿಸಿ ಚಾಂಪಿಯನ್ಸ್ ಟ್ರೋಫಿಯನ್ನು ಗೆದ್ದ ಜಗತ್ತಿನ ಮೊದಲ ಮತ್ತು ಏಕೈಕ ನಾಯಕನೆಂಬ ವಿಶ್ವದಾಖಲೆ ಹೊಂದಿದ್ದಾರೆ.

ರಾಂಚಿಯಲ್ಲಿ ಶುಕ್ರವಾರ ನಡೆದ ಭಾರತ Vs ಕಿವೀಸ್ ಮೊದಲ ಟಿ20 ಪಂದ್ಯದ ವೇಳೆ ರಾಂಚಿ ರಾಂಬೊ ಖ್ಯಾತಿಯ ಟೀಮ್ ಇಂಡಿಯಾದ ದಿಗ್ಗಜ ನಾಯಕ, ಲೋಕಲ್ ಹೀರೊ ಮಹೇಂದ್ರ ಸಿಂಗ್ ಧೋನಿ (MS Dhoni) ಕ್ರೀಡಾಂಗಣದಲ್ಲಿ ಕಾಣಿಸಿಕೊಂಡಿದ್ದರು. ಪತ್ನಿ ಸಾಕ್ಷಿ ಜೊತೆ ಧೋನಿ ಪೆವಿಲಿಯನ್ ಎಂಡ್’ನಲ್ಲಿ ಕುಳಿತು ಧೋನಿ ಪಂದ್ಯ ವೀಕ್ಷಿಸಿದ್ದರು. ಧೋನಿ ಅವರನ್ನು ಮೈದಾನದ ಬಿಗ್ ಸ್ಕ್ರೀನ್’ನಲ್ಲಿ ತೋರಿಸುತ್ತಿದ್ದಂತೆ ಕ್ರೀಡಾಂಗಣದಲ್ಲಿದ್ದ ಕ್ರಿಕೆಟ್ ಪ್ರಿಯರ ಸಂಭ್ರಮ ಮುಗಿಲು ಮುಟ್ಟಿತ್ತು.

ಪಂದ್ಯದ ಹಿಂದಿನ ದಿನ, ಅಂದ್ರೆ ಗುರುವಾರ ಎಂ.ಎಸ್ ಧೋನಿ ಟೀಮ್ ಇಂಡಿಯಾ ಆಟಗಾರರನ್ನು ಡ್ರೆಸ್ಸಿಂಗ್ ರೂಮ್’ನಲ್ಲಿ ಭೇಟಿ ಮಾಡಿದ್ದರು. ಹಾರ್ದಿಕ್ ಪಾಂಡ್ಯ ನೇತೃತ್ವದ ಟೀಮ್ ಇಂಡಿಯಾದಲ್ಲಿರುವ ಯುವ ಆಟಗಾರರು ದಿಗ್ಗಜ ನಾಯಕನ ಜೊತೆ ಫೋಟೋ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದ್ದರು. ಇನ್ನು ಕೆಲ ಆಟಗಾರರು ಧೋನಿ ಅವರಿಂದ ಕ್ರಿಕೆಟ್ ಪಾಠಗಳನ್ನು ಹೇಳಿಸಿಕೊಂಡಿದ್ದರು.

ಧೋನಿ ಅವರ ಜೊತೆಗಿನ ಪೋಟೋವನ್ನು ಟ್ವೀಟ್ ಮಾಡಿದ್ದ ಟೀಮ್ ಇಂಡಿಯಾದ ಲೆಗ್ ಸ್ಪಿನ್ನರ್ ಯುಜ್ವೇಂದ್ರ ಚಹಲ್ “ನಿಮ್ಮ ಪಕ್ಕದಲ್ಲಿ ಇಂತಹ ನಾಯಕ ನಿಂತಿದ್ದಾಗ ಕಲಿಯುವಿಕೆಗೆ ಅಂತ್ಯವೆಂಬುದೇ ಇರುವುದಿಲ್ಲ. ಮಾಹಿ ಭಾಯ್ ಜೊತೆ ಅದ್ಭುತ ಕ್ಷಣಗಳನ್ನು ಕಳೆದೆ” ಎಂದು ಟ್ವೀಟ್ ಮಾಡಿದ್ದರು.

ಇದನ್ನೂ ಓದಿ : KL Rahul starts training : ಮದುವೆ ಬೆನ್ನಲ್ಲೇ ಟ್ರೈನಿಂಗ್ ಶುರು ಮಾಡಿದ ಕೆ.ಎಲ್ ರಾಹುಲ್, ಕಾಂಗರೂ ಸರಣಿಗೆ ಕನ್ನಡಿಗನ ಭರ್ಜರಿ ಸಿದ್ಧತೆ

ಇದನ್ನೂ ಓದಿ : India won : U19 ಮಹಿಳಾ ಟಿ20 ವಿಶ್ವಕಪ್ ಗೆದ್ದು ಇತಿಹಾಸ ಬರೆದ ಟೀಮ್ ಇಂಡಿಯಾ ಹುಡುಗಿಯರು

MS Dhoni bike craze new look in RX100 bike

Comments are closed.