MS Dhoni Statue : ಧೋನಿ ಬಾರಿಸಿದ್ದ ವಿಶ್ವಕಪ್ ಸಿಕ್ಸರ್ : ಚೆಂಡು ಬಿದ್ದ ಜಾಗದಲ್ಲೇ ಮಾಹಿ ಪ್ರತಿಮೆ ನಿರ್ಮಾಣ

ಮುಂಬೈ: ಭಾರತದ 2011ರ ವಿಶ್ವಕಪ್ (ICC World Cup 2011) ವಿಕ್ರಮಕ್ಕೆ ಭಾನುವಾರವಷ್ಟೇ 12 ವರ್ಷಗಳು ತುಂಬಿವೆ. ಭಾರತ ವಿಶ್ವಕಪ್ ಗೆದ್ದು 12 ವರ್ಷಗಲೇ ಕಳೆದ್ರೂ ಕ್ರಿಕೆಟ್ ಆ ನೆನಪು ಇನ್ನೂ ಕ್ರಿಕೆಟ್ ಪ್ರಿಯರ ಮನಸ್ಸಲ್ಲಿ ಹಚ್ಚ (MS Dhoni Statue) ಹಸಿರಾಗಿದೆ. ಅದರಲ್ಲೂ ಕ್ಯಾಪ್ಟನ್ ಕೂಲ್ ಧೋನಿ (MS Dhoni World cup winning sixer) ಬಾರಿಸಿದ್ದ ಈ ಮ್ಯಾಚ್ ವಿನ್ನಿಂಗ್ ಸಿಕ್ಸರ್ ಅನ್ನು ಕ್ರಿಕೆಟ್ ಪ್ರಿಯರು ಮರೆಯಲು ಸಾಧ್ಯವೇ ಇಲ್ಲ.

ಭಾರತ 2011ರಲ್ಲಿ ವಿಶ್ವಕಪ್ ಗೆದ್ದು ಸಂಭ್ರಮಿಸಿದ್ದು ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ. ಧೋನಿ ಬಾರಿಸಿದ ಸಿಕ್ಸರ್ ಅನ್ನು ಸ್ಮರಣೀಯವಾಗಿಸಲು ಮುಂಬೈ ಕ್ರಿಕೆಟ್ ಸಂಸ್ಥೆ ಮುಂದಾಗಿದೆ. ಧೋನಿ ಸಿಕ್ಸರ್ ಬಾರಿಸಿದಾಗ ಚೆಂಡು ಯಾವ ಜಾಗದಲ್ಲಿ ಬಿದ್ದಿತ್ತೋ ಅದೇ ಜಾಗದಲ್ಲಿ ಧೋನಿ ಸಿಕ್ಸರ್ ಬಾರಿಸುವತ್ತಿರುವ ಪ್ರತಿಮೆ ನಿರ್ಮಾಣ ಮಾಡಲು ಮುಂಬೈ ಕ್ರಿಕೆಟ್ ಸಂಸ್ಥೆ ಮುಂದಾಗಿದೆ ಎಂದು ಎಂಸಿಎ ಅಧ್ಯಕ್ಷ ಅಮೋಲ್ ಕಾಳೆ ಹೇಳಿದ್ದಾರೆ. ಐತಿಹಾಸಿಕ ಸ್ಮಾರಕವನ್ನು ಧೋನಿ ಅವರ ಕೈಯಿಂದಲೇ ಉದ್ಘಾಟನೆ ಮಾಡಿಸಲು ಎಂಸಿಎಂ ನಿರ್ಧರಿಸಿದೆ.

ಏಪ್ರಿಲ್ 8ರಂದು ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ (Wankhede Stadium Mumbai) ಮುಂಬೈ ಇಂಡಿಯನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳ ಮಧ್ಯೆ ಐಪಿಎಲ್ ಪಂದ್ಯ ನಡೆಯಲಿದೆ. ಆ ಪಂದ್ಯಕ್ಕೂ ಮೊದಲೇ ಧೋನಿ ಅವರ ಸ್ಮಾರಕವನ್ನು ಉದ್ಘಾಟಿಸಲು ಮುಂಬೈ ಕ್ರಿಕೆಟ್ ಸಂಸ್ಥೆ ಮುಂದಾಗಿದ್ದು, ಈ ಬಗ್ಗೆ ನಾಳೆ ಧೋನಿ ಅವರೊಂದಿಗೆ ಚರ್ಚೆ ನಡೆಸಲಿದ್ದೇವೆ ಎಂದು ಮುಂಬೈ ಕ್ರಿಕೆಟ್ ಸಂಸ್ಥೆ ಅಧ್ಯಕ್ಷ ಅಮೋಲ್ ಕಾಳೆ ಟ್ವೀಟ್ ಮಾಡಿದ್ದಾರೆ.

ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದ ದಿನವೇ ಎಂ.ಎಸ್ ಧೋನಿ ಅವರನ್ನು ಸನ್ಮಾನಿಸಲು ಮುಂಬೈ ಕ್ರಿಕೆಟ್ ಸಂಸ್ಥೆ ಮುಂದಾಗಿದೆ. 2011ರ ಏಪ್ರಿಲ್ 2ರಂದು ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಐಸಿಸಿ ಏಕದಿನ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಎಂ.ಎಸ್ ಧೋನಿ ನಾಯಕತ್ವದ ಭಾರತ ತಂಡ, ಶ್ರೀಲಂಕಾ ತಂಡವನ್ನು 6 ವಿಕೆಟ್’ಗಳಿಂದ ಮಣಿಸಿ 28 ವರ್ಷಗಳ ನಂತರ ವಿಶ್ವಕಪ್ ಗೆದ್ದಿತ್ತು.

ಇದನ್ನೂ ಓದಿ : IPL 2023 : ಐಪಿಎಲ್ ಗೆ ಕರೋನಾ ಭಯ : ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಟ್ಟುನಿಟ್ಟಿನ ನಿಯಮ ಜಾರಿ

ಇದನ್ನೂ ಓದಿ : RCB fan insulted Panjurli Daiva : ಆರ್‌ಸಿಬಿ ಅಭಿಮಾನಿಯಿಂದ ಪಂಜುರ್ಲಿ ದೈವಕ್ಕೆ ಇದೆಂಥಾ ಅವಮಾನ..? ಎಲ್ಲಾ ಕಾಂತಾರಾ ಎಫೆಕ್ಟ್!

275 ರನ್’ಗಳ ಗೆಲುವಿನ ಗುರಿ ಬೆನ್ನಟ್ಟಿದ್ದ ಭಾರತ ತಂಡವನ್ನು ನಾಯಕ ಧೋನಿ 79 ಎಸೆತಗಳಲ್ಲಿ ಅಜೇಯ 91 ರನ್ ಸಿಡಿಸಿ ಗೆಲುವಿನ ದಡ ಸೇರಿಸಿದ್ದರು. ಶ್ರೀಲಂಕಾ ವೇಗಿ ನುವಾನ್ ಕುಲಸೇಕರ ಬೌಲಿಂಗ್’ನಲ್ಲಿ ಲಾಂಗ್ ಆನ್ ವಿಭಾಗದಲ್ಲಿ ಧೋನಿ ಸಿಕ್ಸರ್ ಬಾರಿಸಿ ಭಾರತಕ್ಕೆ ವಿಶ್ವಕಪ್ ಗೆಲ್ಲಿಸಿಕೊಟ್ಟಿದ್ದರು.

MS Dhoni Statue: The World Cup Six hit by Dhoni: A statue of Mahi was built at the spot where the ball fell

Comments are closed.