Virat Kohli tattoo : ಅಧ್ಯಾತ್ಮದತ್ತ ವಾಲುತ್ತಿದ್ದಾರಾ ವಿರಾಟ್ ಕೊಹ್ಲಿ..?, ಸುಳಿವು ಬಿಟ್ಟು ಕೊಟ್ಟ ಹೊಸ ಟ್ಯಾಟೂ

ಮುಂಬೈ : ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore) ತಂಡದ ರನ್ ಮಷಿನ್ ವಿರಾಟ್ ಕೊಹ್ಲಿ (Virat Kohli tattoo) ಐಪಿಎಲ್-2023 ಟೂರ್ನಿಯಲ್ಲಿ ಭರ್ಜರಿಯಾಗಿ ಅಭಿಯಾನ ಆರಂಭಿಸಿದ್ದಾರೆ.

ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾನುವಾರ ನಡೆದಿದ್ದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಅಬ್ಬರಿಸಿದ್ದ ಕಿಂಗ್ ಕೊಹ್ಲಿ, 49 ಎಸೆತಗಳಲ್ಲಿ 6 ಬೌಂಡರಿ ಹಾಗೂ 5 ಸಿಕ್ಸರ್’ಗಳ ನೆರವಿನಿಂದ ಅಜೇಯ 82 ರನ್ ಸಿಡಿಸಿ ತಂಡಕ್ಕೆ 8 ವಿಕೆಟ್’ಗಳ ಭರ್ಜರಿ ಗೆಲುವು ತಂದುಕೊಟ್ಟಿದ್ದರು. ಈ ಬಾರಿಯ ಐಪಿಎಲ್’ಗೂ ಮುನ್ನ ವಿರಾಟ್ ಕೊಹ್ಲಿ ಅವರ ಬಲಗೈನಲ್ಲಿ ವಿಶೇಷ ಟ್ಯಾಟೂ ಒಂದು ರಾರಾಜಿಸುತ್ತಿದೆ. ಐಪಿಎಲ್ ಟೂರ್ನಿಗೆ ಮೊದಲೇ ಕೊಹ್ಲಿ ಮುಂಬೈನ ಏಲಿಯನ್ಸ್ ಟ್ಯಾಟ್ ಸ್ಟುಡಿಯೋದಲ್ಲಿ ಈ ಹೊಸ ಟ್ಯಾಟೂ ಹಾಕಿಸಿಕೊಂಡಿದ್ದಾರೆ.

ಕೊಹ್ಲಿ ಕೈಯಲ್ಲಿ ಮಿಂಚುತ್ತಿರುವ ಟ್ಯಾಟೂ ಯಾವ ಅರ್ಥವನ್ನು ಪ್ರತಿಬಿಂಬಿಸುತ್ತದೆ ಎಂಬ ಕುತೂಹಲ ಅವರ ಕೋಟ್ಯಂತರ ಅಭಿಮಾನಿಗಳಿಗಿದೆ. ಆ ಕುತೂಹಲಕ್ಕೀಗ ಉತ್ತರ ಸಿಕ್ಕಿದೆ. ವಿರಾಟ್ ಕೊಹ್ಲಿ ಅವರಿಗೆ ಟ್ಯಾಟ್ ಹಾಕಿದ ಏಲಿಯನ್ಸ್ ಟ್ಯಾಟೂ ಸ್ಟುಡಿಯೋ ಸ್ಥಾಪಕ ಸನ್ನಿ ಭಾನುಶಾಲಿ, ಕೊಹ್ಲಿ ಟ್ಯಾಟೂ ಅರ್ಥವನ್ನು ತಿಳಿಸಿದ್ದಾರೆ.

“ವಿರಾಟ್ ಕೊಹ್ಲಿ ಅವರ ಬಲಗೈನಲ್ಲಿ ಈ ಹಿಂದೆಯೇ ಹಾಕಿಸಿಕೊಂಡಿದ್ದ ಟ್ಯಾಟೂ ಇತ್ತು. ಅದನ್ನು ಮರೆ ಮಾಚಲು ಕೊಹ್ಲಿ ಬಯಸಿದ್ದರು. ಹೀಗಾಗಿ ನಾವು ಹೊಸ ವಿನ್ಯಾಸವನ್ನು ಪ್ಲಾನ್ ಮಾಡಿದೆವು. ವಿರಾಟ್ ಕೊಹ್ಲಿ ಈ ಹಾಕಿಸಿಕೊಂಡಿರುವ ಟ್ಯಾಟೂ ಅಧ್ಯಾತ್ಮವನ್ನು ಪ್ರತಿಬಿಂಬಿಸುತ್ತದೆ. ಇದು ಸೃಷ್ಠಿಯ ಮೂಲ, ಏಕತೆ, ಜೀವನದ ರಚನೆ ಹಾಗೂ ಎಲ್ಲದರ ಮೂಲವನ್ನು ಪ್ರತಿಬಿಂಬಿಸುವ ಟ್ಯಾಟೂ” ಎಂದು ಸನ್ನಿ ಭಾನುಶಾಲಿ ಹೇಳಿದ್ದಾರೆ.

ವಿರಾಟ್ ಕೊಹ್ಲಿ ಅವರ ಬಲಗೈನಲ್ಲಿರುವ ಟ್ಯಾಟೂ ಅನ್ನು 2 ಹಂತಗಳಲ್ಲಿ ಪೂರ್ಣಗೊಳಿಸಲಾಗಿದೆ. ಮೊದಲ ಹಂತವನ್ನು ಮುಂಬೈನಲ್ಲಿ ಕಂಪ್ಲೀಟ್ ಮಾಡಲಾಗಿತ್ತು. ಅದನ್ನು ಪೂರ್ತಿ ಮಾಡಲು ಸನ್ನಿ ಭಾನುಶಾಲಿ 6 ಗಂಟೆ ತೆಗೆದುಕೊಂಡಿದ್ದರು. 2ನೇ ಹಂತವನ್ನು ಬೆಂಗಳೂರಿನಲ್ಲಿ ಪೂರ್ತಿಗೊಳಿಸಲಾಗಿದ್ದು, ಅದಕ್ಕಾಗಿ 8 ಗಂಟೆಗಳನ್ನು ತೆಗೆದುಕೊಳ್ಳಲಾಗಿತ್ತು.

ಇದನ್ನೂ ಓದಿ : IPL 2023 : ಐಪಿಎಲ್ ಗೆ ಕರೋನಾ ಭಯ : ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಟ್ಟುನಿಟ್ಟಿನ ನಿಯಮ ಜಾರಿ

ಇದನ್ನೂ ಓದಿ : MS Dhoni Statue : ಧೋನಿ ಬಾರಿಸಿದ್ದ ವಿಶ್ವಕಪ್ ಸಿಕ್ಸರ್ : ಚೆಂಡು ಬಿದ್ದ ಜಾಗದಲ್ಲೇ ಮಾಹಿ ಪ್ರತಿಮೆ ನಿರ್ಮಾಣ

ಇತ್ತೀಚಿನ ದಿನಗಳಲ್ಲಿ ವಿರಾಟ್ ಕೊಹ್ಲಿ ಅಧ್ಯಾತ್ಮಿಕ ಸಂಗತಿಗಳನ್ನು ಹೆಚ್ಚು ಹೆಚ್ಚು ಇಷ್ಟ ಪಡುತ್ತಿದ್ದಾರೆ. ಕ್ರಿಕೆಟ್’ನಿಂದ ಬಿಡುವು ಸಿಕ್ಕಾಗೆಲ್ಲಾಲ ಅಧ್ಮಾತ್ಮಿಕ ಮಹಾಪುರುಷರ ದರ್ಶನ ಪಡೆಯುತ್ತಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಕ್ರಿಕೆಟ್ ಸರಣಿಗೂ ಮುನ್ನ ವಿರಾಟ್ ಕೊಹ್ಲಿ, ಪತ್ನಿ ಅನುಷ್ಕಾ ಶರ್ಮಾ ಮತ್ತು ಪುತ್ರಿ ವಾಮಿಕಾ ಕೊಹ್ಲಿ ಜೊತೆ ಉತ್ತರಾಖಂಡ್’ನ ಹೃಷಿಕೇಶದಲ್ಲಿರುವ ಸ್ವಾಮಿ ದಯಾನಂದ ಆಸ್ರಮಕ್ಕೆ ಭೇಟಿ ಕೊಟ್ಟಿದ್ದರು.

Virat Kohli tattoo : Is Virat Kohli leaning towards spirituality..?, the new tattoo that gave a clue

Comments are closed.