Punjab CM Bhagwant Mann : ವೈವಾಹಿಕ ಜೀವನಕ್ಕೆ ಕಾಲಿರಿಸಿದ ಪಂಜಾಬ್​ ಸಿಎಂ ಭಗವಂತ್​ಮಾನ್ : ಯಾರು ಈ ಗುರುಪ್ರೀತ್​ ಕೌರ್​, ಇಲ್ಲಿದೆ ಮಾಹಿತಿ

ಚಂಡೀಗಢ :Punjab CM Bhagwant Mann : ಪಂಜಾಬ್​ ಸಿಎಂ ಭಗವಂತ್​ ಮಾನ್​ ಚಂಡೀಗಢದ ತಮ್ಮ ನಿವಾಸದಲ್ಲಿ ನಡೆದ ಖಾಸಗಿ ಸಮಾರಂಭದಲ್ಲಿ ಡಾ. ಗುರುಪ್ರೀತ್​ ಕೌರ್ ಜೊತೆಯಲ್ಲಿ ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದಾರೆ. 2015ರಲ್ಲಿ ತಮ್ಮ ಮೊದಲ ಪತ್ನಿಗೆ ಭಗವಂತ್​ ಮಾನ್ ವಿಚ್ಚೇದನ ನೀಡಿದ್ದರು. 1993ರಲ್ಲಿ ಜನಿಸಿರುವ ಗುರುಪ್ರೀತ್​ ಕೌರ್​ 48 ವರ್ಷದ ಭಗವಂತ್​ ಮಾನ್​​ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಈ ಕಾರ್ಯಕ್ರಮದಲ್ಲಿ ಪಂಜಾಬ್​ ಸಿಎಂ ಭಗವಂತ್​ ಮಾನ್​ ತಾಯಿ, ಸಹೋದರಿ , ಸಂಬಂಧಿಗಳು ಹಾಗೂ ಕೆಲವು ಅತಿಥಿಗಳು ಮಾತ್ರ ಹಾಜರಾಗಿದ್ದರು. ದೆಹಲಿ ಸಿಎಂ ಹಾಗೂ ಆಮ್​ ಆದ್ಮಿ ಪಕ್ಷದ ರಾಷ್ಟ್ರೀಯ ಸಂಚಾಲಕ ಅರವಿಂದ ಕೇಜ್ರಿವಾಲ್​​ ಹಾಗೂ ಅವರ ಕುಟುಂಬ ಮತ್ತು ಆಪ್​ ಹಿರಿಯ ನಾಯಕ, ರಾಜ್ಯಸಭಾ ಸದಸ್ಯ ರಾಘವ್​ ಚಡ್ಡಾ ಈ ಕಾರ್ಯಕ್ರಮದಲ್ಲಿ ಹಾಜರಿದ್ದು ನವಜೋಡಿಗಳಿಗೆ ಶುಭಹಾರೈಸಿದರು.


ಪಂಜಾಬ್ ಸಿಎಂ ಭಗವಂತ್​ ಮಾನ್​ ಜೊತೆಯಲ್ಲಿ ವೈವಾಹಿಕ ಜೀವನಕ್ಕೆ ಕಾಲಿರಿಸಿದ ಡಾ. ಗುರುಪ್ರೀತ್ ಕೌರ್​ ಬಗ್ಗೆ ಇಲ್ಲಿದೆ ಮಾಹಿತಿ :

ಡಾ.ಗುರುಪ್ರೀತ್ ಕೌರ್​ ವೃತ್ತಿಯಲ್ಲಿ ವೈದ್ಯರಾಗಿದ್ದಾರೆ. ಹರಿಯಾಣ ಕುರುಕ್ಷೇತ್ರದ ಪೆಹೋವಾದಲ್ಲಿ ಜನಿಸಿದ ಗುರುಪ್ರೀತ್​ ಕೌರ್​ ಮುಲ್ಲಾನದ ಮಹಾರಾಜ ಮಾರ್ಕಂಡೇಶ್ವರ ವಿಶ್ವವಿದ್ಯಾಲಯದಲ್ಲಿ (ಎಂಎಂಯು) ಅಧ್ಯಯನ ಮಾಡಿದರು. ಗುರ್‌ಪ್ರೀತ್ ಚಿಕ್ಕಪ್ಪ, ಗುರ್ಜಿಂದರ್ ಸಿಂಗ್ ನಟ್ ಆಪ್​ ಸದಸ್ಯರಾಗಿದ್ದಾರೆ.. ಮದುವೆ ಕುರಿತು ಮಾತನಾಡಿದ ಅವರು, ಸುಮಾರು ಎರಡು ವರ್ಷಗಳಿಂದ ಕುಟುಂಬಗಳ ನಡುವೆ ಮದುವೆ ಮಾತುಕತೆ ನಡೆಯುತ್ತಿತ್ತು ಎಂಬ ಬಗ್ಗೆ ಮಾಹಿತಿ ನೀಡಿದ್ದಾರೆ. ಗುರುಪ್ರೀತ್​ ಕೌರ್​ 32 ವರ್ಷ ಪ್ರಾಯದವರಾಗಿದ್ದು ನಾಲ್ಕು ವರ್ಷಗಳ ಹಿಂದೆ ಎಂಬಿಬಿಎಸ್​ ವ್ಯಾಸಂಗವನ್ನು ಪೂರ್ಣಗೊಳಿಸಿದ್ದಾರೆ. ಗುರುಪ್ರೀತ್​ ತಂದೆ ಇಂದರ್​ಜೀತ್​ ಸಿಂಗ್​ ನತ್​​ ಮಡನಾಪುರ ಗ್ರಾಮದ ಸರಪಂಚ್​ ಆಗಿದ್ದರು.

ಗುರುಪ್ರೀತ್​​ ವೈದ್ಯಕೀಯ ವೃತ್ತಿಯನ್ನು ಅಭ್ಯಾಸ ಮಾಡುತ್ತಾ ಮೊಹಾಲಿಯಲ್ಲಿ ತಮ್ಮ ಸ್ವಂತ ಮನೆಯಲ್ಲಿ ಕುಟುಂಬಸ್ಥರ ಜೊತೆ ನೆಲೆಸಿದ್ದಾರೆ. ಗುರುಪ್ರೀತ್​ ಇಂದರ್​ಜೀತ್​ ಸಿಂಗ್​ರ ಮೂರನೆಯ ಮಗಳು ಎನ್ನಲಾಗಿದೆ. ಭಗವಂತ್​ ಮಾನ್​ ಪಂಜಾಬ್​ನ ಸಿಎಂ ಪ್ರಮಾಣ ವಚನ ಸ್ವೀಕರಿಸುವ ಸಂದರ್ಭದಲ್ಲಿ ಈ ಕಾರ್ಯಕ್ರಮಕ್ಕೆ ಗುರುಪ್ರೀತ್ ಕೌರ್​ ಕೂಡ ಹಾಜರಾಗಿದ್ದರು. ಇದೇ ಕಾರ್ಯಕ್ರಮದಲ್ಲಿ ಭಗವಂತ್​ ಮಾನ್​ಗೆ ಮೊದಲ ಪತ್ನಿಯಿಂದ ಜನಿಸಿದ ಇಬ್ಬರು ಮಕ್ಕಳು ಕೂಡ ಆಗಮಿಸಿದ್ದರು. ಭಗವಂತ್​ ಮಾನ್​ಗೆ ಮದುವೆಯಾಗಲು ಅವರ ತಾಯಿ ಹಾಗೂ ಸಹೋದರಿ ಸೇರಿ ಗುರುಪ್ರೀತ್​ ಕೌರ್​ರನ್ನು ಆಯ್ಕೆ ಮಾಡಿದ್ದರು ಎನ್ನಲಾಗಿದೆ.

ಇದನ್ನು ಓದಿ : section 144 imposed : ಕೆರೂರಿನಲ್ಲಿ ಅನ್ಯಕೋಮಿನ ಸಂಘರ್ಷದ ವೇಳೆ ಚಾಕು ಇರಿತ : ನಿಷೇಧಾಜ್ಞೆ ಜಾರಿ

ಇದನ್ನೂ ಓದಿ : murdering Chandrasekhar Guruji : ಚಂದ್ರಶೇಖರ್​ ಗುರೂಜಿ ಹತ್ಯೆ ಪ್ರಕರಣ : ಆರೋಪಿಗಳ ಹೆಡೆಮುರಿ ಕಟ್ಟಿದ ಪೊಲೀಸರು

Punjab CM Bhagwant Mann got married in a private ceremony today; lesser-known facts about his wife Gurpreet Kaur

Comments are closed.