Assistant commissioner : ಬೆಚ್ಚಿ ಬೀಳಿಸುತ್ತೆ ಪೊಲೀಸ್ ಅಧಿಕಾರಿ ಮೇಲೆ ದಾಳಿಯ ದೃಶ್ಯ

ಕೋಲ್ಕತ್ತಾ : ( Assistant commissioner attacked) ಪಶ್ಚಿಮ ಬಂಗಾಳದಲ್ಲಿ ಸಿಎಂ ಮಮತಾ ಬ್ಯಾನರ್ಜಿ ನೇತೃತ್ವದ ಆಡಳಿತ ಪಕ್ಷ  ಟಿಎಂಸಿ ಮತ್ತು ವಿಪಕ್ಷ ನಡುವಿನ ಸಮರ ತಾರಕ್ಕೇರಿದೆ. ಕೋಲ್ಕತ್ತಾ ಅಕ್ಷರಶಃ ರಣರಂಗವಾಗಿ ಬದಲಾಗಿದೆ. ಮಂಗಳವಾರ ಬಿಜೆಪಿ ಕಾರ್ಯಕರ್ತರ ‘ನಬನ್ನಾ’ ರ್ಯಾಲಿ ವೇಳೆ ಹಿಂಸಾಚಾರ ನಡೆದಿದೆ. ಅದರಲ್ಲೂ ಅಸಿಸ್ಟಂಟ್ ಪೊಲೀಸ್ ಕಮಿಷನರ್ ಮೇಲೆ ದಾಳಿ ಮಾಡಿರೋ ದೃಶ್ಯ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ದೃಶ್ಯದಲ್ಲಿ ಅಸಿಸ್ಟಂಟ್ ಕಮಿಷನರ್ ಮೇಲೆ ಗುಂಪೊಂದು ದೊಣ್ಣೆಯಿಂದ ಹೊಡೆದಿದೆ. ಜನರ ನಡುವೆ ಸಿಕ್ಕ ಪೊಲೀಸ್ ಅಧಿಕಾರಿ ವಿಲವಿಲ ಒದ್ದಾಡಿದ್ದಾರೆ. ಕಿಡಿಗೇಡಿಗಳ ಕೈಯಿಂದ ತಪ್ಪಿಸಿಕೊಳ್ಳಲು ಯತ್ನಿಸಿದರೂ ಬಿಡದೇ, ಪೊಲೀಸ್ ಅಧಿಕಾರಿಯ ಕಾಲರ್ ಹಿಡಿದು ಎಳೆದಾಡಿದ್ದಾರೆ. ನೆಲಕ್ಕೆ ಕೆಡವಿ, ದನಕ್ಕೆ ಬಡಿದಂತೆ ದೊಣ್ಣೆಗಳಿಂದ ಮನಬಂದಂತೆ ಹಲ್ಲೆ ಮಾಡಿದ್ದಾರೆ. ಅದೃಷ್ಟವಶಾತ್ ಪೊಲೀಸ್ ಅಧಿಕಾರಿ ಹೆಲ್ಮೆಟ್ ಧರಿಸಿದ್ದರಿಂದ ತಲೆಗೆ ಗಂಭೀರ ಗಾಯಗಳೇನೂ ಆಗಿಲ್ಲ ಬಳಿಕ ಆ ಪೊಲೀಸ್ ಅಧಿಕಾರಿ ಉದ್ರಿಕ್ತರ ಕೈಯಿಂದ ತಪ್ಪಿಸಿಕೊಂಡು ಹೋಗಿದ್ದಾರೆ

ಮಮತಾ ಬ್ಯಾನರ್ಜಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರದ ವಿರುದ್ಧ ಬಿಜೆಪಿ ಮಂಗಳವಾರ ದೊಡ್ಡ ಹೋರಾಟಕ್ಕೆ ಇಳಿದಿತ್ತು. ಇತ್ತೀಚೆಗೆ ಪಶ್ಚಿಮ ಬಂಗಾಳದ ಸರ್ಕಾರದ ಸಚಿವರು, ಶಾಸಕರ ವಿರುದ್ಧ ಗಂಭೀರ ಆರೋಪಗಳು ಕೇಳಿ ಬಂದಿದ್ವು. ಅಲ್ದೆ ಪಶ್ಚಿಮ ಬಂಗಾಳದ ಹಲವೆಡೆ ಟಿಎಂಸಿ ಶಾಸಕರು, ಅಧಿಕಾರಿಗಳ ಮನೆಯಲ್ಲಿ ಅಪಾರ ಪ್ರಮಾಣದ ಹಣ ಪತ್ತೆಯಾಗಿದ್ವು. ಸರ್ಕಾರದ ದುರಾಡಳಿತದ ವಿರುದ್ಧ ಬಿಜೆಪಿ ಮಂಗಳವಾರ ಕೋಲ್ಕತ್ತಾದಲ್ಲಿ ನಬನ್ನಾ ರ್ಯಾಲಿ, ಅಂದ್ರೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಕಚೇರಿಗೆ ಮುತ್ತಿಗೆ ಹಾಕಲು ಕರೆ ನೀಡಿತ್ತು. ಪಶ್ಚಿಮ ಬಂಗಾಳದ ಪ್ರತಿ ಜಿಲ್ಲೆ ಜಿಲ್ಲೆಯಿಂದಲೂ, ಹಳ್ಳಿ ಹಳ್ಳಿಯಿಂದಲೂ ಬಿಜೆಪಿ ಕಾರ್ಯಕರ್ತರು ಕೋಲ್ಕತ್ತಾಗೆ ಆಗಮಿಸಿದ್ರು.

ಪ್ರತಿಭಟನೆಗೆ ಆಗಮಿಸಿದ ಜನರನ್ನ ಪೊಲೀಸರು ಮಾರ್ಗ ಮಧ್ಯೆಯೇ ತಡೆದಿದ್ರು. ವಿಧಾನಸಭೆ ವಿಪಕ್ಷ ನಾಯಕ ಬಿಜೆಪಿ ಸುವೇಂಧು ಅಧಿಕಾರಿ ಸೇರಿದಂತೆ ಹಲವರನ್ನ ಪೊಲೀಸರು ವಶಕ್ಕೆ ಪಡೆದಿದ್ರು. ಬಳಿಕ ಪ್ರತಿಭಟನಾ ಮೆರವಣಿಗೆ ಹಿಂಸಾರೂಪಕ್ಕೆ ತಿರುಗಿತ್ತು. ಉದ್ರಿಕ್ತರ ಗುಂಪು ಪೊಲೀಸ್ ವಾಹನಗಳಿಗೆ ಬೆಂಕಿ ಹಚ್ಚಿ ಅಟ್ಟಹಾಸ ಮೆರೆದಿದ್ರು.

https://twitter.com/AdnanAliKhan555/status/1569713805885849600

ಪ್ರಕರಣ ಸಂಬಂಧ ಪೊಲೀಸರು 1235ಕ್ಕೂ ಹೆಚ್ಚು ಬಿಜೆಪಿ ಕಾರ್ಯಕರ್ತರನ್ನ ಬಂಧಿಸಿದ್ದಾರೆ ಎನ್ನಲಾಗಿದ್ದು, ಹಿಂಸಾಚಾರ ಪ್ರತಿಭಟನೆ ವೇಳೆ ಮೂವರಿಗೆ ಗಂಭೀರ ಗಾಯಗಳಾಗಿವೆ. ಮಂಗಳವಾರದ ಪ್ರತಿಭಟನೆ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಟಿಎಂಸಿ ನಡುವಿನ ಮತ್ತೊಂದು ಮಹಾಯುದ್ಧಕ್ಕೆ ಮುನ್ನುಡಿ ಬರೆದಿದೆ.

ಇದನ್ನೂ ಓದಿ : husband put gum on his wife’s private part :ನಶೆಯಲ್ಲಿ ಪತ್ನಿಯ ಖಾಸಗಿ ಅಂಗಕ್ಕೆ ಗಮ್ ಹಾಕಿದ ಪಾಪಿ ಪತಿ

ಇದನ್ನೂ ಓದಿ : House Demolished: ಬಾಲಕಿಗೆ ಲೈಂಗಿಕ ದೌರ್ಜನ್ಯ.. ಶಾಲಾ ಬಸ್ ಡ್ರೈವರ್ ಮನೆ ಧ್ವಂಸ

Assistant commissioner Police’s assistant commissioner attacked during the BJP rally

Comments are closed.