Pandya T20 captain: ಭಾರತ ಟಿ20 ತಂಡದ ನಾಯಕತ್ವದಿಂದ ರೋಹಿತ್’ಗೆ ಕೊಕ್, ಹಾರ್ದಿಕ್ ಪಾಂಡ್ಯ ಹೊಸ ಕ್ಯಾಪ್ಟನ್

ಬೆಂಗಳೂರು: (Pandya T20 captain) ಐಸಿಸಿ ಟಿ20 ವಿಶ್ವಕಪ್ ವೈಫಲ್ಯದ ನಂತರ ಟೀಮ್ ಇಂಡಿಯಾದಲ್ಲಿ ಭಾರೀ ಬದಲಾವಣೆಗಳಾಗುವ ಸಾಧ್ಯತೆಯಿದೆ. ಮುಖ್ಯವಾಗಿ ಹಿರಿಯ ಆಟಗಾರರ ಮೇಲೆ ತೂಗುಕತ್ತಿ ತೂಗುತ್ತಿದ್ದು, ಹಿಟ್’ಮ್ಯಾನ್ ರೋಹಿತ್ ಶರ್ಮಾ (Rohit Sharma) ಟಿ20 ತಂಡದ ನಾಯಕತ್ವ ಕಳೆದುಕೊಳ್ಳುವ ಸಾಧ್ಯತೆ ದಟ್ಟವಾಗಿದೆ.

ರೋಹಿತ್ ಶರ್ಮಾ ಅವರ ಬದಲು ಆಲ್ರೌಂಡರ್ ಹಾರ್ದಿಕ್ ಪಾಂಡ್ಯ (Pandya T20 captain) ಟೀಮ್ ಇಂಡಿಯಾದ ಟಿ20 ತಂಡದ ಕಾಯಂ ನಾಯಕನಾಗಿ ನೇಮಕಗೊಳ್ಳಲಿದ್ದಾರೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.

ಮುಂಬರು ಶ್ರೀಲಂಕಾ ವಿರುದ್ಧದ 3 ಪಂದ್ಯಗಳ ಟಿ20 ಸರಣಿಗೂ ಮುನ್ನವೇ ಟಿ20 ತಂಡಕ್ಕೆ ಹೊಸ ನಾಯಕನ ಆಯ್ಕೆ ನಿಚ್ಚಳವಾಗಿದೆ. ರೋಹಿತ್ ಶರ್ಮಾ ಟೀಮ್ ಇಂಡಿಯಾ ಏಕದಿನ ಹಾಗೂ ಟೆಸ್ಟ್ ತಂಡದ ನಾಯಕನಾಗಿ ಮುಂದುವರಿಯಲಿದ್ದಾರೆ ಎಂದು ಬಿಸಿಸಿಐನ ಉನ್ನತ ಮೂಲಗಳು ಹೇಳಿವೆ.

2023ರಲ್ಲಿ ಭಾರತದಲ್ಲೇ ನಡೆಯಲಿರುವ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯವರೆಗೆ ರೋಹಿತ್ ಶರ್ಮಾ ಟೀಮ್ ಇಂಡಿಯಾ ನಾಯಕನಾಗಿ ಮುಂದುವರಿಯಲಿದ್ದಾರೆ. ವಿಶ್ವಕಪ್ ಬಳಿಕ ಟೆಸ್ಟ್ ಹಾಗೂ ಏಕದಿನ ತಂಡಕ್ಕೂ ಹೊಸ ನಾಯಕನ ನೇಮಕವಾಗಲಿದೆ.

“ಇದು ಬದಲಾವಣೆಯ ಸಮಯ. ರೋಹಿತ್ ಶರ್ಮಾ ಅವರಿಗೆ ವಯಸ್ಸಾಗುತ್ತಿದೆ. ನಾವೀಗ 2024ರ ಟಿ20 ವಿಶ್ವಕಪ್’ಗೆ ಸಿದ್ಧತೆ ಆರಂಭಿಸಬೇಕಿದೆ. ಟಿ20 ತಂಡದ ನಾಯಕತ್ವಕ್ಕೆ ಹಾರ್ದಿಕ್ ಪಾಂಡ್ಯ ಉತ್ತಮ ಆಯ್ಕೆಯಾಗಲಿದ್ದಾರೆ. ಭಾರತದ ಮುಂದಿನ ಟಿ20 ಸರಣಿಗೂ ಮುನ್ನ ಹಾರ್ದಿಕ್ ಪಾಂಡ್ಯ ಅವರನ್ನು ಟಿ20 ತಂಡದ ನಾಯಕನಾಗಿ ಬಿಸಿಸಿಐ ಆಯ್ಕೆ ಸಮಿತಿ ಘೋಷಿಸಲಿದೆ” ಎಂದು ಬಿಸಿಸಿಐನ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ : Pro Kabaddi League: ಇಂದಿನಿಂದ ಮುತ್ತಿನ ನಗರಿಯಲ್ಲಿ ಕಬಡ್ಡಿ ಹಬ್ಬ, ಮೊದಲ ದಿನವೇ ತ್ರಿಪಲ್ ಪಂಗಾ

ಇದನ್ನೂ ಓದಿ : Delhi vs Karnataka: ಕನ್ನಡಿಗರ ಪೌರುಷಕ್ಕೆ ಡೆಲ್ಲಿ ಢಮಾರ್, ಸತತ 4ನೇ ಜಯ ದಾಖಲಿಸಿದ ಕರ್ನಾಟಕ

29 ವರ್ಷದ ಹಾರ್ದಿಕ್ ಪಾಂಡ್ಯ ಸದ್ಯ ನ್ಯೂಜಿಲೆಂಡ್’ನಲ್ಲಿ ನಡೆಯುತ್ತಿರುವ 3 ಪಂದ್ಯಗಳ ಟಿ20 ಸರಣಿಯಲ್ಲಿ (India Vs New Zeeland T20 series) ಭಾರತ ತಂಡವನ್ನು ಮುನ್ನಡೆಸುತ್ತಿದ್ದಾರೆ. ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಮತ್ತು ಕೆ.ಎಲ್ ರಾಹುಲ್ ಅವರಿಗೆ ವಿಶ್ರಾಂತಿ ನೀಡಲಾಗಿದ್ದು, ಯುವ ಪಡೆಯ ನೇತೃತ್ವವನ್ನು ಹಾರ್ದಿಕ್ ಪಾಂಡ್ಯ ವಹಿಸಿಕೊಂಡಿದ್ದಾರೆ.

ಹಾರ್ದಿಕ್ ಪಾಂಡ್ಯ ಅವರನ್ನು ಟಿ20 ತಂಡದ ಖಾಯಂ ನಾಯಕನನ್ನಾಗಿ ನೇಮಕ ಮಾಡುವುದರಲ್ಲಿ ತಪ್ಪೇನೂ ಇಲ್ಲ ಎಂದು ಟೀಮ್ ಇಂಡಿಯಾದ ಮಾಜಿ ಕೋಚ್ ರವಿಶಾಸ್ತ್ರಿ ಅಭಿಪ್ರಾಯ ಪಟ್ಟಿದ್ದಾರೆ. ನ್ಯೂಜಿಲೆಂಡ್ ಪ್ರವಾಸದಲ್ಲಿ ಭಾರತ ತಂಡದ ಕೋಚಿಂಗ್ ಜವಾಬ್ದಾರಿ ನಿಭಾಯಿಸುತ್ತಿರುವ ಮಾಜಿ ಕ್ರಿಕೆಟಿಗ ವಿವಿಎಸ್ ಲಕ್ಷ್ಮಣ್ ಕೂಡ ಹಾರ್ದಿಕ್ ಪಾಂಡ್ಯ ಅವರ ನಾಯಕತ್ವದ ಕೌಶಲ್ಯದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.

(Pandya T20 captain) After the failure of the ICC T20 World Cup, there is a possibility of huge changes in the Indian team. With the weight hanging mainly on the senior players, hitman Rohit Sharma is likely to lose the captaincy of the T20 team.

Comments are closed.