India Vs New Zeeland match cancelled: ಭಾರತ Vs ನ್ಯೂಜಿಲೆಂಡ್ ಟಿ20 ಸರಣಿ: ಮೊದಲ ಪಂದ್ಯ ಮಳೆಯಿಂದ ರದ್ದು

ವೆಲ್ಲಿಂಗ್ಟನ್: (India Vs New Zeeland match cancelled) ಪ್ರವಾಸಿ ಭಾರತ ಮತ್ತು ಆತಿಥೇಯ ನ್ಯೂಜಿಲೆಂಡ್ ತಂಡಗಳ ನಡುವಿನ 3 ಪಂದ್ಯಗಳ ಟಿ20 ಸರಣಿಯ (India Vs New Zeeland t20 series) ಮೊದಲ ಪಂದ್ಯ ಮಳೆಯಿಂದ ರದ್ದಾಗಿದೆ. ವೆಲ್ಲಿಂಗ್ಟನ್’ನ ಸ್ಕೈ ಸ್ಟೇಡಿಯಂನಲ್ಲಿ (Sky stadium in Wellington) ನಡೆಯಬೇಕಿದ್ದ ಪಂದ್ಯ ಒಂದೂ ಎಸೆತ ಕಾಣದೆ ರದ್ದಾಯಿತು. ಕನಿಷ್ಠ ಟಾಸ್’ಗೂ ಮಳೆರಾಯ ಅವಕಾಶ ಮಾಡಿಕೊಡಲಿಲ್ಲ.

ಭಾರತ ಮತ್ತು ನ್ಯೂಜಿಲೆಂಡ್ ತಂಡಗಳು(India Vs New Zeeland match cancelled) ಆಸ್ಟ್ರೇಲಿಯಾದಲ್ಲಿ ನಡೆದ ಐಸಿಸಿ ಟಿ20 ವಿಶ್ವಕಪ್ (T20 World Cup 2022) ಟೂರ್ನಿಯ ಸೆಮಿಫೈನಲ್’ನಲ್ಲಿ ಸೋಲು ಕಂಡಿದ್ದವು. ಭಾರತ ತಂಡ ಇಂಗ್ಲೆಂಡ್(India Vs New Zeeland match cancelled) ವಿರುದ್ಧ 10 ವಿಕೆಟ್’ಗಳ ಹೀನಾಯ ಸೋಲು ಕಂಡಿದ್ರೆ, ನ್ಯೂಜಿಲೆಂಡ್ ತಂಡ ಪಾಕಿಸ್ತಾನ ವಿರುದ್ಧ ಸೋತಿತ್ತು. ವಿಶ್ವಕಪ್ ಸೆಮಿಫೈನಲ್ ಸೋಲಿನ ಬಳಿಕ ಉಭಯ ತಂಡಗಳು ಟಿ20 ಸರಣಿಯಲ್ಲಿ ಮುಖಾಮುಖಿಗೆ ಸಜ್ಜಾಗಿದ್ದವು. ಆದರೆ ಮೊದಲ ಪಂದ್ಯಕ್ಕೆ ಮಳೆರಾಯ ಕಾಟ ಕೊಟ್ಟಿದ್ದು, ಒಂದೇ ಒಂದು ಎಸೆತಕ್ಕೂ ವರುಣದೇವ ಅವಕಾಶವನ್ನೇ ನೀಡಲಿಲ್ಲ. ರಾತ್ರಿ 8.52ಕ್ಕೆ (ನ್ಯೂಜಿಲೆಂಡ್ ಕಾಲಮಾನ) ಮೈದಾನವನ್ನು ಪರೀಕ್ಷಿಸಿದ ಅಂಪೈರ್’ಗಳು ಮತ್ತು ಮ್ಯಾಚ್ ರೆಫ್ರಿ ಪಂದ್ಯ ಮುಂದುವರಿಯಸು ಸಾಧ್ಯವಾಗದ ಕಾರಣ ಪಂದ್ಯ ರದ್ದು ಎಂದು ಘೋಷಿಸಿದರು.

ಮಳೆಯಿಂದಾಗಿ ಪಂದ್ಯ ನಡೆಯದ ಕಾರಣ ಭಾರತ ಮತ್ತು ನ್ಯೂಜಿಲೆಂಡ್ ತಂಡದ ಆಟಗಾರರು footvolley (ಕಾಲಿನಲ್ಲಿ ವಾಲಿಬಾಲ್ ಆಡುವುದು) ಆಡುವ ಮೂಲಕ ಗಮನ ಸೆಳೆದರು. ಎರಡೂ ತಂಡಗಳ ಆಟಗಾರರು footvolley ಆಡುತ್ತಿರುವ ವೀಡಿಯೊವನ್ನು ಬಿಸಿಸಿಐ ತನ್ನ ಟ್ವಿಟರ್ ಖಾತೆಯಲ್ಲಿ ಪ್ರಕಟಿಸಿದೆ.

ಇದನ್ನೂ ಓದಿ : Pandya T20 captain: ಭಾರತ ಟಿ20 ತಂಡದ ನಾಯಕತ್ವದಿಂದ ರೋಹಿತ್’ಗೆ ಕೊಕ್, ಹಾರ್ದಿಕ್ ಪಾಂಡ್ಯ ಹೊಸ ಕ್ಯಾಪ್ಟನ್

ಇದನ್ನೂ ಓದಿ : Pro Kabaddi League: ಇಂದಿನಿಂದ ಮುತ್ತಿನ ನಗರಿಯಲ್ಲಿ ಕಬಡ್ಡಿ ಹಬ್ಬ, ಮೊದಲ ದಿನವೇ ತ್ರಿಪಲ್ ಪಂಗಾ

ಇದನ್ನೂ ಓದಿ : Delhi vs Karnataka: ಕನ್ನಡಿಗರ ಪೌರುಷಕ್ಕೆ ಡೆಲ್ಲಿ ಢಮಾರ್, ಸತತ 4ನೇ ಜಯ ದಾಖಲಿಸಿದ ಕರ್ನಾಟಕ

ಸರಣಿಯ 2ನೇ ಪಂದ್ಯ ಭಾನುವಾರ (ನವೆಂಬರ್ 20) ಮೌಂಟ್ ಮೌಂಗ್’ನ್ಯುಯ್’ನಲ್ಲಿ ನಡೆಯಲಿದ್ದರೆ, 3ನೇ ಪಂದ್ಯ ಮಂಗಳವಾರ (ನವೆಂಬರ್ 22) ನೇಪಿಯರ್’ನಲ್ಲಿ ನಡೆಯಲಿದೆ.
ಟಿ20 ಸರಣಿಯ ನಂತರ ಭಾರತ ಮತ್ತು ನ್ಯೂಜಿಲೆಂಡ್ ತಂಡದಳು 3 ಪಂದ್ಯಗಳ ಏಕದಿನ ಸರಣಿಯಲ್ಲಿ ಮುಖಾಮುಖಿಯಾಗಲಿದ್ದು, ಭಾರತ ತಂಡವನ್ನು ಅನುಭವಿ ಎಡಗೈ ಓಪನರ್ ಶಿಖರ್ ಧವನ್ ಮುನ್ನಡೆಸಲಿದ್ದಾರೆ.

(India Vs New Zeeland match cancelled) The first match of the 3-match T20 series (India Vs New Zealand t20 series) between the visiting India and the host New Zealand teams was canceled due to rain. The match that was supposed to be held at the Sky Stadium in Wellington was canceled without a single ball being bowled. At least Rain Raya did not allow the toss.

Comments are closed.