Prithwi Shaw Controversy: ಸೆಲ್ಫಿ ಕಿತ್ತಾಟಕ್ಕೆ ಹೊಸ ಟ್ವಿಸ್ಟ್, ಕ್ರಿಕೆಟಿಗ ಪ್ರಥ್ವಿ ಶಾ ವಿರುದ್ಧ ಕೌಂಟರ್ ಕೇಸ್ ದಾಖಲಿಸಿದ ಭೋಜ್’ಪುರಿ ನಟಿ

ಮುಂಬೈ: ಟೀಮ್ ಇಂಡಿಯಾ ಕ್ರಿಕೆಟರ್ ಪೃಥ್ವಿ ಶಾ ಮತ್ತು ಭೋಜ್’ಪುರಿ ನಟಿ ಸಪ್ನಾ ಗಿಲ್ (Sapna Gill) ನಡುವಿನ ಸೆಲ್ಫಿ ಕಿತ್ತಾಟಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ. ಪೃಥ್ವಿ ಶಾ ಮೇಲೆ ಹಲ್ಲೆ ಮಾಡಿದ ಆರೋಪದ ಹಿನ್ನೆಲೆಯಲ್ಲಿ ಮುಂಬೈನ ಅಂಧೇರಿ ಪೊಲೀಸರಿಂದ ಬಂಧನಕ್ಕೊಳಗಾಗಿದ್ದ (Prithwi Shaw Controversy) ಸಪ್ನಾ ಗಿಲ್, ಇದೀಗ ಪೃಥ್ವಿ ಶಾ ವಿರುದ್ಧವೇ ಕೌಂಟರ್ ಪ್ರಕರಣ ದಾಖಲಿಸಿದ್ದಾರೆ.

ಫೆಬ್ರವರಿ 15ರಂದು ಪೃಥ್ವಿ ಶಾ ತಮ್ಮ ಸ್ನೇಹಿತನ ಜೊತೆ ಅಂಧೇರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಹೊಟೇಲ್ ಒಂದಕ್ಕೆ ರಾತ್ರಿ ಊಟಕ್ಕೆ ಹೋಗಿದ್ದರು. ಈ ವೇಳೆ ಹೋಟೆಲ್’ನಲ್ಲಿದ್ದ ನಟಿ ಸಪ್ನಾ ಗಿಲ್ ಮತ್ತಾಕೆಯ ಸ್ನೇಹಿತರು ಪೃಥ್ವಿ ಶಾ ಬಳಿ ಸೆಲ್ಫಿ ಕೇಳಿದ್ದಾರೆ. ಸೆಲ್ಫಿಗಾಗಿ ಪದೇ ಪದೇ ಕಿರಿಕಿರಿ ಉಂಟು ಮಾಡಿದ ಕಾರಣಕ್ಕೆ ಸಪ್ನಾ ಗಿಲ್ ತಂಡದ ವಿರುದ್ಧ ಪೃಥ್ವಿ ಶಾ ಹೋಟೆಲ್ ಮ್ಯಾನೇಜರ್’ಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಅಷ್ಟೂ ಮಂದಿಯನ್ನು ಹೋಟೆಲ್’ನಿಂದ ಹೊರಗೆ ಕಳುಹಿಸಲಾಗಿತ್ತು.

ಇದಾದ ನಂತರ ಊಟ ಮುಗಿಸಿದ ಪೃಥ್ವಿ ಶಾ ಮತ್ತು ಸ್ನೇಹಿತ ಹೋಟೆಲ್’ನಿಂದ ಹೊರ ಬರುತ್ತಿದ್ದಂತೆ ಸಪ್ನಾ ಗಿಲ್ ಮತ್ತಾಕೆಯ ತಂಡ ಪೃಥ್ವಿ ಶಾ ಮೇಲೆ ದಾಳಿ ನಡೆಸಿತ್ತು. ಬೇಸ್ ಬಾಲ್ ಬ್ಯಾಟ್’ನಿಂದ ಹಲ್ಲೆಗೆ ಯತ್ನಿಸಿತ್ತು. ಅಷ್ಟೇ ಅಲ್ಲ, ಪೃಥ್ವಿ ಶಾ ಸ್ನೇಹಿತನ ಕಾರಿನ ಗಾಜನ್ನು ಒಡೆದು ಹಾಕಿತ್ತು. ಈ ಪ್ರಕರಣದಲ್ಲಿ ಅಂಧೇರಿ ಪೊಲೀಸರು ಒಟ್ಟು 8 ಮಂದಿಯ್ನು ಬಂಧಿಸಿದ್ದರು. ಈ ಪ್ರಕರಣದಲ್ಲಿ ಪೃಥ್ವಿ ಶಾ ಸ್ನೇಹಿತ ಆಶಿಶ್ ಯಾದವ್ ದೂರು ದಾಖಲಿಸಿದ ನಂತರ, ಓಶಿವಾರ ಪೊಲೀಸರು ಸಪ್ನಾ ಗಿಲ್ ಮತ್ತು ಇತರ 7 ಜನರ ವಿರುದ್ಧ ಪ್ರಕರಣ ದಾಖಲಿಸಿದ್ದರು. ಭಾರತೀಯ ದಂಡ ಸಂಹಿತೆಯ (143, 148, 149, 384, 437, 504, 506) ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿದ್ದರು.

ಇದನ್ನೂ ಓದಿ : KL Rahul Out : ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ 3ನೇ ಪಂದ್ಯದಲ್ಲಿ ಪ್ಲೇಯಿಂಗ್ XIನಿಂದ ಕೆ.ಎಲ್ ರಾಹುಲ್ ಔಟ್

ಇದನ್ನೂ ಓದಿ : Prasidh Krishna : ಬೆನ್ನು ನೋವಿಗೆ ಆಪರೇಷನ್ ಸಕ್ಸಸ್, ಐಪಿಎಲ್’ನಿಂದ ಕನ್ನಡಿಗ ಔಟ್

ಇದೀಗ ಜಾಮೀನು ಪಡೆದು ಹೊರ ಬಂದಿರುವ ಸಪ್ನಾ ಗಿಲ್, ಪೃಥ್ವಿ ಶಾ ವಿರುದ್ಧವೇ ಕೌಂಟರ್ ಕೇಸ್ ದಾಖಲಿಸಿದ್ದಾರೆ. ಪೃಥ್ವಿ ಶಾ ಕುಡಿದ ಮತ್ತಿನಲ್ಲಿ ತಮ್ಮ ವಿರುದ್ಧ ಅಸಭ್ಯವಾಗಿ ನಡೆದುಕೊಂಡಿದ್ದಾರೆ ಎಂದು ಅಂಧೇರಿ ಠಾಣೆಯಲ್ಲಿ ದೂರು ಕೊಟ್ಟಿದ್ದಾರೆ.ಸಪ್ನಾ ಗಿಲ್ ಪಂಜಾಬ್’ನ ಚಂಡೀಗಢ ನಿವಾಸಿಯಾಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ರೀಲ್ಸ್’ಗಳ ಮೂಲಕ ಖ್ಯಾತಿ ಗಳಿಸಿದ್ದಾರೆ. ಇಷ್ಟೇ ಅಲ್ಲದೆ ಸಪ್ನಾ ಗಿಲ್ ಕೆಲ ಭೋಜ್‌ಪುರಿ ಸಿನಿಮಾಗಳಲ್ಲಿ ನಟಿಸಿದ್ದಾರೆ.

Prithwi Shaw Controversy : New twist to selfie scandal, Bhojpuri actress files counter case against cricketer Prithvi Shah

Comments are closed.